For Quick Alerts
ALLOW NOTIFICATIONS  
For Daily Alerts

ವ್ಯಾಲೆಂಟೈನ್ ದಿನದಂದು ನೀವು ಹೇಳಲೇಬಾರದ ಕೆಲವೊಂದು ಸಂಗತಿಗಳು

|

ವ್ಯಾಲೆಂಟೈನ್ಸ್ ದಿನವು ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಲ್ಲಿ ಆಚರಿಸಲ್ಪಡುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಸಂಪ್ರದಾಯಬದ್ಧ ರಾಷ್ಟ್ರವಾಗಿರುವ ಭಾರತದಲ್ಲೂ ಪ್ರೇಮಿಗಳ ದಿನವನ್ನು ತುಂಬಾ ಸಡಗರದಿಂದ ಆಚರಿಸುವರು. ಅದರಲ್ಲೂ ಯುವ ಪ್ರೇಮಿಗಳು ಈ ದಿನಕ್ಕಾಗಿಯೇ ಕಾದು ಕುಳಿತಿರುವರು. ಇನ್ನು ಕೆಲವು ಮಂದಿ ತಮ್ಮ ಪ್ರೇಮ ನಿವೇದನೆ ಮಾಡಲು ಈ ದಿನವನ್ನೇ ಆಯ್ದುಕೊಳ್ಳುವರು.

ಆದರೆ ವ್ಯಾಲೆಂಟೈನ್ ದಿನದಂದು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ ವ್ಯಾಲೆಂಟೈನ್ ದಿನವು ತುಂಬಾ ಅಪಾಯಕಾರಿ. ಅದರಲ್ಲೂ ಮೊದಲ ಸಲ ಪ್ರೇಮ ನಿವೇದನೆ ಮಾಡುವವರಿಗೆ ಮತ್ತು ಪ್ರೇಮಿಗಳಿಗೆ. ಇಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳಿಂದ ನಿಮ್ಮ ಸಂಪೂರ್ಣ ಸಂತೋಷವನ್ನು ನಾಶ ಮಾಡಿ ಬಿಡಬಹುದು. ನೀವು ವ್ಯಾಲೆಂಟೈನ್ಸ್ ದಿನದಂದು ಸಂಗಾತಿಗೆ ಹೇಳಲೇಬಾರದ ವಿಚಾರಗಳು ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಲು ಮುಂದಾಗಿ...

ನಾನು ನಿನ್ನ ಪ್ರೀತಿಸುವೆ(ಮೊದಲ ಸಲ ಐ ಲವ್ ಯು ಹೇಳುವುದು)

ನಾನು ನಿನ್ನ ಪ್ರೀತಿಸುವೆ(ಮೊದಲ ಸಲ ಐ ಲವ್ ಯು ಹೇಳುವುದು)

ಇದು ಪ್ರೇಮಿಗಳಿಗಾಗಿ ಮೀಸಲಿರುವ ದಿನವಾಗಿರುವ ಕಾರಣದಿಂದಾಗಿ ಇಂತಹ ಮಾತು ತುಂಬಾ ಪ್ರಲೋಭನಕಾರಿ ಆಗಿರುವುದು. ವ್ಯಾಲೆಂಟೈನ್ ದಿನದಂದು ನೀವು ಮೊದಲ ಬಾರಿಗೆ ಐ ಲವ್ ಯು ಹೇಳುವುದು ಫ್ಯಾಶನ್ ಗಾಗಿ ಮಾಡುವಂತಹ ಸೆಕ್ಸ್ ವೇಳೆ ಇದನ್ನು ಹೇಳಿದಂತೆ ಇರುವುದು. ವ್ಯಾಲೆಂಟೈನ್ ದಿನವು ಪರಸ್ಪರರ ಭಾವನೆಗಳನ್ನು ಸಂಭ್ರಮಿಸಲು ಇರುವಂತಹ ಒಂದು ಅತ್ಯುತ್ತಮವಾಗಿರುವ ಅವಕಾಶವಾಗಿದೆ. ಆದರೆ ನಿಮ್ಮ ದೊಡ್ಡ ಭಾವನೆಯನ್ನು ಈ ಕ್ಷಣದಲ್ಲಿ ಹೇಳೂವ ಬದಲು ಅದನ್ನು ನೀವು ಕಾಯ್ದಿರಿಸಬೇಕು. ನಿಮ್ಮ ಸಂಗಾತಿ ಕೂಡ ಅದೇ ರೀತಿಯ ಭಾವನೆ ಹೊಂದಿರುವರೇ ಎನ್ನುವುದು ತಿಳಿಯುವುದು ಅತೀ ಅಗತ್ಯ ವಾಗಿರುವುದು. ಇಂತಹ ದಿನದಲ್ಲಿ ನೀವು ಮೊದಲ ಸಲ ಪ್ರೀತಿ ನಿವೇದನೆ ಮಾಡುವುದು ಸರಿಯಾಗಿರಲ್ಲ. ಇದಕ್ಕಾಗಿ ನೀವು ಸರಿಯಾದ ಸಮಯ, ಸ್ಥಳ ಮತ್ತು ಅವಕಾಶಕ್ಕಾಗಿ ಕಾಯುತ್ತಿರಬೇಕು.

ನಾವು ಮಾತನಾಡಬೇಕಿದೆ

ನಾವು ಮಾತನಾಡಬೇಕಿದೆ

ಇದರ ಬಗ್ಗೆ ಹೆಚ್ಚು ವಿವರಣೆ ನೀಡಬೇಕು ಎಂದಿಲ್ಲ. ಅಪ್ರಸ್ತುತ ವಾಗಿರುವಂತಹ ಸಮಯದಲ್ಲಿ ಇಂತಹ ದೊಡ್ಡ ಮಾತುಕತೆ ಮೂಲಕ ಸಂಗಾತಿಯನ್ನು ಕೈಬಿಟ್ಟ ಅಥವಾ ದೂರ ಮಾಡಿರುವಂತಹ ಕೆಲವೊಂದು ದುರಂತ ಕಥನಗಳ ಬಗ್ಗೆ ನಾವು ಕೇಳಿದ್ದೇವೆ. ಸಂಬಂಧದ ಬಗ್ಗೆ ನಿಮಗೆ ಏನಾದರೂ ತುಂಬಾ ಪ್ರಾಮುಖ್ಯವಾಗಿರುವುದನ್ನು ಹಂಚಿಕೊಳ್ಳಲು ಇದ್ದರೆ ಆಗ ನೀವು ಬೇರೆ ದಿನವನ್ನು ಆಯ್ಕೆ ಮಾಡಿರಿ.

Most Read:ಪಾಕಿಸ್ತಾನ ಪ್ರೇಮಿಗಳ ದಿನವನ್ನು 'ಸಹೋದರಿ ದಿನ' ವನ್ನಾಗಿ ಆಚರಿಸಲು ನಿರ್ಧರಿಸಿದೆಯಂತೆ!!

ವ್ಯಾಲೆಂಟೈನ್ ದಿನವನ್ನು ನಾನು ಕ್ಯಾರ್ ಮಾಡಲ್ಲ

ವ್ಯಾಲೆಂಟೈನ್ ದಿನವನ್ನು ನಾನು ಕ್ಯಾರ್ ಮಾಡಲ್ಲ

ವ್ಯಾಲೆಂಟೈನ್ ದಿನದಂದು ಕೆಲವು ಒಳ್ಳೆಯ ಪ್ರೇಮಿಗಳು ದೊಡ್ಡ ಗೆಲುವನ್ನು ಪಡೆಯುವರು ಎಂದು ನಮಗೆ ತಿಳಿದಿರುವ ವಿಚಾರ. ಪ್ರೀತಿ ಅನ್ನುವುದು ಮಾನವನ ಮೂಲಭೂತ ಅನುಭವ ಹಾಗೂ ನಾವು ಇದನ್ನು ನಿಯಮಿತವಾಗಿ ಆಚರಣೆ ಮಾಡಿಕೊಂಡು ಬರುತ್ತಿರುತ್ತೇವೆ. ಇದಕ್ಕಾಗಿ ವರ್ಷದಲ್ಲಿ ಒಂದು ದಿನ ಎನ್ನುವುದು ಬೇಕಿಲ್ಲ. ವ್ಯಾಲೆಂಟೈನ್ ದಿನದಂದು ಕೆಲವು ಜನರು ತುಂಬಾ ಭಿನ್ನವಾಗಿರುವುದನ್ನು ಅನುಭವಿಸುವರು. ಇದರಲ್ಲಿ ಮುಖ್ಯವಾಗಿ ಸಂಬಂಧವು ಬರುವುದು. ಯಾಕೆಂದರೆ ಸಂಬಂಧಕ್ಕಾಗಿ ನಿಮಗೆ ಇಷ್ಟವಿಲ್ಲದೆ ಇದ್ದರೂ ಕೆಲವು ಆಚರಣೆ ಮಾಡಬೇಕಾಗಬಹುದು. ಇದರಿಂದ ಸಂಗಾತಿಗೆ ನೀವು ವ್ಯಾಲೆಂಟೈನ್ ದಿನದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಬೇಡಿ. ಇದನ್ನು ನೀವು ಪರಿಗಣಿಸದೆ ಇದ್ದರೂ ನಿಮ್ಮ ಸಂಬಂಧಕ್ಕೆ ಇದು ತುಂಬಾ ಮಹತ್ವದ ದಿನವಾಗಿರುವುದು ನೆನಪಿರಲಿ.

Most Read:ಈ ಬಾರಿಯ ಪ್ರೇಮಿಗಳ ದಿನ ನಿಜಕ್ಕೂ ಈ 3 ರಾಶಿಗಳವರಿಗೆ ಪ್ರೀತಿಯ ಸುದಿನ !!!

ಅದು ನನ್ನನ್ನು ಹೊರಗಟ್ಟಿದೆ

ಅದು ನನ್ನನ್ನು ಹೊರಗಟ್ಟಿದೆ

ರಜಾ ದಿನಗಳಲ್ಲಿ ನಿರೀಕ್ಷೆಗಳು ತುಂಬಾ ಇರುವುದು. ಹೀಗಿರುವಾಗ ಕೆಲವೊಂದು ಸಲ ಸರಿಯಾದ ಯೋಜನೆ ಅಥವಾ ಕೆಟ್ಟ ರಾತ್ರಿ ಊಟದಿಂದಾಗಿ ನಿಮ್ಮ ದಿನವು ಕೆಡಬಹುದು. ನೀವು ಕಾದಿರಿಸಿದಂತಹ ರೆಸ್ಟೋರೆಂಟ್ ಆ ದಿನಕ್ಕೆ ಸಿಗದೆ ಇದ್ದಾಗ ತುಂಬಾ ಕಿರಿಕಿರಿ ಆಗುವುದು. ಇದರಿಂದಾಗಿ ನೀವು ಬೇರೆ ಹೋಟೆಲ್ ಗೆ ಹೋಗಬೇಕಾಗಿ ಬರಬಹುದು. ಆದರೆ ವ್ಯಾಲೆಂಟೈನ್ ದಿನದಂದು ಇಂತಹ ತಪ್ಪುಗಳು ನಡೆದರೆ ಅದರ ಪರಿಣಾಮವು ತೀವ್ರವಾಗಿ ಇರುವುದು. ನಿಮ್ಮ ನಿರಾಶೆಯು ಪ್ರತಿಯೊಬ್ಬರಿಗೆ ಆ ಸಂಜೆ ವೇಳೆ ತಿಳಿದರೆ ಆಗ ಅದರ ಪರಿಣಾಮ ಕಡಿಮೆಯಾಗಬಹುದು. ಆದರೆ ನೀವು ಎಲ್ಲವನ್ನು ಮರೆತು ಆನಂದಿಸಬೇಕು ಎಂದಿದ್ದರೆ ಆಗ ನೀವು ನಕ್ಕುಬಿಡಿ. ಯಾಕೆಂದರೆ ಪ್ಲ್ಯಾನ್ ಬಿ ಉತ್ತಮವಾಗಿ ಇರುವುದು ಮತ್ತು ಕೆಟ್ಟ ಅನುಭವಗಳು ಒಳ್ಳೆಯ ಕಥೆ ಹೇಳುತ್ತದೆ.

English summary

Things Not to Say on Valentine’s Day

All holidays are filled with the potential for great joy…or serious disappointment. Many of us have experienced both sides during the Christmas holiday, but Valentine’s Day carries its own risks, especially if you say or do something wrong. Here are five things to avoid saying on Cupid’s day:
X
Desktop Bottom Promotion