Just In
Don't Miss
- News
ಅರವಿಂದ ಲಿಂಬಾವಳಿಗೆ ಪಶ್ಚಿಮ ಬಂಗಾಳ ಚುನಾವಣೆ ಹೊಣೆ
- Automobiles
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
- Sports
ಭಾರತ vs ಇಂಗ್ಲೆಂಡ್: ಪ್ರಶಸ್ತಿ ವಿಜೇತರ ಪಟ್ಟಿ, ಅಂಕಿ-ಅಂಶಗಳು!
- Movies
ಬಿಗ್ಬಾಸ್: ಸೇಫ್ ಆದ್ರು ಶುಭಾ ಪೂಂಜಾ, ಹೊರ ಹೋಗುವುದು ಯಾರು?
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸಂಬಂಧಕ್ಕಾಗಿ ನೀವು ಸಿದ್ಧರಾಗಿದ್ದೀರಿ ಎನ್ನುವ ಲಕ್ಷಣಗಳಿವು
ಸಂಬಂಧಗಳೇ ಹಾಗೆ ನಾವು ಅದನ್ನು ಉಳಿಸಿಕೊಳ್ಳಲು ಎಷ್ಟು ಸಮರ್ಥರಾಗಿದ್ದೇವೆ ಅಥವಾ ಆ ಸಂಬಂಧಗಳನ್ನು ಉಳಿಸಿಕೊಳ್ಳಲು ಎದುರಿನ ವ್ಯಕ್ತಿ ಎಷ್ಟು ಪರಿಶ್ರಮ ಪಡುತ್ತಾನೆ/ಳೆ ಎಂಬುದರ ಮೇಲೆ ಅಬಲಂಬಿತವಾಗಿರುತ್ತದೆ. ಹಾಗಾಗಿ ಸಂಬಂಧಗಳಲ್ಲಿ ಸ್ವಲ್ಪ ಏರುಪೇರಾದರೂ ಆ ಸಂಬಂಧ ಮುರಿದುಬೀಳುವ ಸಾಧ್ಯತೇಗಳೆ ಹೆಚ್ಚು!
ಆದರೆ ನಮ್ಮಲ್ಲಿ ಹೆಚ್ಚಿನವರು ಅಗತ್ಯವಿಲ್ಲದ ಸಂಬಂಧ ಮುರಿದುಬಿದ್ದಾಗ ಭವಿಷ್ಯವೇ ಮುಗಿದುಹೋದಂತೆ ತಲೆಮೇಲೆ ಕೈ ಹೊತ್ತು ಕೂರುತ್ತಾರೆ. ದಿನವೂ ದುಃಖಿತರಾಗಿರುತ್ತಾರೆ. ಆದರೆ ನಿಮ್ಮ ಜೀವನ ಇಷ್ಟಕ್ಕೇ ಮುಗಿದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಹೊಸ ಸಂಬಂಧದೊಂದಿಗೆ ಖುಷಿಯಾಗಿ ಜೀವನ ಸಾಗಿಸಲು ಸಾಧ್ಯ!
ಬ್ರೇಕ್-ಅಪ್ ಅಥವಾ ಸಂಬಂಧಗಳನ್ನು ಮುರಿದುಕೊಂಡು ಚೇತರಿಸಿಕೊಳ್ಳುವುದು ಬಹಳ ಕಷ್ಟವಾದ ವಿಷಯ. ನಿಮ್ಮ ಮೂಗೇಟಿಗೊಳಗಾದ ಅಥವಾ ಹಾನಿಗೊಳಗಾದ ಅಹಂ ಮತ್ತು ನಶಿಸಿದ ಆತ್ಮವಿಶ್ವಾಸವನ್ನು ಪುನಃ ತಂದುಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನಮ್ಮ ಬೆಂಬಲವಾಗಿರಬಹುದಾದ ಮತ್ತು ನಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದಾದ ಜನರನ್ನು ನಾವು ನಮ್ಮ ಸುತ್ತಲೂ ಹೊಂದಿದ್ದರೆ ಅದು ನಿಮ್ಮ ಈ ನೋವಿನಿಂದ ಹೊರಗೆಬರಲು ಸಹಾಯ ಮಾಡುತ್ತದೆ.
ಒಮ್ಮೆ ಸಂಬಂಧಗಳಲ್ಲಿ ಮನಸ್ಸು ಒಡೆದುಹೋದರೆ ಅದು ಬಹಳಷ್ಟು ದುಃಖವನ್ನು ತರುತ್ತದೆ. ದುಃಖವನ್ನು ಹೇಳುವ ಐದು ಹಂತಗಳಿವೆ ಎಂದು ಮನೋವಿಜ್ಞಾನ ಹೇಳುತ್ತದೆ; ಅವುಗಳೆಂದರೆ ನಿರಾಕರಣೆ, ಕೋಪ, ಚೌಕಾಸಿ, ಖಿನ್ನತೆ ಮತ್ತು ಸ್ವೀಕಾರ. ವಿಭಿನ್ನ ಜನರು ದುಃಖಿಸುವ ರೀತಿ ಹಾಗೂ ದುಃಖವನ್ನು ನಿವಾರಿಸಿ ಕೊಳ್ಳಲು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಾರೆ.
ಹಾಗೆಯೇ ದುಃಖದಿಂದ ಹೊರಬರಲು ಅವರದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ, ಭಾವನಾತ್ಮಕ ನೋವು ಆಳವಾಗಿದ್ದು ಅದು ಗುಣವಾಗಲು ತುಂಬಾ ಸಮಯ ತೆಗೆದುಕೊಳ್ಳಬಹುದು. ಎಷ್ಟೇಂದರೆ ನೀವು ಮತ್ತೆ ಪ್ರೀತಿಯನ್ನೇ ಮಾಡುವುದಿಲ್ಲ ಎಂದು ನಿರ್ಧರಿಸುವಷ್ಟರ ಮಟ್ಟಿಗಿನ ಭಾವನೆ ಮೂಡಿಸಬಹುದು.
ಹಾಗಾದರೆ ನೀವು ಹೊಸ ಸಂಬಂಧಕ್ಕೆ ಸಿದ್ಧರಿದ್ದೀರಿ ಎಂದು ನಿಮಗೆ ಹೇಗೆ ಗೊತ್ತಾಗುವುದು?

ನಿಮ್ಮ ಸಂಬಂಧ ಮುರಿದಿದ್ದನ್ನು ತಾರ್ಕಿಕ ದೃಷ್ಟಿಕೋನದಿಂದ ನೋಡಲು ನಿಮಗೆ ಸಾಧ್ಯವಾಗುತ್ತದೆ
ಸಾಮಾನ್ಯವಾಗಿ ಸಂಬಂಧಗಳು ಹಾಳಾಗುವುದು, ಒಬ್ಬರ ಮೆಲೆ ಒಬ್ಬರು ಅತಿರೇಕದ ಆಪಾದನೆಯನ್ನು ಹೊರಿಸುವುದರಿಂದಲೇ ಆಗಿರುತ್ತದೆ. ನೀವು ಇತರ ವ್ಯಕ್ತಿಯನ್ನು ಅವಿವೇಕದ, ಅರ್ಥಮಾಡಿಕೊಳ್ಳದ, ಮತ್ತು ಇತರ ವಿಷಯಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳದ ಕಾರಣಕ್ಕಾಗಿ ದೂಷಿಸುತ್ತೀರಿ ಅಥವಾ ಏನಾದರೂ ತಪ್ಪು ಮಾಡಿದ್ದಕ್ಕಾಗಿ ನಿಮ್ಮನ್ನು ನೀವೇ ದೂಷಿಸಿಕೊಳ್ಳುತ್ತೀರಿ. ಅದರಿಂದ ಆಚೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಆದರೆ ನೀವು ಹಾಗೆ ಮಾಡಿದಾಗ, ತಾರ್ಕಿಕ ಮತ್ತು ಸಮತೋಲಿತ ದೃಷ್ಟಿಕೋನದಿಂದ ನಡೆದಂಥ ವಿಷಯಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಕಳೆದುಹೋದ ಪ್ರೀತಿಯ ಬಗ್ಗೆ ನೀವು ದುಃಖಿಸುವುದನ್ನು ಬಿಟ್ಟ ನಂತರ, ನೀವು ಹೆಚ್ಚು ಸ್ಪಷ್ಟತೆಯೊಂದಿಗೆ ವಿಷಯಗಳನ್ನು ನೋಡಲು ಸಾಧ್ಯವಾಗುತ್ತದೆ. ಇದು ನೀವು ನಿಮ್ಮೇಲ್ಲ ನೋವುಗಳಿಂದ ಹೊರಬಂದು ಮುಂದುವರೆಯಲು ಸಿದ್ಧರಿದ್ದೀರಿ ಎಂದು ತೋರಿಸುವ ಚಿಹ್ನೆಗಳಲ್ಲಿ ಒಂದು!

ಆರಾಮವಾಗಿ ಇರಬಲ್ಲಿರಿ ಮತ್ತು ಒಬ್ಬಂಟಿಯಾಗಿರುವ ಭಯ ನಿಮ್ಮನ್ನು ಕಾಡುತ್ತಿಲ್ಲ
ಕೆಲವೊಮ್ಮೆ, ಸಂಬಂಧದಲ್ಲಿ ಬೇರೆಯಾಗುವುದು, ಅಭದ್ರತೆಯ ಭಾವನೆಗಳನ್ನು ಉಂಟುಮಾಡುತ್ತದೆ ಮತ್ತು ಬಹಳಷ್ಟು ಸ್ವಯಂ-ಅನುಮಾನಗಳಿಗೆ ಅವಕಾಶ ಮಾಡಿ ಕೊಡುತ್ತದೆ. ಬೇರೊಬ್ಬರನ್ನು ಹುಡುಕುವ ಮೊದಲು ನಿಮ್ಮನ್ನು ನೀವು ಪರಿಶೀಲಿಸಿಕೊಳ್ಳುವುದು ಜಾಣತನ. ನಿಮ್ಮ ಆತ್ಮ ಸಹಾನುಭೂತಿ ಮತ್ತು ಸ್ವಾಭಿಮಾನದ ಬಗ್ಗೆ ನೀವು ಸಂಪೂರ್ಣವಾಗಿ ಖಚಿತವಾಗಿದ್ದಾಗ, ಮತ್ತು ಇನ್ನೊಂದು ಪ್ರೀತಿಯನ್ನು ಎಂದಿಗೂ ಕಂಡುಕೊಳ್ಳುವುದಿಲ್ಲ ಅಥವಾ ಏಕಾಂಗಿಯಾಗಿಯೇ ತನ್ನ ಜೀವನ ಕೊನೆಗೊಳ್ಳುತ್ತದೆ ಎಂಬ ಭಯ ನಿಮ್ಮನ್ನೆ ಕಾಡುವುದಿಲ್ಲ ಎಂದು ನಿಮಗೆ ಭರವಸೆ ಮೂಡಿದಾಗ, ನೀವು ಯಾರೊಂದಿಗಾದರೂ ಸಂಬಂಧವನ್ನು ಹೊಂದಲು ಸಿದ್ಧರಿದ್ದೀರಿ ಎಂದೇ ಅರ್ಥ.

ಹಿಂದಿನ ಸಂಬಂಧಗಳಲ್ಲಿನ ಸಮಸ್ಯೆ
ವ್ಯಕ್ತಿಯ ಹಿಂದಿನ ಸಂಬಂಧಗಳಲ್ಲಿ ಅಥವಾ ಅವರ ಕುಟುಂಬದಲ್ಲಿನ ಸಂಬಂಧದಲ್ಲಿ ಎದುರಿಸಿದ ಸಂಬಂಧದ ಸಮಸ್ಯೆಗಳು ಸಂಬಂಧಗಳ ವಿಘಟನೆಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾದಾಗ ನೀವು ನಿಮ್ಮ ದೌರ್ಭಲ್ಯಗಳನ್ನು ಅಥವಾ ಹಿಂದಿನ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾದರೆ ನಿಮ್ಮ ಹೊಸ ಸಂಬಂಧಗಳನ್ನು ಉಳಿಸಿಕೊಳ್ಳಲು ನೀವು ಹೆಚ್ಚು ಸಾಮರ್ಥ್ಯವುಳ್ಳವರಾಗಿರುತ್ತೀರಿ.

ಸ್ವಯಂ-ಅನುಮಾನವನ್ನು ದೂರಮಾಡಿಕೊಳ್ಳಲು ಸಾಕಷ್ಟು ಸಮಯ
ನೀವು ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸಬಹುದು ಮತ್ತು ಕಾಳಜಿ ವಹಿಸಬಹುದು ಮತ್ತು ನೀವು ಅದೇ ಪ್ರೀತಿ ಕಾಳಜಿಗೆ ಅರ್ಹರು ಎಂದು ನಂಬುತ್ತೀರಿ
ಸಂಬಂಧಗಳು ಮುರಿದುಬಿದ್ದಾಗ ಅದಕ್ಕೆ ಕಾರಣವಾಗಿರುವ ವಿಷಯವನ್ನು, ಅಥವಾ ಸ್ವಯಂ-ಅನುಮಾನವನ್ನು ದೂರಮಾಡಿಕೊಳ್ಳಲು ಸಾಕಷ್ಟು ಸಮಯದ ಅಗತ್ಯವಿರುತ್ತದೆ. ಆದರೆ ಒಮ್ಮೆ ನೀವು ನಿಮ್ಮನ್ನು ನಂಬಲು ಪ್ರಾರಂಭಿಸಿದಾಗ ಮತ್ತು ನೀವು ಯಾರನ್ನಾದರೂ ಪ್ರೀತಿಸುವ ಮತ್ತು ಅವರನ್ನು ಆಳವಾಗಿ ಕಾಳಜಿ ಮಾಡುವ ಸಾಮರ್ಥ್ಯ ಹೊಂದಿದ್ದೀರಿ ಎಂದು ಖಚಿತವಾಗಿ ನೀವು ಹಾಗೆಯೇ ಕಾರ್ಯನಿರ್ವಹಿಸಲು ಸಾಧ್ಯವಾದರೆ, ನೀವು ಹೊಸ ಸಂಬಂಧಗಳನ್ನು ಹುಡುಕುವಲ್ಲಿ ಅರ್ಧದಾರಿ ತಲುಪಿದ್ದೀರಿ ಎಂದೇ ಹೇಳಬಹುದು! ಆದಾಗ್ಯೂ, ನೀವು ಪ್ರೀತಿಸಲು ಮತ್ತು ಉತ್ತಮವಾಗಿ ನೋಡಿಕೊಳ್ಳುವುದಕ್ಕೆ ನೀವು ಅರ್ಹರು ಎಂದು ನಿಸ್ಸಂದೇಹವಾಗಿ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಲು ಸಾಧ್ಯವಾದರೆ, ನೀವು ನಿಮ್ಮೆಲ್ಲ ಪ್ರೀತಿಯನ್ನು ನೀಡುವ ಹಾಗೂ ನಿಮಗೆ ಬೇಕಿರುವ ಪ್ರೀತಿಯನ್ನು ಪಡೆಯಲು ಸರಿಯಾದ ವ್ಯಕ್ತಿಯನ್ನು ಹುಡುಕಬಹುದು!

ಹಿಂದಿನ ಸಂಬಂಧಗಳಿಂದ ಕಲಿತ ಪಾಠಗಳ ಬಗ್ಗೆ ನಿಮಗೆ ಸ್ಪಷ್ಟನೆಯಿದೆ
ಪ್ರತಿಯೊಂದು ಸಂಬಂಧದ ಸನ್ನಿವೇಶವೂ ಸಂಬಂಧದ ಹಾಳಾಗುವುದರ ಜೊತೆಗೆ ಒಂದಲ್ಲಾ ಒಂದು ರೀತಿಯ ಪಾಠವನ್ನು ಕಲಿಸಿರುತ್ತದೆ. ನಿಮ್ಮ ಹಿಂದಿನ ಸಂಬಂಧಗಳಿಂದ ನೀವು ಕಲಿಯಲು ಸಾಧ್ಯವಾದರೆ, ನೀವು ನಿಮ್ಮ ಮುಂದಿನ ಸಂಬಂಧದಲ್ಲಿ ಉತ್ತಮ ಸ್ಥಾನದಲ್ಲಿರಲು ಸಾಧ್ಯವಾಗುತ್ತದೆ.
ಎ) ಭವಿಷ್ಯದಲ್ಲಿ ನೀವು ವಿಭಿನ್ನವಾಗಿರಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಹಿಂದಿನ ಕಲಿಕೆಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ
ಬಿ) ಮುಂದೆ ಬರುವ ಅಪಾಯವನ್ನೂ ಎದುರಿಸಲು ನಿಮ್ಮ ಮನಸ್ಸನ್ನು ಸಿದ್ಧಗೊಳಿಸಿ
ಸಿ) ನಿಮ್ಮ ಸಂಗಾತಿಯಲ್ಲಿ ನೀವು ಯಾವ ಗುಣಗಳನ್ನು ಬಯಸುತ್ತೀರಿ ಎಂಬುದರ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಹೊಂದಿರಿ; ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ
ಡಿ) ನೀವು ಯಾವ ರೀತಿಯ ವ್ಯಕ್ತಿಯೊಂದಿಗೆ ಇರಲು ಬಯಸುವುದಿಲ್ಲ ಎಂಬುದರ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟವಾಗಿರಿ.
ಈ ಮೇಲಿನ ಎಲ್ಲವನ್ನು ಸ್ವಷ್ಟವಾಗಿ ಅರಿತು ಅದನ್ನು ನಿರ್ವಹಿಸಲು ಸಮರ್ಥರಾಗಿದ್ದೀರಿ ಎಂದು ನೀವು ತಿಳಿದುಕೊಂಡಾಗ, ನಿಮ್ಮ ಜೀವನದಲ್ಲಿ ಹೊಸ ಸಂಬಂಧಕ್ಕೆ ನೀವು ಸಿದ್ಧರಿದ್ದೀರಿ!