For Quick Alerts
ALLOW NOTIFICATIONS  
For Daily Alerts

ನಿಮ್ಮಲ್ಲಿ ಹೇಳದೇ ಹೋದರೂ ಪ್ರತಿಯೊಬ್ಬ ತಾಯಿ ಬಯಸುವ ಸಂಗತಿಗಳಿವು

|

ಸದಾ ಕಾಲ ಮಕ್ಕಳು ಚೆನ್ನಾಗಿರಬೇಕು, ಅವರಿಗೆ ಜೀವನದಲ್ಲಿ ಏನೂ ಕಷ್ಟ ಬರಬಾರದು, 'ಏನೇ ಕಷ್ಟವಿರಲಿ ಅದನ್ನು ನನಗೆ ಕೊಡು ದೇವರೇ, ಆದರೆ ನನ್ನ ಮಕ್ಕಳು ಮಾತ್ರ ಯಾವತ್ತಿಗೂ ಚೆನ್ನಾಗಿ ಬಾಳಬೇಕು' ಎಂದು ಬಯಸುವ ಜೀವವೊಂದಿದ್ದರೆ ಅದು ತಾಯಿ. ಮಕ್ಕಳಿಗಾಗಿ ತನ್ನೆಲ್ಲಾ ಆಸೆಗಳನ್ನು ಬಿಡುತ್ತಾಳೆ, ಬಿಡುವಿಲ್ಲದ ಕೆಲಸದಿಂದ ದುಡಿದರೂ ಆ ಆಯಾಸವನ್ನು ಒಂದಿಷ್ಟೂ ತೋರಿಸದೆ ಮಕ್ಕಳ ಮುಂದೆ ನಗು ನಗುತ್ತಾ ಇರುತ್ತಾಳೆ.

ನಾವು ನಮ್ಮೆಲ್ಲಾ ಆಸೆಗಳನ್ನು ಅವಳ ಬಳಿ ಹೋಗಿ ಹೇಳುತ್ತೇವೆ, ನಮಗೆ ಇಷ್ಟವಾದ ತಿಂಡಿ ಮಾಡಿಕೊಡು ಅಂತ ಹೇಳುತ್ತೇವೆ. ಒಂದು ವೇಳೆ ಅವಳು ಮಾಡಿದ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ಇದ್ಯಾಕೆ ಹೀಗೆ ಮಾಡಿದ್ದೀಯ? ಎಂದು ಸಿಡುಕು ತೋರುತ್ತೇವೆ. ಆದರೆ ಅದನ್ನು ಮಾಡಲು ಆಕೆ ತೆಗೆದುಕೊಂಡ ಶ್ರಮದ ಬಗ್ಗೆ ಯೋಚಿಸುವುದೇ ಇಲ್ಲ. ಅದೇ ಅವಳಿಗೆ ನೀನು ಮಾಡಿದ ಅಡುಗೆ ಸೂಪರ್‌ ಅಂತ ಹೇಳಿದರೆ ಸಾಕು ಅಡುಗೆಮನೆಯಲ್ಲಿ ಗಂಟೆಗಟ್ಟಲೆ ಪಟ್ಟ ಶ್ರಮ ಸಾರ್ಥಕವಾಯಿತು ಎಂಬ ಭಾವ ಅವಳ ಮುಖದ ಮೇಲೆ ಮೂಡುತ್ತದೆ.

Mother May Want To Hear From You

ಅವಳಿಗೂ ತನ್ನ ಮಕ್ಕಳು ನನ್ನನ್ನು ಹೇಗೆ ನೋಡಿಕೊಳ್ಳಬೇಕೆಂಬ ನೂರೆಂಟು ಕನಸ್ಸುಗಳಿರುತ್ತದೆ, ಆದರೆ ಅದನ್ನೆಲ್ಲಾ ಅವಳು ಮಕ್ಕಳ ಬಳಿ ಹೇಳುವುದಿಲ್ಲ. ನಾವೇ ಅರ್ಥಮಾಡಿಕೊಂಡು ಮಾಡಿದರೆ ತುಂಬಾ ಖುಷಿ ಪಡುತ್ತಾಳೆ. ಇಲ್ಲಿ ನಾವು ಅಮ್ಮ ನಿಮಗೆ ಬಾಯಿ ಬಿಟ್ಟು ಹೇಳದೇ ಇದ್ದರೂ ಅವಳು ಬಯಸುವ ಕೆಲ ವಿಷಯಗಳ ಬಗ್ಗೆ ಹೇಳಿದ್ದೇವೆ. ಈ ಸಣ್ಣ ಕಾರ್ಯಗಳನ್ನು ಮಾಡಿ ನೋಡಿ, ಅವಳು ತುಂಬಾ ಖುಷಿ ಪಡುವಳು...

ಅಮ್ಮಾ.... ನಿನ್ನ ತುಂಬಾ ಪ್ರೀತಿಸುತ್ತೇನೆ

ಅಮ್ಮಾ.... ನಿನ್ನ ತುಂಬಾ ಪ್ರೀತಿಸುತ್ತೇನೆ

ಅಮ್ಮ ನಮ್ಮನ್ನು ತುಂಬಾ ಪ್ರೀತಿಸುತ್ತಾಳೆ, ನಾವು ಕೂಡ ಅವಳನ್ನು ಪ್ರೀತಿಸುತ್ತೇವೆ. ಆದರೆ ಎಷ್ಟೋ ಬಾರಿ ಬಾಯಿಬಿಟ್ಟು ಹೇಳುವುದಿಲ್ಲ. ನಮ್ಮ ಮನಸ್ಸಿನ ಭಾವನೆಗಳನ್ನು ಮನಸ್ಸಿನಲ್ಲಿಯೇ ಬಚ್ಚಿಡುವುದಕ್ಕಿಂತ ಅದನ್ನು ಅವಳ ಮುಂದೆ ವ್ಯಕ್ತಪಡಿಸುತ್ತೇವೆ. ನೀವು ಎಷ್ಟು ಆಕೆಯನ್ನು ಇಷ್ಟಪಡುತ್ತಿದ್ದೀರಿ ಎನ್ನುವುದನ್ನು ಆಗಾಗ ಮಾತುಗಳಲ್ಲಿ ಹೇಳಿ. ಅವಳು ತುಂಬಾ ದಣಿದಿದ್ದಾಳೆ ಎಂದು ಅನಿಸಿದಾಗ ಆಕೆಯನ್ನು ತಬ್ಬಿ ಹಿಡಿದು ಅಮ್ಮಾ...ನನಗೆ ನೀನೇ ಎಲ್ಲಾ...ಲವ್‌ ಯೂ ಅಂತ ಹೇಳಿ. ನಿಮ್ಮ ಪ್ರೀತಿಯ ಮಾತುಗಳು ಅವಳಿಗೆ ತುಂಬಾ ಖುಷಿ ಕೊಡುತ್ತದೆ.

ನೀನು ವಿಶ್ರಾಂತಿ ತಗೋ, ನಾನು ಕೆಲಸ ಮಾಡುತ್ತೇನೆ

ನೀನು ವಿಶ್ರಾಂತಿ ತಗೋ, ನಾನು ಕೆಲಸ ಮಾಡುತ್ತೇನೆ

ಅಮ್ಮ ಗೃಹಿಣಿಯಾಗಿರಲಿ, ದುಡಿಯುವ ಮಹಿಳೆಯಾಗಿರಲಿ ವಿಶ್ರಾಂತಿ ಎಂಬುವುದು ಇರುವುದೇ ಇಲ್ಲ. ವೀಕೆಂಡ್‌ ಹಾಗೂ ರಜಾ ದಿನಗಳಲ್ಲಿ ಮನೆಯಲ್ಲಿ ಇದ್ದಾಗ ಎಲ್ಲರಿಗೆ ವಿಶ್ರಾಂತಿ ಇದ್ದರೆ ಆ ದಿನ ಆಕೆಯ ಕೆಲಸ ದುಪ್ಪಟ್ಟು ಆಗಿರುತ್ತದೆ. ಇವತ್ತು ಮನೆಯಲ್ಲಿ ನೀವೆಲ್ಲಾ ಇದ್ದೀರಿ, ಏನಾದರೂ ವಿಶೇಷ ತಿನಿಸು ಮಾಡೋಣ ಅಂತ ಮಾಡಲು ಶುರು ಮಾಡುತ್ತಾಳೆ. ಆದರೆ ನಮ್ಮ ಬಗ್ಗೆ ಅವಳು ಯೋಚಿಸುವಾಗ ನಾವು ಅವಳ ಬಗ್ಗೆ ಯೋಚಿಸಿದರೆ ಅವಳಿಗೆಷ್ಟು ಖುಷಿಯಾಗಬಹುದು ಅಲ್ವಾ? ಹೌದು 365 ದಿನ ದುಡಿಯುವ ಅವಳಿಗೆ ನೀವು ಬಿಡುವು ಇದ್ದಾಗ ವಿಶ್ರಾಂತಿ ಮಾಡಲು ಹೇಳಿ. 'ಅಮ್ಮಾ ಈ ಕೆಲಸ ನಾನು ಮಾಡುತ್ತೇನೆ, ನೀನು ಸ್ವಲ್ಪ ವಿಶ್ರಾಂತಿ ತಗೋ' ಅಂತ ನೀವು ಹೇಳಿದರೆ ಇಂಥ ಮಕ್ಕಳನ್ನು ಪಡೆದ ನಾನು ಪುಣ್ಯವಂತೆ ಎಂದು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾಳೆ.

ಅವಳ ಅಡುಗೆಯನ್ನು ಪ್ರಶಂಸಿಸಿ

ಅವಳ ಅಡುಗೆಯನ್ನು ಪ್ರಶಂಸಿಸಿ

ಪ್ರಶಂಸೆಯಾರು ತಾನೆ ಬಯಸಲ್ಲ. ಪ್ರಶಂಸೆ ಕೆಲಸ ಮಾಡಲು ಮತ್ತಷ್ಟು ಸ್ಪೂರ್ತಿ ತುಂಬುತ್ತದೆ ಹಾಗೂ ನಮ್ಮ ಕೆಲಸದ ಬಗ್ಗೆ ಸಾರ್ಥಕ ಭಾವ ಮೂಡಿಸುತ್ತದೆ. ದಿನವಿಡೀ ದುಡಿಯುವ ಅಮ್ಮನ ಅಡುಗೆಯನ್ನು ಆಗಾಗ ಹೊಗಳಿ. ಇನ್ನು ನಿಮಗೆ ಇಷ್ಟ ಅಂತ ಏನಾದರೂ ವಿಶೇಷ ತಿನಿಸು ಮಾಡಿದಾಗ ಧನ್ಯವಾದಗಳನ್ನು ಹೇಳಿ. ಇದರಿಂದ ಅವಳಿಗೆ ತುಂಬಾ ಖುಷಿಯಾಗುವುದು. ಈ ಮನೆಯಲ್ಲಿ ನನ್ನ ಕೆಲಸವನ್ನೂ ಮೆಚ್ಚುವವರು ಇದ್ದಾರೆ ಎಂಬ ಭಾವನೆ ಮೂಡುತ್ತದೆ.

ಗೃಹಿಣಿಯರಿಗೆ ನಾವು ಎಷ್ಟು ಕಷ್ಟಪಟ್ಟು ದುಡಿಯುತ್ತೇವೆ, ಆದರೆ ಮನೆಯಲ್ಲಿ ಗಂಡ-ಮಕ್ಕಳಿಗೆ ಅದು ಅರ್ಥವಾಗುವುದೇ ಇಲ್ಲ ಎಂಬ ಕೊರಗು ಇರುತ್ತದೆ. ಹಾಗೇ ನೋಡಿದರೆ ಹೊರಗಡೆ ದುಡಿಯಲು ಹೋದರೆ ಮನೆಗೆ ಬಂದ ಮೇಲೆ ವಿಶ್ರಾಂತಿ ತಗೋಬಹುದು. ಅದೇ ಮನೆಯಲ್ಲಿದ್ದರೆ ಬೆಳಗ್ಗೆ ಕೆಲಸ ಶುರುವಾದರೆ ರಾತ್ರಿಯಾದರೂ ಮುಗಿಯುವುದಿಲ್ಲ. ಆದ್ದರಿಂದ ಅಮ್ಮನಿಗೆ ನೀವು ಹೇಳುವ ಈ ರೀತಿಯ ಪ್ರೀತಿಯ ಮಾತುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.

ನಾನು ಮಾಡಿದ್ದು ತಪ್ಪಾಯ್ತು

ನಾನು ಮಾಡಿದ್ದು ತಪ್ಪಾಯ್ತು

ನಾವೆಲ್ಲಾ ಸಣ್ಣ ಪುಟ್ಟ ತಪ್ಪು ಮಾಡೇ ಮಾಡುತ್ತೇವೆ. ಆದರೆ ನಮ್ಮ ತಪ್ಪುಗಳ ಅರಿವು ಉಂಟಾದಾಗ ಮಾಡಿದ ತಪ್ಪಿಗಾಗಿ ಕ್ಷಮೆ ಕೇಳುವ ಗುಣ ಬೆಳೆಸಿಕೊಳ್ಳಬೇಕು. ಯಾವುದೋ ಕಾರಣಕ್ಕೆ ಅಮ್ಮನ ಮೇಲೆ ರೇಗಾಡಿದರೆ ಅವಳಿಗೆ ತುಂಬಾ ಬೇಜಾರಾಗಿರುತ್ತದೆ. ನೀವು ಕ್ಷಮೆ ಕೇಳದಿದ್ದರೂ ಅವಳು ನಿಮ್ಮನ್ನು ಕ್ಷಮಿಸುತ್ತಾಳೆ, ಆದರೆ ನೀವು ಹಾಗೆ ನಡೆದುಕೊಂಡಿದ್ದಕ್ಕೆ ಕ್ಷಮೆ ಕೇಳಿದ್ದೇ ಆದರೆ ತುಂಬಾ ಖುಷಿ ಪಡುತ್ತಾಳೆ. ಅವಳು ಏನೇ ಹೇಳಿದರು ಅದು ಮಕ್ಕಳ ಒಳಿತಿಗಾಗಿ ಹೇಳುತ್ತಾಳೆ. ಅವಳ ಮನಸ್ಸಿಗೆ ನಿಮ್ಮಿಂದ ಯಾವುದೋ ಕಾರಣಕ್ಕೆ ಬೇಸರವಾದರೆ ಕ್ಷಮೆ ಕೇಳಲು ಹಿಂದೇಟು ಹಾಕಲೇಬೇಡಿ.

ಅಮ್ಮಾ.. ನೀನೇ ಬೆಸ್ಟ್

ಅಮ್ಮಾ.. ನೀನೇ ಬೆಸ್ಟ್

ಹೌದು ಅಮ್ಮಾ ನೀಡುವ ಪ್ರೀತಿ ಬೇರೆ ಯಾರ ಬಳಿಯೂ ಸಿಗುವುದಿಲ್ಲ. ಮಕ್ಕಳ ಸಂತೋಷಕ್ಕಾಗಿ ತಾಯಿ ಎಂಥ ತ್ಯಾಗಕ್ಕೂ ಸಿದ್ಧವಿರುತ್ತಾಳೆ. ಆದ್ದರಿಂದ ಅಮ್ಮನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನಿಮಗೆ ಎಷ್ಟೇ ದುಃಖವಿರಲಿ ಆಕೆ ಬಳಿ ಹೇಳಿಕೊಂಡರೆ ಸಾಕು ಆ ಜೀವ ನಿಮಗಾಗ ಮರಗುತ್ತದೆ. ನೀವು ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಬದುಕಿನಲ್ಲಿ ಆಸೆಯೇ ಕಳೆದುಕೊಂಡಾಗ ನಿಮ್ಮ ಬಾಳಿನಲ್ಲಿ ಸ್ಪೂರ್ತಿ ತುಂಬಲು ಆಕೆ ಪ್ರಯತ್ನಿಸುತ್ತಾಳೆ. ನಿಮ್ಮ ಪ್ರತಿಯೊಂದು ನಾಡಿಮಿಡಿತವ ಆಕೆಗೆ ಗೊತ್ತಿರುತ್ತದೆ. ಆದ್ದರಿಂದ ಅಮ್ಮನ ಬಳಿ ಹೋಗಿ ಅಮ್ಮಾ.. ನನ್ನ ಜೀವನದಲ್ಲಿ ಎಲ್ಲರಿಗಿಂತ ನೀನೇ ಬೆಸ್ಟ್' ಎಂದರೆ ಆಕೆಗೆ ತುಂಬಾ ಖುಷಿಯಾಗುವುದು.

English summary

Things That Your Mother May Want To Hear From You

You don't have to decorate home or buy a luxury things to keep mom happy. Instead, you can scroll down to read about the things that your mother may want to hear from you.
X
Desktop Bottom Promotion