ಸ್ವಲ್ಪ ಆಕೆಯ ಮನಸನ್ನು ಕೂಡ ಅರ್ಥಮಾಡಿಕೊಳ್ಳಿ ಸ್ವಾಮಿ...

Posted By: Deepak M
Subscribe to Boldsky

ಸಂಬಂಧ ಎನ್ನುವುದು ನೀರಿನ ಮೇಲಿನ ಗುಳ್ಳೆಯಂತೆ. ಇದನ್ನು ಕಾಪಾಡಲು ನಂಬಿಕೆ, ಪ್ರೀತಿ, ಅನುಕಂಪ, ಕಾಳಜಿ ಇತ್ಯಾದಿ ಅಂಶಗಳು ಬೇಕಾಗುತ್ತವೆ. ಹಲವಾರು ಬಾರಿ ಪ್ರೀತಿಯೊಂದೆ ಸಾಕು ಸಂಬಂಧದ ಸೆಲೆ ಬತ್ತದಂತೆ ಕಾಪಾಡಲು. ಆದರೆ ಏನೇ ಇದ್ದರೂ, ಏನೋ ಇಲ್ಲದೆ ಇರುವ ಕಾರಣಕ್ಕಾಗಿ ಸಂಬಂಧಗಳು ಮುರಿದು ಬೀಳುತ್ತವೆ. ಅದು ಒಂದೆರಡು ತಿಂಗಳುಗಳಲ್ಲಿ ಮುರಿದು ಬಿದ್ದರೆ ಏನೋ ಹೇಳಬಹುದು. ಆದರೆ ದೀರ್ಘಾವಧಿ ಬಾಳಿ ಬದುಕಿದ ನಂತರ ಬೇರ್ಪಟ್ಟು ಸುತ್ತಲಿನವರಿಗೆ ಆಶ್ಚರ್ಯ ಮೂಡಿಸಿದವರು ನಮ್ಮ ನಿಮ್ಮ ನಡುವೆ ಎಷ್ಟು ಜನ ಇಲ್ಲ ಹೇಳಿ... 

ಆಕೆ ಈ ವಿಷಯಗಳನ್ನು ಮಾತ್ರ ತಾನಾಗಿಯೇ ಎಂದೂ ಹೇಳಲ್ಲ!

ಸಂಬಂಧದಲ್ಲಿ ಒಮ್ಮೆ ಎಲ್ಲವೂ ಸರಿಯಿಲ್ಲ ಎನಿಸಿಬಿಡುವುದು ಉಂಟು. ಅಂತಹ ಸಂದರ್ಭದಲ್ಲಿ ಸಂಗಾತಿಯನ್ನು ಒಬ್ಬರು ಉದಾಸೀನವಾಗಿ ಕಾಣುವುದು ಸಹಜ. ಅದರಲ್ಲಿ ಮಹಿಳೆಯರೇ ಈ ಪಟ್ಟಿಗೆ ಸೇರುವುದು ದುರಂತ. ಆದರೆ ಕೆಲವೊಂದು ಸಂದರ್ಭಗಳು ಇರುತ್ತವೆ. ಇದರಲ್ಲಿ ಹೆಂಗಸರು ತಾವು ತುಂಬಾ ಇಷ್ಟಪಟ್ಟ ಸಂಗಾತಿಯನ್ನು ಅವರು ಬಿಟ್ಟುಬಿಡುತ್ತಾರೆ.

ಹೆಂಡತಿಯ ಮೇಲೆ ರೇಗುವ ಪತಿ! ಹೀಗಾದರೆ ಹೇಗೆ ಹೇಳಿ?

ಇದು ಸ್ವಲ್ಪ ಆಲೋಚಿಸುವ ವಿಷಯವೇ ಸರಿ. ಪ್ರತಿ ಮಹಿಳೆಯಲ್ಲೂ ಒಬ್ಬ ತಾಯಿ ಇರುತ್ತಾಳೆ. ಆ ತಾಯಿಯಂತಹ ಮನಸ್ಸಿನಿಂದಲೇ ಆಕೆ ಒಂದು ಸಂಬಂಧವನ್ನು ಕಾಯುತ್ತಿರುತ್ತಾಳೆ. ಇಂತಹ ಸಂಬಂಧ ಮುರಿದು ಬೀಳಲು ಆ ಹೆಂಗಸೇ ನಿರ್ಧಾರ ತೆಗೆದುಕೊಂಡಿರುತ್ತಾಳೆ. ಇದಕ್ಕೆ ಕಾರಣಗಳೇನು ಎಂಬುದನ್ನು ಇಲ್ಲಿ ಚರ್ಚಿಸಿದ್ದೇವೆ ಮುಂದೆ ಓದಿ......  

ಆಕೆಗೆ ಒಂಟಿತನ ಕಾಡುತ್ತಿರುತ್ತದೆ

ಆಕೆಗೆ ಒಂಟಿತನ ಕಾಡುತ್ತಿರುತ್ತದೆ

ಇದು ಒಂದು ಹಿಂಸೆಯನ್ನು ನೀಡುವ ಅನುಭವ ಹಾಗು ಭಾವನೆಯಾಗಿರುತ್ತದೆ. ಸಂಬಂಧದಲ್ಲಿ ಒಂಟಿತನ ಕಾಡಲು ಆರಂಭಿಸಿದಾಗ ಹೆಂಗಸರಿಗೆ ಬೇಗ ಖಿನ್ನತೆ ಆವರಿಸುತ್ತದೆ. ಆಗ ಮಹಿಳೆಯರಿಗೆ ಚಿತ್ತಸ್ವಾಸ್ಥ ಹಾಳಾಗುತ್ತದೆ. ಆಕೆಗೆ ಒಂದು ಐದು ನಿಮಿಷ ಬಿಡುವು ಮಾಡಿಕೊಂಡು ನಿಮ್ಮ ಸಮಯವನ್ನು ನೀಡಿ. ಇದರಿಂದ ಆಗುವ ಬದಲಾವಣೆಗಳನ್ನು ನೀವೇ ಗಮನಿಸಿ.

ನಿರಂತರವಾದ ತಪ್ಪು ತಿಳುವಳಿಕೆಗಳು

ನಿರಂತರವಾದ ತಪ್ಪು ತಿಳುವಳಿಕೆಗಳು

ಸಂಬಂಧದಲ್ಲಿ ತಪ್ಪು ತಿಳುವಳಿಕೆಗಳು ಬರುತ್ತವೆ ಮತ್ತು ಹೋಗುತ್ತಿರುತ್ತವೆ. ಆದರೆ ನಿರಂತರವಾದ ತಪ್ಪು ತಿಳುವಳಿಕೆಗಳು ಕಾಣಿಸಿಕೊಂಡಾಗ ಸಂಬಂಧವನ್ನು ಕಡಿದುಕೊಳ್ಳುವ ಹಂತದವರೆಗೆ ಮಹಿಳೆಯರು ತೆಗೆದುಕೊಂಡು ಹೋಗುತ್ತಾರೆ.

ದೈಹಿಕ ಬಾಂಧವ್ಯದ ಕೊರತೆ

ದೈಹಿಕ ಬಾಂಧವ್ಯದ ಕೊರತೆ

ದೈಹಿಕ ಬಾಂಧವ್ಯವು ಸಂಗಾತಿಗಳನ್ನು ಹತ್ತಿರ ತರುವ ಮತ್ತು ಹಿಡಿದಿಡುವ ಒಂದು ಅಂಶವಾಗಿರುತ್ತದೆ. ದೈಹಿಕ ಆಕರ್ಷಣೆಯು ಸಹ ಪ್ರೀತಿಯ ಒಂದು ಭಾಗ. ನೀವು ನಿಮ್ಮ ಸಂಗಾತಿಯನ್ನು ದೈಹಿಕವಾಗಿ ತೃಪ್ತಿಗೊಳಿಸಿದಾಗ ಆ ಸಂಬಂಧವು ಯಾವುದೇ ತೊಂದರೆಗಳಿಲ್ಲದೆ ಮುಂದೆ ಸಾಗುತ್ತದೆ. ಆದರೆ ಅತೃಪ್ತಿಯು ಸಂಬಂಧಕ್ಕೆ ಹಾನಿಕಾರಕ. ನಿಮ್ಮ ಸಂಗಾತಿ ನಿಮ್ಮನ್ನು ಇಷ್ಟಪಡುತ್ತಿದ್ದರೂ ಸಹ ಈ ಕೊರತೆಯು ನಿಮ್ಮ ಸಂಬಂಧಕ್ಕೆ ಕೊಡಲಿ ಪೆಟ್ಟು ನೀಡುತ್ತದೆ.

ಸಂವಹನದ ಕೊರತೆ

ಸಂವಹನದ ಕೊರತೆ

ದಂಪತಿಗಳು ಸ್ನೇಹಿತರಿದ್ದಂತೆ ಇರಬೇಕು. ಕಷ್ಟ-ಸುಖ, ಸಂತೋಷ-ದುಃಖ ಎಲ್ಲವನ್ನೂ ಹಂಚಿಕೊಳ್ಳಬೇಕು. ಹಂಚಿಕೊಳ್ಳಬೇಕೆಂದರೆ ನಿಮ್ಮಿಬ್ಬರ ಸಂವಹನ ಚೆನ್ನಾಗಿ ಇರಬೇಕು. ನಾವು ಸರಿಯಾಗಿ ಮಾತನಾಡದೆ ಇದ್ದ ಪಕ್ಷದಲ್ಲಿ, ನಿಮ್ಮ ಸಂಗಾತಿಯು ಒಂದು ಬಗೆಯ ಉದಾಸೀನತೆಯ ಭಾವಕ್ಕೆ ಒಳಗಾಗುತ್ತಾರೆ. ಇದು ಸುಮ್ಮನೆ ಬರುವುದಿಲ್ಲ. ನೀವು ಅವರನ್ನು ಉದ್ದೇಶಪೂರ್ವಕವಾಗಿ ಉದಾಸೀನ ಮಾಡುತ್ತಿದ್ದೀರಿ ಎಂದು ಭಾವಿಸಿ ಅವರು ನಿಮ್ಮಿಂದ ದೂರವಾಗಬಹುದು.

ಅಭದ್ರತೆ

ಅಭದ್ರತೆ

ನಿಮ್ಮಿಂದ ಅವರಿಗೆ ಭದ್ರತೆ ಅಂದರೆ ಸಾಮಾಜಿಕ, ಆರ್ಥಿಕ, ಮಾನಸಿಕ ಹಾಗು ವೈಯಕ್ತಿಕ ಭದ್ರತೆಗಳು ದೊರೆಯುವುದಿಲ್ಲ ಎಂದು ಗೊತ್ತಾದಾಗ ಅವರು ನಿಮ್ಮಿಂದ ದೂರವಾಗಬಹುದು. ಅಸೂಯೆ, ಅನುಮಾನ ಇತ್ಯಾದಿಗಳು ಈ ಅಭದ್ರತೆಗೆ ಕಾರಣವಾಗುತ್ತದೆ. ಒಮ್ಮೆ ತನ್ನ ಸಂಗಾತಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಗೊತ್ತಾದಾಗ ಇಲ್ಲವೇ ತಮ್ಮ ಸಂಗಾತಿಯಿಂದ ತಮಗೆ ಭದ್ರತೆ ಸಿಗುವುದಿಲ್ಲ ಎಂದು ಗೊತ್ತಾದಾಗ ಮಹಿಳೆಯರು ತಮ್ಮ ಸಂಗಾತಿಯಿಂದ ದೂರವಾಗುತ್ತಾರೆ. ಅವರನ್ನು ಎಷ್ಟೇ ಪ್ರೀತಿಸಿದ್ದರೂ ಈ ವಿಚಾರದಲ್ಲಿ ಅವರು ರಾಜಿಯಾಗುವುದಿಲ್ಲ.

ಹಂಚಿಕೊಳ್ಳುವ ಭೀತಿ

ಹಂಚಿಕೊಳ್ಳುವ ಭೀತಿ

ಮಹಿಳೆಯರು ಹೇಳಿ ಕೇಳಿ ಪೊಸೆಸಿವ್‍ ಆಗಿರುತ್ತಾರೆ. ಅವರಿಗೆ ತನ್ನದು ಎನ್ನುವ ಭಾವ ಎಲ್ಲದರಲ್ಲೂ ಇರುತ್ತದೆ. ಹಾಗೆ ಒಂದು ವೇಳೆ ಅವರಿಗೆ ತನ್ನಲ್ಲಿರುವುದನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ಗೊತ್ತಾದಾಗ ಅವರಿಗೆ ಆ ಸಂಬಂಧ ನಗಣ್ಯವಾಗುತ್ತದೆ. ಈ ಹಂಚಿಕೊಳ್ಳುವಿಕೆಯು ಹಣದಿಂದ ಹಿಡಿದು ತಮ್ಮ ಆಲೋಚನೆಗಳವರೆಗೆ ಯಾವುದಾದರೂ ಆಗಿರಬಹುದು. ನಿಮ್ಮೊಂದಿಗೆ ಮಾತು ಬಿಡುವುದು ಸಹ ಇದೇ ಸಂದರ್ಭದಲ್ಲಿ. ಹಂಚಿಕೊಳ್ಳುವ ಸಂದರ್ಭ ಬಂದಾಗ ಬಹುತೇಕ ಹೆಂಗಸರು ತಮ್ಮ ಸಂಗಾತಿಯನ್ನು ತೊರೆದು ಹೋಗುತ್ತಾರೆ. ತಮಾಷೆಯೆಂದರೆ ನಿಮ್ಮನ್ನು ಸಹ ಆಕೆ ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳಲು ಇಷ್ಟವಾಗದೆ ಸಹ ಹೋಗಬಹುದು.

ಹೊಗಳಿಕೆಯ ಕೊರತೆ

ಹೊಗಳಿಕೆಯ ಕೊರತೆ

ಹೆಂಗಸರು ತಮ್ಮ ಗುರುತನ್ನು ಸಾಭೀತು ಮಾಡಲು ಸದಾ ಶ್ರಮಿಸುತ್ತಿರುತ್ತಾರೆ. ಅವರನ್ನು ಆಗಾಗ ಹೊಗಳುತ್ತಾ ಇರಬೇಕಾಗುತ್ತದೆ. ಅವರು ಮಾಡುವ ಕಾರ್ಯವನ್ನು ಗುರುತಿಸದೆ ಹೋದಲ್ಲಿ, ಅವರಿಗೆ ಅದರಿಂದ ಬೇಸರವಾಗುತ್ತದೆ. ಈ ಬೇಸರು ಒಂದೆರಡು ತಿಂಗಳಲ್ಲಿ ಹತಾಶೆಯಾಗಿ ಮಾರ್ಪಟ್ಟು ಮುಂದೆ ಅದೇ ಹತಾಶೆ ಮತ್ತು ಸಿಟ್ಟಿನಿಂದ ಅವರು ನಿಮ್ಮಿಂದ ಬೇರೆಯಾಗಬಹುದು. ಮನುಷ್ಯರು ಕೃತಜ್ಞತೆಯನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಹೆಂಗಸರಿಗೆ ಕೃತಜ್ಞತೆಯನ್ನು ನೀವು ತೋರದೆ ಇದ್ದಲ್ಲಿ, ಅವರು ಬಹುಬೇಗ ನಿಮ್ಮಿಂದ ದೂರವಾಗುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    What Makes Women Leave Their Partners They Love?

    When this happens, the other partner starts feeling uncomfortable in the relationship. In most cases, it is the lady who becomes taken for granted. She may even think of leaving her man even if she is madly in love with him. If you find this happening in your relationship as well, it is time you did some research to find the reasons out. Once you find the reason, work on mending your relationship. Doing so will surely bring happiness into your life and that of your partner's too. Continue reading.
    Story first published: Monday, June 12, 2017, 23:14 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more