For Quick Alerts
ALLOW NOTIFICATIONS  
For Daily Alerts

ಪತ್ನಿಗೆ ಕ್ಯಾನ್ಸರ್, ಸುಂದರ ನೆನಪುಗಳನ್ನು ಸೃಷ್ಟಿಸಬೇಕೆಂದು ಕೇಳಿಕೊಂಡ ಪತ್ನಿ, ಅದಕ್ಕಾಗಿ ಪತಿ ಏನು ಮಾಡಿದ ಗೊತ್ತಾ?

|

ಲುಕೆಮಿಯಾದಿಂದ ಹೆಂಡತಿಯನ್ನು ಕಳೆದುಕೊಂಡಿರುವ ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ಲುಕೆಮಿಯಾ ಇದೆ ಎಂದು ಗೊತ್ತಾದಾಗ ಅವಳ ಆಸೆಯಂತೆ ಸುಂದರವಾದ ನೆನಪುಗಳನ್ನು ಸೃಷ್ಟಿಸಲು ಏನು ಮಾಡಿದೆ ಎಂಬುವುದಾಗಿ ರೆಡಿಟ್‌ನಲ್ಲಿ ಬರೆದಿದ್ದಾರೆ. ಅವರ ಹೇಳಿರುವ ಕತೆಯನ್ನು ಇಲ್ಲಿ ಹೇಳಲಾಗಿದೆ.

Inspiring Story of how man created memories when his wife diagnosed with leukemia

ನಮ್ಮಿಬ್ಬರದ್ದು ಸುಂದರವಾದ ಸಂಸಾರ, ಟ್ರಕ್ಕಿಂಗ್‌, ಬೈಕ್ ರೈಡ್‌ ಅಂತ ಬದುಕನ್ನು ತುಂಬಾ ಎಂಜಾಯ್ ಮಾಡುತ್ತಿದ್ದ ಜೋಡಿ, ಆದರೆ ಇವರಿಬ್ಬರು ಖುಷಿಯಾಗಿರುವುದು ಆ ದೇವರಿಗೂ ಇಷ್ಟವಾಗಲಿಲ್ಲವೇನೋ... ಅವಳಿಗೆ ಅನಾರೋಗ್ಯ ಕಾಡಲಾರಂಭಿಸಿತು. ವೈದ್ಯರ ಬಳಿ ಹೋಗಿ ಪರೀಕ್ಷಿಸಿದಾಗ ಲುಕೆಮಿಯಾ ಇದೆ ಎಂದು ಗೊತ್ತಾಯ್ತು

ಸಾವು ಎದುರು ಇರುವಾಗ ಸುಂದರ ನೆನಪುಗಳನ್ನು ಕ್ರಿಯೇಟ್ ಮಾಡಬೇಕೆಂದಳು
ಆದರೆ ಅವಳಿಗೆ ನೋವಿನಲ್ಲಿ, ದುಃಖದಲ್ಲಿ ಸಾಯುವುದು ಇಷ್ಟವಿರಲಿಲ್ಲ, ಒಂದು ಸುಂದರವಾದ ನೆನೆಪುಗಳನ್ನು ಸೃಷ್ಟಿಸಬೇಕು ಎಂದು ನನ್ನಲ್ಲಿ ಕೇಳಿಕೊಳ್ಳುತ್ತಾಳೆ. ಅವಳ ಸುಂದರ ನೆನಪುಗಳು ನನ್ನ ಮೊಮ್ಮಕ್ಕಳಿಗೂ ಹೇಳುವಂತಿರಬೇಕು ಎಂಬುವುದಾಗಿ ಕೇಳಿಕೊಳ್ಳುತ್ತಾಳೆ.

ಕಡಲ ತೀರಕ್ಕೆ ಬೈಕ್‌ ರೈಡ್

ನಾವಿಬ್ಬರು ಸಮುದ್ರ ತೀರಕ್ಕೆ ಪ್ರಯಾಣ ಬೆಳೆಸಲು ತೀರ್ಮಾನಿಸಿ ಹೋದೆವು, ಅಲ್ಲಿದ್ದ ರೆಂಟ್‌ ಬೈಕ್ ತೆಗೆದುಕೊಂಡು ತುಂಬಾ ದೂರ ಬೈಕ್ ರೈಡ್‌ ಹೋದ್ವಿ, ಅಲ್ಲೊಂದು ಕಡೆ ಮೀನಿನ ಸ್ನ್ಯಾಕ್ಸ್ ಹಾಗೂ ಚಿಪ್ಸ್ ಮಾರಾಟ ಮಾಡುತ್ತಿದ್ದರು, ಬೈಕ್‌ ನಿಲ್ಲಿಸಿ ಇಬ್ಬರು ಮೀನಿನ ರುಚಿ ಸವಿಯುತ್ತಾ ಹರಟೆ ಹೊಡೆಯುತ್ತಾ ಆ ಕ್ಷಣವನ್ನು ಎಂಜಾಯ್ ಮಾಡಿದ್ವಿ.

ನಂತರ ಎತ್ತರ ಪ್ರದೇಶಕ್ಕೆ ಹೋದ್ವಿ, ಅಲ್ಲಿ ಹುಲ್ಲುಗಳು ಬೆಳೆದಿದ್ವು, ಆ ಹುಲ್ಲು ಹಾಸಿನ ಮೇಲೆ ಕೂತು ಅನಂತ ಸಮುದ್ರವನ್ನು ದಿಟ್ಟಿಸುತ್ತಿದ್ವೆ, ಆಗ ಸುಮದ್ರದಲ್ಲಿ ದೊಡ್ಡದಾದ ಅಲೆ ಎದ್ದಿತು, ನೋಡಿದರೆ ದೊಡ್ಡ ಗಾತ್ರದ ಮೀನೊಂದು ದಡದ ಸಮೀಪ ಬರುತ್ತಿದೆ, ಇದು ಸಾಮಾನ್ಯವಾದ ವಿಷಯವೇ ಅಲ್ಲ, ಏಕೆಂದರೆ ಅಂಟಾರ್ಟಿಕದಿಂದ ಉತ್ತರಕ್ಕೆ ಸಾಗುತ್ತಾ ಆ ತಿಮ್ಮಿಂಗಲ ಮೀನು ಬರುತ್ತಿದೆ, ನಾವು ಒಂದು ತಿಮ್ಮಿಂಗಲವಿರಬಹುದು ಅಂದುಕೊಂಡ್ರೆ ಸುಮಾರು 50-60 ತಿಮಿಂಗಿಲಗಳು ಒಟ್ಟ ಕಾಣಿಸಿದೆವು, ಸುಮಾರು 4-5 ಮೈಲ್‌ಗಳ ದೂರ ಅವುಗಳೇ ಕಾಣುತ್ತಿತ್ತು..

.

ಎಂಥ ಅದ್ಭುತ ದೃಶ್ಯ ...

ಇಬ್ಬರು ಅಂಥ ಅದ್ಭುತ ದೃಶ್ಯ ಕಣ್ತುಂಬಿಕೊಂಡು ಮನೆಗೆ ಹಿಂತಿರುಗಿತ್ತಿದ್ದಾಗ ಇಬ್ಬರಲ್ಲೂ ಮೌನ, ನಮ್ಮ ಬೈಕ್‌ ಓಡುತ್ತಲೇ ಇತ್ತು, ನಾನು ಗಾಡಿಯ ವೇಗ ಕಮ್ಮಿ ಮಾಡಿ 'ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡು' ಎಂದಾಗ ಅವಳು ನನಗೆ ಕ್ಯಾನ್ಸರ್ ಇರುವುದು ಡೇವ್... ಈ ರೈಡ್‌ ತುಂಬಾನೇ ಥ್ರಿಲ್‌ ಕೊಡ್ತಾ ಇದೆ ಎಂದಳು.

ನಾವಿಬ್ಬರೂ ತುಂಬಾ ದೂರ ರೈಡ್‌ ಹೋದೆವು, ಅವಳು ಇಷ್ಟಪಟ್ಟ ಜಾಗವೆಲ್ಲಾ ಖುಷಿಯಾಗಿ ಸುತ್ತಿದೆವು....

ಅದಾಗಿ ಸ್ವಲ್ಪ ದಿನಗಳಲ್ಲಿ ಅವಳು ನನ್ನನ್ನು ಬಿಟ್ಟು ಹೊರಟಳು, ಆದರೆ ಈ ಜೀವನಕ್ಕೆ ಸಾಕಾಗುವಷ್ಟು ಸುಂದರವಾದ ನೆನಪುಗಳನ್ನು ಬಿಟ್ಟು ಹೋಗಿದ್ದಾಳೆ....

English summary

Inspiring Story of how man created memories when his wife diagnosed with leukemia

Here are inspiring story of man how he created good memories to his wife when she diagnosed with leukemia,
Story first published: Monday, September 5, 2022, 13:12 [IST]
X
Desktop Bottom Promotion