For Quick Alerts
ALLOW NOTIFICATIONS  
For Daily Alerts

  ಪ್ರಥಮ ಚುಂಬನ ಅವಸರ ಮಾಡಿ ಎಡವಟ್ಟು ಮಾಡಿಕೊಳ್ಳಬೇಡಿ!!

  By Arshad
  |

  ನನಗಾಗಿ ಒಂದು ಹೃದಯ ಮಿಡಿಯುತ್ತಿದೆ ಎಂಬ ಭಾವನೆಯೇ ಪುಳಕಿತಗೊಳಿಸುವಂತಹದ್ದಾಗಿದ್ದು ಜೀವನ ಪಾವನವಾಯಿತೆಂದೇ ಹೇಳಬಹುದು. ನಿಮ್ಮ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿರುವ ವ್ಯಕ್ತಿಯೊಂದಿಗೆ ಜೀವನ ಕಳೆಯುವಾಗ ಜೀವನ ಸ್ವರ್ಗಕ್ಕೆ ಸಮನಾಗುತ್ತದೆ. ಪ್ರೇಮದಲ್ಲಿರುವುದು ಒಂದು ಚೇತೋಹಾರಿಯಾದ ಭಾವನೆಯಾಗಿದೆ.

  ಪ್ರೇಮಕ್ಕೂ ಮೊದಲು ಗೆಳೆತನ ಅಗತ್ಯ. ಆತ್ಮೀಯ ಗೆಳೆಯ/ಗೆಳತಿಯ ಜೊತೆಯಾಗಿ ತಿರುಗಾಡುವುದು, ಪರಸ್ಪರ ಕೈಗಳನ್ನು ಹಿಡಿದು ನಡೆದಾಡುವುದು, ಜೊತೆಯಾಗಿ ಸಿನಿಮಾ ಪಾರ್ಕುಗಳನ್ನು ಸುತ್ತುವುದು ಅಥವಾ ಒಟ್ಟಾರೆ ತಮ್ಮ ಸಮಯವನ್ನು ತಮ್ಮ ಪ್ರೇಮಿಗಾಗಿ ಮೀಸಲಿಡುವ ಪರಿಯೇ ಒಬ್ಬರಿಗೊಬ್ಬರು ನೀಡುವ ಪ್ರೀತಿಯ ಗೌರವವೂ ಆಗಿದೆ.

  ಈ ಗೆಳೆತನ ಪ್ರೇಮಕ್ಕೆ ಮುಂದುವರೆಯಲು ನಾಂದಿ ನಿಮ್ಮ ಮೊದಲ ಚುಂಬನ. ನಮ್ಮಲ್ಲಿ ಹೆಚ್ಚಿನವರು ಮೊದಲ ಚುಂಬನಕ್ಕೆ ಹಿಂದೇಟು ಹಾಕುತ್ತಾರೆ. ಅಲ್ಲದೇ ಚುಂಬನದ ಮೂಲಕ ಮುಂದುವರೆದರೆ ತಮ್ಮ ಗೆಳೆಯ/ಗೆಳತಿ ಏನೆಂದುಕೊಳ್ಳುತ್ತಾರೋ ಎಂಬ ಅಳುಕು. ಅಲ್ಲದೇ ಈ ಅವಕಾಶ ಸಿಕ್ಕಿದಾಗ ಹೇಗೆ ಮುಂದುವರೆಯಬೇಕೆಂದೂ ಗೊತ್ತಿರುವುದಿಲ್ಲ. 

  ಇಲ್ಲಿ ಪ್ರತಿದಿನ ಬಾಸ್‌‌ಗೆ ಕಿಸ್ ಕೊಟ್ಟೇ ಕೆಲಸ ಪ್ರಾರಂಭ! ವಿಡಿಯೋ ವೈರಲ್

  ಈ ಬಗ್ಗೆ ನೇರವಾಗಿ ನಿಮ್ಮ ಗೆಳೆಯ/ಗೆಳತಿಯನ್ನು ಕೇಳುವುದೂ ಸರಿಯಲ್ಲ. ಒಂದು ವೇಳೆ ಕೇಳಿದರೆ ಏನಾಗಬಹುದು? ಒಂದು ವೇಳೆ ಆತ/ಆಕೆ ನಿರಾಕರಿಸಿಬಿಟ್ಟರೆ? ಪ್ರಥಮ ಚುಂಬನಂ ದಂತಭಗ್ನಂ ಎಂದಾಗಬಾರದಿದ್ದರೆ ನಿಮ್ಮ ಚುಂಬನ ಹೇಗಿರಬಾರದು ಎಂಬುದನ್ನು ಕೆಲವು ಸಂಜ್ಞೆಗಳು ಸೂಚಿಸುತ್ತವೆ. ಬನ್ನಿ, ಈ ಸೂಚನೆಗಳು ಯಾವುವು ಎಂಬುದನ್ನು ನೋಡೋಣ... 

  ಪ್ರಥಮ ಚುಂಬನದ ಕೆಲವು ಸಂಜ್ಞೆಗಳು

  ಆತ/ಆಕೆ ಹಿಂದಡಿಯಿಡುತ್ತಿದ್ದರೆ...

  ಆತ/ಆಕೆ ಹಿಂದಡಿಯಿಡುತ್ತಿದ್ದರೆ...

  ಒಂದು ವೇಳೆ ನೀವು ಆತನನ್ನು/ಆಕೆಯನ್ನು ಚುಂಬಿಸುವ ಇರಾದೆಯಿಂದು ಮುಂದೆ ಬಗ್ಗಿದಾಗ ಆತ/ಆಕೆ ಥಟ್ಟನೇ ಹಿಂದಡಿಯಿಟ್ಟರೆ ಇದು ನೀವು ಚುಂಬನಶಾಸ್ತ್ರದಲ್ಲಿ ಇನ್ನಷ್ಟು ಪಳಗಬೇಕೆಂದು ಸೂಚಿಸುತ್ತಿದೆ.

  ಹಲ್ಲುಗಳು ಕಟಕಟಿಸುತ್ತಿದ್ದರೆ....

  ಹಲ್ಲುಗಳು ಕಟಕಟಿಸುತ್ತಿದ್ದರೆ....

  ದೇವರು ಮಾನವ ಶರೀರಗಳನ್ನು ಇಷ್ಟೊಂದು ಪರಸ್ಪರ ಬೆರೆತುಕೊಳ್ಳುವಂತೆ ರಚಿಸಿದ್ದಾನೆಂದರೆ ಅಚ್ಚರಿಯಾಗುತ್ತದೆ. ಗಂಡು ಹೆಣ್ಣಿನ ನಡುವಣ ಚುಂಬನಕ್ಕೆ ದೇಹದ ಯಾವುದೇ ಭಾಗ ಅಡ್ಡಿಯಾಗದಂತೆ ಮಾನವ ಶರೀರಗಳು ನಿರ್ಮಿತವಾಗಿವೆ. ಒಂದು ವೇಳೆ ಹಲ್ಲುಗಳು ಕಟಕಟಿಸಿದರೆ ನೀವು ನೈಸರ್ಗಿಕವಾಗಿ ಚುಂಬಿಸುತ್ತಿಲ್ಲ ಎಂದರ್ಥ.

  ಒದ್ದೆಯಾದ ಚುಂಬನ

  ಒದ್ದೆಯಾದ ಚುಂಬನ

  ಈ ಸೂಚನೆ ವಿಶೇಷವಾಗಿ ಎಲ್ಲಾ ಪುರುಷರಿಗಾಗಿ. ಸಾಮಾನ್ಯವಾಗಿ ಪುರುಷರು ಈ ಸಮಯದಲ್ಲಿ ಸಾಕಷ್ಟು ಜೊಲ್ಲು ಸಂಗ್ರಹಿಸಿಟ್ಟುಕೊಂಡಿದ್ದು ಚುಂಬನದ ಸಮಯದಲ್ಲಿ ಅನೈಚ್ಛಿಕವಾಗಿ ಜೊಲ್ಲು ಸಹಾ ನುಸುಳುತ್ತದೆ. ಇದು ಮಹಿಳೆಯರಿಗೆ ಸರ್ವಥಾ ಇಷ್ಟವಿಲ್ಲದ ಕಾರ್ಯವಾಗಿದೆ. ಆದ್ದರಿಂದ ಚುಂಬನ ಸರಳವಾಗಿದ್ದು ಶುಚಿಯೂ ಆಗಿರುವುದನ್ನು ಕಲಿತರೆ ಇದು ಮಹಿಳೆಯರಿಗೆ ಅತ್ಯಂತ ಇಷ್ಟವಾಗುತ್ತದೆ.

   ಚುಂಬನದ ಬಳಿಕ ಕಾಣದಂತಾಗುವುದು

  ಚುಂಬನದ ಬಳಿಕ ಕಾಣದಂತಾಗುವುದು

  ಒಂದು ವೇಳೆ ನಿಮ್ಮ ಚುಂಬನ ಪಡೆದ ವ್ಯಕ್ತಿ ಹೆಚ್ಚು ಹೊತ್ತು ನಿಲ್ಲದೇ ಯಾವುದೋ ಕೆಲಸವಿರುವಂತೆ ನಟಿಸುತ್ತಾ ನಿಮ್ಮಿಂದ ದೂರವಾಗಲು ಯತ್ನಿಸಿದರೆ ಈ ಚುಂಬನ ಆತನಿಗೆ/ಆಕೆಗೆ ಇಷ್ಟವಾಗಲಿಲ್ಲ ಎಂದು ತಿಳಿಯಬಹುದು. ಅಲ್ಲದೇ ಈ ಬಗ್ಗೆ ಕೇಳಿದರೆ ಆತ/ಆಕೆ ಸ್ಪಷ್ಟವಾಗಿ ಉತ್ತರಿಸಲು ತಡವರಿಸಬಹುದು. ಆದ್ದರಿಂದ ಚುಂಬನಕ್ಕೆ ದುಡುಕದಿರುವುದು ಹಾಗೂ ಆತ್ಮಗಳು ಒಂದಾಗಿವೆ ಎಂದ ಬಳಿಕವೇ ಚುಂಬನಕ್ಕೆ ಮುಂದಾಗುವುದು ಒಳ್ಳೆಯದು.

  ಹೆಚ್ಚು ನಾಲಿಗೆ ಬಳಸುವುದು

  ಹೆಚ್ಚು ನಾಲಿಗೆ ಬಳಸುವುದು

  ಒಂದು ವೇಳೆ ಚುಂಬನದ ಸಮಯದಲ್ಲಿ ನಾಲಿಗೆಯನ್ನು ಆತನ/ಆಕೆಯ ನಾಲಿಗೆಯೊಂದಿಗೆ ಆಡಲು ಬಿಟ್ಟರೆ ಇದನ್ನು ನಿಲ್ಲಿಸುವುದೇ ಒಳ್ಳೆಯದು. ವಿಶೇಷವಾಗಿ ನಿಮ್ಮ ನಾಲಿಗೆಯನ್ನು ಆತ/ಆಕೆ ತನ್ನ ನಾಲಿಗೆಯಿಂದ ಸ್ಪಂದಿಸದೇ ಇದ್ದರೆ ಇದು ಕಾಲ ಪಕ್ವವಾಗಿಲ್ಲ ಎಂದು ಸೂಚಿಸುತ್ತದೆ. ಆದ್ದರಿಂದ ಅಲ್ಲಿಯವರೆಗೆ ನಾಲಿಗೆಯ ಬಳಕೆ ಅತ್ಯಂತ ಮಿತವಾಗಿರಬೇಕು.

  ಚುಂಬವನ್ನು ಮಾತನಾಡುವ ಮೂಲಕ ತುಂಡರಿಸುವುದು

  ಚುಂಬವನ್ನು ಮಾತನಾಡುವ ಮೂಲಕ ತುಂಡರಿಸುವುದು

  ಒಂದು ವೇಳೆ ನಿಮ್ಮ ಚುಂಬನದ ಪ್ರಯತ್ನವನ್ನು ಆತ/ಆಕೆ ನಡುವೆಯೇ ಏನೋ ಮಾತನಾಡಲು ಯತ್ನಿಸಿ ತುಂಡರಿಸಿದರೆ ಇದು ಆತ/ಆಕೆ ನಿಮ್ಮ ಚುಂಬನವನ್ನು ಇಷ್ಟಪಡುತ್ತಿಲ್ಲ ಎಂಬ ಸ್ಪಷ್ಟ ಸೂಚನೆಯಾಗಿದೆ. ತಾವೊಬ್ಬ ಕೆಟ್ಟ ಚುಂಬನಕಾರರಾಗಲು ಯಾರಿಗೂ ಇಷ್ಟವಿಲ್ಲ. ಆದ್ದರಿಂದ ನಿಮ್ಮ ಸಂಗಾತಿ ನಿಮ್ಮಿಂದ ಚುಂಬನವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಬಗ್ಗೆ ಆವರೇ ನೀಡುವ ಕೆಲವು ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿ.

  ಚುಂಬವನ್ನು ಮಾತನಾಡುವ ಮೂಲಕ ತುಂಡರಿಸುವುದು

  ಚುಂಬವನ್ನು ಮಾತನಾಡುವ ಮೂಲಕ ತುಂಡರಿಸುವುದು

  ನಿಮ್ಮ ಸಂಬಂಧದ ಭವಿಷ್ಯ ನಿಮ್ಮ ಈ ಚುಂಬನವನ್ನು ಅವಲಂಬಿಸಿರುವ ಕಾರಣ ಚುಂಬನವನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿಯೇ ನೀಡುವುದು ಅಗತ್ಯ. ಅಲ್ಲದೇ ಈ ಪ್ರಥಮ ಚುಂಬನ ನಿಮ್ಮಿಬ್ಬರಿಗೂ ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಕ್ಷಣಗಳಾಗಿಯೂ ಪರಿಣಮಿಸಬಹುದು.

  English summary

  Sure Signs You're A Bad Kisser!!

  It might be too uncomfortable to directly ask your date about it. If you want to know whether your partner enjoys your kissing sessions, he/she might let you know about it subtly. But what if he/she is being repellent when it comes to kissing you? Here are a few signs which will tell you that you are a bad kisser.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more