Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಪುರುಷರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳು
ವೈವಾಹಿಕ ಜೀವನದಲ್ಲಿ ಸಂಬಂಧವು ಸುಗಮವಾಗಿ ಸಾಗಬೇಕಾದರೆ ಕೆಲವೊಂದು ಸೂತ್ರಗಳು ಇವೆ. ಇದರಲ್ಲಿ ಮುಖ್ಯವಾಗಿ ಲೈಂಗಿಕ ಸಂಬಂಧವು ಒಂದಾಗಿದೆ. ಪ್ರೀತಿ, ಪ್ರೇಮ, ಬೆಸುಗೆಯ ಕೊನೆಯ ಹಂತವೇ ಲೈಂಗಿಕ ಕ್ರಿಯೆ. ಇದು ಪುರುಷ ಹಾಗೂ ಮಹಿಳೆಯ ಜೀವನದಲ್ಲಿ ಅತೀ ಅಗತ್ಯವಾಗಿರುವುದು. ಲೈಂಗಿಕಾಸಕ್ತಿ ಇಲ್ಲದೆ ಇದ್ದರೆ ಆಗ ಸಮಸ್ಯೆಗಳು ಬರುವುದು. ಆದರೆ ಕೆಲವೊಂದು ಸಲ ಪುರುಷರ ಲೈಂಗಿಕ ಆಸಕ್ತಿ ಮೇಲೆ ಕೆಲವೊಂದು ಅಂಶಗಳು ಪರಿಣಾಮ ಬೀರುವುದು.
ಇದರಿಂದಾಗಿ ಪುರುಷರಲ್ಲಿ ಕಾಮಾಸಕ್ತಿಯು ಕಡಿಮೆಯಾಗುವುದು. ಇದರಿಂದ ಆತನ ಭಾವನೆಗಳು ಮತ್ತು ಹಾರ್ಮೋನುಗಳು ತುಂಬಾ ಕ್ರಿಯಾತ್ಮಕವಾಗಿ ಭಾಗಿಯಾಗಲು ಆರಂಭಿಸುವುದು. ಪುರುಷರ ಲೈಂಗಿಕ ಶಕ್ತಿ ಮೇಲೆ ಪರಿಣಾಮ ಬೀರುವ ವಿಷಯಗಳು ಯಾವುದು ಎಂದು ನೀವು ತಿಳಿಯಿರಿ...
ಸಿಟ್ಟು
ಸಿಟ್ಟು ಪುರುಷರ ಲೈಂಗಿಕ ಜೀವನದ ಮೇಲೆ ತುಂಬಾ ಪರಿಣಾಮ ಬೀರುವುದು. ಒಂದು ಸಲ ಸಿಟ್ಟಿನ ಮೇಲೆ ನಿಯಂತ್ರಣ ಸಾಧಿಸಿದರೆ ಆಗ ಲೈಂಗಿಕ ಜೀವನವು ಉತ್ತಮವಾಗುವುದು. ನೀವು ಸಿಟ್ಟಾಗುತ್ತಲಿದ್ದರೆ ಆಗ ಜೀವನದ ಮೇಲೆ ಒತ್ತಡ ಬೀಳುವುದು. ಒತ್ತಡವು ಪುರುಷರ ಲೈಂಗಿಕ ಜೀವನಕ್ಕೆ ಒಳ್ಳೆಯದಲ್ಲ. ಇದು ಪ್ರೀತಿಗೆ ತಳಹದಿ ಹಾಕಿಕೊಡುವುದಿಲ್ಲ. ಸಿಟ್ಟನ್ನು ಬಿಟ್ಟುಬಿಡಿ ಮತ್ತು ಒತ್ತಡ ನಿಯಂತ್ರಿಸಿ. ಇದರಿಂದ ನಿಮ್ಮ ಲೈಂಗಿಕ ಜೀವನ ಉತ್ತಮವಾಗುವುದು. ಸಿಟ್ಟು ಕಾಮಾಸಕ್ತಿಯ ಮೇಲೆ ನೇರ ಪರಿಣಾಮ ಬೀರುವುದು. ಅಷ್ಟೇ ಅಲ್ಲದೆ ಮಾನಸಿಕ ಒತ್ತಡವು ತಲೆನೋವಿಗೆ ಹಾಗೂ ತಲೆಸುತ್ತುಬರುವಿಕೆಗೆ ಕಾರಣವಾಗಬಲ್ಲದು. ಮೆದುಳು ಮತ್ತು ಮನಸ್ಸಿನ
ಮೇಲೆ ಒತ್ತಡದಿ೦ದಾಗುವ ದುಷ್ಪರಿಣಾಮಗಳ ವಿಚಾರಕ್ಕೆ ಬ೦ದಾಗ, ಮಾನಸಿಕ ಒತ್ತಡವು ಸಿಟ್ಟು, ಸೆಡವು, ಕಿರಿಕಿರಿ, ಉದ್ವೇಗ, ಏಕಾಗ್ರತೆಯ ಕೊರತೆಯೊ೦ದಿಗಿನ ಅತಿ ಗಲಿಬಿಲಿಯ ರೋಗ (ADHD), ಹಾಗೂ ಕೆಲವೊಮ್ಮೆ ಉನ್ಮಾದವನ್ನೂ ಕೂಡಾ ಹುಟ್ಟುಹಾಕಬಲ್ಲದು.
ನೀಲಿಚಿತ್ರಗಳು
ಪುರುಷರು ಬಿಡದೆ ನೀಲಿಚಿತ್ರಗಳನ್ನು ನೋಡುತ್ತಲಿದ್ದರೆ ಆಗ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ. ನೀಲಿಚಿತ್ರಗಳ ವೀಕ್ಷಣೆಯಿಂದಾಗಿ ಲೈಂಗಿಕ ತೃಪ್ತಿ ಮೇಲೆ ಪರಿಣಾಮ ಬೀರುವುದು ಮತ್ತು ಆಸಕ್ತಿ ಕುಂದುವುದು. ಪ್ರತೀ ಸಲ ನೀವು ಪ್ರೀತಿಸುವಾಗ ಒಳ್ಳೆಯ ಲೈಂಗಿಕ ಜೀವನ ಬೇಕೆನ್ನುವ ಆಕಾಂಕ್ಷೆಯು ನಿಮ್ಮಲ್ಲಿ ನೀಲಿಚಿತ್ರವು ಮೂಡಿಸುವುದು. ನೀಲಿ ಚಿತ್ರ ವೀಕ್ಷಿಸುವಂತಹ ಪುರುಷರಲ್ಲಿ ಲೈಂಗಿಕ ಸಂತೋಷವು ಕಡಿಮೆಯಾಗುವುದು. ಇದರಿಂದ ಇದನ್ನು ಬಿಟ್ಟುಬಿಡಿ. ಇನ್ನು
ನೀಲಿಚಿತ್ರಗಳನ್ನು ಅತಿಯಾಗಿ ನೋಡಿಕೊಂಡರೆ ಆಗ ಅದರಿಂದ ನಿಮ್ಮ ವೈವಾಹಿಕ ಜೀವನದ ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುವುದು. ಹಸ್ತಮೈಥುನ ಮಾಡಿಕೊಳ್ಳುವ ಸಲುವಾಗಿ ಅತಿಯಾಗಿ ನೀಲಿಚಿತ್ರಗಳನ್ನು ನೋಡಿದರೆ ಆಗ ಲೈಂಗಿಕವಾಗಿ ಸಂಗಾತಿಯಿಂದ ನೀವು ದೂರವಾಗಬಹುದು. ನೀಲಿಚಿತ್ರದಲ್ಲಿ ಇರುವಂತೆ ಮಹಿಳೆ ಕೂಡ ಮಾಡಬೇಕೆಂದು ನೀವು ಬಯಸ ಬಹುದು. ಕಾಲೇಜಿನ ಹುಡುಗರು ಅತಿಯಾಗಿ ನೀಲಿಚಿತ್ರ ನೋಡುತ್ತಾರೆಂದು ಭಾವಿಸಲಾಗಿದ್ದ ಕಾಲೇಜಿನ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಈ ವಿಷಯವು ಬೆಳಕಿಗೆ ಬಂದಿದೆ. ಇದರಿಂದ ಮಹಿಳೆಯರು ಕೂಡ ಸ್ವಾಭಿಮಾನ ಕಳೆದುಕೊಳ್ಳುವರು ಮತ್ತು ಅವರ ಲೈಂಗಿಕ ತೃಪ್ತಿಯು ತುಂಬಾ ಕಡಿಮೆಯಿರುವುದು.
ಸಂವಹನ
ಸಂಗಾತಿಯೊಂದಿಗೆ ಸಂವಹನ ಮಾಡುವುದರಿಂದ ನಿಮ್ಮ ಲೈಂಗಿಕ ಜೀವನದ ಮೇಲೆ ತುಂಬಾ ಪರಿಣಾಮ ಬೀರುವುದು. ಲೈಂಗಿಕವಾಗಿ ಮಾತನಾಡುವಂತಹ ಜನರು ಲೈಂಗಿಕ ಜೀವನದಲ್ಲಿ ಒಳ್ಳೆಯ ಅನುಭವ ಪಡೆಯುವರು. ಒಳ್ಳೆಯ ಸಂವಹನ ಹೊಂದಿರುವಂತಹ ಸಂಗಾತಿಗಳಲ್ಲಿ ಲೈಂಗಿಕ ತೃಪ್ತಿಯು ಹೆಚ್ಚಾಗಿರುವುದು. ಇದು ಹಾಸಿಗೆಯಲ್ಲಿ ಆಕಾಂಕ್ಷೆ ಮತ್ತು ಆದ್ಯತೆಯನ್ನು ವ್ಯಕ್ತಪಡಿಸಲು ನೆರವಾಗುವುದು ಮತ್ತು ಪರಸ್ಪರರ ಲೈಂಗಿಕ ಇತಿಹಾಸ ತಿಳಿದುಕೊಂಡರೆ ಅದರಿಂದ ತುಂಬಾ ನೆರವಾಗುವುದು. ಒಳ್ಳೆಯ ಸಂಬಂಧವು ಸಂವಹನ ಮೇಲೆ ನಿಂತಿದ್ದು, ಕೇಳುವುದು ಇದರಲ್ಲಿ ಪ್ರಮುಖ ಅಂಶ. ಸಂಗಾತಿಗಳಿಬ್ಬರು ಮಾತನಾಡಲು ಸಾಧ್ಯವಿಲ್ಲ. ಒಬ್ಬರು ಮಾತನಾಡುವಾಗ ಮತ್ತೊಬ್ಬರು ಕೇಳಬೇಕು. ಆದರೆ ಒಬ್ಬನೇ ವ್ಯಕ್ತಿ ಯಾವಾಗಲೂ ಮಾತನಾಡುತ್ತಿದ್ದರೆ ಆಗ ಅದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು. ನೀವು ಸಂಗಾತಿ ಮಾತನಾಡುವಾಗ ಕೇಳಬೇಕು ಮತ್ತು ಅವರ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೆ ಎಂದು ತೋರಿಸಬೇಕು. ಅಲ್ಲದೆ ಸಂಗಾತಿಗೆ ತಮ್ಮ ಭಾವನೆ, ಆಲೋಚನೆಗಳನ್ನು ಹೇಳುವುದು ಪ್ರತಿಯೊಬ್ಬರಿಗೆ ಸ್ವಾಭಾವಿಕವಾಗಿ ಬರುವುದಿಲ್ಲ. ಆರಂಭದಲ್ಲಿ ಸ್ವಲ್ಪ ಪ್ರಯತ್ನಸಿದರೆ ಬಳಿಕ ಇದು ಸುಲಭ ಹಾಗೂ ಸ್ವಾಭಾವಿಕ ವಾಗುತ್ತದೆ. ನೀವು ಕೇಳಿದಷ್ಟು ಮಾತನಾಡುವ ಸಮಯವು ಇದೆ. ಮಾತುಕತೆ ಆರಂಭಿಸಲು ನಿಮ್ಮ ದಿನ ಅಥವಾ ಕಚೇರಿಯಲ್ಲಿ ನಡೆದಿರುವ ಯಾವುದಾದರೂ ಘಟನೆ ಇತ್ಯಾದಿ ಬಗ್ಗೆ ಮಾತನಾಡಬಹುದು.
ಸ್ವಾಭಿಮಾನ
ಆತ್ಮವಿಶ್ವಾಸವು ಪುರುಷರ ಲೈಂಗಿಕ ಜೀವನದ ಮೇಲೆ ನೇರ ಪರಿಣಾಮ ಬೀರುವುದು. ನಿಮ್ಮ ಬಗ್ಗೆ ಉತ್ತಮ ಭಾವನೆಯಿದ್ದರೆ ಲೈಂಗಿಕ ಜೀವನವು ಅದ್ಭುತವಾಗಿರುವುದು. ನಿಮ್ಮಲ್ಲಿ ಆತ್ಮಾಭಿಮಾನವು ಕಡಿಮೆಯಿದ್ದರೆ ಆಗ ನಿಮ್ಮ ಲೈಂಗಿಕ ತೃಪ್ತಿಯು ಕುಗ್ಗುವುದು. ಅಸುರಕ್ಷತೆಯಿಂದಾಗಿ ನಿಮಗೆ ಆನಂದಿಸಲು ಸಾಧ್ಯವಾಗಲ್ಲ.
ವಯಸ್ಸು
ವಯಸ್ಸು ಎನ್ನುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ ಮತ್ತು ಇದು ನಿಮ್ಮ ಲೈಂಗಿಕ ಜೀವನದ ಮೇಲೆ ಕೂಡ ಪರಿಣಾಮ ಬೀರುವುದು. ನಿಮಗೆ ವಯಸ್ಸಾಗುತ್ತಾ ಹೋದಂತೆ ಲೈಂಗಿಕ ಆಸಕ್ತಿಯು ಕಡಿಮೆಯಾಗುವುದು. ವಯಸ್ಸಾಗುತ್ತಾ ಹೊದಂತೆ ಕೆಲವೊಂದು ಅನಾರೋಗ್ಯ ಮತ್ತು ದೈಹಿಕ ಸಮಸ್ಯೆಗಳು ಭಾದಿಸುವ ಕಾರಣದಿಂದ ಲೈಂಗಿಕಾಸಕ್ತಿ ಕಡಿಮೆಯಾಗುವುದು.
ಲೈಂಗಿಕ ಕ್ರಿಯೆ ಆವರ್ತನ
ಲೈಂಗಿಕ ಕ್ರಿಯೆಯ ಆವರ್ತನವು ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಿಸುವುದು. ಇದು ನಿಮಗೆ ತೃಪ್ತಿ ನೀಡುವುದು ಮತ್ತು ಹೆಚ್ಚು ಲೈಂಗಿಕ ಕ್ರಿಯೆ ನಡೆಸಿ, ತೃಪ್ತಿಯ ಮಟ್ಟವು ಹೆಚ್ಚುವಂತೆ ಮಾಡುವುದು. ಆವರ್ತನ ಮತ್ತು ಸ್ಥಿರತೆಯು ಸಂಬಂಧದಲ್ಲಿ ತುಂಬಾ ಮುಖ್ಯ. ಇದು ಆಕಾಂಕ್ಷೆಯನ್ನು ಹೆಚ್ಚಿಸುವುದು.
ಅನ್ಯೋನ್ಯತೆ
ಸಂಗಾತಿ ಜತೆಗಿನ ಜಗಳವನ್ನು ದೂರವಿಟ್ಟು ನೀವು ಹೊಸ ಹೊಸ ವಿಧಾನ ಹಾಗೂ ಭಂಗಿಗಳನ್ನು ಲೈಂಗಿಕ ಕ್ರಿಯೆ ವೇಳೆ ಪ್ರಯತ್ನಿಸಬೇಕು. ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಾಗಿದ್ದಂತೆ ಇದು ದಂಪತಿಯು ತೃಪ್ತಿಯ ಮಟ್ಟವನ್ನು ಬೇಗನೆ ತಲುಪಲು ನೆರವಾಗುವುದು.
ಆರ್ಥಿಕ ಸ್ಥಿತಿಗತಿ
ಲೈಂಗಿಕ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಆರ್ಥಿಕ ಸ್ಥಿತಿಗತಿಯು ತುಂಬಾ ಪ್ರಾಮುಖ್ಯತೆ ಪಡೆಯುವುದು. ಸುಶಿಕ್ಷಿತ ಪುರುಷರು ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಲ್ಲಿದ್ದರೆ ಅವರ ಲೈಂಗಿಕ ಜೀವನವು ಆರ್ಥಿಕ ಸ್ಥಿತಿ ಕಡಿಮೆ ಇರುವವರಿಗಿಂತ ಉತ್ತಮವಾಗಿರುತ್ತದೆ.
ಲೈಂಗಿಕ ಅಪರಾಧ
ಪುರುಷರ ಲೈಂಗಿಕ ಜೀವನದಲ್ಲಿ ಇದು ಮತ್ತೊಂದು ಪ್ರಮುಖ ಅಂಶವಾಗಿದೆ. ಲೈಂಗಿಕ ಅಪರಾಧದಿಂದ ವ್ಯಕ್ತಿಯು ಬಳಲುತ್ತಲಿದ್ದರೆ ಆಗ ಆತನಲ್ಲಿ ಲೈಂಗಿಕ ಸಂತೋಷವು ಕಡಿಮೆಯಾಗುವುದು. ಲೈಂಗಿಕ ಅಪರಾಧಿ ಅಥವಾ ನಕಾರಾತ್ಮಕ ಭಾವನೆಗಳಿಂದ ಬಳಲುತ್ತಿರುವಂತಹ ವ್ಯಕ್ತಿಯು ಸಂತೋಷ ಪಡುವುದಿಲ್ಲ. ಮದುವೆಗೆ ಮೊದಲಿನ ಲೈಂಗಿಕ ಕ್ರಿಯೆಯು ಅನೈತಿಕ ಎಂದು ಭಾವಿಸುವಂತಹ ಪುರುಷರು ಸಾಮಾಜಿಕವಾಗಿ ಮುಕ್ತವಾಗಿರುವವರಿಗಿಂತ ಲೈಂಗಿಕ ಸಂತೋಷ ಕಡಿಮೆ ಪಡೆಯುವರು. ಪುರುಷರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವಂತಹ ವಿಷಯಗಳು ಇವು. ಇದರ ಬಗ್ಗೆ ಕೆಲಸ ಮಾಡಿ ಮತ್ತು ನಿಮ್ಮ ಲೈಂಗಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ ಮತ್ತು ಪ್ರತಿದಿನವನ್ನು ನೀವು ಆನಂದಿಸಬಹುದು. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ನಾಲ್ಕಕ್ಷರ ಬರೆಯಲು ಮರೆಯಬೇಡಿ.