For Quick Alerts
ALLOW NOTIFICATIONS  
For Daily Alerts

ನೀವು ತಿಳಿಯದೇ ಇರುವ ಪ್ರೀತಿಯ ಬಗೆಗಿನ ಆರು ಅಚ್ಚರಿಯ ಸಂಗತಿಗಳು

|

ಪ್ರೀತಿ ಎಂಬುದು ಅವರ್ಣನೀಯ ಅನುಭೂತಿ. ಅದನ್ನು ಕೇವಲ ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅನುಭವಿಸಿದವರಿಗೇ ಗೊತ್ತು ಪ್ರೀತಿಯ ಗಮ್ಮತ್ತು. ಪ್ರೀತಿಯಲ್ಲಿ ಬಿದ್ದಾಗ ಮನುಷ್ಯನ ಜೀವನವೇ ಬದಲಾಗುತ್ತದೆ ಎಂಬುದು ಗೊತ್ತೇ ಇದೆ.

ಇನ್ನು ಪ್ರೀತಿಯಲ್ಲಿ ಮುಳುಗಿದಾಗ ಮನುಷ್ಯನಿಗೆ ಹಲವಾರು ಆರೋಗ್ಯಕರ ಲಾಭಗಳೂ ಸಿಗುತ್ತವೆ ಹಾಗೂ ಮನುಷ್ಯನ ವಿಚಾರ ಮಾಡುವ ಕ್ರಿಯೆಯೇ ಬದಲಾಗುತ್ತದೆ ಎಂಬ ಅಂಶ ಅಧ್ಯಯನಗಳಿಂದ ಸಾಬೀತಾಗಿದೆ. ಪ್ರೀತಿಯ ಇಂಥವೇ ಎಂಬುದನ್ನು ಸಾರುವ ಕುತೂಹಲಕಾರಿ ಅಂಶಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ನಿಮಗೆ ಈವರೆಗೂ ತಿಳಿಯದ ಈ ಮಾಹಿತಿಯನ್ನು ಓದಿ, ಇತರರೊಂದಿಗೂ ಹಂಚಿಕೊಂಡು ಪ್ರೀತಿಯನ್ನು ಪಸರಿಸಿ.

 ಪ್ರೀತಿಯಲ್ಲಿನ 5 ಹಂತಗಳು

ಪ್ರೀತಿಯಲ್ಲಿನ 5 ಹಂತಗಳು

ಪ್ರೀತಿಯ ಹಾದಿಯಲ್ಲಿ 5 ಪ್ರಮುಖ ಘಟ್ಟಗಳಿರುವುದಾಗಿ ಸಂಶೋಧಕರು ಹೇಳುತ್ತಾರೆ. ನಿಮ್ಮ ಪ್ರೀತಿ ದೀರ್ಘಕಾಲ ಬಾಳುವಂಥದಾ ಅಥವಾ ಅಲ್ಪಕಾಲದಲ್ಲಿ ಮುಗಿದು ಹೋಗುವುದಾ ಎಂಬುದು ಇವೇ ಅಂಶಗಳನ್ನು ಆಧರಿಸಿರುತ್ತದೆ. ಆ ಐದು ಹಂತಗಳು ಹೀಗಿವೆ

*ಆಕಾಂಕ್ಷೆಗಳ ಕನಸುಗಳು

*ಬಾಂಧವ್ಯ ಗಟ್ಟಿಗೊಳಿಸುವಿಕೆ

*ಪರಸ್ಪರ ಹೊಂದಾಣಿಕೆ

*ಪ್ರಾಮಾಣಿಕತೆ

*ಸ್ಥಿರತೆ

Most Read: ಸಂಬಂಧಗಳ ಬೆಲೆ ತಿಳಿಯುವುದೇ ನೀವು ನಿಜವಾದ ಪ್ರೀತಿಯಲ್ಲಿ ಬಿದ್ದಮೇಲೆ!

ಮೊದಲ ಹಂತ

ಮೊದಲ ಹಂತ

ಮೊದಲ ಹಂತದಲ್ಲಿ ಆಕಾಂಕ್ಷೆಗಳು ಗರಿಗೆದರುವ ಸಮಯ. ಈ ಹಂತದಲ್ಲಿ ಮನುಷ್ಯನ ಕಾಮಾತುರತೆ ಹೆಚ್ಚಾಗಿ ಆತ ಊಟ ಮಾಡುವುದನ್ನೂ ಮರೆಯುತ್ತಾನೆ. ಎರಡನೆಯ ಹಂತದಲ್ಲಿ ಮನುಷ್ಯನ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯೂರೊಕೆ ಮಿಕಲ್ಸ್‌ಗಳು ಬಿಡುಗಡೆಯಾಗಿ ಅವರ್ಣನೀಯ ಆನಂದ ಜೀವನದಲ್ಲಿ ತುಂಬಿಕೊಳ್ಳುತ್ತದೆ. ಇದು ಸಂತೋಷದ ಉನ್ಮಾದ ಹಂತವಾಗಿದೆ. ಮೂರನೇ ಹಂತದಲ್ಲಿ ಬೆಳೆಸಿಕೊಳ್ಳುತ್ತಿರುವ ಬಾಂಧವ್ಯ ಸರಿಯಾ ಅಥವಾ ತಪ್ಪಾ ಎಂಬುದನ್ನು ಮನಸು ಚಿಂತಿಸುತ್ತದೆ. ಇನ್ನು ನಾಲ್ಕನೆಯ ಹಂತದಲ್ಲಿ ಒತ್ತಡದ ಪ್ರಮಾಣ ಹೆಚ್ಚಾಗುತ್ತದೆ. ಈ ನಾಲ್ಕೂ ಹಂತಗಳನ್ನು ದಾಟಿದ ಸಂಗಾತಿ ಗಳಿಬ್ಬರ ಜೀವನ ಪ್ರಮುಖ ಹಂತ ತಲುಪುತ್ತದೆ. ವಿಶ್ವಾಸ ಹಾಗೂ ಅನ್ಯೋನ್ಯತೆಗಳು ಬೆಳೆಯುವ ಐದನೇ ಘಟ್ಟದಲ್ಲಿ ಸಂಬಂಧದ ಗಟ್ಟಿತನ ಎಷ್ಟು ಎಂಬುದು ನಿರ್ಧರಿಸಲ್ಪಡುತ್ತದೆ.

ಪ್ರೀತಿಯಲ್ಲಿ ಬಿದ್ದವರು ಪೆದ್ದು ಪೆದ್ದಾಗಿ ಆಡ್ತಾರಂತೆ !

ಪ್ರೀತಿಯಲ್ಲಿ ಬಿದ್ದವರು ಪೆದ್ದು ಪೆದ್ದಾಗಿ ಆಡ್ತಾರಂತೆ !

ಪ್ರೀತಿಯಲ್ಲಿ ಮುಳುಗಿದವರು ತಮ್ಮ ದೈನಂದಿನ ಕೆಲಸಗಳಲ್ಲಿ ಅಷ್ಟೊಂದು ಸರಿಯಾಗಿ ಗಮನ ಕೇಂದ್ರೀಕರಿಸಲು ಸಾಧ್ಯವಾಗದು ಎನ್ನುತ್ತಾರೆ ಸಂಶೋಧಕರು. ಪ್ರೀತಿಯ ಹೊಳೆಯಲ್ಲಿ ಈಜುತ್ತಿರುವ ವರು ಅದರ ಭಾವನಾ ತೀವ್ರತೆಯಿಂದ ಬೇರೆಲ್ಲ ಕೆಲಸಗಳ ಕಡೆಗೆ ಗಮನಹರಿಸುವುದನ್ನೇ ಬಿಟ್ಟುಬಿಡುತ್ತಾರೆ ಎಂದು ಹೇಳಲಾಗಿದೆ.

ಪ್ರೀತಿ ಮಾಡುವುದರಿಂದ ತೂಕ ಹೆಚ್ಚಾಗುತ್ತಾ?

ಪ್ರೀತಿ ಮಾಡುವುದರಿಂದ ತೂಕ ಹೆಚ್ಚಾಗುತ್ತಾ?

ಖ್ಯಾತ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಪ್ರೀತಿಯಲ್ಲಿ ಬಿದ್ದ ಹೆಣ್ಣು ಮಕ್ಕಳ ದೇಹ ತೂಕದಲ್ಲಿ ವ್ಯತ್ಯಾಸವಾಗುತ್ತದೆ ಎನ್ನಲಾಗಿದೆ. ಪ್ರೀತಿ ಮಾಡುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ದೇಹ ತೂಕ ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಹೊಸ ಸಂಬಂಧದ ಮೊದಲ ವರ್ಷದಲ್ಲಿ ಹೆಣ್ಣು ಮಗಳೊಬ್ಬಳು ಸರಿ ಸುಮಾರು 3.2 ಕೆಜಿಯಷ್ಟು ತೂಕ ಹೆಚ್ಚಿಸಿಕೊಳ್ಳುತ್ತಾಳಂತೆ.

ಸುಮಧುರ ಸಂಗೀತಕ್ಕೂ ಪ್ರೀತಿಗೂ ಅವಿನಾಭಾವ ಸಂಬಂಧ !

ಸುಮಧುರ ಸಂಗೀತಕ್ಕೂ ಪ್ರೀತಿಗೂ ಅವಿನಾಭಾವ ಸಂಬಂಧ !

ಸುಮಧುರ ಹಾಗೂ ಮೃದುವಾದ ಸಂಗೀತದ ಆಲಿಸುವಿಕೆಯಿಂದ ಪ್ರೀತಿಯ ಭಾವನೆಗಳು ಹೆಚ್ಚು ಉತ್ಕಟವಾಗುತ್ತವೆ.ಇದರಿಂದ ಪ್ರೀತಿಸುವ ವ್ಯಕ್ತಿಗಳ ವ್ಯಕ್ತಿತ್ವದಲ್ಲಿಯೇ ಬದಲಾವಣೆ ಕಂಡು ಬಂದು ಅವರ ಮಾತುಕತೆಯಲ್ಲಿ ಒಂದು ದಿವ್ಯ ಆಕರ್ಷಣೆ ಏರ್ಪಡುತ್ತ ದಂತೆ. ಹೀಗಾಗಿ ಪ್ರೀತಿಯಲ್ಲಿರುವವರು ಅವರಿಷ್ಟದ ಸಂಗೀತ ಕೇಳುವುದು ಉತ್ತಮ. ಅಂದರೆ ನೀವೇನಾದರೂ ನಿಮ್ಮ ಹುಡುಗ ಅಥವಾ ಹುಡುಗಿಗೆ ಪ್ರಪೋಸ್ ಮಾಡುವ ತಯಾರಿಯಲ್ಲಿದ್ದರೆ ನಿಮ್ಮ ಇಷ್ಟದ ಸಂಗೀತವನ್ನು ಆಲಿಸಿ.

ಆತನ ಕಣ್ಣುಗಳಲ್ಲಿ ಎಲ್ಲವೂ ಇದೆ!

ಆತನ ಕಣ್ಣುಗಳಲ್ಲಿ ಎಲ್ಲವೂ ಇದೆ!

ಪ್ರೀತಿಸುವವರ ಕಣ್ಣುಗಳಲ್ಲಿಯೇ ಎಲ್ಲ ಭಾವನೆಗಳು ಅಡಗಿರುತ್ತವೆ ಎಂಬುದು ಮತ್ತೊಂದು ಅಧ್ಯಯನದಲ್ಲಿ ಸಾಬೀತಾಗಿದೆ. ತನ್ನೆದುರಿಗಿರುವ ಸಂಗಾತಿಯು ಜೀವನದ ಶೃಂಗಾರ ಸಂಗಾತಿ ಯಾಗುವಳು ಎಂಬುದು ಖಚಿತವಾದಲ್ಲಿ ಆತನ ಕಣ್ಣು ಗಳಲ್ಲಿ ಬೇರೆಯದೇ ಭಾವನೆ ಕಾಣಿಸುತ್ತದೆ. ಆದರೆ ಇದನ್ನು ತಿಳಿಯದೆ ಅನೇಕರು ಕೇವಲ ದೈಹಿಕ ಹಾವಭಾವಗಳತ್ತ ಗಮನ ಹರಿಸಿ ಆತ ಅಥವಾ ಅವಳು ತನ್ನಲ್ಲಿ ಎಷ್ಟು ಕಾಮವಾಂಛೆ ಇಟ್ಟು ಕೊಂಡಿದ್ದಾನೆ/ಳೆ ಎಂಬುದನ್ನು ಅಳೆಯಲು ಯತ್ನಿಸುತ್ತಾರೆ. ಆದರೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅರ್ಧ ಕ್ಷಣದಲ್ಲಿಯೇ ಇಬ್ಬರೂ ಪ್ರೀತಿಯಲ್ಲಿ ಮುಳುಗಿಬಿಡಬಹುದು. ವ್ಯಕ್ತಿಯ ದೃಷ್ಟಿ ಎತ್ತ ನೆಟ್ಟಿದೆ ಎಂಬುದರ ಮೇಲೆ ಗಮನವಿಟ್ಟು ನೋಡಿದಲ್ಲಿ ಆತ ಪ್ರೀತಿ ಬಯಸುತ್ತಿರುವನಾ ಅಥವಾ ಕೇವಲ ಕಾಮವಾಂಛೆ ಆತನಿಗಿದೆಯಾ ಎಂಬುದನ್ನು ಅಳೆದುಬಿಡಬಹುದು.

'ಲವ್ ಹಾರ್ಮೋನ್’ಗಳು ಹಾಗೂ ಸೆಕ್ಸ್ ಬಯಕೆ

'ಲವ್ ಹಾರ್ಮೋನ್’ಗಳು ಹಾಗೂ ಸೆಕ್ಸ್ ಬಯಕೆ

ಪುರುಷರಲ್ಲಿ ಮಹಿಳೆಯರ ಸೆಕ್ಸ್ ವಾಂಛೆಯನ್ನು ಹೆಚ್ಚಿಸುವ ಮೆದುಳಿನಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಹಾರ್ಮೋನ್‌ಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಆಕ್ಸಿಟೋಸಿನ್ ಅನ್ನು ಲವ್ ಹಾರ್ಮೋನ್ ಎಂದೇ ಸಂಶೋಧಕರು ಹೇಳುತ್ತಾರೆ. ಈ ಲವ್ ಹಾರ್ಮೋನ್ ಸಾಮಾಜಿಕ ವರ್ತನೆ ಹಾಗೂ ಸಂಗಾತಿಯ ರಕ್ಷಣೆಯ ಭಾವನೆಗಳನ್ನು ನಿಯಂತ್ರಿಸುತ್ತವೆ. ಒಂದು ವೇಳೆ ಮಹಿಳೆಯರಲ್ಲಿ ಈ ಆಕ್ಸಿಟೋಸಿನ್ ಹಾರ್ಮೋನ್‌ಗಳ ಸಂಖ್ಯೆ ಕಡಿಮೆಯಾದಲ್ಲಿ ಅವರು ತಮ್ಮ ಪುರುಷ ಸಂಗಾತಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳಲಾರಂಭಿಸುತ್ತಾರಂತೆ.

English summary

Six Surprising facts about love you probably didnt know!

Love can be a wonderful thing. But did you know that it also has health benefits and can alter the way you think? Here are surprising facts about love, you might not know about.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X