For Quick Alerts
ALLOW NOTIFICATIONS  
For Daily Alerts

ವ್ಯಾಲೆಂಟೈನ್ ದಿನದಂದು ಅಪ್ಪಿತಪ್ಪಿಯೂ ಇಂತಹ ಕಾರ್ಯಗಳನ್ನು ಮಾತ್ರ ಮಾಡಬೇಡಿ!

|

ಫೆಬ್ರವರಿ ಎಂದಾಕ್ಷಣ ಪ್ರೇಮಿಗಳಲ್ಲಿ ಎಲ್ಲಿಲ್ಲದ ಉತ್ಸಾಹ, ಆನಂದ, ಉಲ್ಲಾಸದಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿರುತ್ತಾರೆ. ಎಲ್ಲಾ ಪ್ರೇಮಿಗಳು ಫೆಬ್ರವರಿ ಮಾಸಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಏಕೆಂದರೆ ಫೆಬ್ರವರಿ 14 ಅನ್ನು ಪ್ರೇಮಿಗಳ ದಿನಾಚರಣೆಯಾಗಿ ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ನವ ಪ್ರೇಮಿಗಳಂತೂ ಫೆಬ್ರವರಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ.

ಈ ದಿನದಂದು ಪ್ರೀತಿ ಪಾತ್ರರನ್ನು ಸಂತಸದಿಂದಿರಿಸಬೇಕೆಂಬ ಬಯಕೆ ಪ್ರತಿಯೊಬ್ಬರದಾಗಿದೆ. ತಮ್ಮ ಪ್ರೀತಿಯ ಆಳ, ಅವರಗಿರುವ ಸ್ಥಾನ, ಜೀವನದಲ್ಲಿ ಆದ ಬದಲಾವಣೆ ಹೀಗೆ ಪ್ರತಿಯೊಂದನ್ನು ರಂಗು ರಂಗಾಗಿ ನಿವೇದಿಸಿ ಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ! ಅದು ಏನೆ ಇರಲಿ ಆದರೆ ಇಂತಹ ಸಂದರ್ಭದಲ್ಲಿ ನೀವು ಏನೋ ಮಾಡುವುದಕ್ಕೆ ಹೋಗಿ ಕೊನೆಗೆ ಏನೋ ಆಗಿ ಹೋಗಬಾರದು! ಹೌದು ವ್ಯಾಲೆಂಟೈನ್ ದಿನದಂದು ನೀವು ಮಾಡಲೇಬಾರದ ಕೆಲವೊಂದು ವಿಚಾರಗಳು ಇಲ್ಲಿವೆ. ಇದನ್ನು ನೀವು ಓದುತ್ತಾ ಸಾಗಿ...

ನೀವು ಇದನ್ನು ಮರೆಯಬೇಡಿ

ನೀವು ಇದನ್ನು ಮರೆಯಬೇಡಿ

ನೀವು ಮತ್ತು ನಿಮ್ಮ ಸಂಗಾತಿಯು ವ್ಯಾಲೆಂಟೈನ್ ದಿನವನ್ನು ಆಚರಿಸಿಕೊಳ್ಳಬೇಕು ಎಂದು ಈಗಾಗಲೇ ಯೋಜನೆ ಹಾಕಿಕೊಂಡಿದ್ದರೆ ಮತ್ತು ಅದನ್ನು ನೀವು ಮರೆತುಬಿಟ್ಟರೆ, ಆಗ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ನಿಮಗೆ ದಿನಾಂಕಗಳು ನೆನಪಿನಲ್ಲಿ ಉಳಿಯುವುದಿಲ್ಲವೆಂದು ಇದ್ದರೆ ಆಗ ನೀವು ರಿಮೈಂಡರ್ ಇಟ್ಟುಕೊಳ್ಳಿ. ಸಂಗಾತಿಯ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದೀರಿ ಎಂದು ಅರ್ಥ ಮಾಡಿಸಿಕೊಳ್ಳುವುದು ಅತೀ ಮುಖ್ಯ ಮತ್ತು ಅದನ್ನು ನೀವು ಮರೆತುಬಿಟ್ಟರೆ ಆಗ ಅದು ದೊಡ್ಡ ಮಟ್ಟದ ತಪ್ಪಾಗುವುದು.

ಊಹೆ ಮಾಡಬೇಡಿ

ಊಹೆ ಮಾಡಬೇಡಿ

ಸಂಗಾತಿಯ ಅಭಿಪ್ರಾಯವನ್ನು ವ್ಯಾಲೆಂಟೈನ್ ದಿನದಂದು ಅರ್ಥ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದರಿಂದ ನೀವು ನಿರಾಶೆ ಆಗುವುದನ್ನು ತಪ್ಪಿಸಬಹುದು. ವಿಭಿನ್ನ ಜನರಿಗೆ ವಿಭಿನ್ನವಾದ ವಿಚಾರಗಳು ತುಂಬಾ ಮುಖ್ಯವೆಂದು ಅನಿಸುವುದು. ವ್ಯಾಲೆಂಟೈನ್ ಡೇ ಆಚರಿಸಿಕೊಳ್ಳದೆ ಇರುವುದು ಅವರು ನಿಮ್ಮ ಬಗ್ಗೆ ಯಾವ ರೀತಿಯ ಭಾವನೆ ಹೊಂದಿದ್ದಾರೆ ಎನ್ನುವುದರ ಮೇಲೆ ಯಾವುದೇ ಪರಿಣಾಮ ಬೀರದು. ಇದರ ಬಗ್ಗೆ ಮಾತನಾಡಿ ಮತ್ತು ನಿಮಗೆ ಅಗತ್ಯವೆಂದು ಅನಿಸಿದರೆ ಒಂದು ಒಪ್ಪಂದಕ್ಕೆ ಬನ್ನಿ.

ಆತನ ಉಡುಗೊರೆಯ ಅತಿಯಾಗಿ ವಿಶ್ಲೇಷಣೆ ಮಾಡಬೇಡಿ

ಆತನ ಉಡುಗೊರೆಯ ಅತಿಯಾಗಿ ವಿಶ್ಲೇಷಣೆ ಮಾಡಬೇಡಿ

ನೀವು ಏನೇ ಪಡೆದರೂ ಅದನ್ನು ನೀವು ಹೇಗಿದಿಯೋ ಹಾಗೆ ಅರ್ಥ ಮಾಡಿಕೊಳ್ಳಿ. ಸಂಬಂಧದ ಬಗ್ಗೆ ಈ ಉಡುಗೊರೆಯು ಯಾವ ಅರ್ಥವನ್ನು ನೀಡುತ್ತದೆ ಎಂದು ನೀವು ಗೂಗಲ್ ಮಾಡಿಕೊಂಡು ಹುಡುಕಲು ಹೋಗಬೇಡಿ. ಭ್ರಮೆಯಿಂದ ನೀವು ಹೊರಗೆ ಬನ್ನಿ ಮತ್ತು ಆತನ ಉಡುಗೊರೆಯನ್ನು ಪ್ರಶಂಸೆ ಮಾಡದೆ ಇರಬೇಡಿ.

ಖಾಲಿ ಕೈಯಲ್ಲಿ ಹೋಗಬೇಡಿ

ಖಾಲಿ ಕೈಯಲ್ಲಿ ಹೋಗಬೇಡಿ

ಸಂಗಾತಿಗೆ ಪರಸ್ಪರ ಉಡುಗೊರೆ ನೀಡುವುದರಲ್ಲಿ ಯಾವುದೇ ಆಸಕ್ತಿ ಇಲ್ಲವೆಂದಾದರೆ ಆಗ ನೀವು ಖಾಲಿ ಕೈಯಲ್ಲಿ ಹೋಗಬೇಡಿ. ಆತ ನಿಮ್ಮಿಂದ ಯಾವುದಾದರೂ ಉಡುಗೊರೆ ನಿರೀಕ್ಷೆ ಮಾಡುತ್ತಲಿದ್ದಾನೆ ಎಂದು ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಈ ದಿನವನ್ನು ನೀವಿಬ್ಬರು ಜತೆಯಾಗಿ ಆಚರಣೆ ಮಾಡಿಕೊಳ್ಳುವ ಕಾರಣದಿಂದಾಗಿ ಆತ ಕೊಡುವುದು ಮಾತ್ರವಲ್ಲ, ನೀವಿಬ್ಬರು ಉಡುಗೊರೆ ವಿನಿಮಯ ಮಾಡಿಕೊಳ್ಳಬೇಕು.

ತುಂಬಾ ವಿಳಂಬ ಮಾಡಬೇಡಿ

ತುಂಬಾ ವಿಳಂಬ ಮಾಡಬೇಡಿ

ನೀವು ಯಾವಾಗಲೂ ಲೇಟ್ ಲತೀಪ್ ಆಗಿದ್ದರೆ ಆಗ ನೀವು ಈ ದಿನದಂದು ಆ ಒಂದು ಅಭ್ಯಾಸವನ್ನು ಬಿಟ್ಟುಬಿಡಬೇಕು. ನೀವು ಈ ದಿನಕ್ಕೆ ಮೊದಲೇ ಯೋಜನೆಗಳನ್ನು ಹಾಕಿಕೊಳ್ಳಿ ಮತ್ತು ಅದರಂತೆ ಬೇಗ ಕೆಲಸಗಳನ್ನು ಪೂರೈಸಿ. ವ್ಯಾಲೆಂಟೈನ್ ದಿನದಂದು ನೀವು ರೋಮ್ಯಾನ್ಸ್ ಕೂಡ ತುಂಬಾ ವಿಳಂಬವಾಗಿ ಮಾಡಬಾರದು.

ಯಾರನ್ನೂ ಜತೆಗೆ ಕರೆದುಕೊಂಡು ಬರಬೇಡಿ!

ಯಾರನ್ನೂ ಜತೆಗೆ ಕರೆದುಕೊಂಡು ಬರಬೇಡಿ!

ನೀವು ಸ್ನೇಹಿತನೊಂದಿಗೆ ಎಷ್ಟೇ ನಿಕಟವಾಗಿದ್ದರೂ ಅದನ್ನು ಮನೆಯಲ್ಲೇ ಬಿಟ್ಟುಬಿಡಿ. ಅವರು ಏಕಾಂಗಿಯಾಗಿ ಇರುವ ಕಾರಣದಿಂದಾಗಿ ಇದು ಒಳ್ಳೆಯದು ಎಂದು ನಿಮಗೆ ಅನಿಸಬಹುದು. ಆದರೆ ಇದು ಸ್ನೇಹಿತರ ದಿನವಲ್ಲ ಎಂದು ನೆನಪಲ್ಲಿ ಇಟ್ಟುಕೊಳ್ಳಿ. ಈ ದಿನ ನೀವು ಮತ್ತು ಸಂಗಾತಿ ಮಾತ್ರವೇ ಇರಬೇಕು. ನೀವು ಸ್ನೇಹಿತನನ್ನು ಜತೆಗೆ ಕರೆದುಕೊಂಡು ಬಂದರೆ ಆಗ ದಿನದ ಅಂತ್ಯಕ್ಕೆ ನೀವಿಬ್ಬರು ಏಕಾಂಗಿಯಾಗುವಂತಹ ಸಾಧ್ಯತೆಯು ಇದೆ.

ಸ್ಪರ್ಧೆ ಮಾಡಬೇಡಿ

ಸ್ಪರ್ಧೆ ಮಾಡಬೇಡಿ

ಸಂಬಂಧದಲ್ಲಿ ಸ್ಪರ್ಧೆ ಎನ್ನುವುದು ಚೆನ್ನಾಗಿರುವುದು. ಆದರೆ ಈ ದಿನದಂದು ನೀವು ಸ್ಪರ್ಧೆ ಮಾಡಿದರೆ ಆಗ ನಿಮ್ಮ ಸಂಗಾತಿಯ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಿರಿ. ಆತನ ಉಡುಗೊರೆ ಅಥವಾ ಆಟಗಳು ಇರಬಹುದು. ನೀವು ಸೂಕ್ಷ್ಮವಾಗಿರಿ ಮತ್ತು ಹೆಚ್ಚು ಸ್ಪರ್ಧಾತ್ಮಕತೆ ತೋರಿಸಬೇಡಿ. ಅವರಿಗೆ ಕೂಡ ಒಂದು ಸಲ ಗೆಲ್ಲಲು ಅವಕಾಶ ನೀಡಿ.

ಜಗಳ ಮಾಡಬೇಡಿ

ಜಗಳ ಮಾಡಬೇಡಿ

ಈ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೂ ನೀವು ಅದೆಲ್ಲವನ್ನು ಬದಿಗಿಟ್ಟುಬಿಡಿ ಮತ್ತು ಒಳ್ಳೆಯ ನಡವಳಿಕೆ ತೋರಿಸಿ. ವ್ಯಾಲೆಂಟೈನ್ ದಿನದ ಸಂಭ್ರದಮಲ್ಲಿ ನೀವು ಜಗಳವನ್ನು ಮುಂದಕ್ಕೆ ತರಬೇಡಿ. ಇದರಿಂದ ಎಲ್ಲವೂ ಕೆಡಬಹುದು. ತುಂಬಾ ಸೂಕ್ಷ್ಮ ಅಥವಾ ಮನಸ್ಸಿಗೆ ನಾಟುವಂತಹ ವಿಚಾರಗಳನ್ನು ತೆಗೆಯಬೇಡಿ. ಇದಕ್ಕಾಗಿ ನಿಮಗೆ ಬೇರೆ ದಿನಗಳು ಇದ್ದೇ ಇದೆ.

ಸರಳವಾಗಿರಲಿ

ಸರಳವಾಗಿರಲಿ

ಎಲ್ಲವೂ ಒಳ್ಳೆಯ ರೀತಿಯಲ್ಲಿ ಇರುವಂತೆ ನೀವು ಪ್ರಯತ್ನಿಸಬೇಕು. ಇದಕ್ಕಾಗಿ ತುಂಬಾ ಸಂತಸ ಹಾಗೂ ಸರಳವಾಗಿರಿ. ನೀವು ಒಂದೇ ಸಲ ಸಾವಿರಾರು ವಿಚಾರಗಳ ಬಗ್ಗೆ ಮಾತನಾಡಿದರೆ ಆಗ ಗೊಂದಲಕ್ಕೆ ಸಿಲುಕಿಕೊಳ್ಳುವುದು ಖಚಿತ. ಒಂದು ಸಣ್ಣ ತಪ್ಪು ಕೂಡ ನಿಮ್ಮ ಸಂಪೂರ್ಣ ಯೋಜನೆಗಳನ್ನು ಬಿಗಡಾಯಿ ಸಬಹುದು. ಇದರಿಂದ ನಿಮ್ಮ ಸಂಭ್ರಮವೇ ದೂರವಾಗಬಹುದು.

ಕಣ್ಣು ಮುಚ್ಚಿ ಡೇಟಿಂಗ್ ಗೆ ಹೋಗಬೇಡಿ

ಕಣ್ಣು ಮುಚ್ಚಿ ಡೇಟಿಂಗ್ ಗೆ ಹೋಗಬೇಡಿ

ಡೇಟಿಂಗ್ ಅನ್ನುವುದು ಆರಂಭದಲ್ಲಿ ತುಂಬಾ ಹಿಂಜರಿಕೆಯನ್ನು ಉಂಟು ಮಾಡುವುದು. ಇದರಿಂದಾಗಿ ಕೆಲವೊಂದು ವಿಚಾರಗಳು ಬೇಗನೆ ಕೆಡಬಹುದು. ವ್ಯಾಲೆಂಟೈನ್ ಡೇ ದಿನ ನೀವು ಬ್ಲೈಂಡ್ ಡೇಟ್ ಗೆ ಹೋಗುವುದು ಅನಗತ್ಯ ಒತ್ತಡ ಮತ್ತು ನಿರಾಶೆಯನ್ನು ಉಂಟು ಮಾಡಬಹುದು.

English summary

Valentine's Day:10 things you should never do

Valentine's Day is the holiday of love, but if you've been together for awhile, you might need some help coming up with a memorable date. Well, we've got you covered. well these are the things you never do
X
Desktop Bottom Promotion