For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿ ಯಾವುದು- 2019 ಜೂನ್‌ನಲ್ಲಿ ನಿಮ್ಮ ಲವ್ ಲೈಫ್ ಹೇಗಿರಲಿದೆ?

|

ಪ್ರತಿ ತಿಂಗಳು ಕೂಡ ಒಂದಿಲ್ಲೊಂದು ರೀತಿಯಲ್ಲಿ ವಿಶೇಷವೇ ಆಗಿರುತ್ತದೆ. ಮುಂದೆ ಏನಾಗಲಿದೆ ಎಂಬ ಕುತೂಹಲ ಯಾವಾಗಲೂ ಇದ್ದೇ ಇರುತ್ತದೆ. ಹೀಗಾಗಿಯೇ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಮಾನವ ಸಹಜವಾದ ಕುತೂಹಲ ಎನ್ನಬಹುದು. ಹೀಗಾಗಿಯೇ ಭವಿಷ್ಯದಲ್ಲಿ ಇಣುಕಿ ನೋಡಲು ನಾವು ಜ್ಯೋತಿಷಿಗಳ ಮೊರೆ ಹೋಗುತ್ತೇವೆ.

ಜೂನ್ ತಿಂಗಳಲ್ಲಿ ರಾಶಿ ಚಕ್ರಕ್ಕೆ ಅನುಗುಣವಾಗಿ ಈ ತಿಂಗಳು ನಿಮ್ಮ ಪ್ರೀತಿ ಪ್ರಣಯದ ಜೀವನ ಹೇಗಿರಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ. ಪ್ರೀತಿಯಲ್ಲಿ ಸುಖವಿದೆಯಾ ಅಥವಾ ನೋವಿದೆಯಾ ಎಂಬುದನ್ನು ನಿಮ್ಮ ರಾಶಿಷಕ್ರಕ್ಕನುಸಾರವಾಗಿ ನೋಡಿಕೊಳ್ಳಿ.

ಮೇಷ ರಾಶಿ

ಮೇಷ ರಾಶಿ

ಈ ತಿಂಗಳು ಪ್ರಯಾಣ ಮಾಡುವುದು ಮೇಷ ರಾಶಿಯವರ ಭವಿಷ್ಯದಲ್ಲಿದೆ. ಈ ರಾಶಿಯಲ್ಲಿ ಹುಟ್ಟಿದವರು ತಮ್ಮ ಪ್ರೀತಿಯ ಸಂಗಾತಿಯೊಂದಿಗೆ ಎಲ್ಲಾದರೂ ದೂರದ ಟ್ರಿಪ್ ಕೈಗೊಳ್ಳುವ ಸಾಧ್ಯತೆಗಳಿವೆ. ಜೂನ್ 26 ರ ನಂತರ ಬುಧಗ್ರಹನು ನಿಮ್ಮ ಪ್ರಣಯ ಚಕ್ರ ಪ್ರವೇಶಿಸುತ್ತಿರುವುದು ಶುಭ ಸೂಚಕವಾಗಿದೆ. ಇದರ ನಂತರ ಪ್ರಣಯ ಜೀವನದಲ್ಲಿ ಎಲ್ಲವೂ ಸುಖವಾಗುತ್ತಿದ್ದು, ಈ ಹಿಂದೆ ಸಂಗಾತಿಯೊಂದಿಗೆ ಏನಾದರೂ ಭಿನ್ನಾಭಿಪ್ರಾಯಗಳು ಉಂಟಾಗಿದ್ದರೂ ಅವು ಕೊನೆಯಾಗಲಿವೆ.

ವೃಷಭ ರಾಶಿ

ವೃಷಭ ರಾಶಿ

ಈ ತಿಂಗಳು ವೃಷಭ ರಾಶಿಯವರ ವೃತ್ತಿ ಜೀವನ ಅತ್ಯಂತ ಉತ್ತಮವಾಗಿದ್ದರೂ ಪ್ರೀತಿಯ ವಿಷಯದಲ್ಲಿ ಮಾತ್ರ ಕೆಲ ಅಡೆತಡೆಗಳು ಬರಬಹುದಾಗಿದೆ. ಪ್ರೀತಿಯ ಜೀವನದಲ್ಲಿ ಕಾಣಬಹುದಾದ ಕೆಲವು ಅಪಾಯಕಾರಿ ಸಂಗತಿಗಳ ಬಗ್ಗೆ ಅವರು ಈ ತಿಂಗಳು ಗಮನಹರಿಸುವುದು ಅಗತ್ಯ. ಸಂಗಾತಿಯೊಂದಿಗೆ ಕೆಲ ಭಿನ್ನಾಭಿಪ್ರಾಯಗಳು ಕಂಡು ಬರಬಹುದಾದರೂ ಅವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ವೃತ್ತಿ ಜೀವನವೇ ಆಗಿರಲಿ ಅಥವಾ ಪ್ರಣಯವೇ ಆಗಿರಲಿ ಎಲ್ಲ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ಚರ್ಚೆಯೊಂದೇ ಮಾರ್ಗವಾಗಿದೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಗೆ ಜೂನ್ ೮ ರಂದು ಶುಕ್ರ ಗ್ರಹ ಪ್ರವೇಶಿಸಲಿದ್ದು ಅದರಿಂದ ಶುಭವಾಗಲಿದೆ. ಶುಕ್ರನು ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ, ಹೊಳಪು ಹಾಗೂ ಉತ್ತಮ ಸಂಗತಿಗಳನ್ನು ತರಲಿದ್ದಾನೆ. ಅಂದರೆ ನಿಮ್ಮ ಪ್ರೀತಿಯ ಸಂಬಂಧವನ್ನು ಗಟ್ಟಿಗೊಳಿಸಲು ಈ ತಿಂಗಳು ಶುಭವಾಗಿದೆ. ಆರಂಭದಲ್ಲಿ ಕೆಲ ಅಡೆತಡೆಗಳು ಕಾಣಿಸಿದರೂ ಅವು ಮಾಯವಾಗಲಿವೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಜೂನ್ ಅಷ್ಟೊಂದು ಒಳ್ಳೆಯದಾಗಿಲ್ಲವಾದರೂ ತೀರಾ ಕೆಟ್ಟದ್ದೂ ಆಗಿಲ್ಲ. ಪ್ರೀತಿಯ ಜೀವನದಲ್ಲಿನ ಕೆಲವು ಸಮಸ್ಯೆಗಳಿಂದ ಒತ್ತಡ ಹಾಗೂ ನಿರಾಶೆ ಅನುಭವಿಸಬೇಕಾಗಿ ಬರಬಹುದು. ಆದರೂ ಈ ಒಂದು ಸಂದರ್ಭದಲ್ಲಿ ನಿಮ್ಮನ್ನು ನೀವು ಪರೀಕ್ಷೆಗೆ ಒಡ್ಡಿಕೊಳ್ಳುವ ಹಾಗೂ ಆಧ್ಯಾತ್ಮಿಕವಾಗಿ ಬೆಳವಣಿಗೆ ಹೊಂದುವ ಅವಕಾಶ ನಿಮಗಿದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರ ಅತಿ ಪ್ರಮುಖವಾದ ಮನಸ್ಸಿನ ಆಸೆ ಆಕಾಂಕ್ಷೆಗಳು ಈ ತಿಂಗಳಲ್ಲಿ ಈಡೇರುವ ಸಾಧ್ಯತೆಗಳಿವೆ. ಅವರು ಬಯಸಿದಂತೆ ಹೆಸರು ಮಾಡುವುದು ಹಾಗೂ ಎಲ್ಲರಿಗೂ ಎದ್ದು ಕಾಣುವಂತೆ ಘಟನೆಗಳು ಜರುಗಲಿವೆ. ನೀವು ಈಗ ತಾನೆ ಒಂದು ಪ್ರೀತಿಯ ಸಂಬಂಧವನ್ನು ಆರಂಭಿಸಿದ್ದಲ್ಲಿ ನಿಮ್ಮ ಮನೋ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಆದರೂ ಈ ರಾಶಿಯವರು ಜೂನ್ ತಿಂಗಳಲ್ಲಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಒಳಿತು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ತಿಂಗಳು ಹೊಸ ಹೊಸ ಅವಕಾಶಗಳು ಹರಿದು ಬರಲಿವೆ. ಸಿಗುವ ಅವಕಾಶಗಳನ್ನು ಇವರು ಸಮರ್ಥವಾಗಿ ಬಳಸಿಕೊಂಡಿದ್ದೇ ಆದಲ್ಲಿ ತಮ್ಮ ಕ್ಷೇತ್ರದಲ್ಲಿ ರಾಜ ಅಥವಾ ರಾಣಿಯಾಗಿ ಮೆರೆಯಬಹುದು. ನಿಮ್ಮ ರಾಶಿಯಲ್ಲಿ ಶುಕ್ರನು ಉಚ್ಚ ಸ್ಥಾನದಲ್ಲಿದ್ದು, ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರಿಂದ ನೀವು ಪ್ರಶಂಸೆಯನ್ನು ಪಡೆಯಲಿರುವಿರಿ. ಆದರೂ ನಿಮ್ಮ ವೃತ್ತಿ ಜೀವನದಷ್ಟು ನಿಮ್ಮ ಪ್ರಣಯ ಜೀವನ ಉತ್ತಮವಾಗಿರುವುದಿಲ್ಲ. ನಿಮ್ಮ ಸಂಗಾತಿಯಿಂದ ನೀವು ತಿರಸ್ಕಾರಕ್ಕೊಳಗಾಗುವ ಸಂದರ್ಭವೂ ಬರಬಹುದು.

ತುಲಾ ರಾಶಿ

ತುಲಾ ರಾಶಿ

ವೃತ್ತಿ ಜೀವನ ಹಾಗೂ ಪೀತಿಯ ಜೀವನ ಎರಡನ್ನು ಸಮತೋಲಿತವಾಗಿ ಇಟ್ಟುಕೊಳ್ಳುವ ವಿಷಯದಲ್ಲಿ ತುಲಾ ರಾಶಿಯವರಿಗೆ ಈ ತಿಂಗಳು ಕೆಲ ಸವಾಲುಗಳು ಎದುರಾಗಬಹುದು. ನಿಮ್ಮ ಪ್ರೀತಿ ಪಾತ್ರರಿಂದಲೇ ಕೆಲವು ಸಮಸ್ಯೆಗಳು ಬಂದರೂ ಅವು ಶಾಶ್ವತವಾಗಿರಲಾರವು. ನಿಮ್ಮ ಸಂಗಾತಿಯೊಂದಿಗೆ ಪ್ರಯಾಣ ಹೋಗುವ ಅದೃಷ್ಟವೂ ನಿಮಗಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಹಣಕಾಸು ನೆರವಿನ ಭರವಸೆಯೊಂದು ಕಾಣಲಿದೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದನ್ನು ಮಾತ್ರ ಕಾದು ನೋಡಬೇಕು. ಹಣಕಾಸು ವಿಷಯಗಳಿಂದ ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು ಉದ್ಭವವಾಗದಂತೆ ಜಾಗ್ರತೆ ವಹಿಸಿ. ಈ ತಿಂಗಳು ಕೆಲವು ಬಾರಿ ನಿಮ್ಮ ನಿರ್ಧಾರಗಳು ತಪ್ಪಾಗುವ ಸಾಧ್ಯತೆಗಳಿರುವುದರಿಂದ ಯೋಚಿಸಿ ನಿರ್ಧಾರ ತಳೆಯುವುದು ಅಗತ್ಯ. ಅದರಲ್ಲೂ ಸಂಗಾತಿಯೊಂದಿಗೆ ವಾದ ಮಾಡುವ ಮುನ್ನ ಹುಷಾರಾಗಿರಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರು ಈ ತಿಂಗಳು ಕುಟುಂಬದ ಪ್ರೀತಿಯನ್ನು ಅನುಭವಿಸಲಿದ್ದು ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದಾರೆ. ಜೂನ್ 17ರ ಹುಣ್ಣಿಮೆಯು ನಿಮ್ಮ ಭಾವನಾತ್ಮಕ ವಿಷಯಗಳಲ್ಲಿ ಉತ್ತಮವಾದುದನ್ನು ತರಲಿದೆ. ಆದರೂ ನೀವು ಅಂದುಕೊಂಡಂತೆ ಎಲ್ಲವೂ ಆಗುತ್ತಿಲ್ಲ ಎಂದು ನಿಮಗನಿಸಬಹುದು. ಆದರೆ ನಿರಾಶರಾಗದಿರಿ, ಮುಂದೆ ಎಲ್ಲವೂ ಒಳಿತಾಗುತ್ತದೆ.

ಮಕರ ರಾಶಿ

ಮಕರ ರಾಶಿ

ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಂಡರೂ ಪ್ರೀತಿಯ ಜೀವನದಲ್ಲಿ ಮಾತ್ರ ಕೆಲವು ಅಡೆತಡೆಗಳು ಈ ತಿಂಗಳಲ್ಲಿ ಬರಬಹುದು. ಆದರೆ ನಿಮ್ಮ ಆತ್ಮವಿಶ್ವಾಸ ಹಾಗೂ ಆಶಾಭಾವನೆಯಿಂದ ಎಲ್ಲ ಸಮಸ್ಯೆಗಳನ್ನು ದಾಟಿ ಮುಂದೆ ಬರಲು ಸಾಧ್ಯ.

ಕುಂಭ ರಾಶಿ

ಕುಂಭ ರಾಶಿ

ಜೂನ್ ತಿಂಗಳು ಕುಂಭ ರಾಶಿಯವರು ಕುಟುಂಬದ ಪ್ರೀತಿಯನ್ನು ಪಡೆಯುವರು ಹಾಗೂ ಕ್ರಿಯಾಶೀಲತೆಯ ಉತ್ತುಂಗಕ್ಕೇರುವರು. ಈ ತಿಂಗಳಲ್ಲಿ ಸಾಕಷ್ಟು ಪ್ರಣಯವೂ ಭಾಗ್ಯದಲ್ಲಿದ್ದು ಒಂದಕ್ಕಿಂತ ಹೆಚ್ಚು ಸಂಗಾತಿಗಳು ಪ್ರೀತಿಯನ್ನು ಹಂಚಿಕೊಳ್ಳಬಹುದು. ಈ ತಿಂಗಳಲ್ಲಿ ಹೊಸದನ್ನು ಮಾಡಲು ಪ್ರೇರಣೆ ಪಡೆದು ನಿಮ್ಮ ಕ್ರಿಯಾಶೀಲತೆಯನ್ನು ವೃದ್ಧಿಸಿಕೊಳ್ಳುವಿರಿ.

ಮೀನ ರಾಶಿ

ಮೀನ ರಾಶಿ

ಈ ತಿಂಗಳು ಮೀನರಾಶಿಯವರಿಗೆ ಪ್ರಣಯ ಸುಖ ಅತಿ ಉತ್ತಮವಾಗಿರಲಿದ್ದು, ಜೀವನದಲ್ಲಿ ಹೊಸ ತಿರುವುಗಳು ಸಹ ಕಾಣಿಸಿಕೊಳ್ಳಲಿವೆ. ನೀವು ಯಾವುದಾದರೂ ಸಂಬಂಧದಲ್ಲಿದ್ದರೆ ಅದರಲ್ಲಿ ನಿಮ್ಮನ್ನು ನೀವು ಕಮಿಟ್ ಮಾಡಿಕೊಳ್ಳಬೇಕಾಗಿ ಬರಬಹುದು. ಆದರೂ ಏನೇ ನಿರಾಸೆಗಳು ಬಂದರೂ ಅದನ್ನೆಲ್ಲ ಎದುರಿಸಿ ಮುನ್ನಡೆಯಲು ನೀವು ಸಶಕ್ತರಾಗಿರುವಿರಿ.

English summary

Love Horoscope for June: Will it be a month of romantic bliss

There is something special about every month. It begins with an uncertainty about what the future holds, and it's human nature to want to know more. This is the reason why we seek help from astrology to sneak a peek to the future. Here we bring to you the love horoscope of June and the predictions of whether it will be a month of romantic bliss or disappointments.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X