For Quick Alerts
ALLOW NOTIFICATIONS  
For Daily Alerts

ಪುರುಷರಿಗಿಂತ ಮಹಿಳೆಯರೇ ಯಾಕೆ ಹೆಚ್ಚು ಭಾವುಕರಾಗಿರುತ್ತಾರೆ?

By Sushma Charhra
|

ಮಹಿಳೆಯರನ್ನು ಯಾವಾಗಲೂ ಅತೀ ಹೆಚ್ಚು ಭಾವುಕರು ಮತ್ತು ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದೇ ಎಲ್ಲರೂ ಹೇಳುತ್ತಾರೆ. ಅದು ನಿಜ ಕೂಡ. ಹೌದು, ಪುರುಷರಂತೆ ಮಹಿಳೆಯರು ಆಲೋಚಿಸುವುದೇ ಇಲ್ಲ. ಪುರುಷರು ಹೇಗೆ ಆಲೋಚಿಸುತ್ತಾರೋ ಅದರ ವಿರುದ್ಧವಾಗೇ ಮಹಿಳೆಯರು ಆಲೋಚಿಸುವುದು ಹೆಚ್ಚು. ಅಷ್ಟೇ ಅಲ್ಲ, ಪುರುಷರು ಮಹಿಳೆಯರಿಗೆ ಹೋಲಿಸಿದರೆ ಭಾವನೆಯ ವಿಚಾರದಲ್ಲಿ ಬಹಳ ಕಡಿಮೆ ಭಾವುಕರಾಗುತ್ತಾರೆ ಯಾಕೆಂದರೆ ಅವರದ್ದು ಒಂದು ರೀತಿ ಮೇಲ್ದರ್ಜೆಯ ಆಲೋಚನೆಗಳು. ಪುರುಷರನ್ನು ಮತ್ತು ಮಹಿಳೆಯರು ಬಾಲ್ಯದಲ್ಲಿ ಅವರ ಪೋಷಕರು ನೋಡುವ ರೀತಿಯೂ ಬೇರೆಯದ್ದೇ ಆಗಿರುತ್ತದೆ.

ಮಹಿಳೆಯರು ತಾಳ್ಮೆ ಉಳ್ಳವರು, ಜಾಗರೂಕತೆಯಿಂದ ಕಾಯುವವರು,ಶಾಂತ ಸ್ವಭಾವದವರು. ಆದರೆ ಪುರುಷರು ಹಾಗಲ್ಲ. ತುಂಬಾ ಚಟುವಟಿಕೆಯಿಂದ ಕೂಡಿರುತ್ತಾರೆ, ಭಾವುಕರಾಗಿರುವುದಿಲ್ಲ, ನೇರನುಡಿಯನ್ನು ಮಾತನಾಡುತ್ತಾರೆ. ಈ ವ್ಯತ್ಯಾಸವು ಅವರ ಜೀವನದ ಉದ್ದಕ್ಕೂ ನಡೆಯುತ್ತಲೇ ಇರುತ್ತೆ. ಪುರುಷರಿಗೆ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಯಾಕೆಂದರೆ ಅವರು ಮಹಿಳೆಯರ ಹಾಗೆ ಯೋಚಿಸುವುದಿಲ್ಲ. ಮಹಿಳೆಯರು ಸಾಮಾನ್ಯವಾಗಿ ಭಾವನೆಗಳ ಆಧಾರದಲ್ಲಿ ಆಲೋಚಿಸುತ್ತಾರೆ. ಹಾಗಾಗಿ ಪ್ರತಿಯೊಂದರಲ್ಲೂ ಅವರದ್ದು ಬೇರೆಯದ್ದೇ ರೀತಿಯ ಮನಸ್ಥಿತಿಗಳಿರುತ್ತೆ. ಹಾಗಾಗಿ ಪ್ರತಿಯೊಂದರಲ್ಲೂ ಅವರದ್ದು ಬೇರೆಯದ್ದೇ ರೀತಿಯ ಮನಸ್ಥಿತಿಗಳಿರುತ್ತೆ.

ಮಹಿಳೆಯರು ಭಾವುಕರು

ಪುರುಷರು ಅವರದ್ದೇ ಆದ ಒಂದು ಪ್ರಪಂಚದಲ್ಲಿರುತ್ತಾರೆ ಮತ್ತು ಸಾಕಷ್ಟು ನೇರನುಡಿಯ ಸ್ವಭಾವದಿಂದ ಕೂಡಿರುತ್ತಾರೆ. ಆದರೆ ಮಹಿಳೆಯರು ಮುಗ್ಧರು. ಯಾರಾದರೂ ಏನನ್ನಾದರೂ ಹೇಳಿದರೆ ಬೇಗನೆ ನೋವನುಭವಿಸುತ್ತಾರೆ ಇಲ್ಲವೇ ಪರಿತಪಿಸುತ್ತಾರೆ. ಮಹಿಳೆಯರ ಪ್ರಮುಖ ಬೇಡಿಕೆ ಏನೆಂದರೆ ಅವರ ಸುತ್ತಮುತ್ತಲಿನವರು ಅವರನ್ನು ಪ್ರೀತಿಸಬೇಕು ಮತ್ತು ಕೇರ್ ಮಾಡಬೇಕು. ಮಹಿಳೆಯರು ಹೇಗೆಂದರೆ ಅವರನ್ನು ಅತಿಯಾಗಿ ಪ್ರೀತಿಸುವ ಮತ್ತು ಅವರನ್ನು ಪೋಷಿಸುವ ಸಂಗಾತಿಗಾಗಿ ಹಂಬಲಿಸುತ್ತಾರೆ. ಅಂತವರಿಗಾಗಿ ಇವರು ತಮ್ಮದೆಲ್ಲವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ.

ಈ ಕೆಳಗಿನ ಪ್ರಮುಖ ಕಾರಣಗಳಿಂದಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವುಕರಾಗಿರುತ್ತಾರೆ ಎಂದು ಹೇಳಬಹುದು.

ಮಹಿಳೆಯರು ಬಹಳ ಕಾಳಜಿವುಳ್ಳವರು

ಮಹಿಳೆಯರು ಬಹಳ ಕಾಳಜಿವುಳ್ಳವರು

ಮಹಿಳೆಯರು ಯಾವಾಗಲೂ ಬಹಳ ಕಾಳಜಿ ಉಳ್ಳವರಾಗಿದ್ದಾರೆ ಅದು ಮೊದಲಿನಿಂದಲೂ ನಡೆದುಬಂದಿರುವುದು. ಹುಟ್ಟು ಸ್ವಭಾವ ಎಂದೇ ಹೇಳಬಹುದು. ಮಹಿಳೆಯರ ದೇಹದಲ್ಲಿನ ಕೆಲವು ಹಾರ್ಮೋನುಗಳೇ ಅವರನ್ನು ಕಾಳಜಿವುಳ್ಳರನ್ನಾಗಿ ಪರಿವರ್ತಿಸುವ ಕೆಲಸವನ್ನು ಅವರಿಗೆ ವಯಸ್ಸಾದಂತೆ ನಡೆಯುತ್ತಿರುತ್ತೆ. ಪ್ರಮುಖವಾಗಿ ಮಹಿಳೆಯು ತಾಯಿಯಾದಾಗ ಅವಳಲ್ಲಿನ ಕೆಲವು ಹಾರ್ಮೋನುಗಳ ಬದಲಾವಣೆಯು ಆಕೆಯನ್ನು ಕಾಳಜಿವುಳ್ಳ ಮಹಿಳೆಯನ್ನಾಗಿ ಬದಲಾಯಿಸಿಬಿಡುತ್ತೆ. ಅವರು ಯಾವಾಗಲೂ ತಮ್ಮವರ ಕೆಟ್ಟ ಮತ್ತು ಒಳ್ಳೆಯ ಸಂದರ್ಭದಲ್ಲೆಲ್ಲಾ ಜೊತೆಗಿದ್ದು ಕಾಳಜಿ ವಹಿಸುತ್ತಾರೆ. ಆದರೆ ಈ ಪ್ರವೃತ್ತಿಯು ಪುರುಷರಲ್ಲಿ ಬಹಳ ಕಡಿಮೆ. ಅವರು ಹೋರಾಟದ ಬದುಕನ್ನು ಅಳವಡಿಸಿಕೊಂಡಿರುತ್ತಾರೆ. ಯಾರಾದರೂ ಅವರ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಪುರುಷರು ಸುಲಭವಾಗಿ ಕೋಪಗೊಳ್ಳುತ್ತಾರೆ. ಆದರೆ ಮಹಿಳೆಯರು ಅವರನ್ನು ಯಾರೇ ನೋಯಿಸಿದರೂ ಅವರ ಬಗ್ಗೆ ಹೊಟ್ಟೆಯೊಳಗೆ ದ್ವೇಷವಿದ್ದರೂ ಸಹಾಯ ನೀಡಲು ಮುಂದಾಗುವ ಸ್ವಭಾವ ಹೊಂದಿರುತ್ತಾರೆ. ಯಾವುದೇ ವ್ಯಕ್ತಿಯನ್ನು ಬಿಟ್ಟುಬಿಡುವುದು ಮಹಿಳೆಯರಿಗೆ ಅಷ್ಟು ಸುಲಭದ ವಿಚಾರವಾಗಿರುವುದಿಲ್ಲ. ಆಕೆ ತನ್ನ ಬಗ್ಗೆ ಯೋಚಿಸುವುದಕ್ಕಿಂತ ಮತ್ತೊಬ್ಬರ ಬಗ್ಗೆಯೇ ಯೋಚಿಸುತ್ತಾಳೆ. ಅದಕ್ಕಾಗಿ ಅವರು ಯಾವತ್ತು ನಾಚಿಕೆ ಪಟ್ಟುಕೊಳ್ಳುವುದಿಲ್ಲ ಮತ್ತು ಬೇಸರಿಸಿಕೊಳ್ಳುವುದಿಲ್ಲ.

ಮಹಿಳೆಯರು ಕನಸುಗಾರರು

ಮಹಿಳೆಯರು ಕನಸುಗಾರರು

ಮಹಿಳೆಯರು ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ತಮ್ಮ ಸುತ್ತಲಿನ ಪ್ರಪಂಚ ಹೀಗಿರಬೇಕು ಎಂದು ಭಾವಿಸುತ್ತಾರೆ. ಆ ಕನಸಿನಲ್ಲಿ ತನ್ನ ಪ್ರಿಯತಮನಿಂದ ಹಿಡಿದು ಕುಟುಂಬ, ಕುಟುಂಬದ ಪ್ರತಿಯೊಬ್ಬ ಸದಸ್ಯರು, ಅವರ ಹತ್ತಿರದವರು ಎಲ್ಲರೂ ಇರುತ್ತಾರೆ., ಒಟ್ಟಾರೆಯಲ್ಲಿ ಅವರ ಉದ್ದೇಶವೇನೆಂದರೆ ಎಲ್ಲರೂ ಖುಷಿಯಾಗಿ ಇರುವುದು. ಅವರು ಕನಸುಗಳಿಗೆ ಯಾವುದೇ ತಡೆಗೋಡೆಗಳಿರುವುದಿಲ್ಲ.

ಮಹಿಳೆಯರು ಮುಗ್ಧರು

ಮಹಿಳೆಯರು ಮುಗ್ಧರು

ಪ್ರತಿಯೊಬ್ಬ ಮಹಿಳೆಯರೂ ಕೂಡ ಮುಗ್ಧರಾಗಿರುತ್ತಾರೆ ಮತ್ತು ಸೂಕ್ಷ್ಮ ಹೃದಯಿಗಳಾಗಿರುತ್ತಾರೆ. ಅವರು ವ್ಯಕ್ತಿಗಳನ್ನ ಬಹಳ ಸುಲಭದಲ್ಲಿ ನಂಬುತ್ತಾರೆ. ಒಂದು ವೇಳೆ ಅವರು ನಂಬಿಕೆಗೆ ಅರ್ಹರಲ್ಲ ಎಂದು ತಿಳಿದರೆ ಭಾರೀ ಆಘಾತಕ್ಕೆ ಒಳಗಾಗುತ್ತಾರೆ. ಒಮ್ಮೆ ಪುರುಷನಿಂದ ಮೋಸಕ್ಕೆ ಒಳಗಾದಳೆಂದರೆ ಆಕೆ ಆ ನೋವಿನಿಂದ ಹೊರಬರುವುದು ಬಹಳ ಕಷ್ಟ ಮತ್ತು ಮತ್ತೆ ತನ್ನ ಪೂರ್ಣ ಹೃದಯದಿಂದ ಮತ್ತೊಬ್ಬ ಪುರುಷನನ್ನು ನಂಬಲು ಆಕೆ ಹಿಂದೇಟು ಹಾಕುತ್ತಾಳೆ. ಮಹಿಳೆಯರು ಯಾವಾಗಲೂ ಧನಾತ್ಮಕವಾಗಿರುತ್ತಾರೆ ಮತ್ತು ಧನಾತ್ಮಕ ಅಂಶಗಳನ್ನು ಸಾರುತ್ತಿರುತ್ತಾರೆ. ಯಾವಾಗಲೂ ಒಳ್ಳೆಯದನ್ನೇ ಬಯಸುತ್ತಾರೆ.

ಮಹಿಳೆಯರು ಭಾವನೆಗಳನ್ನು ಹೊರಹಾಕುತ್ತಾರೆ

ಮಹಿಳೆಯರು ಭಾವನೆಗಳನ್ನು ಹೊರಹಾಕುತ್ತಾರೆ

ಒಬ್ಬ ಮಹಿಳೆ ಬೇಸರದಲ್ಲಿದ್ದಾಳೆ ಅಂದರೆ ಅದನ್ನು ಆಕೆಯ ಮುಖಭಾವದಿಂದಲೇ ಗುರುತಿಸಿಬಿಡಬಹುದು. ಆಕೆ ದುಃಖದಲ್ಲಿದ್ದಾಳೆ ಅಂದರೆ, ಏನೋ ಯಡವಟ್ಟಾಗಿ ಅಂತಲೇ ಅರ್ಥ. ಮಹಿಳೆಯರು ತಮ್ಮ ಭಾವನೆಗಳನ್ನು ಹೊರಹಾಕುವುದು ಬೇಗ ಮತ್ತು ದುಃಖವನ್ನು ಅವರ ಮುಖದಿಂದ ಮರೆಮಾಚುವುದು ಅವರಿಗೆ ಬಹಳ ಕಷ್ಟ ಯಾಕೆಂದರೆ ಅವರು ಮುಗ್ಧರು. ಆದರೆ ಪುರುಷರು ಇದರ ವಿರುದ್ಧವಾಗಿರುತ್ತಾರೆ. ಪುರುಷರು ಅವರ ಭಾವನೆಗಳನ್ನು ತಮಗೆ ಅತ್ಯಾಪ್ತರಾಗಿರುವವರ ಎದರು ಹೊರತು ಪಡಿಸಿ ಮತ್ಯಾರ ಮುಂದೆಯೂ ಹೇಳಿಕೊಳ್ಳಲಾರರು. ಕಣ್ಣೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಹಿಳೆಯರಿಗಿಲ್ಲ. ಅದರಲ್ಲೂ ಕೆಲವು ಮಹಿಳೆಯರನ್ನಂತೂ ಅಳುಮುಂಜಿಗಳು ಅಂತಲೇ ಕರೆಯಲಾಗುತ್ತೆ. ಅವರು ಬೇಸರದಲ್ಲಿದ್ದಾಗ ಅವರಿಗೆ ಬೆಂಬಲ ಬೇಕಾಗುತ್ತೆ, ಅವರನ್ನು ಪ್ರೊತ್ಸಾಹಿಸುವ ಹೃದಯಿಗಳು ಬೇಕಾಗುತ್ತೆ.

ತನ್ನ ಮೌಲ್ಯಗಳನ್ನು ಬಿಟ್ಟುಕೊಡಲು ತಯಾರಿರುತ್ತಾಳೆ.

ತನ್ನ ಮೌಲ್ಯಗಳನ್ನು ಬಿಟ್ಟುಕೊಡಲು ತಯಾರಿರುತ್ತಾಳೆ.

ಮಹಿಳೆಯರು ಮೌಲ್ಯಾಧಾರಿತವಾಗಿರುತ್ತಾರೆ. ಆದರೆ ಅವರ ಮೌಲ್ಯಗಳನ್ನು ಅವರು ಪ್ರೀತಿಸುವವರಿಗಾಗಿ ತ್ಯಾಗ ಮಾಡುವ ಸಹೃದಯಿಗಳು ಇವರು. ಆದರೆ ಅವರ ಮೌಲ್ಯಗಳನ್ನು ಯಾರಾದರೂ ನೋಯಿಸಿದರೆ ಆಗ ಮಾತ್ರ ಅವರನ್ನು ಸಮಾಧಾನಿಸುವುದು ಬಹಳ ಕಷ್ಟ., ಮಹಿಳೆಗೆ ಆಕೆಯಲ್ಲಿನ ಮೌಲ್ಯಗಳು ಮತ್ತು ಸ್ವಗೌರವವೇ ಅವಳ ಆಧಾರ ಸ್ತಂಭ. ಪ್ರತಿ ಭಾವನೆಗಳೂ ಕೂಡ ಆಕೆಯ ಮೌಲ್ಯಗಳಿಂದಲೇ ಹೊರಹೋಗುತ್ತವೆ. ಆಕೆಯ ಗೌರವಕ್ಕೆ ಧಕ್ಕೆ ಬಂದರೆ ಆಕೆ ಕುಗ್ಗಿಹೋಗುತ್ತಾಳೆ. ಆದರೆ ಆಕೆಯ ಮೌಲ್ಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವುದು ಸರ್ವೇಸಾಮಾನ್ಯವಾಗಿರುವುದು ಬೇಸರದ ಸಂಗತಿ. ಇನ್ನು ಮುಂದೆಯಾದರೂ ಅದು ನಿಲ್ಲಲಿ.

ಮಹಿಳೆಯರು ತಮ್ಮ ಭಾವನೆಗಳಿಗೆ ಮತ್ತು ಮೌಲ್ಯಗಳಿಗೆ ಬೆಲೆ ಕೊಡುವಷ್ಟು ಪುರುಷರು ಕೊಡುವುದಿಲ್ಲ. ಆದರೆ ಅವರು ತಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳಲು ಇಚ್ಛಿಸುವುದಿಲ್ಲ. ಯಾವುದೇ ಭಾವನೆಗಳಿಂದ ಅಟ್ರಾಕ್ಟ್ ಆಗದೇ ಇರುವುದು ಪುರುಷರ ಗುಣಲಕ್ಷಣ,

ಮಹಿಳೆಯರು ತಮ್ಮ ಬೇಡಿಕೆಗಳ ಬಗ್ಗೆ ಮತ್ತು ತಾವೇನು ಹೇಳುತ್ತಿದ್ದಾರೆ ಅನ್ನುವುದರ ಬಗ್ಗೆ ಜಾಗೃತರಾಗಿರುತ್ತಾರೆ. ಆದನ್ನು ಹೊರತು ಪಡಿಸಿ ಅವರು ಯಾವುದನ್ನೂ ಇಚ್ಛಿಸುವುದಿಲ್ಲ.ಒಟ್ಟಿನಲ್ಲಿ ಸಹಬಾಳ್ವೆಗೆ ಬೇಕಾಗಿರುವುದು ಪುರುಷ ಮತ್ತು ಮಹಿಳೆಯರ ನಡುವಿನ ಹೊಂದಾಣಿಕೆ ಮತ್ತು ನಂಬಿಕೆ. ಒಟ್ಟಿನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಿ, ಪ್ರೀತ್ಯಾಧಾರದಿಂದ ಇದ್ದರೆ ಅಷ್ಟೇ ಸಾಕು. ಅದುವೇ ಸುಖೀ ಜೀವನ.

Read more about: ಸಂಬಂಧ
English summary

reasons-why-women-tend-be-more-emotional-than-men

reasons-why-women-tend-be-more-emotional-than-men
X
Desktop Bottom Promotion