For Quick Alerts
ALLOW NOTIFICATIONS  
For Daily Alerts

ನೀವು ಪ್ರೀತಿಯಲ್ಲಿ ಬಿದ್ದಿದ್ದೀರಾ...? ಹಾಗಾದರೆ ನಿಮಗೆ ಈ ಸಂಗತಿಗಳು ತಿಳಿದಿರಲಿ

|
Heart Beat Episode 2 : ಇವರಿಬ್ಬರ ಲವ್ ಬಗ್ಗೆ ಪ್ರಿನ್ಸಿಪಾಲ್ ಗೆ ಗೊತ್ತಾಯ್ತು..! ಆಮೇಲೆ ಏನಾಯ್ತು ಗೊತ್ತಾ..?

ಪ್ರೀತಿ, ಪ್ರೇಮದ ವಿಷಯವನ್ನು ಇಟ್ಟುಕೊಂಡು ನಮ್ಮ ಸಿನಿಮಾ ಜಗತ್ತಿನಲ್ಲಿ ಬಂದಿರುವಂತಹ ಸಿನಿಮಾಗಳು ಅಸಂಖ್ಯಾತ. ಸಿನಿಮಾದಲ್ಲಿನ ಪ್ರೀತಿಗೂ, ನಿಜ ಜೀವನದಲ್ಲಿನ ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅದೇ ನಿಜ ಜೀವನದಲ್ಲಿ ನಾವು ಬಯಸಿದ ಹುಡುಗಿಯು ಸಿಕ್ಕದರೆ ಆಗ ಸ್ವರ್ಗವೇ ಸಿಕ್ಕಿತು ಎನ್ನುವ ಭಾವನೆಯು ಮೂಡುವುದು. ಆದರೆ ಕೆಲವರು ಕಾಡಿಸಿ, ಪೀಡಿಸಿ ಪ್ರೀತಿ ಮಾಡುವರು. ಇದು ಖಂಡಿತವಾಗಿಯೂ ನಿಜವಾದ ಪ್ರೀತಿಯಲ್ಲ, ಇನ್ನು ಕೆಲವು ಮಂದಿ ಬ್ಲ್ಯಾಕ್ ಮೇಲೆ ಮಾಡಿಕೊಂಡು ಪ್ರೀತಿ ಮಾಡುವರು! ಇದೆಲ್ಲವೂ ತೋರಿಕೆ ಅಥವಾ ಆಕರ್ಷಣೆಯ ಪ್ರೀತಿ ಆಗಿರುವುದು. ನಿಜವಾಗಿ ಪ್ರೀತಿ ಮಾಡಿದರೆ ಅದು ಸಂಬಂಧವಾಗಿ ಪರಿವರ್ತನೆಯಾಗಿ ಮುಂದೆ ಜೀವಮಾನವಿಡಿ ನೀವು ಪ್ರೀತಿಸಿದ ವ್ಯಕ್ತಿಯ ಜತೆಗೆ ಜೀವನ ಸಾಗಿಸಬೇಕು.

ಆದರೆ ಪ್ರೀತಿ ಬಳಿಕದ ಜೀವನ ಎನ್ನುವುದು ಅಷ್ಟು ಸುಲಭವಲ್ಲ. ಇದಕ್ಕೆ ತುಂಬಾ ಕಠಿಣ ಶ್ರಮ ಬೇಕಾಗುವುದು. ಪ್ರೀತಿಸುವ ವೇಳೆ ಬಾನಿನಲ್ಲಿನ ಚಂದ್ರನ ತಂದು ಕೊಡುವ ಭರವಸೆ ನೀಡಬಹುದು. ಆದರೆ ವಿವಾಹವಾದ ಬಳಿಕ ಕೆಲವೊಂದು ಸಣ್ಣ ಸಣ್ಣ ಬೇಡಿಕೆಗಳನ್ನು ಈಡೇರಿಸಲು ತುಂಬಾ ಕಷ್ಟವೆಂದು ತಿಳಿಯಬೇಕು. ಸಂಗಾತಿಗಳಿಬ್ಬರು ನಿರಂತರವಾಗಿ ಪ್ರಯತ್ನ ಮಾಡುತ್ತಲಿದ್ದರೆ ಆಗ ಖಂಡಿತವಾಗಿಯೂ ಜೀವನವು ಯಶಸ್ಸನ್ನು ಪಡೆಯುವುದು. ನೀವು ಯಾರನ್ನಾದರೂ ಈಗಾಗಲೇ ಪ್ರೀತಿಸುತ್ತಾ ಇದ್ದರೆ ಆಗ ನೀವು ಅದನ್ನು ಸಂಬಂಧವಾಗಿ ಮಾರ್ಪಾಡು ಮಾಡುವ ಮೊದಲು ನಾವು ಈ ಲೇಖನದಲ್ಲಿ ನೀಡಿರುವಂತಹ ಐದು ವಿಚಾರಗಳನ್ನು ಗಮನಿಸಿಕೊಳ್ಳಿ.

ನಿಮ್ಮ ಸಂತೋಷಕ್ಕೆ ನೀವೇ ಕಾರಣರು

ನಿಮ್ಮ ಸಂತೋಷಕ್ಕೆ ನೀವೇ ಕಾರಣರು

ಸಂಬಂಧದಲ್ಲಿ ಒಳಗೊಳ್ಳುವುದು ಒಂದು ರೀತಿಯಲ್ಲಿ ಸುಂದರ ಅನುಭವ. ಆದರೆ ಇದನ್ನು ನಿಮ್ಮ ಸಂತೋಷ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ಸಂಬಂಧವು ಯಾವುದೇ ಮಂತ್ರ ದಂಡವಲ್ಲ. ಇದು ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಲ್ಲ ಮತ್ತು ಜೀವನವನ್ನು ಪರಿಪೂರ್ಣ ಮಾಡಲ್ಲ. ನಿಮ್ಮ ಸಂತೋಷವು ನಿಮ್ಮದೇ ಕೈಯಲ್ಲಿ ಇರುವುದು. ಬೇರೆಯವರು ಇದನ್ನು ಪರಿಪೂರ್ಣ ಗೊಳಿಸುವ ಅಗತ್ಯವು ನಿಮಗೆ ಕಾಣಿಸದು.

Most Read:ಗಾಳಿಯಲ್ಲಿ ಹುಟ್ಟಿದ ಪ್ರೀತಿ ಜೀವನವನ್ನೇ ತೇಲಿಸಿತು!

ಇಬ್ಬರು ವ್ಯಕ್ತಿಗಳು ಸಮಾನ ಮನಸ್ಸಿನವರು ಆಗಿರಲ್ಲ

ಇಬ್ಬರು ವ್ಯಕ್ತಿಗಳು ಸಮಾನ ಮನಸ್ಸಿನವರು ಆಗಿರಲ್ಲ

ನೀವು ಹಾಗೂ ನಿಮ್ಮ ಸಂಗಾತಿಯು ಒಂದೇ ರೀತಿಯ ಹವ್ಯಾಸಗಳು, ಜೀವನಶೈಲಿ, ಅಭಿಪ್ರಾಯ ಮತ್ತು ಜೀವನದ ಬಗ್ಗೆ ಇರುವಂತಹ ದೃಷ್ಟಿಕೋನವು ಪ್ರತೀ ಸಲವು ಒಂದೇ ರೀತಿಯಾಗಿ ಇರುವುದು ಎಂದು ನೀವು ಭಾವಿಸಬೇಡಿ. ಇಬ್ಬರು ವ್ಯಕ್ತಿಗಳು ಯಾವತ್ತೂ ಒಂದೇ ರೀತಿಯಾಗಿ ಇರಲ್ಲ ಮತ್ತು ಯಾವುದೇ ವಿಚಾರದ

ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿರುವುದು ದೊಡ್ಡ ವಿಚಾರವೇನಲ್ಲ. ನೀವು ಮಾಡಬೇಕಾಗಿರುವ ಕೆಲಸವೆಂದರೆ ನೀವು ಪರಸ್ಪರರ ಆಯ್ಕೆಯನ್ನು ಗೌರವಿಸಬೇಕು ಮತ್ತು ಅದು ಹೇಗಿದೆಯೋ ಅದೇ ರೀತಿಯಾಗಿ ಸ್ವೀಕರಿಸುವುದನ್ನು ಕಲಿಯಬೇಕು.

ಯಾವುದೇ ಸಂಬಂಧವು ಪರಿಪೂರ್ಣವಲ್ಲ

ಯಾವುದೇ ಸಂಬಂಧವು ಪರಿಪೂರ್ಣವಲ್ಲ

ಭೂಮಿ ಮೇಲಿನ ಯಾವುದೇ ಸಂಬಂಧವು ಪರಿಪೂರ್ಣವಲ್ಲ. ನಾವು ಈಗಾಗಲೇ ಮೇಲೆ ಹೇಳಿರುವ ಪ್ರಕಾರ ಇದನ್ನು ಪರಿಪೂರ್ಣಗೊಳಿಸಲು ನಿರಂತರವಾಗಿ ಸಂಗಾತಿಗಳಿಬ್ಬರು ಪ್ರಯತ್ನ ಮಾಡಬೇಕು. ಕೆಲವೊಂದು ಸಮಯದಲ್ಲಿ ಪ್ರತಿಯೊಂದು ಸಂಬಂಧವು ಕಠಿಣ ಪರೀಕ್ಷೆಗೆ ಸಿಲುಕುವುದು. ಸಂಗಾತಿ ಜತೆಗೆ ಸ್ವಲ್ಪ

ಮಟ್ಟಿಗಿನ ಜಗಳ ಮತ್ತು ವಾಗ್ವಾದ ನಡೆಯುವುದು ಸಾಮಾನ್ಯ. ಸಂಗಾತಿಗಳಿಬ್ಬರು ಇದನ್ನು ಬಗೆಹರಿಸಿಕೊಂಡು ಮುಂದೆ ಸಾಗುವುದನ್ನು ಕಲಿಯಬೇಕು. ಮತ್ತು ಜತೆಯಾಗಿ ಸಂತೋಷವಾಗಿ ಇರಲು ಪ್ರಯತ್ನಿಸಬೇಕು.

ಅದು ನೋವಿನಿಂದ ಕೂಡಿರಬಾರದು

ಅದು ನೋವಿನಿಂದ ಕೂಡಿರಬಾರದು

ಪ್ರೀತಿಸುವಂತಹ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಕೆಲವೊಂದು ಒಳ್ಳೆಯ ಹಾಗೂ ಕೆಟ್ಟ ದಿನಗಳು ಬಂದಿರಬಹುದು. ಆದರೆ ಆ ದಿನಗಳಲ್ಲಿ ಘನತೆ ಹಾಗೂ ಸಿದ್ಧಾಂತ ಜತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಯಾವುದೇ ರೀತಿಯ ಪರಿಸ್ಥಿತಿಯು ನಿರ್ಮಾಣವಾಗದೆ ಇರಬಹುದು. ಯಾರು ಕೂಡ ತುಂಬಾ ನೋವಿನ

ಹಾಗೂ ತುಂಬಾ ಅವಮಾನಿತವಾಗುವಂತಹ ಸಂಬಂಧದಲ್ಲಿ ಉಳಿದುಕೊಳ್ಳಲು ಬಯಸುವುದಿಲ್ಲ. ಪ್ರೀತಿ ಎನ್ನುವುದು ಯಾವತ್ತೂ ನೋವಿನ ವಿಚಾರವಾಗಿರಬಾರದು.

Most Read:ಕೊನೆಗೂ ತನ್ನ ಹಿಂದಿನ ಸೆಕ್ಸ್ ಲೈಫ್ ಬಗ್ಗೆ ಪತಿಗೆ ತಿಳಿದು ಹೋಯಿತು!

ಯಾವುದರ ಬಗ್ಗೆಯೂ ಅತಿಯಾಗಿ ಚಿಂತಿಸಬೇಡಿ!

ಯಾವುದರ ಬಗ್ಗೆಯೂ ಅತಿಯಾಗಿ ಚಿಂತಿಸಬೇಡಿ!

ಸಂಬಂಧದಿಂದ ನಿಮಗಿಬ್ಬರಿಗೆ ಕೆಲವೊಂದು ಸಾಮಾನ್ಯ ವಾಗಿರುವಂತಹ ನಿರೀಕ್ಷೆಗಳು ಇರಬಹುದು. ಆದರೆ ನಿಮ್ಮ ನಿಯಂತ್ರಣದಲ್ಲಿ ಇಲ್ಲದೆ ಇರುವಂತಹ ವಿಚಾರಗಳ ಬಗ್ಗೆ ಅತಿಯಾಗಿ ಆಲೋಚನೆ ಮಾಡುವುದು ಸರಿಯಲ್ಲ. ಹಿಂದಿನ ವರ್ಷಗಳಲ್ಲಿ ಏನು ನಡೆದಿದೆ ಮತ್ತು ಮುಂದಿನ ವರ್ಷಗಳಲ್ಲಿ ಏನು ನಡೆಯಬಹುದು ಎಂದು ಅತಿಯಾಗಿ ಚಿಂತಿಸುವುದನ್ನು ನೀವು ಬಿಟ್ಟು ಬಿಡಬೇಕು. ಜತೆಯಾಗಿ ನೀವು ಒಂದು ಒಳ್ಳೆಯ ಸುಂದರ ಭವಿಷ್ಯವನ್ನು ನಿರೀಕ್ಷೆ ಮಾಡಿ. ಆದರೆ ಅವಾಸ್ತವಿಕ ನಿರೀಕ್ಷೆಗಳ ಬಗ್ಗೆ ಅತಿಯಾಗಿ ಚಿಂತೆ ಮಾಡುತ್ತಾ ಕುಳಿತುಕೊಳ್ಳಬೇಡಿ.

ಪ್ರೀತಿ ಮತ್ತೆ ಮೂಡಬಹುದು

ಪ್ರೀತಿ ಮತ್ತೆ ಮೂಡಬಹುದು

ಪ್ರೀತಿ ಎನ್ನುವುದು ಒಂದೇ ಸಲ ಮೂಡಿ ಮಾಯವಾಗಲ್ಲ. ಇದು ಎಷ್ಟು ಸಲ ಬೇಕಿದ್ದರೂ ಮೂಡಬಹುದು. ಮೊದಲ ಪ್ರೀತಿ ಎನ್ನುವುದು ಶ್ರೇಷ್ಠ ಪ್ರೀತಿ, ನಿಜವಾದ ಪ್ರೀತಿಯು ಜೀವಮಾನದಲ್ಲಿ ಒಂದು ಸಲ ಮಾತ್ರ ನಡೆಯುವುದು ಎಂದು ಭಾವಿಸಿಕೊಂಡು ಕೆಲವು ಜನರು ಜೀವಮಾನವಿಡಿ ಪ್ರೀತಿ ಇಲ್ಲದೆ

ಬದುಕುವರು. ಹೃದಯ ಒಡೆದರೆ ನಿಮಗೆ ಮತ್ತೆ ಪ್ರೀತಿ ಸಿಗಬಾರದು ಎಂದೇನಿಲ್ಲ. ನಿಮಗೆ ಮತ್ತೆ ಬೇರೊಬ್ಬರ ಪ್ರೀತಿಯು ಸಿಗುವುದು. ನಿಮಗೆ ಮೊದಲ ಪ್ರೀತಿಯಲ್ಲೇ ಜೀವನದ ಸಂಗಾತಿಯು ಸಿಕ್ಕಿದ್ದರೆ, ಆಗ ನಿಮಗೆ ಅಭಿನಂದನೆಗಳು. ನಿಮಗೆ ಹೀಗೆ ಜೀವನ ಸಂಗಾತಿಯು ಸಿಗದೆ ಇದ್ದರೆ ಆಗ ನೀವು ಇನ್ನು ಸ್ವಲ್ಪ ಹುಡುಕಾಟ ಮಾಡಿದರೆ ಖಂಡಿತವಾಗಿಯೂ ಸಿಗುವರು. ಕಾದು ನೋಡಿ.

English summary

Falling in love? Here’s something you should know

Most of us associate the idea of falling in love with dreamy dates, emotional bliss, intimacy and a happily-ever-after life, right? But unlike what we see in romantic Bollywood movies, relationships require immense hard work. It takes continuous efforts from both the partners to make it successful, and it’s definitely not a cakewalk. If you are falling in love head over heels with someone, here are a few things you should keep in mind before entering into a relationship.
X
Desktop Bottom Promotion