For Quick Alerts
ALLOW NOTIFICATIONS  
For Daily Alerts

ಸೆಕ್ಸ್ ನಂತರ ಕೆಲವರು ವಿಚಿತ್ರವಾಗಿ ಮಾತನಾಡಿಕೊಳ್ಳುತ್ತಾರಂತೆ!!

By S.kalagi
|

ಸೆಕ್ಸ್ ನ ಖುಷಿ ಅನುಭವಿಸಿದ ನಂತರ ಕೆಲ ಹೊತ್ತು ಆತ್ಮೀಯವಾಗಿ ಮಾತನಾಡುವುದು, ಮತ್ತಷ್ಟು ಹೊತ್ತು ಪ್ರೀತಿಯಿಂದ ಅದೇ ಅಮಲಿನಲ್ಲಿ ತಬ್ಬಿ ಮಲಗುವುದು ಸಹಜ. ಆದರೆ ಕೆಲವರು ಮಾತ್ರ ಸೆಕ್ಸ್ ಮುಗಿದ ನಂತರ ಹೇಳುವ ಮಾತುಗಳು, ಅವರ ಕ್ರಿಯೆಗಳು ಅತ್ಯಂತ ವಿಚಿತ್ರವಾಗಿರುತ್ತವೆ.

ಒಂದು ರೀತಿಯ ಅನಿರೀಕ್ಷಿತ ಹಾಗೂ ಎದುರಿನ ಸಂಗಾತಿ ತಬ್ಬಿಬ್ಬಾಗುವ ಹಾಗೆ ವರ್ತಿಸುತ್ತಾರೆ. ಕೆಲವೊಮ್ಮೆ ಇವು ಆತಂಕದ ಕ್ಷಣಗಳನ್ನು ಮೂಡಿಸಿದರೂ ಅಷ್ಟೇ ವಿಚಿತ್ರ ಹಾಗೂ ತಮಾಷೆಯಾಗಿಯೂ ಇರುತ್ತವೆ. ಸೆಕ್ಸ್ ನಂತರ ಅವರ ಸಂಗಾತಿಯ ವಿಚಿತ್ರ ಮಾತು, ನಡವಳಿಕೆಯ ಬಗ್ಗೆ ಕೆಲವರು ಹಂಚಿಕೊಂಡ ವಿಷಯಗಳನ್ನು ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ನೀವೂ ಓದಿ ಆನಂದಿಸಿ....

ಸೆಕ್ಸ್ ನಂತರದ ವಿಚಿತ್ರ ವರ್ತನೆ

ಸೆಕ್ಸ್ ನಂತರದ ವಿಚಿತ್ರ ವರ್ತನೆ

ಸಂಗಾತಿಗಳಿಬ್ಬರು ಸೆಕ್ಸ್ ಮುಗಿದ ಮೇಲೆ ಖುಷಿ ಖುಷಿಯಾಗಿ ಮಾತನಾಡುತ್ತ, ಮತ್ತಷ್ಟು ಮುದ್ದಾಡುತ್ತ ಕಾಲ ಕಳೆಯುತ್ತಾರೆ ಎಂಬುದು ಸಾರ್ವತ್ರಿಕ ಸತ್ಯವಲ್ಲ. ಸೆಕ್ಸ್ ಮಾಡಿದ್ದು ಸಾಕು ನನಗೆ ಹಸಿವಾಗ್ತಿದೆ, ಹೊಟ್ಟೆಗೆ ಏನಾದರೂ ಹಾಕು ಅಥವಾ ಯಾಕೋ ಮಾಡಿದ್ದು ಇನ್ನೂ ತೃಪ್ತಿಯೇ ಆಗಲಿಲ್ಲ ಎಂದು ಹೇಳಬಹುದು. ಇನ್ನು ಕೆಲವರು ಏನೂ ಮಾತೇ ಆಡದೆ ಕೆಲ ನಿಮಿಷಗಳ ಮುಂಚೆ ಇಬ್ಬರ ಮಧ್ಯೆ ಏನೂ ಆಗಿಯೇ ಇಲ್ಲ ಎಂಬಂತೆ ವಿಚಿತ್ರ ಮೌನ ವಹಿಸಬಹುದು. ಹೌದು.. ಇಷ್ಟೇ ಅಲ್ಲ.. ಇನ್ನೂ ವಿಚಿತ್ರವಾಗಿ ಕೆಲವರು ವರ್ತಿಸುತ್ತಾರೆ. ಅಂಥ ಕೆಲ ಘಟನೆಗಳ ಬಗ್ಗೆ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.....

ನಾನು ಸರಿಯಾಗಿ ಮಾಡಿದೆನಾ?

ನಾನು ಸರಿಯಾಗಿ ಮಾಡಿದೆನಾ?

ನನ್ನ ಬಾಯ್ ಫ್ರೆಂಡ್ (ಈಗ ನನ್ನ ಪತಿ) ನೊಂದಿಗೆ ನಾನು ಮೊದಲ ಬಾರಿ ಸೆಕ್ಸ್ ಮಾಡಿದಾಗ ಆತ ಸೆಕ್ಸ್ ನಂತರ ಗಂಭೀರ ಮೌನಕ್ಕೆ ಶರಣಾಗಿ ಬಿಟ್ಟಿದ್ದ. ಏನನ್ನೋ ಗಂಭೀರವಾಗಿ ವಿಚಾರ ಮಾಡುತ್ತ ಸುಮ್ಮನೆ ಕುಳಿತುಕೊಂಡಿದ್ದ. ಅಲ್ಲದೆ ಅದೇನೆಂದು ಹೇಳಲು ಸಹ ಸಿದ್ಧನಾಗಿರಲಿಲ್ಲ. ನಾವಿಬ್ಬರೂ ಮನೆಗಳಿಗೆ

ತೆರಳಿದ ನಂತರ ಆತ ನನಗೆ ಒಂದು ಎಸ್ಸೆಮ್ಮೆಸ್ ಕಳುಹಿಸಿದ್ದ. ಅದರಲ್ಲಿ ಹೀಗೆ ಬರೆದಿತ್ತು- ಹಾಸಿಗೆಯಲ್ಲಿ ನನ್ನ ಕೆಲಸ ಹೇಗಿತ್ತು? ನಿನ್ನನ್ನು ತೃಪ್ತಿಪಡಿಸಲಾಗಲಿಲ್ಲ ಎನಿಸುತ್ತಿದೆ. ಹಾಗಾಗಿಯೇ ನೀನು ನನ್ನಿಂದ ದೂರವಾಗಬಹುದು ಎಂಬ ಹೆದರಿಕೆಯೂ ಆಗುತ್ತಿದೆ ಎಂದು ಬರೆದಿದ್ದ. ಈ ಘಟನೆಯನ್ನು ಆಗಾಗ ನೆನಪಿಸಿಕೊಂಡು ನಾವಿಬ್ಬರೂ ಜೋರಾಗಿ ನಗುತ್ತಿರುತ್ತೇವೆ.

Most Read: ನೀವು ಸೆಕ್ಸ್ ವೇಳೆ ಮಾಡಲೇಬಾರದ 9 ತಪ್ಪುಗಳು...

ನಿನ್ನ ತಾಯಿಯೊಂದಿಗೆ ಜಗಳವಾಡಿದೆ

ನಿನ್ನ ತಾಯಿಯೊಂದಿಗೆ ಜಗಳವಾಡಿದೆ

ಅದೊಂದು ದಿನ ನಾನು ಹಾಗೂ ನನ್ನ ಪತ್ನಿ (ಹೊಸದಾಗಿ ಮದುವೆಯಾದಾಗ) ಸೇರಿ ಸೆಕ್ಸ್ ಸುಖ ಅನುಭವಿಸಿದೆವು. ಆದರೆ ಕ್ರಿಯೆ ಮುಗಿದ ತಕ್ಷಣವೇ ಪತ್ನಿಯು ಜೋರಾಗಿ ಅಳಲಾರಂಭಿಸಿದಳು. ಅವಳು ಅದಾವುದೋ ವಿಷಯವನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ ಎಂಬುದು ಗೊತ್ತಾಯಿತು. ನನ್ನೊಂದಿಗೆ ವಿಷಯ ಹೇಳಬೇಕೆಂದು ಹೋಗಿ ಮತ್ತೆ ಅಳಲಾರಂಭಿಸುತ್ತಿದ್ದಳು. ಅದು ಹೇಗೋ ಅವಳನ್ನು ಸಮಾಧಾನ ಪಡಿಸಿದೆ. ಕೊನೆಗೆ ಗೊತ್ತಾದ ವಿಷಯವೇನೆಂದರೆ, ಕಳೆದ

ವಾರ ಆಕೆ ನನ್ನ ತಾಯಿಯೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದಳು. ಇದನ್ನು ನನ್ನೊಂದಿಗೆ ಹೇಳಿಕೊಳ್ಳಲು ಹೆದರಿ ಹೀಗೆ ಅಳುತ್ತಿದ್ದಳು.

ನನ್ನ ನಿಜವಾದ ಹೆಸರು ಗೊತ್ತೆ?

ನನ್ನ ನಿಜವಾದ ಹೆಸರು ಗೊತ್ತೆ?

ಅದೊಂದು ಬಾರಿ ಹುಡುಗಿಯೊಬ್ಬಳೊಂದಿಗೆ ಒಂದು ರಾತ್ರಿ ಅನುಭವಿಸುವ ಅವಕಾಶ ಸಿಕ್ಕಿತ್ತು. ಸುಮಾರು ಒಂದು ಗಂಟೆಯವರೆಗೆ ನಾವಿಬ್ಬರೂ ನಮ್ಮ ಜೀವನ, ಇಷ್ಟಗಳು, ಕೆಲಸ ಮುಂತಾದುವುಗಳ ಮಾತನಾಡುತ್ತ ಕುಳಿತಿದ್ದೆವು. ಆಕೆಯ ಮಾತುಗಳನ್ನು ಕೇಳುತ್ತಿದ್ದರೆ ಆಕೆ ತುಂಬಾ ನೇರ ನಡೆ ನುಡಿಯವಳು

ಎಂಬುದು ಗೊತ್ತಾಗುತ್ತಿತ್ತು. ನಮ್ಮಿಬ್ಬರ ಸೆಕ್ಸ್ ಮುಗಿದ ನಂತರ ಆಕೆ ತನ್ನ ಹೆಸರನ್ನು ಸುಳ್ಳು ಹೇಳಿರುವುದಾಗಿ ತಿಳಿಸಿ ತನ್ನ ನಿಜವಾದ ಹೆಸರು ಹೇಳಿಕೊಂಡಿದ್ದಳು.

ರಾಜಕೀಯದ ಬಗ್ಗೆ ನಿನ್ನ ಅಭಿಪ್ರಾಯ ನನಗೆ ಒಪ್ಪಿಗೆಯಿಲ್ಲ

ರಾಜಕೀಯದ ಬಗ್ಗೆ ನಿನ್ನ ಅಭಿಪ್ರಾಯ ನನಗೆ ಒಪ್ಪಿಗೆಯಿಲ್ಲ

ಅದೊಂದು ದಿನ ಸೆಕ್ಸ್ ಮಾಡಿದ ನಂತರ ನಾನು ಹಾಗೂ ನನ್ನ ಪತಿ ರಾಜಕೀಯದ ಬಗ್ಗೆ ಚರ್ಚೆ ಮಾಡಲಾರಂಭಿಸಿದೆವು. ನಿಧಾನವಾಗಿ ಆರಂಭವಾದ ಚರ್ಚೆ ಕೊನೆಗೆ ತುಂಬಾ ವಾದ ವಾಗ್ವಾದಗಳಾಗಿ ಒಂದು ರೀತಿಯ ಜಗಳದ ಹಂತ ತಲುಪಿತು. ರಾಜಕೀಯದ ಬಗ್ಗೆ ನಮ್ಮಿಬ್ಬರ ಒಲವುಗಳು ತೀರಾ ವಿರುದ್ಧ ದಿಕ್ಕಿನಲ್ಲಿರುವುದೇ ಈ ಜಗಳಕ್ಕೆ ಕಾರಣವಾಗಿತ್ತು. ಕೊನೆಗೆ ನನ್ನ ಗಂಡ ಜೋರಾಗಿ ಕೂಗಾಡಿ ಎದ್ದು ಹೋಗಿ ಬಿಟ್ಟ. ಅದರ ನಂತರ ಎಷ್ಟೋ ಹೊತ್ತಿನವರೆಗೆ

ನಾವಿಬ್ಬರೂ ಮಾತನಾಡಲೇ ಇಲ್ಲ.

ನೀನು ದಯವಿಟ್ಟು ತಕ್ಷಣ ಇಲ್ಲಿಂದ ಹೊರಡು

ನೀನು ದಯವಿಟ್ಟು ತಕ್ಷಣ ಇಲ್ಲಿಂದ ಹೊರಡು

ಅವತ್ತು ನಾನು ಹಾಗೂ ಬಾಯ್ ಫ್ರೆಂಡ್ ನನ್ನ ಹಾಸ್ಟೆಲ್ ರೂಮಿನಲ್ಲಿ ಸೆಕ್ಸ್ ಮಾಡಿದ್ದೆವು. ಅಷ್ಟರಲ್ಲಿ ನನ್ನ ರೂಂ ಮೇಟ್ ರೂಮಿಗೆ ಮರಳುವ ಸಮಯ ಹತ್ತಿರವಾಗುತ್ತಿತ್ತು. ಅವಳು ತೀರಾ ಚಾಡಿಕೋರಳಾಗಿದ್ದರಿಂದ ಅವಳಿಂದ ತುಸು ಜಾಗ್ರತೆಯಿಂದ ಇರುವುದು ಅನಿವಾರ್ಯವಾಗಿತ್ತು. ಹೀಗಾಗಿ ತಕ್ಷಣ ರೂಮಿ ನಿಂದ ಹೊರಟು ಹೋಗುವಂತೆ ಬಾಯ್ ಫ್ರೆಂಡ್‌ಗೆ ಹೇಳಿದೆ. ಆದರೆ ಹೋಗು ಅಂದಾಗ ಪಾಪ ಆತ ತೀರಾ ಬೇಜಾರು ಮಾಡಿಕೊಂಡು ಹೊರಟು ಹೋದ. ನಂತರ ಆತನಿಗೆ ಕಾಲ್ ಮಾಡಿ ಎಲ್ಲ ವಿಷಯ ತಿಳಿಸಿದಾಗ ಆತ ನಿರಾಳನಾದ.

Most Read: ಗಂಡ-ಹೆಂಡತಿ ಮಲಗುವ ಭಂಗಿ 'ಸೆಕ್ಸ್ ಜೀವನ' ದ ಬಗ್ಗೆ ಬಿಚ್ಚಿಡುತ್ತದೆಯಂತೆ!!

ನನಗಾಗಿ ಏನಾದರೂ ತಿನ್ನಲು ಕೊಡು, ಈಗಲೇ ಕೊಡು..

ನನಗಾಗಿ ಏನಾದರೂ ತಿನ್ನಲು ಕೊಡು, ಈಗಲೇ ಕೊಡು..

ಅಂದು ರಾತ್ರಿ ಸೆಕ್ಸ್ ನಂತರ ನನಗೆ ಸಿಕ್ಕಾಪಟ್ಟೆ ದಣಿವಾಗಿತ್ತು. ಜೊತೆಗೆ ಜೋರಾಗಿ ಹಸಿವು ಕೂಡ ಆಗಿತ್ತು. ಆದರೆ ಬೆಚ್ಚಗಿನ ಹಾಸಿಗೆಯಿಂದ ಹೊರಗೆ ಹೋಗಲು ನನಗೆ ಇಷ್ಟವೇ ಇರಲಿಲ್ಲ. ಮೈತುಂಬ ಆಲಸ್ಯ ಆವರಿಸಿತ್ತು. ಮಲಗಿದಲ್ಲಿಂದಲೇ ನನ್ನ ಗಂಡನಿಗೆ ಆರ್ಡರ್ ಮಾಡಿದೆ- ಡಿಯರ್, ನನಗೆ ಹಸಿವಾಗ್ತಿದೆ. ಏನಾದರೂ ಒಂದಿಷ್ಟು ಬೇಯಿಸಿ ಹಾಕು- ಎಂದೆ. ಆಗ ಬೆಳಗಿನ ೩ ಗಂಟೆ ಆಗಿತ್ತು. ಆದರೂ ನನ್ನ ಗಂಡ ಬೇಜಾರು ಮಾಡಿಕೊಳ್ಳದೆ ನನಗಾಗಿ ಆಮ್ಲೆಟ್ ಮಾಡಿಕೊಟ್ಟಿದ್ದನ್ನು ಎಂದಿಗೂ ಮರೆಯಲಾರೆ.

English summary

Weirdest things people have said after having sex!

If you thought people simply snuggle into each other’s arms, smile mischievously and whisper sweet nothings after having sex, this story might be an eye opener for you. Sometimes, things might not be as rosy as you expect them to be post sex. For starters, your partner might ask you to stop cuddling and get something to eat, crib about not having an orgasm, or simply ignore you like nothing happened a few minutes back. Yes, you read it right!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X