Just In
Don't Miss
- Movies
ಜನವರಿ 27ಕ್ಕೆ 'ಬೆಲ್ ಬಾಟಂ' ಸೀಕ್ವೆಲ್ ಚಿತ್ರದ ಶೀರ್ಷಿಕೆ ಅನಾವರಣ
- News
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹಿಳೆಯರಿಗೆ ತಮ್ಮ ಸಂಗಾತಿಯ ಈ ಗುಣಗಳು ಇಷ್ಟವಾಗದು..
ಮಹಿಳೆಯರು ಯಾವಾಗಲೂ ಚೂಸಿ ಅಂದರೆ ತುಂಬಾ ಯೋಚನೆ ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಅವರಿಗೆ ಯಾವುದೂ ತಕ್ಷಣಕ್ಕೆ ಹಿಡಿಸುವುದಿಲ್ಲ, ತುಂಬಾ ಸಮಯದ ನಂತರ ಆಲೋಚನೆ ಮಾಡಿ ಪ್ರತಿಯೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅವರು ಮಾಡುವ ಶಾಪಿಂಗ್, ಅವರ ಜೊತೆ ಹೋದ ಪುರುಷರಿಗೆ ಗೊತ್ತು ಅದರ ಪಾಡು, ನೋವು ಎಲ್ಲವೂ..
ಇಷ್ಟೊಂದು ಚೂಸಿ ಆಗಿರುವ ಮಹಿಳೆಯರು ಇನ್ನು ತಮ್ಮ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಸುಮ್ಮನಿರ್ತಾರಾ?, ಎಲ್ಲವೂ ಅಳೆದು ತೂಗಿ ಸಂಬಂಧವನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಹುಡುಗರು ಮಾಡುವ ಕೆಲವೊಂದು ವಿಚಾರಗಳು ಹುಡುಗಿಯರಿಗೆ ನೋವುಂಟಾಗುವುದು. ನೀವು ಮಾಡುವ ಕೆಲವೊಂದು ವಿಚಾರಗಳು ಹುಡುಗಿಯರಿಗೆ ಹಿಡಿಸದೇ ಹೋಗಬಹುದು. ಇಂತಹ ಸಮಯದಲ್ಲಿ ನೀವು ಯಾವುದು ಆಕೆಗೆ ಇಷ್ಟವಲ್ಲ ಎಂಬುದನ್ನು ಅರಿಯುವುದು ತುಂಬಾ ಮುಖ್ಯ. ಅದಕ್ಕಾಗಿ ಈ ಲೇಖನ ನಿಮಗಾಗಿ ನೋಡಿದ್ದೇವೆ.
ಪುರುಷರು ಏನು ಮಾಡಿದರೆ ಮಹಿಳೆಯರಿಗೆ ಇಷ್ಟವಾಗುವುದಿಲ್ಲ ಎಂಬುದನ್ನು ಈ ಕೆಳಗೆ ಹೇಳಿದೇವೆ.

ನಕಾರಾತ್ಮಕ ಮಾತನಾಡುವುದು:
ಯಾವುದೇ ವಿಚಾರದ ಬಗೆಗಿನ ನಕಾರಾತ್ಮಕ ಮಾತು ಅವರಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಅದಲ್ಲದೇ ಹುಡುಗಿಯರು ಯಾವಾಗಲೂ ಗಮನಿಸುವಂತಹ ವಿಚಾರವೆಂದರೆ ತಮ್ಮ ಬಗ್ಗೆ, ಕುಟುಂಬದ ಬಗ್ಗೆ, ಸ್ನೇಹಿತರು, ಕಚೇರಿ ಇತ್ಯಾದಿಗಳ ಬಗ್ಗೆ ತಮ್ಮ ಸಂಗಾತಿ ಯಾವ ರೀತಿ ಮಾತನಾಡುವರು ಎಂದು. ಈ ವಿಚಾರಗಳ ಬಗ್ಗೆ ನೀವು ನಕಾರಾತ್ಮಕವಾಗಿ ಮಾತನಾಡುತ್ತಲಿದ್ದರೆ, ಆಗ ನಿಮ್ಮ ಸಂಗಾತಿಗೆ ಇದು ಹಿಡಿಸದೆ ಇರಬಹುದು. ನಕಾರಾತ್ಮಕವಾಗಿ ಮಾತನಾಡುವುದು ಅಸಂತೋಷ, ಅಭದ್ರತೆ ಸಂಕೇತ. ಇಂತವರ ಸಂಗದಿಂದ ಏನು ಲಭಿಸದು ಎಂಬ ಮನೋಭಾವಕ್ಕೆ ನಿಮ್ಮ ಹುಡುಗಿ ಬರುವಳು.

ಗೊಂದಲದಿಂದಿರುವುದು:
ನೀವು ಮಾಡುವ ಎಲ್ಲಾ ಕಾರ್ಯದಲ್ಲೂ ಗೊಂದಲವಿದ್ದರೆ ಹಾಗೂ ನೀವು ನಿಮ್ಮ ಹುಡುಗಿಯ ಜತೆಗೆ ಮಾತನಾಡುವ ವೇಳೆ ಗೊಂದಲದಲ್ಲಿದ್ದರೆ, ಆಕೆಯೊಂದಿಗೆ ಮಾತನಾಡುವುದನ್ನು ಕಡೆಗಣಿಸುತ್ತಿದ್ದರೆ ಅಥವಾ ಮಾತನ್ನು ಮಧ್ಯದಲ್ಲೇ ನಿಲ್ಲಿಸುತ್ತಿದ್ದರೆ ಇದು ನಿಮ್ಮ ಹುಡುಗಿಗೆ ಇಷ್ಟವಾಗದೇ ಇರಬಹುದು. ಹೆಣ್ಣು ಯಾವಾಗಲೂ ತನ್ನನ್ನು ಪ್ರೀತಿಸುವಾತ ತನ್ನ ಮೇಲೆ ಹೆಚ್ಚು ಆಸಕ್ತಿ ಹೊಂದಿರಬೇಕು ಎಂದು ಭಾವಿಸುತ್ತಾಳೆ. ನೀವು ಡೇಟಿಂಗ್ ವೇಳೆ ನೀವು ಯಾವಾಗಲೂ ಫೋನ್ ನಲ್ಲೇ ಮಾತನಾಡುತ್ತಲಿದ್ದರೆ ಆಗ ನಿಮ್ಮಿಂದ ಆಕೆ ದೂರವಾಗಬಹುದು. ಗೊಂದಲದಲ್ಲಿರುವಂತಹ ಪುರುಷನ ಜತೆಗೆ ಸಂಬಂಧ ಬೆಳೆಸುವುದು ಒಳ್ಳೆಯದಲ್ಲ ಮತ್ತು ಆತ ತನಗೆ ಹೆಚ್ಚ ಗಮನ ನೀಡುವುದಿಲ್ಲವೆಂದು ಹುಡುಗಿ ಭಾವಿಸುವಳು. ಅದಕ್ಕೆ ನಿಮ್ಮ ಹುಡುಗಿಯ ಜೊತೆಗೆ ಸಮಯ ಕಳೆಯಲು ಪ್ರಯತ್ನಿಸಿ.

ಅಸಭ್ಯತೆ:
ಕೆಲವು ಹುಡುಗರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎಂಬುದರ ಅರಿವೆಯೇ ಇರುವುದಿಲ್ಲ. ತಮ್ಮ ಸ್ನೇಹಿತರ ಜೊತೆ ಇದ್ದ ಹಾಗೆಯೇ ಎಲ್ಲಾ ಕಡೆಯೂ ವರ್ತನೆ ಮಾಡುತ್ತಿರುತ್ತಾರೆ. ಒಂದು ಗುಂಪಿನಲ್ಲಿ ಹೇಗೆ ಮಾತನಾಡಬೇಕು, ಹೊರಗಡೆ ಹೋಟೆಲ್ ಅಥವಾ ಸಿನಿಮಾ ಹಾಲ್ ನಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಕೆಲವರು ಹೋಟೆಲ್ ನಲ್ಲಿ ವೈಟರ್ ಮೇಲೆ ಅಥವಾ ಸಿನಿಮಾ ಹಾಲ್ ನಲ್ಲಿ ಕೌಂಟರ್ ನಲ್ಲಿ ಇರುವ ವ್ಯಕ್ತಿಯ ಮೇಲೆ ರೇಗುವರು. ಇದು ಮಹಿಳೆಯರಿಗೆ ಇಷ್ಟವಾಗದು. ಆಕೆಯ ಜತೆಗೆ ಇದ್ದಾಗ ನೀವು ಹೀಗೆ ವರ್ತಿಸಿದರೆ, ಬೇರೆ ಸಮಯದಲ್ಲಿ ಹೇಗಿರಬಹುದು ಎಂದು ಭಾವಿಸುವಳು. ಬೇರೆಯವರನ್ನು ಹೀಯಾಳಿಸಿ ತಮಾಷೆ ಮಾಡುವುದು ಮಹಿಳೆಯರಿಗೆ ಇಷ್ಟವಾಗದು. ಭವಿಷ್ಯದಲ್ಲಿ ಆಕೆಯೊಂದಿಗೆ ನೀವು ಹೇಗೆ ವರ್ತಿಸಬಹುದು ಎನ್ನುವ ಆಲೋಚನೆಯು ಆಕೆಯ ಮನಸ್ಸಿನಲ್ಲಿ ಮೂಡುತ್ತದೆ.

ಹಾಸಿಗೆಯಲ್ಲಿ ಸ್ವಾರ್ಥಿ:
ನೀವು ಸಂಬಂಧದಲ್ಲಿ ಒಂದು ಹಂತಕ್ಕೆ ಬಂದ ಬಳಿಕ, ಒಂದು ನಂಬಿಕೆ ಬಂದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ, ಆಗ ನೀವು ಅಲ್ಲಿ ಸ್ವಾರ್ಥಿಯಾಗಿರಬಾರದು. ಇದರಿಂದ ಮಹಿಳೆಯು ಬೇಗನೆ ಬೇಸರಗೊಳ್ಳುವಳು. ನೀವಿಬ್ಬರು ಜತೆಯಾಗಿ ಇಂತಹ ಅನ್ಯೋನ್ಯತೆ ಸಮಯ ಕಳೆಯುವ ವೇಳೆ ನಿಮ್ಮದೇ ಸಾಮ್ರಾಜ್ಯವೆಂದು ಭಾವಿಸುವುದು ತಪ್ಪು. ಆಕೆಗೂ ಒಂದು ಮನಸ್ಸಿದೆ, ಇಷ್ಟ-ಕಷ್ಟಗಳೂ ಇದೆ. ಇದನ್ನು ಅರಿತು ನೀವು ಮುಂದುವರಿಯಬೇಕು. ಆಕೆಗೆ ಹಿತಕರ ಭಾವನೆ ಆಗದಿದ್ದರೆ, ಆಗ ನಿಮಗೆ ಆಕೆ ಇಷ್ಟವಿಲ್ಲವೆಂದು ಭಾವಿಸಬಹುದು. ಹೀಗೆ ಆದರೆ ಆಗ ನಿಮ್ಮೊಂದಿಗೆ ಆಕೆ ಇಂತಹ ಸಮಯ ಕಳೆಯಲು ಇಷ್ಟಪಡುವುದಿಲ್ಲ.

ಹಾಗೆ ಸುಮ್ಮನಿರಬೇಡಿ:
ಏನೂ ಮಾಡದೇ ಸುಮ್ಮನೆ ಇರ್ರುವುದನ್ನು ಹುಡುಗಿ ಇಷ್ಟ ಪಡುವುದಿಲ್ಲ. ಕೆಲವು ಸಲ ನೀವು ಡೇಟಿಂಗ್ ಗೆ ಹೋಗುವ ವೇಳೆ ಹಿರಿಯರಿಗೆ ಸಹಾಯ ಮಾಡುವುದು, ಕಾರಿನ ಬಾಗಿಲು ತೆಗೆಯುವುದು ಇತ್ಯಾದಿ ಮಾಡುತ್ತಲಿದ್ದರೆ ಆಗ ನಿಮ್ಮತ್ತ ಹುಡುಗಿಯು ಆಕರ್ಷಿತಳಾಗುವಳು. ಆದರೆ ಡೇಟಿಂಗ್ ಸಮಯದಲ್ಲಿ ಕಾರನ್ನು ಆಕೆ ಚಲಾಯಿಸಿಕೊಂಡು ಹೋಗಿ, ಹೋಟೆಲ್ ಬಿಲ್ ಕೂಡ ಪಾವತಿಸಿದರೆ ಖಂಡಿತವಾಗಿಯೂ ಅದು ನಿಮ್ಮ ಕೊನೆಯ ಡೇಟಿಂಗ್. ಯಾಕೆಂದರೆ ನೀವು ಇಂತಹ ಸಮಯದಲ್ಲಿ ತೋರುವ ವರ್ತನೆ ಆಕೆಗೆ ಸರಿಯೆನಿಸದು. ಅದಕ್ಕಾಗಿ ನಿಮಗೆ ಸಾದ್ಯವಾದಷ್ಟು ಎಲ್ಲ ವಿಚಾರದಲ್ಲೂ ಹಂಚಿಕೊಂಡು ಕೆಲಸ ಮಾಡಿ. ಆಗ ಇಬ್ಬರೂ ಖುಷಿಯಾಗಿರುವಿರಿ.