For Quick Alerts
ALLOW NOTIFICATIONS  
For Daily Alerts

ಡೇಟಿಂಗ್ ಮಾಡುವಾಗ ಗಂಡಸರು ಇಂಥ ಸುಳ್ಳು ಹೇಳುತ್ತಾರಂತೆ!

|

ಡೇಟಿಂಗ್ ಎಂಬುದು ಸಂಬಂಧವೊಂದರ ಆರಂಭಿಕ ಹಂತವಾಗಿರುತ್ತದೆ. ಗಂಡು ಹಾಗೂ ಹೆಣ್ಣು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕಳೆಯುವ ಸುಸಂದರ್ಭ ಡೇಟಿಂಗ್ ಆಗಿದೆ. ಆದರೆ ಇಂಥ ಡೇಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಹಂಚಿಕೊಳ್ಳುವ ವಿಷಯಗಳು ಸತ್ಯವೇ ಆಗಿರಬೇಕೆಂದಿಲ್ಲ. ಓರ್ವ ಸಂಗಾತಿಯು ಕೆಲ ಸುಳ್ಳುಗಳನ್ನು ಸಹ ಆಗಾಗ ಹೇಳಬಹುದು. ಹಾಗಾದರೆ ಗಂಡಸು ಡೇಟಿಂಗ್ ಸಂದರ್ಭದಲ್ಲಿ ಯಾವೆಲ್ಲ ಸಾಮಾನ್ಯ ಸುಳ್ಳುಗಳನ್ನು ಹೇಳುತ್ತಾನೆ ಎಂಬ ಬಗ್ಗೆ ಈ ಅಂಕಣದಲ್ಲಿ ತಿಳಿಯೋಣ ಬನ್ನಿ...

ಘಟಿಸಿ ಹೋದ ಸಂಬಂಧಗಳ ಬಗ್ಗೆ

ಘಟಿಸಿ ಹೋದ ಸಂಬಂಧಗಳ ಬಗ್ಗೆ

ಹಳೆಯ ಸಂಬಂಧಗಳ ಮಾತನಾಡುವುದು ಬಹುತೇಕರಿಗೆ ಮುಜುಗರದ ವಿಷಯವೇ ಆಗಿರುತ್ತದೆ. ಹಿಂದೆ ಎಷ್ಟು ಜನರೊಂದಿಗೆ ಡೇಟಿಂಗ್ ಮಾಡಿದ್ದೆ ಅಥವಾ ಎಷ್ಟು ಜನರೊಂದಿಗೆ ಸಂಬಂಧವಿತ್ತು ಎಂಬುದನ್ನು ಹೇಳಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಹೀಗಾಗಿ ಗಂಡಸರು ತಮ್ಮ ಹಳೆಯ ಸಂಬಂಧದ ಬಗ್ಗೆ ಹೆಣ್ಣು ಸಂಗಾತಿಗೆ ಒಂದಿಷ್ಟು ಸುಳ್ಳು ಹೇಳುತ್ತಾರೆ ಎಂಬುದು ಕಂಡು ಬಂದಿದೆ. ಡೇಟಿಂಗ್ ವೆಬ್ಸೈಟೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಶೇ.44 ರಷ್ಟು ಗಂಡಸರು ತಮ್ಮ ಸಂಗಾತಿಗೆ ಹಳೆಯ ಸಂಬಂಧದ ಬಗ್ಗೆ ಸುಳ್ಳು ಹೇಳಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಂದರೆ ಹಿಂದಿನ ಸಂಬಂಧದ ಕಾರಣದಿಂದ ಇವತ್ತಿನ ಸಂಬಂಧಗಳು ಹಾಳಾಗ ಕೂಡದು ಎಂಬುದು ಗಂಡಸರ ಪ್ರಮುಖ ಉದ್ದೇಶ ವಾಗಿರುತ್ತದೆಯಂತೆ.

ಹಳೆಯ ಬಾಯ್ ಫ್ರೆಂಡ್ಸ್‌ಗಳ ವಿಷಯ

ಹಳೆಯ ಬಾಯ್ ಫ್ರೆಂಡ್ಸ್‌ಗಳ ವಿಷಯ

ಹೆಣ್ಣು ಸಂಗಾತಿಯೋರ್ವಳು ತನ್ನ ಈಗಿನ ಹುಡುಗನ ಎದುರಲ್ಲೇ ಹಳೆಯ ಸಂಗಾತಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತ, ಖುಷಿಯಾಗಿ ನಗು ನಗುತ್ತಿದ್ದರೂ ಸಹ ಈ ಹೊಸ ಹುಡುಗ ಮಾತ್ರ ಏನೂ ಆಗಿಯೇ ಇಲ್ಲ ಎಂಬಂತೆ ಇರುತ್ತಾನೆ. ಆದರೆ ಇದು ತೋರ್ಪಡಿಕೆ ಮಾತ್ರ. ನಿಜ ಹೇಳಬೇಕೆಂದರೆ ಆತ ಒಳಗೊಳಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿದುಕೊಂಡು ಕಷ್ಟ ಪಡುತ್ತಿರುತ್ತಾನೆ. ಇದು ಸಹಜ ಕೂಡ.

ನಿಮ್ಮ ಆದಾಯದ ವಿಷಯ

ನಿಮ್ಮ ಆದಾಯದ ವಿಷಯ

ಡೇಟಿಂಗ್ ಸಂದರ್ಭದಲ್ಲಿ ತನ್ನ ಶ್ರೀಮಂತಿಕೆಯನ್ನು ತೋರ್ಪಡಿಸಿ ಗರ್ಲ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡುವುದು ಗಂಡಸರ ಲಕ್ಷಣ. ತಾನು ಪಡೆಯುವ ದೊಡ್ಡ ಮೊತ್ತದ ಸಂಬಳ, ತನ್ನಲ್ಲಿರುವ ಕಾರು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಮಾಡುವುದು ಸಹಜವೇ ಆಗಿದೆ. ಆದರೆ ಖ್ಯಾತ ನಿಯತಕಾಲಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಶೇ.87 ರಷ್ಟು ಗಂಡಸರು ತಮ್ಮ ಆದಾಯದ ಬಗ್ಗೆ ಸಂಗಾತಿಗೆ ಸುಳ್ಳು ಹೇಳುತ್ತಾರಂತೆ.

ನೀವೆಷ್ಟು ಎತ್ತರವಾಗಿರುವಿರಿ?

ನೀವೆಷ್ಟು ಎತ್ತರವಾಗಿರುವಿರಿ?

ಸಾಮಾನ್ಯವಾಗಿ ಗಂಡಸರು ತಮ್ಮ ದೇಹದ ಎತ್ತರದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುತ್ತಾರೆ. ಅದರಲ್ಲೂ ತಮ್ಮ ಹೆಣ್ಣು ಸಂಗಾತಿಯ ಮುಂದೆ ತಾವು ಸಾಕಷ್ಟು ಎತ್ತರವಾಗಿದ್ದೇವೆ ಎಂದು ತೋರ್ಪಡಿಸಲು ಯತ್ನಿಸುತ್ತಾರೆ. ತಮ್ಮ ಎತ್ತರದ ಬಗ್ಗೆ ಹೇಳುವಾಗ ಅದಕ್ಕೆ ಒಂದಿಷ್ಟು ಇಂಚು ಸೇರಿಸಿ ಹೇಳುವುದು ಗಂಡಸರ ಲಕ್ಷಣವಂತೆ. ಸಾಮಾಜಿಕ ವರ್ತನೆ ಹಾಗೂ ವ್ಯಕ್ತಿತ್ವ ಕುರಿತಾದ ಖ್ಯಾತ ನಿಯತಕಾಲಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಶೇ.೫೫ ರಷ್ಟು ಪುರುಷರು ತಮ್ಮ ಎತ್ತರದ ಬಗ್ಗೆ ಆನ್ಲೈನ್ ಪ್ರೊಫೈಲ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.

ಭಾವನೆಗಳು ಅತಿ ಸೂಕ್ಷ್ಮ

ಭಾವನೆಗಳು ಅತಿ ಸೂಕ್ಷ್ಮ

ಗಂಡು ಹೆಣ್ಣಿಗಿಂತ ಹೆಚ್ಚು ಶಕ್ತಿವಂತ ಎಂಬುದು ಹಳೆಯ ನಂಬಿಕೆಯಾಗಿದೆ. ಆದರೆ ಮಾನಸಿಕ ಸಾಮರ್ಥ್ಯದ ವಿಷಯ ಬಂದಾಗ ಗಂಡಸು ಅಷ್ಟೇನೂ ಶಕ್ತಿವಂತನಲ್ಲ ಎಂಬುದು ಸಹ ನಿಜವಾಗಿದೆ. ಮಾನಸಿಕ ಕ್ಷೆಭೆ ಉಂಟಾದಾಗ ಅದನ್ನು ಸಹಜವಾಗಿ ತೋರ್ಪಡಿಸುವುದು ಅಥವಾ ಹಂಚಿಕೊಳ್ಳುವುದು ಪುರುಷನಿಂದ ಸಾಧ್ಯವಿಲ್ಲ. ಒಳಗಡೆ ಮಾನಸಿಕ ಬಿರುಗಾಳಿ ಇದ್ದರೂ ಹೊರಗೆ ಮಾತ್ರ ಆತ ’ಏನಿಲ್ಲ... ಎಲ್ಲ ಓಕೆ’ಎಂದೇ ಹೇಳುತ್ತಿರುತ್ತಾನೆ.

ನಿಮ್ಮ ಗೆಳೆಯರು, ಕುಟುಂಬ ಸದಸ್ಯರ ಬಗ್ಗೆ ಅಭಿಪ್ರಾಯ

ನಿಮ್ಮ ಗೆಳೆಯರು, ಕುಟುಂಬ ಸದಸ್ಯರ ಬಗ್ಗೆ ಅಭಿಪ್ರಾಯ

ಈ ವಿಷಯ ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ. ತಮ್ಮ ಸಂಗಾತಿಯ ಬೇರೆ ಗೆಳೆಯರು ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಎಲ್ಲರಿಗೂ ಉತ್ತಮ ಅಭಿಪ್ರಾಯ ಇರುವುದಿಲ್ಲ. ಆದರೆ ಇದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಾಗದು. ಸಮಯ ಸಂದರ್ಭ ನೋಡಿಕೊಂಡು ’ನಿಮ್ಮ ಮನೆಯವರು ತುಂಬಾ ಒಳ್ಳೆಯವರು’ಎಂದು ಹೇಳುತ್ತ ಸಂಬಂಧಗಳನ್ನು ಕಾಪಾಡಿ ಕೊಳ್ಳುವುದೇ ಸೂಕ್ತ. ಇಂಥ ಪರಿಸ್ಥಿತಿಗಳಲ್ಲಿ ಗಂಡಸರು ಕೂಡ ಆಗಾಗ ಸುಳ್ಳುಗಳನ್ನು ಹೇಳುತ್ತಿರುತ್ತಾರೆ.

English summary

most common things men lie about while dating someone

Whether it is a white lie or a major one, many men find themselves guilty of twisting the truth in front of their partner. It could be saying ‘I am fine’ when something is bothering them, lying about their whereabouts, trying to stay out of trouble by saying ‘oh, I just forgot’ or simply fibbing to avoid an argument. Here are six common things men might lie about when they are dating or have a crush on someone.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X