ಅಷ್ಟಕ್ಕೂ ಮಹಿಳೆಯರೇಕೆ ಚಾಕೊಲೇಟ್ ಎಂದರೆ ಅಷ್ಟು ಇಷ್ಟಪಡುತ್ತಾರೆ?

Written By:
Subscribe to Boldsky

ಇಂದು ಪ್ರೇಮಿಗಳ ಪಾಲಿಗೆ ಚಾಕೊಲೇಟ್ ದಿನ. ಚಾಕೊಲೇಟ್ ಅನ್ನು ಯಾವುದೇ ದಿನ ತಿನ್ನಬಹುದಾದರೂ ಇದರ ಮಹತ್ವ ಸಾರಲೆಂದು ಒಂದು ದಿನ ಆಚರಿಸಿದರೆ ಏನೂ ತಪ್ಪಿಲ್ಲ. ಆದರೆ ಚಾಕೊಲೇಟ್ ಮಹಿಳೆಯರಿಗೇ ಏಕೆ ಹೆಚ್ಚು ಇಷ್ಟ? ಈ ಪ್ರಶ್ನೆಗೆ ಉತ್ತರ ಹುಡುಕಲು ತಲೆಕೆಡಿಸಿಕೊಂಡ ವಿಜ್ಞಾನಿಗಳಿಗೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೆ ಚಾಕೊಲೇಟ್ ಉಡುಗೊರೆಯಾಗಿ ನೀಡಿದಾಗ ಮಾತ್ರ ಆಕೆಯ ಕಣ್ಣುಗಳು ಹೊಳೆಯುವುದನ್ನು ನೋಡಿದರೆ ಮಾತ್ರ, ಆಕೆಯ ಹೃದಯ ಗೆಲ್ಲಲು ಇದೊಂದು ಉತ್ತಮ ಸಾಧನ ಎಂದು ಪುರುಷರಿಗೆ ತಿಳಿಸಲು ಯಾವ ವಿಜ್ಞಾನಿಯೂ ಬೇಕಾಗಿಲ್ಲ.

ಪ್ರೇಮಿಗಳ ದಿನಾಚರಣೆ ಇನ್ನೇನು ಕೆಲವೇ ದಿನಗಳ ಅಂತರದಲ್ಲಿದೆ. ಹಾಗಾಗಿ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಚಾಕೊಲೇಟ್ ಉತ್ತಮ ಬೆಂಬಲ ನೀಡಬಹುದು. ಯಾವುದೇ ಮಹಿಳೆಯನ್ನು ಓಲೈಸಲು ಗುಲಾಬಿ ಮತ್ತು ಇತರ ಹೂವುಗಳು ನೆರವಾಗುತ್ತವೆ ಎಂದು ನಮ್ಮೆಲ್ಲರಿಗೂ ಗೊತ್ತು. ಇದೇ ರೀತಿಯಾಗಿ ಚಾಕಲೇಟನ್ನು ಯಾವ ಮಹಿಳೆಯೂ ತಿರಸ್ಕರಿಸುವುದಿಲ್ಲ. ಕೆಲವು ಸಮೀಕ್ಷೆಗಳಲ್ಲಿ ಕಂಡುಕೊಂಡ ಪ್ರಕಾರ ಯುವತಿಯರು ಸ್ನೇಹಿತರಾದ ಯುವಕರಿಗಿಂತಲೂ ಹೆಚ್ಚಾಗಿ ಚಾಕಲೇಟನ್ನೇ ಇಷ್ಟಪಡುತ್ತಾರೆ. ಒಂದು ವೇಳೆ ನಿಮ್ಮ ಮನದನ್ನೆಯ ಮನ ಗೆಲ್ಲಬೇಕೆಂದಿದ್ದರೆ ಚಾಕಲೇಟನ್ನು ಉಡುಗೊರೆಯಾಗಿ ನೀಡಲು ಇಂದಿಗಿಂತ ಸೂಕ್ತವಾದ ದಿನ ಇನ್ನೊಂದಿಲ್ಲ....

ಚಾಕೊಲೇಟ್ ತುಂಬಾ ರುಚಿಕರ

ಚಾಕೊಲೇಟ್ ತುಂಬಾ ರುಚಿಕರ

ಇದರಲ್ಲಿರುವ ಕೋಕೋ ಇದರ ರುಚಿಗೆ ಪ್ರಮುಖ ಕಾರಣವಾಗಿದೆ. ಕೋಕೋ ಸೇವನೆ ಹೆಚ್ಚೂ ಕಡಿಮೆ ವ್ಯಸನಕಾರಿಯಾಗಿದೆ. ವಾಸ್ತವವಾಗಿ ಪುರುಷರೂ ಚಾಕಲೇಟನ್ನು ಇಷ್ಟಪಡುತ್ತಾರಾದರೂ ನೇರವಾಗಿ ಹೇಳಿಕೊಳ್ಳುವುದಿಲ್ಲ.

ಕೆಫೀನ್ ನಂತೆಯೇ ಪ್ರಚೋದಿಸುತ್ತದೆ!

ಕೆಫೀನ್ ನಂತೆಯೇ ಪ್ರಚೋದಿಸುತ್ತದೆ!

ಕಾಫಿ ಕುಡಿದ ಬಳಿಕ ದೇಹ ಪಡೆಯುವ ಉಲ್ಲಾಸವನ್ನು ಚಾಕೊಲೇಟ್ ತಿಂದಾಗಲೂ ಪಡೆಯಬಹುದು. ಏಕೆಂದರೆ ಇದರಲ್ಲಿರುವ ಕೆಫೀನ್ ದೇಹದಲ್ಲಿ ಸೆರೋಟೋನಿನ್ ಎಂಬ ರಸದೂತದ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಮುದಗೊಳಿಸುವ ಎಂಡಾರ್ಫಿನ್ ಗಳನ್ನು ಬಿಡುಗಡೆಗೊಳಿಸುತ್ತದೆ. ಇದು ಆಕೆಯ ಅತೀವ ಹರ್ಷವನ್ನು ನೀಡುತ್ತದೆ.

ಆಕೆಯ ಹೃದಯ ಗೆಲ್ಲಲು ಸಾಧ್ಯ!

ಆಕೆಯ ಹೃದಯ ಗೆಲ್ಲಲು ಸಾಧ್ಯ!

ಒಂದು ವೇಳೆ ಆಕೆಯ ಹೃದಯವನ್ನು ಗೆಲ್ಲುವ ಯತ್ನದಲ್ಲಿದ್ದರೆ ಚಾಕೊಲೇಟ್ ಆಕೆಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ನಿಮ್ಮ ಪ್ರೀತಿಯ ನಿವೇದನೆ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. ಅರ್ಥವಾಗಲ್ಲಿಲ್ಲವೇ? ನಿಮ್ಮ ಕನಸಿನ ರೇಸಿಂಗ್ ಬೈಕ್ ಒಂದನ್ನು ನಿಮ್ಮ ಮನದನ್ನೆ ಹಠಾತ್ತಾಗಿ ನಿಮಗೆ ಉಡುಗೊರೆಯಾಗಿ ನೀಡಿದರೆ ನಿಮಗೆ ಹೇಗಾಗಬಹುದು? ಚಾಕೊಲೇಟ್ ಆಕೆಗೆ ಅದೇ ಭಾವನೆಯನ್ನು ನೀಡುತ್ತದೆ.

ಪ್ರಣಯಕ್ಕೂ ಒಳ್ಳೆಯದು

ಪ್ರಣಯಕ್ಕೂ ಒಳ್ಳೆಯದು

ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಚಾಕೊಲೇಟ್ ಸೇವನೆಯಿಂದ ದಂಪತಿಗಳ ನಡುವಣ ಆಕರ್ಷಣೆ ಹೆಚ್ಚುತ್ತದೆ ಹಾಗೂ ಈ ಮೂಲಕ ಪ್ರೀತಿ ಹಾಗೂ ಪ್ರಣಯವೂ ಹೆಚ್ಚುತ್ತದೆ. ಸಾರ್ಥಕ ದಾಂಪತ್ಯಕ್ಕೆ ಇನ್ನೇನು ಬೇಕು? ಆಕೆಯನ್ನು ಹಲವಾರು ಚಾಕಲೇಟುಗಳ ಉಡುಗೊರೆ ನೀಡಿ, ಪ್ರತಿಯಾಗಿ ಪ್ರಣಯದ ಕೊಡುಗೆಯನ್ನು ಮರಳಿ ಪಡೆಯಿರಿ.

ಚುಂಬನ ಹಾಗೂ ಚಾಕಲೇಟು

ಚುಂಬನ ಹಾಗೂ ಚಾಕಲೇಟು

ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಕಂಡುಕೊಂಡಂತೆ ಮಹಿಳೆಯರು ತಮ್ಮ ಇನಿಯನ ಚುಂಬನಕ್ಕಿಂತಲೂ ಚಾಕಲೇಟಿಗೇ ಹೆಚ್ಚು ಒಲವು ಪ್ರಕಟಿಸುತ್ತಾರೆ. ಆದರೆ ಪುರುಷರಿಗೆ ಇದಕ್ಕೆ ವಿರುದ್ದ ಅಂದರೆ ಚಾಕಲೇಟಿಗಿಂತಲೂ ಚುಂಬನವೇ ಪ್ರಿಯವಂತೆ.

ಚಾಕೊಲೇಟ್ ಆಕೆಯ ಮನೋಭಾವವನ್ನು ಸ್ಥಿರಗೊಳಿಸುತ್ತದೆ

ಚಾಕೊಲೇಟ್ ಆಕೆಯ ಮನೋಭಾವವನ್ನು ಸ್ಥಿರಗೊಳಿಸುತ್ತದೆ

ಮಹಿಳೆಯರ ಮನೋಭಾವ ಬದಲಾಗುತ್ತಾ ಇರುತ್ತದೆ. ಅದರಲ್ಲೂ ಮಾಸಿಕ ದಿನಗಳಲ್ಲಿ ವಿಪರೀತವಾಗಿರುತ್ತದೆ. ಹಾಗಾಗಿ ಆಕೆಯ ಮನೋಭಾವ ಈ ದಿನಗಳಲ್ಲಿ ಹೆಚ್ಚು ಬದಲಾಗದೇ ಸ್ಥಿರವಾಗಿರಲು ಈ ದಿನಗಳಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಸಾಧ್ಯವಾಗುತ್ತದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ಕಂಡುಕೊಳ್ಳಲಾದರೂ ಆಕೆಗೆ ಚಾಕಲೇಟುಗಳನ್ನು ಉಡುಗೊರೆಯಾಗಿ ನೀಡಿ ಆಕೆಯ ಹೃದಯವನ್ನು ಗೆಲ್ಲಬಹುದು.

English summary

Chocolate Day: Why Women Crave For It

Today is chocolate day. In fact, any woman in love would wait for this day. Are you wondering why? Well, may be even scientists can't understand the love affair between women and chocolate. Why try to even understand the relation between them? Overwhelm your women with lots of chocolates today and win her heart. Just a few days before the most awaited Valentine's day, love is in the air and every action of yours should just 'up' the romantic mood.
Story first published: Friday, February 9, 2018, 14:01 [IST]