For Quick Alerts
ALLOW NOTIFICATIONS  
For Daily Alerts

ಫ್ರೆಂಡ್‌ ಶಿಪ್‌ ಡೇ 2020: ಹೀಗಿರ್ತಾರೆ ನೋಡಿ ಬೆಸ್ಟ್ ಫ್ರೆಂಡ್‌ ಅಂದರೆ

|

ನಮ್ಮ ಎಲ್ಲಾ ಗೆಳೆಯರಿಗೆ ಫ್ರೆಂಡ್‌ ಶಿಪ್‌ ಡೇ ಶುಭಾಶಯಗಳು. ಗೆಳೆಯರಿಂದ ಗೆಳೆಯರಿಗಾಗಿ ಮತ್ತು ಗೆಳೆಯರೇ ಮಾಡುವ ಗೆಳೆಯರ ಹಬ್ಬ ಎಂದರೆ ಅದು ಫ್ರೆಂಡ್‌ ಶಿಪ್‌ ಡೇ. ಇಂದಿನ ಸಂಭ್ರಮಾಚರಣೆಯಲ್ಲಿ ವರ್ಷಕ್ಕೆ ಒಂದು ಬಾರಿ ಬರುವ ಫ್ರೆಂಡ್‌ ಶಿಪ್‌ ಡೇ ದಿನವನ್ನು ಮರೆಯಲಾಗದ ದಿನವನ್ನಾಗಿ ನೆನಪಿನಲ್ಲಿಟ್ಟುಕೊಳ್ಳಲು ಒಬ್ಬರು ಇನ್ನೊಬ್ಬರ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವುದು ಅಭ್ಯಾಸ. ಫ್ರೆಂಡ್ ಶಿಪ್ ಬ್ಯಾಂಡ್ ಗೆಳೆತನದ ನಿಜವಾದ ಸಂಕೇತ ಎಂಬ ಭಾವನೆ ಕಟ್ಟುವವರಲ್ಲೂ ಮತ್ತು ಕಟ್ಟಿಸಿಕೊಳ್ಳುವವರಲ್ಲೂ ಇರುತ್ತದೆ.

ಹೇಗಾದರೂ ಮಾಡಿ ಹೋದ ವರ್ಷಕ್ಕಿಂತ ಈ ವರ್ಷ ನಮ್ಮ ಗೆಳೆಯರ ಜೊತೆಗೂಡಿ ಫ್ರೆಂಡ್‌ ಶಿಪ್‌ ಡೇ ಅನ್ನು ಅತ್ಯಂತ ಸಂತೋಷ, ಸಡಗರದಿಂದ ಆಚರಣೆ ಮಾಡಬೇಕೆಂಬ ಹೆಬ್ಬಯಕೆ ಎಲ್ಲಾ ಗೆಳೆಯ ಮತ್ತು ಗೆಳತಿಯರಿಗೆ ಇರುತ್ತದೆ. ಹಾಗಾಗಿ ತಮ್ಮ ನಿಜವಾದ ಗೆಳೆತನದ ಸಂಕೇತವನ್ನು ಎತ್ತಿ ಹಿಡಿಯಲು ಗೆಳೆಯರ ದಿನಾಚರಣೆಯನ್ನು ಪ್ರತಿಯೊಬ್ಬರು ಆಚರಿಸಲು ಬಯಸುತ್ತಾರೆ.

ಗೆಳೆತನವೆಂಬುದು ಬೇರೆಲ್ಲಾ ವಿಚಾರಗಳಿಗಿಂತ ಜೀವನದಲ್ಲಿ ತುಂಬ ಶಾಶ್ವತವಾದ ಮತ್ತು ಗೆಳೆಯರ ಮನಸ್ಸಿನಲ್ಲಿ ಒಂದು ಸಕಾರಾತ್ಮಕ ಶಕ್ತಿ ಬೀರುವ ಕಣ್ಣಿಗೆ ಕಾಣದ ಸುಮಧುರ ಬಾಂಧವ್ಯ. ಕೊನೆವರೆಗೂ ಶಾಶ್ವತವಾಗಿ ಉಳಿಸಿಕೊಳ್ಳುವ ಗೆಳೆತನಕ್ಕೆ ಹೆಚ್ಚಿನ ಮೌಲ್ಯ ಇರುತ್ತದೆ. ಅಂತಹ ನಿಜವಾದ ಗೆಳೆತನದ ಕೆಲವು ಗುಣ ಲಕ್ಷಣಗಳ ಗುಣಗಾನ ಈ ಲೇಖನದಲ್ಲಿ ನಡೆದಿದೆ.

1. ಒಬ್ಬರ ಮನಸ್ಸು ಇನ್ನೊಬ್ಬರಿಗೆ ಅರ್ಥವಾಗುತ್ತದೆ

1. ಒಬ್ಬರ ಮನಸ್ಸು ಇನ್ನೊಬ್ಬರಿಗೆ ಅರ್ಥವಾಗುತ್ತದೆ

ಒಂದು ನಿಜವಾದ ಗೆಳೆತನದಲ್ಲಿ ಇದು ಸಾಮಾನ್ಯ ಸಂಗತಿ. ಗೆಳೆತನ ಎಂಬುದು ಪರಿಶುದ್ಧವಾಗಿದ್ದರೆ ಗೆಳೆಯ ಅಥವಾ ಗೆಳತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಯಾವುದೇ ಕಷ್ಟ ಆಗುವುದಿಲ್ಲ. ಒಬ್ಬರ ಕಷ್ಟ - ಸುಖಗಳಲ್ಲಿ ಭಾಗಿಯಾಗಬೇಕೆಂದು ಗೆಳೆಯರಿಗಲ್ಲದೆ ಮತ್ತ್ಯಾರಿಗೂ ಅನ್ನಿಸಲು ಸಾಧ್ಯವೇ ಇಲ್ಲ. ಇಂದು ತಮ್ಮ ಗೆಳೆಯ ಅಥವಾ ಗೆಳತಿ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅವರು ಇರುವ ಜಾಗಕ್ಕೆ ಹೋಗಬೇಕು ಎಂದೇನಿಲ್ಲ. ಮನಸ್ಸಿನ ಮಿಡಿತ ಗೆಳೆತನದ ಪ್ರಮುಖ ರೂವಾರಿ ಅಲ್ಲವೇ ?

2. ಪ್ರಾಮಾಣಿಕತೆ ಎದ್ದು ಕಾಣುತ್ತದೆ

2. ಪ್ರಾಮಾಣಿಕತೆ ಎದ್ದು ಕಾಣುತ್ತದೆ

ನಿಜವಾದ ಗೆಳೆತನದಲ್ಲಿ ಯಾರ ಮಧ್ಯೆಯೂ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಕೆಲವರು ಹೇಳುತ್ತಾರೆ, ಇದ್ದದ್ದು ಇದ್ದ ಹಾಗೆ ಹೇಳಿದರೆ ಇವರಿಗೆ ಪಿತ್ತ ನೆತ್ತಿಗೆ ಏರುತ್ತದೆ ಎಂದು. ಆದರೆ ಇದು ಯಾವುದೇ ಒಂದು ಒಳ್ಳೆಯ ಗೆಳೆತನದ ಲಕ್ಷಣವಂತೂ ಖಂಡಿತಾ ಅಲ್ಲ. ನಿಜವಾದ ಗೆಳೆಯರು ಗೆಳೆತನದಲ್ಲಿ ಬರುವ ನೇರ ಮತ್ತು ನಿಷ್ಠುರ ಮಾತುಗಳನ್ನು ಅತ್ಯಂತ ಸರಳವಾಗಿ ತೆಗೆದುಕೊಳ್ಳುವುದರ ಮೂಲಕ ಹೇಳಿದವರನ್ನು ಅಥವಾ ಸೂಚನೆ ಕೊಟ್ಟವರನ್ನು ಪ್ರಶಂಸೆ ಪಡಿಸುತ್ತಾರೆ. ತಮ್ಮನ್ನು ಒಂದು ದೊಡ್ಡ ಅವಮಾನದಿಂದ ಪಾರು ಮಾಡಿದ್ದಕ್ಕೆ ಧನ್ಯವಾದ ತಿಳಿಸುತ್ತಾರೆ.

3. ಸಿಗುವ ಖುಷಿಗೆ ಪಾರವೇ ಇರುವುದಿಲ್ಲ

3. ಸಿಗುವ ಖುಷಿಗೆ ಪಾರವೇ ಇರುವುದಿಲ್ಲ

ಗೆಳೆಯರೊಂದಿಗೆ ನಾವು ಕಳೆಯುವ ಕಾಲ ಅತ್ಯಂತ ಅಮೂಲ್ಯವಾದದ್ದು. ಸದಾ ನಕ್ಕು ನಲಿಯುವ ಸಂದರ್ಭ ಗೆಳೆಯರ ಜೊತೆ ಅಲ್ಲದೆ ಬೇರೆ ಯಾರ ಜೊತೆಗೂ ಸಿಗುವುದಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ನಾವು ಕಳೆಯುವ ಒಂದು ಕ್ಷಣ ಕೂಡ ನಮ್ಮ ಗೆಳೆತನ ನೆನಪನ್ನು ನಮ್ಮ ಮನಸ್ಸಿನಲ್ಲಿ ದೀರ್ಘ ಕಾಲದವರೆಗೆ ಅಚ್ಚಳಿಯದಂತೆ ಉಳಿಸುತ್ತದೆ.

4. ಕಷ್ಟ - ಸುಖಗಳಲ್ಲಿ ಭಾಗಿಯಾಗುವ ಗುಣ

4. ಕಷ್ಟ - ಸುಖಗಳಲ್ಲಿ ಭಾಗಿಯಾಗುವ ಗುಣ

ಗೆಳೆತನದಲ್ಲಿ ಗೆಳೆಯರಿಗೆ ಇದೊಂದು ವರದಾನ. ತಮ್ಮ ಇಡೀ ಗುಂಪಿನಲ್ಲಿ ಯಾವುದೇ ಒಬ್ಬ ಗೆಳೆಯ ಅಥವಾ ಗೆಳತಿ ಕಷ್ಟದಲ್ಲಿದ್ದರೆ ಹೇಗಾದರೂ ಮಾಡಿ ಅವರನ್ನು ಅಂತಹ ಕಷ್ಟದ ಪರಿಸ್ಥಿತಿಯಿಂದ ಪಾರು ಮಾಡಬೇಕೆಂಬ ಮನಸ್ಸು ಇತರ ಗೆಳೆಯರಿಗೆ ಖಂಡಿತ ಬರುತ್ತದೆ. ಈಗಿನ ಕಾಲದಲ್ಲಿ ರಸ್ತೆ ಮೇಲೆ ಒದ್ದಾಡುತ್ತಾ ಬಿದ್ದಿದ್ದರೂ ಬೇರೆಯವರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋಗಳನ್ನು ತೆಗೆಯುತ್ತಾರೆ ಹೊರತು ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ. ಆದರೆ ನಿಜವಾದ ಗೆಳೆತನದಲ್ಲಿ ಇದಕ್ಕೆ ಅವಕಾಶವೇ ಇಲ್ಲ.

5. ಸಲುಗೆ ಮತ್ತು ಆತ್ಮೀಯತೆ ಹೆಚ್ಚಿರುತ್ತದೆ

5. ಸಲುಗೆ ಮತ್ತು ಆತ್ಮೀಯತೆ ಹೆಚ್ಚಿರುತ್ತದೆ

ಗೆಳೆಯರೊಂದಿಗೆ ನಾವು ಕಾಲ ಕಳೆಯುವ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಕೈ ಹಾಕಿ ಕೂರುತ್ತೇವೆ. ಒಬ್ಬರ ಮೇಲೆ ಇನ್ನೊಬ್ಬರು ಕಾಲು ಹಾಕಿ ಮಲಗುತ್ತೇವೆ. ಈ ಪ್ರಮಾಣದ ಆತ್ಮೀಯತೆ ಹಾಗೂ ಸಲುಗೆ ನಮ್ಮ ಸ್ವಂತ ಕುಟುಂಬದವರ ಬಳಿ ಕೂಡ ಸಿಗುವುದಿಲ್ಲ. ಲಾಂಗ್ ರೈಡ್ ಹೋದ ಸಂದರ್ಭದಲ್ಲಿ ನಮ್ಮ ಜೇಬಿನಲ್ಲಿರುವ ಪರ್ಸ್ ಬಗ್ಗೆ ಸ್ವಲ್ಪವೂ ಚಿಂತಿಸದೆ ಆರಾಮವಾಗಿ ನಿದ್ರೆ ಮಾಡುತ್ತೇವೆ. ಇದಕ್ಕೆ ಕಾರಣ ಗೆಳೆಯರ ಮೇಲಿರುವ ನಂಬಿಕೆ ಮತ್ತು ಪ್ರೀತಿ.

6. ನಿಜವಾದ ಗೆಳೆತನದ ಬಾಂಧವ್ಯ

6. ನಿಜವಾದ ಗೆಳೆತನದ ಬಾಂಧವ್ಯ

ನಾವು ಯಾವುದೇ ನಮ್ಮ ಖಾಸಗಿ ವಿಚಾರಗಳನ್ನು ಬೇರೆಯವರ ಬಳಿ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಏಕೆಂದರೆ ಸುರಕ್ಷತೆಯ ಕೊರತೆ ನಮ್ಮನ್ನು ಕಾಡುತ್ತದೆ. ಅದು ಅಲ್ಲದೆ ಈಗಿನ ಕಾಲದಲ್ಲಿ ನಾವು ಯಾರನ್ನೂ ನಂಬುವ ಹಾಗಿಲ್ಲವಾದ್ದರಿಂದ ಮತ್ತು ನಮ್ಮ ಸ್ವಂತ ವಿಚಾರಗಳು ನಮ್ಮ ಜೇಬಿನಲ್ಲಿರುವ ಹಣವಿದ್ದಂತೆ. ನಾವು ಹಣವನ್ನು ಹೇಗೆ ಬ್ಯಾಂಕನ್ನು ನಂಬಿ ಭದ್ರವಾಗಿ ಶೇಖರಿಸುತ್ತವೆ ಅದೇ ರೀತಿ ನಮ್ಮ ಖಾಸಗಿ ವಿಷಯಗಳನ್ನು ಕೇವಲ ನಮ್ಮ ಗೆಳೆಯರ ಮತ್ತು ನಮ್ಮ ಶ್ರೇಯೋಭಿವೃದ್ಧಿಯನ್ನು ಬಯಸುವ ಪ್ರೀತಿ ಪಾತ್ರರ ಬಳಿ ಮಾತ್ರ ಹಂಚಿಕೊಳ್ಳಲು ಸಾಧ್ಯ.

7. ಗೆಳೆತನದಲ್ಲಿ ಸಿಗುವ ಉತ್ತೇಜನಕ್ಕೆ ಸರಿಸಾಟಿ ಇಲ್ಲ

7. ಗೆಳೆತನದಲ್ಲಿ ಸಿಗುವ ಉತ್ತೇಜನಕ್ಕೆ ಸರಿಸಾಟಿ ಇಲ್ಲ

ಒಂದು ನಿಜವಾದ ಗೆಳೆತನ ಒಂದು ಗುಂಪಿನ ಗೆಳೆಯರ ಮಧ್ಯೆ ಇರುತ್ತದೆ ಎಂದರೆ ಪ್ರತಿಯೊಬ್ಬರೂ ಇನ್ನೊಬ್ಬರ ಶ್ರೇಯಸ್ಸನ್ನು ಬಯಸುವ ಒಳ್ಳೆಯ ಗುಣ ಹೊಂದಿರುತ್ತಾರೆ. ಒಬ್ಬ ಗೆಳೆಯ ಕಷ್ಟ ಪಟ್ಟು ಯಾವುದಾದರೂ ಕೆಲಸ ಮಾಡುತ್ತಿದ್ದರೆ ಆತನಿಗೆ ಪ್ರೇರೇಪಣೆ ನೀಡುವ ಅದ್ಭುತ ಮನೋಭಿಲಾಷೆ ಇತರ ಗೆಳೆಯರಿಗೆ ಇರುತ್ತದೆ. ನಿಜವಾದ ಗೆಳೆತನದಲ್ಲಿ ' ನಾನು ' ಎಂಬ ಅಹಂ ಭಾವ ಇರುವುದಿಲ್ಲ. ಗೆಳೆತನದ ಸೊಗಸನ್ನು ವರ್ಣಿಸಲು ಕೆಲವೊಮ್ಮೆ ಪದಗಳೇ ಸಾಲುವುದಿಲ್ಲ.

8. ಗೆಳೆಯರೇ ನಮ್ಮ ಬೆನ್ನೆಲುಬು

8. ಗೆಳೆಯರೇ ನಮ್ಮ ಬೆನ್ನೆಲುಬು

ಗೆಳೆತನದಲ್ಲಿ ನಾವು ಹೆಚ್ಚು ನಂಬಿಕೆ ಇಟ್ಟಷ್ಟೂ ಬೇರೆ ಯಾವ ವಿಚಾರದಲ್ಲೂ ನಮ್ಮ ನಂಬಿಕೆ ಇರುವುದಿಲ್ಲ. ಇಂದಲ್ಲಾ ನಾಳೆ ನಮ್ಮ ಗೆಳೆಯರು ನಮ್ಮ ಬೆನ್ನೆಲುಬಾಗಿ ನಿಂತು ನಮ್ಮನ್ನು ಕಷ್ಟದ ಪರಿಸ್ಥಿತಿಗಳಲ್ಲಿ ಕೈ ಹಿಡಿಯುತ್ತಾರೆ ಎಂಬ ಅತೀವವಾದ ನಂಬಿಕೆ ನಮ್ಮ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ನಿಜವಾದ ಗೆಳೆತನದ ಉದ್ದೇಶವೇ ಒಬ್ಬರ ಕಷ್ಟ - ಸುಖಗಳಿಗೆ ಇನ್ನೊಬ್ಬರು ಆಗುವುದು ಎನ್ನುವುದಲ್ಲವೇ?.

English summary

Friendship Day 2020: Amazing Characteristics of a Best Friend

Here we are discussing about Amazing Characteristics of a Best Friend. Take a moment to celebrate your friends both near and far by exploring the eight defining characteristics of what being and having a best friend really means. Read more.
X