For Quick Alerts
ALLOW NOTIFICATIONS  
For Daily Alerts

ಈ ರಾಶಿಯವರೊಂದಿಗೆ ಡೇಟಿಂಗ್ ಮಾಡುವಾಗ ಎರಡೆರಡು ಬಾರಿ ಆಲೋಚಿಸಿ

|

ಕೆಲವು ಮಂದಿ ರೋಮ್ಯಾನ್ಸ್, ಬದ್ಧತೆ, ಮದುವೆ ಬಗ್ಗೆ ತುಂಬಾ ಆಸಕ್ತಿ ಹೊಂದಿರುವರು ಮತ್ತು ಸಂಬಂಧವನ್ನು ಕೂಡ ಅಷ್ಟೇ ಗಂಭೀರವಾಗಿ ಪರಿಗಣಿಸುವರು. ಆದರೆ ಇನ್ನು ಕೆಲವರು ಮಾತ್ರ ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿರುವರು. ಯಾಕೆಂದರೆ ಇವರು ಪ್ರೀತಿಪ್ರೇಮವೆನ್ನುವ ಲೋಕದಲ್ಲಿ ತೊಡಗಿಕೊಳ್ಳುವರಾದರೂ ಇವರಿಗೆ ಬದ್ಧತೆಯಿಂದ ಸಂಬಂಧದಲ್ಲಿ ತೊಡಗಿಕೊಳ್ಳಲು ಮಾತ್ರ ಇವರು ಸಂಪೂರ್ಣವಾಗಿ ಹಿಂಜರಿಯುವರು.

ಇವರು ಒಬ್ಬರನ್ನು ಮಾತ್ರ ತಮ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳಲ್ಲ. ಯಾಕೆಂದರೆ ಇವರಿಗೆ ಬದ್ಧತೆ ಬೇಕಿಲ್ಲ. ಆದರೆ ನಮ್ಮ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳಂತೆ ಇದು ಕೂಡ ನಮ್ಮ ರಾಶಿಚಕ್ರದ ಪ್ರಭಾವವಾಗಿದೆ. ಪ್ರೀತಿ ಹಾಗೂ ಸಂಬಂಧಗಳ ವಿಚಾರದಲ್ಲಿ ಕೂದ ಪ್ರತಿಯೊಂದು ರಾಶಿಚಕ್ರವು ಧನಾತ್ಮಕ ಹಾಗೂ ನಕರಾತ್ಮಕ ಅಂಶ ಹೊಂದಿದೆ. ನೀವು ಈ ರಾಶಿಯಚಕ್ರದವರೊಂದಿಗೆ ಡೇಟಿಂಗ್ ನಡೆಸುತ್ತಲಿದ್ದರೆ ಆಗ ನೀವು ಇವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು.

ಧನು

ಧನು

ಧನು ರಾಶಿಯವರು ಯಾವಾಗಲೂ ಸ್ವಾತಂತ್ರ್ಯವನ್ನು ಇಷ್ಟಪಡುವರು ಮತ್ತು ಸಂಬಂಧದಲ್ಲಿ ಒಳಗೊಳ್ಳುವುದು ಅವರ ರೆಕ್ಕೆಗಳನ್ನು ಕತ್ತರಿಸಿದಂತೆ ಎಂದು ಭಾವಿಸುವರು. ಈ ರಾಶಿಯವರು ಯಾವಾಗಲೂ ಹೊಸತನ್ನು ಪ್ರಯತ್ನಿಸುತ್ತಾ ಇರುವರು ಮತ್ತು ಬೇಗನೆ ಯಾವುದೇ ವಿಚಾರದಲ್ಲಿ ಬೇಸರಗೊಳ್ಳುವರು. ಅದು ಸಂಬಂಧ ಕೂಡ ಆಗಿರಬಹುದು.

ಧನು

ಧನು

ಇವರ ಸಂಗಾತಿಯು ಇವರ ವೇಗಕ್ಕೆ ಅನುಗುಣವಾಗಿ ಇರಬೇಕು ಮತ್ತು ಸಂಬಂಧವು ತುಂಬಾ ಕುತೂಹಲಕಾರಿಯಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಧನು ರಾಶಿಯವರು ಸಂಬಂಧದಿಂದ ದೂರವಾಗಲು ಎರಡನೇ ಸಲ ಯೋಚಿಸಲ್ಲ. ಅದಾಗ್ಯೂ, ಇವರು ಯಾರೊಂದಿಗಾದರೂ ಪ್ರೀತಿಯಲ್ಲಿ ಬಿದ್ದರೆ ಆಗ ಇವರು ಪ್ರೀತಿಯನ್ನು ಆನಂದಿಸುವರು ಮತ್ತು ನಂಬಿಕಸ್ಥ ಜತೆಗಾರರಾಗಿರುವರು.

Most Read: ಒನ್ ಸೈಡ್ ಲವ್ ಸಮಸ್ಯೆಯಲ್ಲಿ ಸಿಲುಕಿದ್ದೀರಾ? ಹಾಗಾದರೆ ಹೀಗೆ ಮಾಡಿ ನೋಡಿ

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ತುಂಬಾ ಭೋಗಾಕಾಸ್ತ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಅತ್ಯುತ್ಸಾಹಿಗಳು ಮತ್ತು ಜಾಣರು. ಪ್ರೀತಿಯ ವಿಚಾರದಲ್ಲಿ ಇವರು ತುಂಬಾ ನಂಬಿಕಸ್ಥರು ಎಂದು ಹೇಳಲಾಗುತ್ತದೆ.

ವೃಶ್ಚಿಕ

ವೃಶ್ಚಿಕ

ಆದರೆ ಸಂಬಂಧದ ವಿಚಾರದಲ್ಲಿ ವೃಶ್ಚಿಕ ರಾಶಿಯವರಿಗೆ ವಿಶ್ವಾಸದ ಸಮಸ್ಯೆಯಾಗುವುದು ಮತ್ತು ತಮ್ಮ ಆಯ್ಕೆ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ಇವರು ಸಂಬಂಧದಲ್ಲಿ ಮುಂದುವರಿಯುವರು. ಇವರ ಪ್ರವೃತ್ತಿಯಲ್ಲಿ ಹೆಚ್ಚು ಜಾರಿಕೊಳ್ಳುವ ಸ್ವಭಾವದವರು. ಇವರ ತಲೆಯಲ್ಲಿ ಏನು ಓಡುತ್ತಿದೆ ಎಂದು ತಿಳಿಯಲು ಸಂಗಾತಿಗೂ ಸಾಧ್ಯವಾಗಲ್ಲ.

ಕುಂಭ

ಕುಂಭ

ಕುಂಭ ರಾಶಿಯವರಿಗೆ ತಮ್ಮ ಮೇಲೆ ಯಾರಾದರೂ ಪ್ರಾಬಲ್ಯ ಸಾಧಿಸುವುದು ಇಷ್ಟವಾಗಲ್ಲ ಮತ್ತು ಇವರ ನಡತೆಯು ಯಾವಾಗಲೂ ಅನಿರೀಕ್ಷಿತವಾಗಿರುವುದು.

ಕುಂಭ

ಕುಂಭ

ಇವರು ಸಂಬಂಧದ ಬಗ್ಗೆ ಅವಾಸ್ತವಿಕ ಕಲ್ಪನೆ ಹೊಂದಿರುವರು ಮತ್ತು ನಿಜವಾದ ಜಗತ್ತಿಗೆ ಬಂದಾಗ ಇವರ ಭ್ರಮನಿರಸಗೊಳ್ಳುವರು. ಇವರು ಯಾವುದೇ ರೀತಿಯ ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸಲ್ಲ. ಸಂಗಾತಿಯು ಏನಾದರೂ ತಪ್ಪನ್ನು ಹುಡುಕಿದರೆ ಅವರಿಂದ ದೂರವಾಗಲು ಪ್ರಯತ್ನಿಸುವರು.

ಮೇಷ

ಮೇಷ

ಮೇಷ ರಾಶಿಯವರು ತಾಳ್ಮೆಯಿಲ್ಲದೆ ಇರುವ ಮತ್ತು ಹಠಾತ್ ಆಗಿ ಪ್ರತಿಕ್ರಿಯಿಸುವವರು. ಇವರ ಪರವಾಗಿ ಯಾವುದೇ ವಿಚಾರವು ಸಾಗದೆ ಇದ್ದರೆ ಆಗ ಅವರು ತಮ್ಮ ಸಂಗಾತಿಯನ್ನು ಕಡೆಗಣಿಸುವರು ಮತ್ತು ಬೇರೆ ಜತೆಗಾರರ ಹುಡುಕುವರು. ತಮ್ಮ ಸಂಗಾತಿಯಿಂದ ಉನ್ನತ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಕೂಡ ಇವರು ಸಂಬಂಧದಲ್ಲಿ ಬದ್ಧತೆ ಪ್ರದರ್ಶಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವರು.

Most Read: ಈ 4 ರಾಶಿಚಕ್ರದವರನ್ನು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕಂತೆ, ಯಾಕೆಂದರೆ ಇವರು ನಂಬಿಕೆ ದ್ರೋಹ ಮಾಡುತ್ತಾರಂತೆ!

ತುಲಾ

ತುಲಾ

ತುಲಾ ರಾಶಿಯವರು ಹೆಚ್ಚಿನ ಸ್ನೇಹಿತರನ್ನು ಹೊಂದಿರುವರು ಮತ್ತು ತುಂಬಾ ಮನರಂಜನೆ ಇಷ್ಟಪಡುವ ವ್ಯಕ್ತಿಗಳು. ಆದರೆ ಸಂಬಂಧದ ವಿಚಾರಕ್ಕೆ ಬಂದರೆ ಆಗ ಇವರು ಡೋಲಾಯಮಾನ ಮತ್ತು ಒತ್ತಡವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲದೆ ಇರುವ ವ್ಯಕ್ತಿಗಳಾಗಿರುವರು. ದೀರ್ಘಕಾಲ ಒಂದೇ ವಿಚಾರದಿಂದ ಇವರಿಗೆ ತುಂಬಾ ಬೇಸರವಾಗುವುದು ಮತ್ತು ತಮ್ಮ ನಿರ್ಧಾರ ತಪ್ಪಾದರೆ ಏನಾಗುವುದೋ ಎನ್ನುವ ಚಿಂತೆಯಲ್ಲಿ ತಮ್ಮನ್ನು ತಾವೇ ಹಿಂಸಿಸಿಕೊಳ್ಳುವರು. ಇದರಿಂದ ಸಂಬಂಧದಲ್ಲಿ ತೊಡಗುವುದು ಇವರಿಗೆ ದೊಡ್ಡ ವಿಚಾರವಾಗಿರುವುದು.

ಮೀನ

ಮೀನ

ಮೀನ ರಾಶಿಯವರು ತುಂಬಾ ಕ್ರಿಯಾತ್ಮಕ ಹಾಗೂ ಕಲ್ಪನಾತ್ಮಕ ವ್ಯಕ್ತಿಗಳಾಗಿರುವರು. ಇವರು ಜಗತ್ತನ್ನು ತಮ್ಮದೇ ದೃಷ್ಟಿಕೋನದಿಂದ ನೋಡುವರು. ಇವರನ್ನು ಒಲಿಸಿಕೊಳ್ಳುವುದು ಕಠಿಣ ಮತ್ತು ಸಂಬಂಧದ ಬಗ್ಗೆ ತಮ್ಮದೇ ಆಗಿರುವ ಕನಸನ್ನು ಹೊಂದಿರುವರು. ಇವರು ತಮ್ಮ ಆಯ್ಕೆಯನ್ನು ಮುಕ್ತವಾಗಿಟ್ಟುಕೊಳ್ಳುವರು. ಜೀವನದಲ್ಲಿ ಯಾವುದೇ ವಿಚಾರ (ಟಿವಿ ಸರಣಿ, ಲಿಪ್ ಸ್ಟಿಕ್, ಸಂಗಾತಿ ಆಯ್ಕೆ ಇತ್ಯಾದಿ) ಬಗ್ಗೆ ನಿರ್ಧಾರಕ್ಕೆ ಸಮಯ ತೆಗೆದುಕೊಳ್ಳುವರು.

English summary

zodiac signs that you should think twice before dating seriously

Do you ever wonder why some people are all about romance, commitment, marriage and all the rosy stuff and others are their complete opposite? The idea of commitment scares them, being flirtatious is their forte or there are times when their partner is not on their priority list. The answer to this dilemma could be their zodiac sign. When it comes to the matters of love and relationships, every star sign has its own set of positive and negative traits. In case you are dating (or planning to date) someone born under these zodiac signs, here are a few things that would help you to understand them better.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more