For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ನೋಡಿ ಯುವಕರು ವಯಸ್ಸಾದರೂ ಮದುವೆ ಆಗುವುದಿಲ್ಲ!

|

ಮದುವೆಯ ವಿಚಾರಕ್ಕೆ ಬಂದಾಗ ಸರ್ಕಾರ ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ 18 ವರ್ಷ ಎಂಬ ಕನಿಷ್ಠ ವಯಸ್ಸಿನ ನಿಯಮವನ್ನೇನೋ ಜಾರಿಗೆ ತಂದಿದೆ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಹುಡುಗ ಅಥವಾ ಹುಡುಗಿ ಮದುವೆಯಾಗುವುದು ಈಗಿನ ಕಾಲದಲ್ಲಿ ತುಂಬಾ ವಿರಳ. ಮೊದಲು ಚೆನ್ನಾಗಿ ದುಡಿಯಬೇಕು, ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ.

ಆದರೂ ಕೂಡ ಒಂದು ನಿರ್ದಿಷ್ಟ ವಯಸ್ಸಿಗೆ ಬಂದ ನಂತರ ಪ್ರತಿಯೊಬ್ಬರೂ ಮದುವೆ ಆಗಲೇಬೇಕು ಎನ್ನುವ ಕಟ್ಟುಪಾಡಿಗೆ ಕಟ್ಟುಬಿದ್ದು ಮದುವೆ ಮಾಡಿಕೊಳ್ಳಲು ಮನಸ್ಸು ಮಾಡುತ್ತಾರೆ. ಆದರೆ ಕೆಲವು ಪುರುಷರಿಗೆ ವಯಸ್ಸು ಮೀರಿದರೂ ಸಹ ಮದುವೆ ಮಾತ್ರ ಆಗಿರುವುದಿಲ್ಲ. ಹಾಗಾದರೆ ಇದಕ್ಕೆ ಕಾರಣ ಏನಿರಬಹುದು. ಬನ್ನಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬೇರೆ ದೇಶದಲ್ಲಿ ನಡೆದ ಒಂದು ಅಧ್ಯಯನ ಸುಮಾರು 35 ವರ್ಷದ ಆಸುಪಾಸಿನ ಅಂದಾಜು ಆರು ಸಾವಿರಕ್ಕೂ ಹೆಚ್ಚು ಒಬ್ಬಂಟಿ ಪುರುಷರನ್ನು ಸಂಶೋಧನೆಗೆ ಗುರಿಪಡಿಸಿ ಅವರಿಂದ ಬರುವ ಉತ್ತರಗಳನ್ನು ತಾಳೆ ಹಾಕಿ ನೋಡಿದಾಗ ಸುಮಾರು ನಲವತ್ತಕ್ಕೂ ಹೆಚ್ಚು ಕಾರಣಗಳು ಒಂದೇ ರೀತಿ ಇದ್ದವು.

ಹಾಗಾದರೆ ಪುರುಷರಿಗೆ ಸುಮಾರು 35 ವರ್ಷ ತಲುಪಿದರೂ ಸಹ ಮದುವೆ ಆಗದೆ ಹಾಗೆ ಉಳಿಯಲು ಕಾರಣಗಳು ಏನಿರಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

1. ನೋಡಲು ಚೆನ್ನಾಗಿ ಕಾಣದೆ ಇರುವುದು

1. ನೋಡಲು ಚೆನ್ನಾಗಿ ಕಾಣದೆ ಇರುವುದು

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಹೋಲಿಕೆ ಮಾಡಿ ನೋಡಿದಾಗ ತಾನು ಅಂದದಲ್ಲಿ ಬೇರೆಯವರಿಗಿಂತ ಅಷ್ಟೇನೂ ಚೆನ್ನಾಗಿಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಬಂದುಬಿಟ್ಟರೆ, ಅದು ಆತನನ್ನು ತನಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತೆ ಮಾಡಿಬಿಡುತ್ತದೆ. ಉದಾಹರಣೆಗೆ ತಲೆ ಕೂದಲು ಅದಾಗಲೇ ಉದುರಿ ಹೋಗಿರುವುದು, ನೋಡಲು ಎತ್ತರ ಇಲ್ಲದೆ ಇರುವುದು, ಇದೆಲ್ಲವೂ ಸಹ ಹಿಂಜರಿಕೆಗೆ ಕಾರಣ ಆಗುತ್ತದೆ.

2. ಆತ್ಮವಿಶ್ವಾಸದ ಕೊರತೆ ಇರಬಹುದು

2. ಆತ್ಮವಿಶ್ವಾಸದ ಕೊರತೆ ಇರಬಹುದು

ಬಹಳಷ್ಟು ಪುರುಷರಿಗೆ ಮುಂದಿನ ಜೀವನದ ಬಗ್ಗೆ ಬಹಳ ಭಯವಿರುತ್ತದೆ. ತಮ್ಮ ಮೇಲೆ ತಮಗೆ ನಂಬಿಕೆ ಇರುವುದಿಲ್ಲ. ಇಂತಹ ಸಂದರ್ಭದಲ್ಲೂ ಕೂಡ ತಮ್ಮ ಜೀವನಕ್ಕೆ ಬೇರೊಬ್ಬರನ್ನು ಬರಮಾಡಿಕೊಂಡು ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿಕೊಂಡು ಹೋಗುವಷ್ಟು ತಾಳ್ಮೆ ಅಥವಾ ಬುದ್ಧಿವಂತಿಕೆ ಇಲ್ಲದೆ ಹೋಗುತ್ತದೆ. ಇದರಿಂದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.

3. ಅವಶ್ಯಕ ಶ್ರಮ ಹಾಕದೆ ಇರುವುದು

3. ಅವಶ್ಯಕ ಶ್ರಮ ಹಾಕದೆ ಇರುವುದು

ಮದುವೆ ವಯಸ್ಸಿಗೆ ಬಂದ ನಂತರ ಸಮಯ ಸಂದರ್ಭಕ್ಕೆ ಅನುಸಾರವಾಗಿ ಹತ್ತಾರು ಕಡೆಗಳಲ್ಲಿ ತನಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗದೆ ತನ್ನನ್ನೇ ಯಾರಾದರೂ ಹುಡುಕಿಕೊಂಡು ಬಂದರೆ ಆಗ ನೋಡಿದರಾಯಿತು ಎನ್ನುವ ಮನಸ್ಥಿತಿ ಹೊಂದಿರುವ ಪುರುಷರು ಸಂಗಾತಿಯ ಆಯ್ಕೆಯಲ್ಲಿ ವಂಚಿತರಾಗುತ್ತಾರೆ. ಬೇರೆ ಬಗೆಯ ಪುರುಷರಂತೆ ಒಂದು ಸಂಬಂಧವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಷ್ಟಪಡುವ ಪುರುಷರಿಗೆ ಸಂಗಾತಿ ಸಿಗುವುದು ತುಂಬಾ ವಿರಳ ಎಂದು ಹೇಳಬಹುದು.

4. ಸಂಬಂಧಗಳಲ್ಲಿ ನಂಬಿಕೆ ಇಲ್ಲದೆ ಇರುವುದು

4. ಸಂಬಂಧಗಳಲ್ಲಿ ನಂಬಿಕೆ ಇಲ್ಲದೆ ಇರುವುದು

ಕೆಲವು ಪುರುಷರಿಗೆ ತಮ್ಮ ಬಂಧು ಬಾಂಧವರಲ್ಲಿ ಅಪ್ಪಿತಪ್ಪಿ ಯಾರಾದರೂ ವಿಚ್ಛೇದನ ಪಡೆದುಕೊಂಡಿದ್ದರೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಕಾರಣಗಳನ್ನು ತಿಳಿದುಕೊಂಡಿದ್ದರೆ, ಅಂತಹ ಸಮಯದಲ್ಲಿ ಇಂತಹ ಅನೇಕ ಉದಾಹರಣೆಗಳು ಸುಲಭವಾಗಿ ಕಣ್ಣೆದುರಿಗೆ ಸಿಗುತ್ತಿದ್ದರೆ, ಆಗ ಅವರಿಗೆ ಎಲ್ಲಿ ತನ್ನ ಸಂಬಂಧವು ಕೂಡ ಇದೇ ರೀತಿ ಆಗಿಬಿಡುತ್ತದೆ ಎನ್ನುವ ಭಯ ಮೊದಲೇ ಕಾಡಲು ಪ್ರಾರಂಭವಾಗುತ್ತದೆ. ಇದರಿಂದಲೂ ಸಹ ತನ್ನ ಜೀವನಕ್ಕೆ ನೆಚ್ಚಿನ ಸಂಗಾತಿಯನ್ನು ಆಯ್ದುಕೊಳ್ಳಲು ಪುರುಷರಿಗೆ ಮನಸ್ಸು ಬರುವುದಿಲ್ಲ.

5. ಕೆಲವರಿಗೆ ಹುಡುಗಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿರುವುದಿಲ್ಲ

5. ಕೆಲವರಿಗೆ ಹುಡುಗಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿರುವುದಿಲ್ಲ

ಇಂದಿನ ಬಹಳಷ್ಟು ಯುವಕರು ಹುಡುಗಿ ಆಯ್ಕೆಯ ವಿಚಾರದಲ್ಲಿ ಸೋಲುತ್ತಿರುವ ಪ್ರಮುಖ ಕಾರಣ ಇದು ಎಂದು ಹೇಳಬಹುದು. ಅತಿಯಾದ ಸಂಕೋಚ ಸ್ವಭಾವ, ತಮ್ಮ ಕುಟುಂಬದ ಹಿನ್ನೆಲೆ, ತಾವು ಬೆಳೆದು ಬಂದ ವಾತಾವರಣ ಕೆಲವು ಪುರುಷರನ್ನು ಸಂಗಾತಿಯ ಆಯ್ಕೆಯ ವಿಷಯ ಬಂದಾಗ ಅವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಅಳುಕುವಂತೆ ಮಾಡುತ್ತದೆ. ಇದರಿಂದಲೂ ಸಹ ಯಶಸ್ವಿಯಾದ ಒಂದು ಸಂಬಂಧವನ್ನು ಹೊಂದಲು ಸಾಧ್ಯ ಆಗುವುದಿಲ್ಲ.

6. ಸಿದ್ಧಾಂತಗಳನ್ನು ಹೆಚ್ಚು ನಂಬಿರುವ ಪುರುಷರು

6. ಸಿದ್ಧಾಂತಗಳನ್ನು ಹೆಚ್ಚು ನಂಬಿರುವ ಪುರುಷರು

ಕೆಲವು ಪುರುಷರಿಗೆ ಚಿಕ್ಕ ವಯಸ್ಸಿನಲ್ಲಿ ಬೇರೆ ಮಕ್ಕಳಂತೆ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಅಂತಹ ಬೆಳವಣಿಗೆಗೆ ಅವರು ಇದ್ದಂತಹ ವಾತಾವರಣ ಅನುಕೂಲ ಮಾಡಿಕೊಟ್ಟಿರುವುದಿಲ್ಲ. ಕೇವಲ ಬೇರೆಯವರ ಮೇಲೆ ಹೆಚ್ಚು ಗೌರವ ಭಾವನೆಯನ್ನು ಮಾತ್ರ ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಸಂಗಾತಿಗೆ ಹೇಗೆ ಪ್ರೀತಿ ತೋರಿಸಬೇಕು ಎಂಬುದು ಖಡಾಖಂಡಿತವಾಗಿ ತಿಳಿದಿರುವುದಿಲ್ಲ. ಹೀಗಿದ್ದಾಗ ಇಂತಹ ಯುವಕರು ಸದಾ ಒಬ್ಬಂಟಿಯಾಗಿ ಇರುವುದೇ ಒಳ್ಳೆಯದು ಎಂದು ತಿಳಿದುಕೊಂಡಿರುತ್ತಾರೆ.

7. ಇತ್ತೀಚೆಗಷ್ಟೇ ಸಂಗಾತಿಯನ್ನು ದೂರ ಮಾಡಿಕೊಂಡಿದ್ದರೆ

7. ಇತ್ತೀಚೆಗಷ್ಟೇ ಸಂಗಾತಿಯನ್ನು ದೂರ ಮಾಡಿಕೊಂಡಿದ್ದರೆ

ತಾನು ಇಷ್ಟಪಟ್ಟ ಸಂಗಾತಿ ತನ್ನನ್ನು ಯಾವುದೋ ಒಂದು ಕಾರಣದಿಂದ ಬಿಟ್ಟು ಹೋಗುತ್ತಿದ್ದಾಳೆ ಅಥವಾ ಈಗಾಗಲೇ ಬಿಟ್ಟು ಹೋಗಿದ್ದಾಳೆ ಎನ್ನುವ ಪುರುಷರ ಮನಸ್ಥಿತಿ ನಿಜಕ್ಕೂ ದೇವರಿಗೆ ಪ್ರೀತಿ. ಜೀವನದಲ್ಲಿ ಎಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಇಂತಹ ಪುರುಷರು ಹಿಂಜರಿಯುವುದಿಲ್ಲ. ಹೀಗಿದ್ದ ಸಂದರ್ಭದಲ್ಲಿ ಇನ್ನೊಬ್ಬ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಖಂಡಿತವಾಗಿ ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ತಾನು ಜೀವನದಲ್ಲಿ ಖುಷಿಯಾಗಿರಬೇಕು ಎಂದರೆ ಒಬ್ಬಂಟಿಯಾಗಿ ಇರಬೇಕು ಎನ್ನುವ ಭಾವನೆ ಮನಸ್ಸಿನಲ್ಲಿ ಭದ್ರವಾಗಿ ಬೇರೂರಿರುತ್ತದೆ. ಇದರಿಂದಲೂ ಸಹ ಕೆಲವು ಪುರುಷರು ಸಂಗಾತಿಯಿಂದ ವಂಚಿತರಾಗುತ್ತಾರೆ.

8. ಹಿಂದೆ ನಡೆದ ಕೆಲವು ಕೆಟ್ಟ ಘಟನೆಗಳು

8. ಹಿಂದೆ ನಡೆದ ಕೆಲವು ಕೆಟ್ಟ ಘಟನೆಗಳು

ಸಂಗಾತಿಯ ಆಯ್ಕೆಯ ವಿಷಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅನುಭವಗಳು ಉಂಟಾಗಿರುತ್ತವೆ. ಹಲವಾರು ಅವಮಾನಗಳನ್ನು ಕೂಡ ಕಾಣಬೇಕಾಗುತ್ತದೆ. ಇಂತಹ ಕೆಲವೊಂದು ಘಟನೆಗಳಿಂದ ಮನಸ್ಸಿಗೆ ಸಾಕಷ್ಟು ಹಿಂಸೆಯಾಗುತ್ತದೆ. ಅಪ್ಪಿತಪ್ಪಿಯೂ ಇನ್ನು ಮುಂದೆ ಇಂತಹ ಸಹವಾಸ ನನಗೆ ಬೇಡ ಎನ್ನುವ ಹಾಗಾಗಿರುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಪಂಚದಲ್ಲಿ ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಮುಂದೆ ಸಾಗಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಂಗಾತಿಯ ವಿಷಯದಲ್ಲಿ ಸೋಲು ಎದುರಾಗುವುದಿಲ್ಲ.

9. ಹುಡುಗಿ ಸಿಗಲಿಲ್ಲ ಎನ್ನುವ ಸಿಲ್ಲಿ ಕಾರಣ

9. ಹುಡುಗಿ ಸಿಗಲಿಲ್ಲ ಎನ್ನುವ ಸಿಲ್ಲಿ ಕಾರಣ

ಇದಂತೂ ಯಾರೂ ನಂಬುವ ಮಾತಲ್ಲ. ಏಕೆಂದರೆ ಪುರುಷರು ಹೇಗೆ ತನ್ನ ಸಂಗಾತಿಗಾಗಿ ಹುಡುಕಾಟದಲ್ಲಿ ತೊಡಗಿರುತ್ತಾರೆ ಅದೇ ರೀತಿ ಯುವತಿಯರು ಕೂಡ ತಮಗೆ ಇಷ್ಟವಾಗುವ ಹಾಗೆ ಒಳ್ಳೆಯ ಹುಡುಗನ ಆಯ್ಕೆಯಲ್ಲಿ ತೊಡಗಿರುತ್ತಾರೆ. ಈ ಸಮಯದಲ್ಲಿ ನಿಮ್ಮಿಂದ ಬೇಕಾಗಿರುವುದು ಒಂದು ಸಣ್ಣ ಪರಿಶ್ರಮ ಅಷ್ಟೇ. ಹಾಗಾಗಿ ಸಾಧ್ಯವಾದರೆ ನೀವು ಪ್ರಯತ್ನ ಪಡುವುದರಿಂದ ನಿಮ್ಮ ನೆಚ್ಚಿನ ಬಾಳಸಂಗಾತಿ ನಿಮ್ಮ ಕೈ ಹಿಡಿಯುವ ಸಾಧ್ಯತೆ ಸದ್ಯದಲ್ಲೇ ಇರುತ್ತದೆ.

ಈ ಮೇಲಿನ ಕೆಲವು ಕಾರಣಗಳಿಂದ ಪುರುಷರಿಗೆ ತಮ್ಮ ಜೀವನವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಕು ಎನ್ನುವ ಭಾವನೆಯೇ ಇಲ್ಲದಂತಾಗುತ್ತದೆ. ಸದಾ ಒಂಟಿತನದ ಭಾವನೆ ಉಂಟಾಗಿ ಒಂದು ಅಭ್ಯಾಸವಾಗಿ ಬದಲಾಗಿಬಿಡುತ್ತದೆ. ಮುಂದೆ ಯಾರು ಏನೇ ಹೇಳಿದರೂ ಸಹ ಸಂಗಾತಿಯನ್ನು ಪಡೆಯಬೇಕು ಎನ್ನುವ ಆಲೋಚನೆ ಕೂಡ ಹತ್ತಿರ ಸುಳಿಯದಂತೆ ಆಗುತ್ತದೆ.

ಒಬ್ಬಂಟಿ ಆಗಿರುವ ಪುರುಷರಿಗೆ ಒಳ್ಳೆಯ ಅನುಕೂಲಗಳು ಸಹ ಇವೆ. ಅದೇನೆಂದರೆ ಇಡೀ ತಮ್ಮ ಜೀವನದಲ್ಲಿ ಬಹಳಷ್ಟು ಮಹಿಳೆಯರೊಂದಿಗೆ ಡೇಟಿಂಗ್ ಮಾಡಬಹುದು. ಹಾಗಾಗಿ ಒಬ್ಬಂಟಿ ಪುರುಷರು ಸಂಸಾರಿಗಳಿಗೆ ಹೋಲಿಸಿದರೆ ಹೆಚ್ಚು ಖುಷಿಯಾಗಿರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ಒಟ್ಟಿನಲ್ಲಿ ಅವರವರ ಹಣೆಬರಹಕ್ಕೆ ಅವರೇ ಹೊಣೆಗಾರರಾಗಿರುತ್ತಾರೆ.

English summary

Most common reasons why men can't find a partner or stay single in kannada

Here we are discussing about most common reasons why men can't find a partner or stay single. If you’re as unlucky in love, that means that you will end up being single in your 30s, still trying to find "The One" who’s actually right for you. In a couple of years, almost everyone you know will end up settling down, but sometimes, there are men who end up staying single. Read more.
Story first published: Thursday, May 13, 2021, 15:30 [IST]
X