For Quick Alerts
ALLOW NOTIFICATIONS  
For Daily Alerts

  ಆತ ಕಳುಹಿಸುವ ಸಂದೇಶದಲ್ಲಿ ಏನಿದೆ?

  By Hemanth
  |

  ಪ್ರೇಮ ಮತ್ತು ಕಾಮದ ಮಧ್ಯೆ ಒಂದು ಸಣ್ಣ ನೂಲಿನಷ್ಟು ಅಂತರವಿದೆ. ಆದರೆ ಇಂದಿನ ದಿನಗಳಲ್ಲಿ ಇವೆರಡರ ನಡುವೆ ಯಾವುದೇ ರೀತಿಯ ವ್ಯತ್ಯಾಸ ಜನರಿಗೆ ಕಾಣುತ್ತಿಲ್ಲ. ಯುವತಿಯೊಬ್ಬಳು ಸುಂದರವಾಗಿ ಕಾಣುವ ಯುವಕನನ್ನು ತಕ್ಷಣ ಇಷ್ಟಪಟ್ಟು ಪ್ರೀತಿಸಲು ಆರಂಭಿಸಬಹುದು. ಇದು ಸಾಮಾನ್ಯ. ಯಾಕೆಂದರೆ ನಾವೆಲ್ಲರೂ ವಿರುದ್ಧ ಲಿಂಗಿಗಳಿಗೆ ಆಕರ್ಷಿತರಾಗುವುದು ಸಹಜ. ಆದರೆ ಕೆಲವೊಂದು ಸಲ ಈ ಆಕರ್ಷಣೆಯ ಹಿಂದೆ ಏನಾದರೂ ಗುಪ್ತ ಅಜೆಂಡಾ ಇದೆಯಾ ಎಂದು ಅರ್ಥ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

  ಕಚೇರಿಯಲ್ಲಿ ಅಥವಾ ಸಾಮಾಜಿಕವಾಗಿ ಬೆರೆಯುವಾಗ ಮಹಿಳೆಯರಿಗೆ ಯಾರಾದರೂ ಹುಡುಗ ಆಸಕ್ತಿ ತೋರಿಸಬಹುದು. ಆದರೆ ಇದರ ಬಗ್ಗೆ ಮರು ಯೋಚಿಸದೆ ಅವರ ಪ್ರೀತಿಯಲ್ಲಿ ಬೀಳುತ್ತಾರೆ. ಆರಂಭದಲ್ಲಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಭೇಟಿಯ ಬಳಿಕ ಎಲ್ಲಿಯಾದರೂ ಹೊರಗಡೆ ಹೋಗೋಣವೆಂದು ಆತ ಸೂಚಿಸುತ್ತಾನೆ. ನೀವಿಬ್ಬರು ಕೆಲವು ಡೇಟ್ ಗೆ ಹೋದ ಬಳಿಕ ಆತ ಪ್ರೀತಿಯ ಪ್ರಸ್ತಾಪವನ್ನಿಡುತ್ತಾನೆ ಮತ್ತು ನೀವು ಒಪ್ಪಿಕೊಳ್ಳುತ್ತೀರಿ. ಇದು ಸಾಮಾನ್ಯವಾಗಿ ಪ್ರೀತಿ ಆರಂಭವಾಗುವ ರೀತಿ.

  Guy Texts When He Wants You

  ಆದರೆ ಕೆಲವು ದಿನಗಳ ಬಳಿಕ ಹುಡುಗ ದೈಹಿಕವಾಗಿ ಜತೆಗೂಡಲು ಒತ್ತಾಯಿಸುತ್ತಾನೆ. ಇದು ತುಂಬಾ ಬೇಗವಾಯಿತು ಎಂದು ನೀವು ಭಾವಿಸುತ್ತೀರಿ. ಈ ಹಂತದಲ್ಲಿ ಆ ಹುಡುಗ ನಿಮ್ಮ ಸಂಬಂಧದ ಬಗ್ಗೆ ಎಷ್ಟು ಗಂಭೀರವಾಗಿದ್ದಾನೆ ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಆತ ಕೇವಲ ದೈಹಿಕ ಸಂಬಂಧ ಮಾತ್ರ ಬಯಸುತ್ತಿದ್ದಾನೆಯಾ ಎಂದು ಅರಿತುಕೊಳ್ಳಿ. ಕೆಲವೊಮ್ಮೆ ಮಹಿಳೆಯರು ಹುಡುಗರನ್ನು ಬೇಗನೆ ಅರ್ಥ ಮಾಡಿಕೊಳ್ಳುವರು ಮತ್ತು ಆತ ಕೇವಲ ದೈಹಿಕ ಸಂಬಂಧ ಮಾತ್ರ ಬಯಸುವುದು ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವರು. ಆತ ನಿಮ್ಮನ್ನು ನೋಡುತ್ತಿರುವ ರೀತಿ ಮತ್ತು ಕೊಡುವ ಉಡುಗೊರೆಗಳಿಂದ ಆತನಿಗೆ ಯಾವ ರೀತಿಯ ಆಸಕ್ತಿ ಇದೆ ಎಂದು ತಿಳಿಯಬಹುದು.

  Guy Texts When He Wants You

  ನೀವು ತುಂಬಾ ಸೆಕ್ಸಿಯಾಗಿ ಬಟ್ಟೆ ಧರಿಸಿದಾಗ ಆತ ದೂರುತ್ತಾನೆಯಾ? ನಿಮ್ಮನ್ನು ಮನೆಗೆ ಬಿಟ್ಟ ಬಳಿಕ ನಿಮ್ಮೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳುತ್ತಿದ್ದಾನೆಯಾ? ಹಾಗಾದರೆ ಆತ ಖಂಡಿತವಾಗಿಯೂ ದೈಹಿಕವಾಗಿ ನಿಮ್ಮನ್ನು ಬಯಸುತ್ತಿದ್ದಾನೆ ಎಂದು ಅರ್ಥ. ಹುಡುಗರ ದೈಹಿಕ ಆಸೆಯ ಲಕ್ಷಣಗಳನ್ನು ಬೇಗನೆ ಪತ್ತೆ ಹಚ್ಚಬಹುದು. ಆದರೆ ನೀವು ಪ್ರೀತಿಯಲ್ಲಿ ಕುರುಡಾಗಿದ್ದರೆ ಅದು ಕಂಡುಬರುವುದಿಲ್ಲ. ಆದರೆ ಆತ ನಿಮಗೆ ಕಳುಹಿಸುತ್ತಿರುವ ಸಂದೇಶಗಳಿಂದ ಏನು ಅರ್ಥ ಮಾಡಿಕೊಳ್ಳಬಹುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ. ಸಂದೇಶ ಕಳುಹಿಸುವುದು ಇಂದಿನ ದಿನಗಳಲ್ಲಿ ಎದುರು ನಿಂತು ಮಾತನಾಡಿದಷ್ಟೇ ಸಲೀಸಲಾಗಿದೆ. ಕೆಲವು ಸಲ ಸಂದೇಶದ ಮೂಲಕವೇ ಇಬ್ಬರ ಸಂಬಂಧದಿಂದ ದೂರವಾಗಲು ತುಂಬಾ ಸುಲಭ ವಿಧಾನ.

  ಕೆಲವೊಮ್ಮೆ ಪ್ರೇಮಿಗಳು ಹೆಚ್ಚಾಗಿ ಸಂದೇಶ ಕಳುಹಿಸುತ್ತಾರೆ. ಯಾಕೆಂದರೆ ಮಾತನಾಡಲು ಹಿಂಜರಿಕೆಯಾಗುತ್ತಿದ್ದರೆ ಇದು ತುಂಬಾ ಒಳ್ಳೆಯ ಸಾಧನವಾಗಿದೆ. ಮಹಿಳೆಯರು ಇದನ್ನು ತಮ್ಮ ದೊಡ್ಡ ಅಸ್ತ್ರವಾಗಿ ಬಳಸಿಕೊಳ್ಳಬಹುದು. ಆತ ನಿಮಗೆ ಕಳುಹಿಸುತ್ತಿರುವ ಸಂದೇಶದಿಂದ ನಿಮ್ಮನ್ನು ಆತ ನಿಜವಾಗಿಯೂ ಪ್ರೀತಿಸುತ್ತಿದ್ದಾನೆಯಾ ಎನ್ನುವುದನ್ನು ತಿಳಿಯಬಹುದು. ಆತ ನಿಮ್ಮನ್ನು ಇಷ್ಟಪಡುವ ರೀತಿ ಮತ್ತು ಆತ ನಿಮ್ಮನ್ನು ಬಯಸುವ ರೀತಿ ಎರಡೂ ಕೂಡ ಭಿನ್ನ. ಹೀಗೆ ಆತ ನಿಮಗೆ ಕಳುಹಿಸುವಂತಹ ಸಂದೇಶ ಕೂಡ ಭಿನ್ನವಾಗಿರುವುದು. ನಿಮಗೆ ಇದನ್ನು ತಿಳಿಯಲು ಕಷ್ಟವಾಗುತ್ತಾ ಇದ್ದರೆ ನಾವು ನಿಮಗೆ ಅದನ್ನು ತಿಳಿಸಿಕೊಡಲಿದ್ದೇವೆ.

  Guy Texts When He Wants You

  ಆತ ನಿಮ್ಮನ್ನು ಇಷ್ಟಪಟ್ಟಾಗ ಕಳುಹಿಸುವಂತಹ ಕೆಲವೊಂದು ಸಂದೇಶಗಳು ಇಲ್ಲಿದೆ..

  1. ಆತ ನಿಮಗೆ ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಸಂದೇಶಗಳನ್ನು ಕಳಹಿಸಲು ಎಂದಿಗೂ ಮರೆಯಲ್ಲ.

  2. ನಿಮ್ಮ ಇನ್ ಬಾಕ್ಸ್ ನಲ್ಲಿ ಐ ಮಿಸ್ ಯು' 'ನನಗೆ ನಿನ್ನನ್ನು ನೋಡಲು ಕಾಯಲು ಸಾಧ್ಯವಿಲ್ಲ.' ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ' ಸಂದೇಶಗಳು ದಿನವಿಡಿ ತುಂಬಿರುವುದು.

  3. ನಿಮ್ಮ ಆರೋಗ್ಯದ ಬಗ್ಗೆ ಆತನಿಗೆ ಕಾಳಜಿಯಿರುವುದು ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡಿದ್ದೀರಾ ಎಂದು ಕೇಳಬಹುದು.

  4. ಆತ ತನ್ನ ಕೆಲಸ ಮತ್ತು ಮೀಟಿಂಗ್ ನಲ್ಲಿ ವ್ಯಸ್ತನಾಗಿದ್ದರೂ ನಿಮ್ಮ ಸಂದೇಶಗಳಿಗೆ ಉತ್ತರ ನೀಡುವನು.

  5. ಆತ ಯಾವಾಗಲೂ ಲಭ್ಯನಿರುವನು ಮತ್ತು ನಿಮಗೆ ಬೆಸ್ಟ್ ಆಫ್ ಲಕ್' ರಾಕ್ ದ ಮೀಟಿಂಗ್ ನಂತಹ ಪ್ರೇರಣಾತ್ಮಕ ಸಂದೇಶ ಕಳುಹಿಸುವನು.

   ನಿಮ್ಮನ್ನು ದೈಹಿಕವಾಗಿ ಬಯಸುವ ಹುಡುಗ ಯಾವ ರೀತಿಯ ಸಂದೇಶ ಕಳುಹಿಸುತ್ತಾನೆಂದು ನೋಡುವ....

  1. ಆತ ಸಂದೇಶವು ಹಾಯ್ ಸೆಕ್ಸಿಯಿಂದ ಆರಂಭವಾಗುವುದು. ಆತ ತಡರಾತ್ರಿಯವರೆಗೂ ಇದೇ ರೀತಿ ಸಂದೇಶ ಕಳುಹಿಸುತ್ತಿರುವನು.

  2. ಆತ ಸೆಕ್ಸಿಯಾಗಿರುವ ಸಂದೇಶ ಕಳುಹಿಸುವಂತೆ ನಿಮ್ಮನ್ನು ಪ್ರೇರೇಪಿಸಬಹುದು.

  3. ನೀವು ಸ್ನಾನ ಮಾಡುತ್ತಾ ಇದ್ದೀರಿ ಅಥವಾ ಬಟ್ಟೆ ಬದಲಾಯಿಸುತ್ತಿದ್ದೀರಿ ಎಂದು ಹೇಳಿದಾಗ ಆತ ನಿಮ್ಮಲ್ಲಿ ಅದರ ಫೋಟೋ ಕೇಳಬಹುದು.

  Guy Texts When He Wants You

  4. ಆತನ ಸಂದೇಶಗಳು ನನಗೆ ನೀನು ಬೇಕು' ಅಥವಾ ನನಗೆ ನೀನು ಈಗಲೇ ಬೇಕು' ಎನ್ನುವಂತಹ ಸಂದೇಶಗಳಿರುವುದು.

  5. ಆತ ದಿನವಿಡಿ ನಿಮಗೆ ಲಭ್ಯವಿರುವುದೇ ಇಲ್ಲ. ಆದರೆ ತಡರಾತ್ರಿ ವೇಳೆ ಸಂದೇಶ ಕಳುಹಿಸುತ್ತಾನೆ.

  ಕೆಲವರಿಗೆ ಬದ್ಧತೆಯ ಸಂಬಂಧದ ಬಗ್ಗೆ ಭೀತಿ ಇರುತ್ತದೆ. ಆದರೆ ಸಣ್ಣ ಮಟ್ಟದ ದೈಹಿಕ ಆಕರ್ಷಣೆ ತಪ್ಪಲ್ಲ. ಆದರೆ ಇಬ್ಬರು ಕೂಡ ಇದೇ ರೀತಿ ಬಯಸಿದರೆ ಒಳ್ಳೆಯದು. ಪುರುಷರು ತಮ್ಮ ಆಕಾಂಕ್ಷೆ ಬಗ್ಗೆ ಮಾತಿನ ಮೂಲಕ ಹೇಳಿದರೆ ಆದರೆ ಹೃದಯ ಮುರಿಯುವ ಪ್ರಸಂಗ ಕಡಿಮೆ ಯಾಗಬಹುದು ಮತ್ತು ಪ್ರತಿಯೊಬ್ಬರು ಜೀವನದಲ್ಲಿ ಸಂತೋಷವಾಗಿರಬಹುದು.

  English summary

  How A Guy Texts When He Wants You

  Love is different from Lust. And there is always a thin line between them. Most people, especially today, cannot differentiate between them. Women love it when a good-looking guy suddenly seems to be interested in them. Don't we all love some extra attention from the opposite sex? But we must be aware of the hidden motive behind this attention.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more