Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗಂಡ-ಹೆಂಡತಿ ಮಲಗುವ ಭಂಗಿ 'ಸೆಕ್ಸ್ ಜೀವನ' ದ ಬಗ್ಗೆ ಬಿಚ್ಚಿಡುತ್ತದೆಯಂತೆ!!
ಲೈಂಗಿಕತೆ ವೈವಾಹಿಕ ಜೀವನದ ಪ್ರಮುಖ ಅಂಗವಾಗಿದೆ. ಆರೋಗ್ಯಕರ ಲೈಂಗಿಕ ಜೀವನವು ಸಂಬಂಧವು ಬಲಗೊಳ್ಳಲು ನೆರವಾಗುವುದು. ಒಂದು ವೇಳೆ ಲೈಂಗಿಕ ಜೀವನ ಸರಿಯಾಗಿ ಇಲ್ಲವೆಂದಾದರೆ ಆಗ ದಂಪತಿಯ ಮಧ್ಯೆ ಕಲಹ ಹಾಗೂ ವೈಮನಸ್ಸು ಮೂಡಬಹುದು. ಸಂಬಂಧವು ಕಡಿದು ಹೋಗುವಂತಹ ಸಂದರ್ಭವೂ ಬರಬಹುದು. ಹೀಗಾಗಿ ಲೈಂಗಿಕ ಜೀವನವನ್ನು ಕಡೆಗಣಿಸುವಂತೆಯೂ ಇಲ್ಲ. ಇದು ಸಂಗಾತಿಗಳಿಬ್ಬರ ಜವಾಬ್ದಾರಿ ಮತ್ತು ಹೊಣೆಯಾಗಿದೆ. ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ನೀವು ಮಲಗುವ ಭಂಗಿ ಮತ್ತು ಲೈಂಗಿಕ ಜೀವನಕ್ಕೆ ಇರುವಂತಹ ಸಂಬಂಧದ ಬಗ್ಗೆ.
18 ರಿಂದ 73ರ ಹರೆಯದ ಸುಮಾರು 1000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ವೇಳೆ ಅವರು ಮಲಗುವ ಅಭ್ಯಾಸ ಮತ್ತು ಸಂಬಂಧದ ಬಗ್ಗೆ ತಿಳಿದುಕೊಳ್ಳಲಾಯಿತು. ಅಧ್ಯಯನಿಂದ ಕೆಲವೊಂದು ಆಸಕ್ತಿಯ ವಿಚಾರಗಳು ಬಹಿರಂಗವಾಗಿದೆ. ನಿದ್ರೆಯು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಪ್ರಮುಖ ಅಂಶ.
ಆದರೆ ಅಧ್ಯಯನದ ಪ್ರಕಾರ ಇದರಲ್ಲಿ ಭಾಗಿಯಾಗಿರುವಂತಹ ಕೆಲವರಿಗೆ ತಾವು ನಿದ್ರಿಸುವಂತಹ ಭಂಗಿ ಮತ್ತು ಈ ಭಂಗಿಯಲ್ಲಿ ಮಲಗುವ ವೇಳೆ ಅವರು ಎಷ್ಟರ ಮಟ್ಟಿಗೆ ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು ಎನ್ನುವುದನ್ನು ಕೂಡ ಕೇಳಲಾಯಿತು. ನಿದ್ರಿಸುವ ಭಂಗಿಯು ನಿಮ್ಮ ಸೆಕ್ಸ್ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುವುದು ಎಂದು ತಿಳಿಯಿರಿ....

ಪರಸ್ಪರರ ಮುಖ ನೋಡುತ್ತಾ
ಪರಸ್ಪರರ ಮುಖ ನೋಡಿಕೊಂಡು ಮಲಗುವಂತಹ ದಂಪತಿಯು ಅದ್ಭುತವಾಗಿರು ಸೆಕ್ಸ್ ಜೀವನ ನಡೆಸುವರು ಎಂದು ಕಂಡುಕೊಳ್ಳಲಾಗಿದೆ. ಈ ಭಂಗಿಯಲ್ಲಿ ಮಲಗುವ ವೇಳೆ ದಂಪತಿಯ ಅಂಗಗಳು ಪರಸ್ಪರ ಹೆಣೆದುಕೊಳ್ಳುವ ಕಾರಣದಿಂದಾಗಿ ಸೆಕ್ಸ್ ಮತ್ತಷ್ಟು ತೀವ್ರವಾಗುವುದು ಎಂದು ಹೇಳಲಾಗುತ್ತದೆ.ಇದು ದೊಡ್ಡ ಮಟ್ಟದಲ್ಲಿ ನಮಗೆ ಅಚ್ಚರಿ ಉಂಟು ಮಾಡಿಲ್ಲ. ಯಾಕೆಂದರೆ ಇದು ತುಂಬಾ ಸಾಮಾನ್ಯ ಭಂಗಿಯಾಗಿದೆ. ಈ ಭಂಗಿಯಲ್ಲಿ ಪರಸ್ಪರರ ಕಣ್ಣುಗಳು ಬೆಸೆದು ಕೊಳ್ಳುವ ಕಾರಣದಿಂದಾಗಿ ಅವರಲ್ಲಿ ಅನ್ಯೋನ್ಯತೆ ಮತ್ತಷ್ಟುಹೆಚ್ಚಾಗುವುದು.

ಸ್ಪೂನಿಂಗ್
ಈ ಅತ್ಯುತ್ಕೃಷ್ಟ ಭಂಗಿಯು ಎರಡನೇ ಸ್ಥಾನ ಪಡೆದಿದೆ. ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ತುಂಬಾ ಆರಾಮದಾಯಕ ಭಂಗಿಯಾಗಿದೆ. ಈ ಭಂಗಿಯಲ್ಲಿ ದಂಪತಿಯು ಹಿಂದಿನಿಂದ ತುಂಬಾ ಹಿತಕರವಾಗಿರುವಂತೆ ಪರಸ್ಪರ ಅಪ್ಪಿಕೊಂಡು ಮಲಗುವರು. ಈ ಭಂಗಿಯಲ್ಲಿ ಮಲಗುವ ಕಾರಣದಿಂದಂಪತಿಯು ತುಂಬಾ ಅನುಕೂಲಕರವಾಗಿ ಅನ್ಯೋನ್ಯತೆಯಲ್ಲಿ ತೊಡಗಿ ಕೊಳ್ಳಬಹುದು.

ನೂಕ್
ನೂಕ್ ಎನ್ನುವ ಭಂಗಿಯಲ್ಲಿ ಸಂಗಾತಿ(ಅದರಲ್ಲೂ ಮುಖ್ಯವಾಗಿ ಪುರುಷ) ತನ್ನ ಕೈಯನ್ನು ಸಂಗಾತಿಯ ಕುತ್ತಿಗೆಯ ಹಿಂಬದಿಯಲ್ಲಿ ದಿಂಬಿನಂತೆ ಇಟ್ಟು ಕೊಳ್ಳುವುದು. ಈ ವೇಳೆ ಆಕೆ ತನ್ನ ತಲೆಯನ್ನು ಎದೆಯ ಮೇಲೆ ಇಟ್ಟುಕೊಳ್ಳುವರು. ಈ ವೇಳೆ ಸಂಗಾತಿಯ ಎದೆಬಡಿತವು ಆಕೆಗೆ ಸರಿಯಾಗಿ ಕೇಳಿಸುವುದು ಮತ್ತು ಪ್ರೀತಿಸುವವರ ಹೃದಯದ ಬಡಿತಕ್ಕಿಂತ ದೊಡ್ಡ ರೋಮ್ಯಾಂಟಿಕ್ ಹಾಡು ಮತ್ತೊಂದು ಬೇಕಾಗಿಲ್ಲ. ಇದು ಒಂದು ರೀತಿಯಲ್ಲಿ ಸೆಕ್ಸ್ ನ ಆರಂಭಕ್ಕೆ ಆಹ್ವಾನ ಕೂಡ ನೀಡುವುದು. ಈ ರೀತಿಯಲ್ಲಿ ಮಲಗುವಂತಹ ದಂಪತಿಯು ಸೆಕ್ಸ್ ನ್ನು ತುಂಬಾ ರೋಮ್ಯಾಂಟಿಕ್ ಆಗಿ ಮಾಡುವರು.

ಕೋಲಾ
ಸಂಗಾತಿಯ ಅರ್ಧ ಅಪ್ಪುಗೆ ಮಾಡಿ ನೀವು ಯಾವತ್ತಾದರೂ ಮಲಗಿರುವುದು ಇದೆಯಾ? ಹೆಚ್ಚಿನ ಜನರು ಈ ಭಂಗಿಯಲ್ಲಿ ಮಲಗುವರು. ಇಂತಹ ಮುಗ್ದ ಮತ್ತು ಮುದ್ದಾದ ಭಂಗಿಯನ್ನು ತಡೆಯಲು ಸಾಧ್ಯವೇ ಇಲ್ಲ. ಇದು 3.5 ಅಂಕವನ್ನು ಪಡೆದಿದೆ ಮತ್ತು ಸೆಕ್ಸ್ ನಲ್ಲಿ ತೊಡಗಿಕೊಳ್ಳಲು ಇದು ತುಂಬಾ ಜನ ಪ್ರಿಯವಾದ ಭಂಗಿಯಾಗಿಲ್ಲ. ಬೇರೆ ಭಂಗಿಯಂತೆ ಇದು ಅಷ್ಟು ರೋಮ್ಯಾಂಟಿಕ್ ಆಗದೆ ಇರಬಹುದು. ಆದರೆ ನೀವು ಹೊಸತನ್ನು ಪ್ರಯತ್ನಿಸಲು ಬಯಸುತ್ತಾ ಇದ್ದರೆ ಆಗ ನೀವು ಖಂಡಿತವಾಗಿಯೂ ಈ ಭಂಗಿಯನ್ನು ಪ್ರಯತ್ನಿಸಿ ನೋಡಬಹುದು.



Click it and Unblock the Notifications
