For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೇಯಸಿಗೆ ಪ್ರಪೋಸ್ ಮಾಡುವ ಬಯಕೆಯೇ ? ಇಲ್ಲಿವೆ ಕೆಲವು ಟಿಪ್ಸ್

|

ನಿಮ್ಮಲ್ಲಿ ಯಾರ ಮೇಲಾದರೂ ಪ್ರೀತಿ ಹುಟ್ಟಿದೆಯೇ ? ಆದರೆ ಹೇಳಲು ಭಯ ಪಡುತ್ತಿದ್ದೀರಾ ? ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಪ್ರೀತಿ ಮಾಡಿ ತಪ್ಪೇನಿಲ್ಲ . ಏಕೆಂದರೆ ಅದೇ ಪ್ರೀತಿ ಮುಂದೆ ಒಂದು ಸುಂದರವಾದ ಭಾಂದವ್ಯದ ಜೊತೆಗೆ ಸಂಬಂಧ ಅನುಭಂದ ವೆಂಬ ದೋಣಿಯ ಮೇಲೆ ಒಳ್ಳೆಯ ಜೀವನ ರೂಪಿಸಿಕೊಂಡು ಸುಖದಲ್ಲಿ ತೇಲುವಂತೆ ನೆರವಾಗುವುದು . ಆದರೆ ಇದಕ್ಕೆಲ್ಲಾ ಮೊದಲ ತಿರುವು ನೀವು ನಿಮ್ಮಾಕೆಯನ್ನು ಪ್ರಪೋಸ್ ಮಾಡುವುದರಿಂದ ಶುರುವಾಗುತ್ತದೆ . ಈ ಪ್ರಪೋಸ್ ಮಾಡುವುದರಲ್ಲೂ ಅನೇಕ ಬಗೆಗಳಿವೆ . ಎಲ್ಲ ಪ್ರಪೋಸಲ್ ಗಳೂ ಯಶಸ್ವಿಯಾಗುತ್ತವೆ ಎಂದೇನಿಲ್ಲ.

ಆದರೆ ಪ್ರಪೋಸ್ ಮಾಡುವ ಹುಡುಗರಿಗೆಲ್ಲಾ ಮನಸ್ಸಿನಲ್ಲಿ ನನ್ನ ಪ್ರಪೋಸಲ್ ಒಪ್ಪಿಗೆಯಾಗುತ್ತದೋ ಇಲ್ಲವೋ ಎಂಬ ದುಗುಡ ಇದ್ದೇ ಇರುತ್ತದೆ . ಕೇವಲ ಮಂಡಿಯೂರಿ ಕೈಯಲ್ಲಿ ಉಂಗುರ ಅಥವಾ ಕೆಂಪು ಗುಲಾಬಿ ಹಿಡಿದು ನಿಮ್ಮ ಪ್ರೀತಿಯನ್ನು ಆಕೆಯ ಮುಂದೆ ವ್ಯಕ್ತಪಡಿಸುವುದು ಅಷ್ಟೇ ಅಲ್ಲ . ಪ್ರಪೋಸಲ್ ಕೊಟ್ಟರೆ ಹೇಗಿರಬೇಕು ಗೊತ್ತೇ ? ಅದೊಂದು ಸುಂದರ ಮತ್ತು ತಿರುಗಿ ಬರಲಾರದ ಅದ್ಬುತ ಕ್ಷಣ. ಆ ಮರೆಯಲಾರದ ಕ್ಷಣವನ್ನು ನಿಮ್ಮ ಸಂಗಾತಿಯ ಜೊತೆ ನೀವೂ ಸೇರಿ ನಿಮ್ಮ ಜೀವಮಾನ ಇಡೀ ಮೆಲುಕು ಹಾಕುತ್ತಿರುವಂತೆ ಬಹಳ ವಿಶೇಷತೆಯಿಂದ ಕೂಡಿರಬೇಕು ಅಂತಹ ಪ್ರಪೋಸಲ್ ಕೊಡಲು ನಮ್ಮ ಬಳಿ ಕೆಲವೊಂದು ಸಲಹೆಗಳಿವೆ. ಮುಂದೆ ಓದಿ.....

ನಿಮ್ಮದೇ ಆದ ಒಂದು ಸಣ್ಣ ಕಿರು ಚಿತ್ರ ತಯಾರಿಸಿ

ನಿಮ್ಮದೇ ಆದ ಒಂದು ಸಣ್ಣ ಕಿರು ಚಿತ್ರ ತಯಾರಿಸಿ

ಮೇಲೆ ಹೇಳಿದಂತೆ ಪ್ರಪೋಸಲ್ ಕೊಡುವ ಅನೇಕ ಬಗೆಗಳಲ್ಲಿ ಇದೂ ಒಂದು . ಈಗಿನ ತಂತ್ರಜ್ಞಾನದಲ್ಲಿ ಒಂದು ಸಣ್ಣ ವಿಡಿಯೋ ಶೂಟ್ ಮಾಡುವುದು ಕಷ್ಟವೇನೂ ಅಲ್ಲ . ಒಂದು ಸುಂದರ ವಾದ ನಿಸರ್ಗ ರಮಣೀಯ ಲೊಕೇಶನ್ ಗೆ ನಿಮ್ಮ ಕ್ಯಾಮೆರಾ ಜೊತೆ ಹೋಗಿ ಆಕೆಗೆ ಇಷ್ಟವಾಗುವ ಒಂದು ಲವ್ ಸಾಂಗ್ ಗೆ ನಿಮ್ಮ ಸ್ಟೆಪ್ ಹಾಕಿ ಅಥವಾ ಸಿನಿಮಾ ದಲ್ಲಿ ಪ್ರಪೋಸ್ ಮಾಡುವ ಡೈಲಾಗ್ ಅನ್ನು ಕಾಪಿ ಮಾಡಿ ನಿಮ್ಮದೇ ರೀತಿಯಲ್ಲಿ ಒಂದು ಸಣ್ಣ ಅಭಿನಯ ಮಾಡಿ ಅದರ ಜೊತೆ ಪ್ರೀತಿ ಹುಟ್ಟಿಸುವಂತಹ ಒಂದು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸೇರಿಸಿ . ಇಷ್ಟೆಲ್ಲವನ್ನೂ ಹೊತ್ತ ಒಂದು ಪೆನ್ ಡ್ರೈವ್ ಅನ್ನು ಆಕೆಗೆ ಇಷ್ಟವಾಗುವ ಒಂದು ಒಳ್ಳೆಯ ಲೊಕೇಶನ್ ನಲ್ಲಿ ಒಂದು ದೊಡ್ಡ ಸ್ಕ್ರೀನ್ ಮೇಲೆ ಪ್ಲೇ ಮಾಡಿ . ಖಂಡಿತ ಆಕೆಗೆ ಇಷ್ಟವಾಗುತ್ತದೆ . ನೀವು ಈ ವಿಡಿಯೋ ತಯಾರು ಮಾಡಲು ಪಟ್ಟಿರುವ ಕಷ್ಟ ಆಕೆಯ ಅರಿವಿಗೆ ಬರುತ್ತದೆ . ಅಂತಹ ಕ್ಷಣದಲ್ಲಿ ನೀವು ನಿಮ್ಮ ಪ್ರಪೋಸಲ್ ಅನ್ನು ಆಕೆಯ ಬಳಿ ಹೇಳಿದಾಗ ಖಂಡಿತ ಆಕೆ ಒಪ್ಪಿಕೊಳ್ಳದೆ ನಿರಾಕರಿಸಲಾರಳು . ಮತ್ತು ಇದೊಂದು ಮೈ ನವಿರೇಳಿಸುವ ರೋಮಾಂಚಕಾರಿ ಕ್ಷಣವಾಗಿ ಮಾರ್ಪಾಡಾಗುವುದು .

ಆಕೆಯ ಪೋಷಕರ ಒಪ್ಪಿಗೆ ಪಡೆಯುವುದನ್ನು ಮರೆಯಬೇಡಿ

ಆಕೆಯ ಪೋಷಕರ ಒಪ್ಪಿಗೆ ಪಡೆಯುವುದನ್ನು ಮರೆಯಬೇಡಿ

ಪ್ರೀತಿಸಿದರಷ್ಟೇ ಸಾಲದು. ಪ್ರೀತಿಸಿದವರನ್ನು ಕೊನೆವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಣ್ಣಿನ ರೆಪ್ಪೆಯಷ್ಟೇ ಜೋಪಾನವಾಗಿ ಕಾಪಾಡುವುದು ನಿಮ್ಮ ಕರ್ತವ್ಯ . ಇದನ್ನು ಆದಷ್ಟು ನಿಮ್ಮ ಪ್ರೀತಿ ಸಂಬಂಧವಾಗಿ ಬದಲಾಗುವ ಮುಂಚೆಯೇ ಸಾಬೀತು ಪಡಿಸಿ . ಕೇವಲ ನಿಮ್ಮ ಪ್ರೇಯಸಿಗೆ ನಿನ್ನನ್ನು ಕೊನೆವರೆಗೂ ಕಾಪಾಡುತ್ತೇನೆ ಮತ್ತು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಷ್ಟೇ ಭರವಸೆ ಕೊಟ್ಟರೆ ಸಾಲದು . ಆಕೆಯ ಪೋಷಕರಿಗೂ ಮತ್ತು ನಿಮ್ಮ ಪೋಷಕರಿಗೂ ವಿಷಯ ಮುಟ್ಟಿಸಿ ಅವರ ಒಪ್ಪಿಗೆ ಮತ್ತು ಆಶೀರ್ವಾದ ಪಡೆಯಬೇಕು . ಆಗ ಆಕೆಗೂ ನಿಮ್ಮ ಮೇಲೆ ನಂಬಿಕೆ ಬಲವಾಗುತ್ತದೆ . ಮತ್ತು ನೀವು ಇನ್ನೂ ಆಕೆಗೆ ಮನಸ್ಸಿನಲ್ಲೇ ಹತ್ತಿರವಾಗುತ್ತೀರಿ . ಏಕೆಂದರೆ ಓಡಿ ಹೋಗಿ ಮದುವೆಯಾಗುವುದು ಯಾರೊಬ್ಬರಿಗೂ ಯಾವುದೇ ನಂಬಿಕೆ ಹುಟ್ಟಿಸುವುದಿಲ್ಲ .

ಸಸ್ಪೆನ್ಸ್ ನ ಸಂದರ್ಭ ಒದಗಿಬರುವಂತೆ ಮಾಡಿ

ಸಸ್ಪೆನ್ಸ್ ನ ಸಂದರ್ಭ ಒದಗಿಬರುವಂತೆ ಮಾಡಿ

ನೀವು ಸಿನಿಮಾದಲ್ಲಿ ಅಥವಾ ಧಾರಾವಾಹಿಯಲ್ಲಿ ನೋಡಿರಬಹುದು . ಯಾರನ್ನೋ ಯಾವುದೋ ಸ್ಥಳಕ್ಕೆ ಅಲ್ಲಲ್ಲಿ ಸನ್ನೆಗಳನ್ನು ಮತ್ತು ಚಿಹ್ನೆಗಳನ್ನು ಹಾಕಿ ಬರಮಾಡಿಕೊಳ್ಳುವುದು . ಇದು ನಿಜಕ್ಕೂ ಕಾತುರ ಹುಟ್ಟಿಸುವಂತಹ ಕ್ಷಣ . ನೇರವಾಗಿ ನೀವು ನಿಮ್ಮನ್ನು ಇಷ್ಟಪಡುವವರಿಗೆ ನಿಮ್ಮ ಪ್ರಪೋಸಲ್ ಕೊಡುವ ಬದಲು ಯಾವುದಾದರೂ ಒಂದು ಪಾರ್ಕ್ ನಲ್ಲಿ ಈ ರೀತಿ ನಾಲ್ಕೈದು ಕಡೆ ಅಲ್ಲಲ್ಲಿ ದಾರಿಯನ್ನು ತೋರಿಸುವಂತಹ ನಿರ್ದೇಶನದ ಚಿಹ್ನೆಗಳನ್ನು ಹಾಕಿ , ಕಡೆಯಲ್ಲಿ ಒಂದು ಸ್ಥಳದಲ್ಲಿ ದೊಡ್ಡದಾಗಿ ಒಂದು ಗೋಡೆಯ ಮೇಲೆ ಹೂಗಳಿಂದ ಅಥವಾ ಬಲೂನ್ ಗಳಿಂದ ಹಾರ್ಟ್ ಶೇಪ್ ನಲ್ಲಿ ಅಲಂಕಾರ ಮಾಡಿ ನೀವು ಆಕೆಯನ್ನು ಎಷ್ಟು ಇಷ್ಟ ಪಡುತ್ತೀರಿ ಎಂಬುದನ್ನು ನಿಮಗೆ ಮತ್ತು ಆಕೆಗೆ ಇಷ್ಟ ಆಗುವ ಹಾಗೆ ಹೇಳಬಹುದು .

ನಿಮ್ಮ ಪ್ರೇಯಸಿಯನ್ನು ಆಶ್ಚರ್ಯಚಕಿತಳನ್ನಾಗಿ ಮಾಡಿ

ನಿಮ್ಮ ಪ್ರೇಯಸಿಯನ್ನು ಆಶ್ಚರ್ಯಚಕಿತಳನ್ನಾಗಿ ಮಾಡಿ

ಇನ್ನು ನೀವು ಸ್ವಲ್ಪ ಬುದ್ಧಿ ಉಪಯೋಗಿಸಿ ನಿಮ್ಮ ಪ್ರೇಯಸಿಯನ್ನು ಯಾವುದಾದರೊಂದು ದಿನ ಆಕೆಗೆ ಗೊತ್ತಿಲ್ಲದಂತೆ ನೀವೇ ಆಯ್ಕೆ ಮಾಡಿಕೊಂಡು ಆ ದಿನ ಆಕೆಯ ಆಫೀಸ್ ಗೆ ಹೋಗಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು ನೀವು ಇಂತಹ ದಿನ ಇಂತಹದೊಂದು ಅಚ್ಚರಿ ಮೂಡಿಸುತ್ತೀರೆಂದು ಆಕೆಗೆ ಗೊತ್ತೇ ಆಗಬಾರದು ಆಕೆಗೆ ಇದು ಖಂಡಿತ ಇದು ಖುಷಿ ಕೊಡುತ್ತದೆ . ಹೋಗಬೇಕಾದರೆ ಕೈಯಲ್ಲಿ ಆಕೆಗೆ ಇಷ್ಟವಾಗುವ ಹೂವಿನ ಬೊಕ್ಕೆಯನ್ನು ಅಥವಾ ಚಾಕಲೇಟ್ ಅನ್ನು ತೆಗೆದುಕೊಂಡು ಹೋದರಂತೂ ನಿಮ್ಮ ಪ್ರೀತಿ ಖಂಡಿತ ಫಲ ಕೊಟ್ಟಂತೆಯೇ !!! ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದಾದರೆ ನಿಮ್ಮ ಪ್ರೇಯಸಿಯನ್ನು ಕಣ್ಣು ಮುಚ್ಚಿ ನೀವು ಪ್ರೀತಿಯನ್ನು ಹೇಳಿಕೊಳ್ಳಬೇಕೆಂದು ಅಲಂಕಾರ ಮಾಡಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಣ್ಣು ಬಿಟ್ಟರಂತೂ ನಿಮ್ಮಿಬ್ಬರ ಪ್ರೀತಿ ಸ್ವರ್ಗ ಸೇರಿದಂತೆಯೇ !!!

ಒಂದು ಸೊಗಸಾದ ಸಂಜೆ ನಿಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಲೀ

ಒಂದು ಸೊಗಸಾದ ಸಂಜೆ ನಿಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾಗಲೀ

ಬಹಳಷ್ಟು ಪ್ರೀತಿ ಜೊತೆಗೂಡಿ ಯಶಸ್ವಿ ಕಾಣುವುದು ಒಂದು ಕ್ಯಾಂಡಲ್ ಲೈಟ್ ಡಿನ್ನರ್ ನಿಂದ . ನೀವೇಕೆ ಇದನ್ನೊಮ್ಮೆ ಪ್ರಯತ್ನಿಸಬಾರದು . ಆಕೆಯನ್ನು ಆಕೆಯ ಇಷ್ಟದಂತೆ ಯಾವುದಾದರೊಂದು ಸಂಜೆ ಕ್ಯಾಂಡಲ್ ಲೈಟ್ ಡಿನ್ನರ್ ಗೆಂದು ಅದಕ್ಕೆಂದೇ ಒಂದು ಸುಂದರ ಸಂಜೆಯನ್ನು ಮುಡಿಪಾಗಿಟ್ಟು ಹೊರಗೆ ಕರೆದೊಯ್ಯಿರಿ . ನಿಮಗೆ ಹಾಡು ಹೇಳಲು ಬರುತ್ತಿದ್ದರೆ ಒಂದು ರೋಮ್ಯಾಂಟಿಕ್ ಸಾಂಗ್ ಅನ್ನು ಆಕೆಗೆ ಡೆಡಿಕೇಟ್ ಮಾಡಿರಿ . ಹೇಗೂ ಕೆಲಸದ ಒತ್ತಡದಿಂದ ಆಕೆಗೂ ದೈನಿಂದಿನ ಪರಿಸರ ಬೇಜಾರಾಗಿರುತ್ತದೆ . ಡೇಟಿಂಗ್ ನಿಂದ ಇಬ್ಬರೂ ಸೇರಿ ಖುಷಿಯಾಗಿ ನಲಿದು ಆ ಬೇಸರವನ್ನು ಹೋಗಲಾಡಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಸಿಕ್ಕಂತೆ ಆಗುತ್ತದೆ . ಆ ದಿನ ಬೇಕಾದರೆ ನೀವು ಆಕೆಗಾಗಿ ಒಂದು ಡ್ರೆಸ್ ತೆಗೆದುಕೊಂಡು ಹೋಗಿ ಡೇಟಿಂಗ್ ಗೆ ಹೊರಡಲು ಆ ಡ್ರೆಸ್ ನಲ್ಲಿ ಸಿದ್ದವಾಗಿ ಬರಲು ಹೇಳಿದರಂತೂ ಆಕೆಯ ಖುಷಿ ಮೂರು ಪಟ್ಟು ಹೆಚ್ಚಾಗುತ್ತದೆ

ಪ್ರೇಮಿಗಳಿಗೆ ಕೆಲವು ವಿಶೇಷ ಟಿಪ್ಸ್

ಪ್ರೇಮಿಗಳಿಗೆ ಕೆಲವು ವಿಶೇಷ ಟಿಪ್ಸ್

*ನೀವು ನಿಮ್ಮ ಸಂಗಾತಿಗೆ ಕೊಡುವ ಪ್ರಪೋಸಲ್ ವಿಭಿನ್ನವಾಗಿರಲಿ .

*ನಿಮ್ಮ ಪ್ರಪೋಸಲ್ ನಿಮ್ಮ ಜೀವಮಾನವಿಡೀ ಮೆಲುಕು ಹಾಕುವಂತಿರಬೇಕು .

*ಇನ್ನೂ ಅನೇಕ ಪ್ರಪೋಸಲ್ ಐಡಿಯಾ ಗಳ ಬಗ್ಗೆ ತಿಳಿದುಕೊಂಡು ಆಕೆಗೆ ಪ್ರಪೋಸ್ ಮಾಡಿ ಪಾಸಿಟಿವ್ ರೆಸ್ಪಾನ್ಸ್ ಪಡೆಯಿರಿ .

ವಿ ವಿಶ್ ಯು ದಿ ಬೆಸ್ಟ್ ಒಫ್ ಲಕ್ .

English summary

Want to Proposal to Your fiancee? Here are the tips

Proposal might be difficult part but it is the start of a beautiful relationship and it can promise you a lifelong happiness. It is very obvious to feel nervous before proposing someone. You are not sure whether you will receive a positive answer or not. Going down on one knee with a ring does not work any every case. The proposal should be so special that you and your partner can narrate its story again and again throughout your life. Read on to know some unique proposal ideas which will make her feel so special that she will say yes.
X