ಅವನಲ್ಲಿ ಈ ರೀತಿಯ ಗುಣಗಳು ಇದ್ದರೆ ಆತನನ್ನು ಬಿಟ್ಟು ಬಿಡಿ!

By: Hemanth
Subscribe to Boldsky

ಜೀವನ ಸಂಗಾತಿಯ ಆಯ್ಕೆ ಎನ್ನುವುದು ಒಂದು ಅಗ್ನಿಪರೀಕ್ಷೆಯಿದ್ದಂತೆ. ಅದು ತುಂಬಾ ಕಠಿಣ. ಹಿಂದೆ ಹುಡುಗನಿಗಾಗಲಿ ಅಥವಾ ಹುಡುಗಿಗೆ ಆಗಲಿ, ಹಿರಿಯರು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದರು. ಆದರೆ ಈಗ ಸಮಯ ಬದಲಾಗಿದೆ. ತಮ್ಮ ಜೀವನ ಸಂಗಾತಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ.  ಗರ್ಲ್ ಫ್ರೆಂಡ್‍ ಹತ್ತಿರ ಹೀಗೆಲ್ಲಾ ಹೇಳಬೇಡಿ, ಆಕೆಗೆ ಆಗ್ಬರಲ್ಲ!

ಅದರಲ್ಲೂ ಮಹಿಳೆಯರು ತಮ್ಮ ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಕೆಲವೊಂದು ವಿಚಾರಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ. ಹುಡುಗನ ಹಿನ್ನೆಲೆ, ಆತನ ಗುಣ, ವೃತ್ತಿ ಹೀಗೆ ಹಲವಾರು. ಹದಿಹರೆಯದಲ್ಲಿ ಹುಡುಗಿಯರಿಗೆ ಸುಂದರ ಯುವಕನು ಆಕರ್ಷಿತನಾಗುತ್ತಾನೆ. ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ, ಕೊನೆಗೆ ಕೈ ಕೊಟ್ಟಾಗ....

ಆದರೆ ಒಂದು ಹಂತ ದಾಟಿದ ಬಳಿಕ ಮಹಿಳೆಯರು ತಮ್ಮ ಜೀವನ ಸಂಗಾತಿಯ ಬಗ್ಗೆ ತುಂಬಾ ಯೋಚಿಸುತ್ತಾರೆ. ಆತ ಹೆಚ್ಚು ಸುಂದರವಾಗಿರದಿದ್ದರೂ ಪರವಾಗಿಲ್ಲ. ಆತನಲ್ಲಿ ಕೆಲವೊಂದು ಗುಣಗಳು ಇರಲೇಬೇಕು ಎಂದು ನಿರ್ಧರಿಸಿರುತ್ತಾರೆ. ಹುಡುಗನಲ್ಲಿ ಯಾವ ಗುಣಗಳು ಇದ್ದರೆ ಮಹಿಳೆಯರು ಆತನನ್ನು ನಿರಾಕರಿಸುತ್ತಾರೆ ಎಂದು ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...  

ಕೋಪ

ಕೋಪ

ಪದೇ ಪದೇ ಕೋಪ ಮಾಡಿಕೊಳ್ಳುವ ವ್ಯಕ್ತಿ ನಿಮ್ಮ ಜೀವನವನ್ನು ನರಕ ಮಾಡಬಹುದು. ಮೊದಲ ಸಲ ಹುಡುಗನನ್ನು ಭೇಟಿಯಾದಾಗ ನಿಮಗೆ ಈ ಲಕ್ಷಣಗಳು ಕಾಣಿಸಿದರೆ ದೂರ ಹೋಗಿಬಿಡಿ. ಪ್ರತಿಯೊಬ್ಬರ ಮೇಲೆ ಕೋಪ ಮಾಡಿಕೊಂಡು ತನ್ನ ಅಧಿಕಾರ ದರ್ಪ ತೋರಿಸುವ ವ್ಯಕ್ತಿ ನಿಮ್ಮ ಮೇಲೆ ಕೂಡ ತನ್ನ ಅಧಿಕಾರ ದರ್ಪವನ್ನು ತೋರಿಸಬಹುದು.

ಆಕ್ರಮಶೀಲತೆ

ಆಕ್ರಮಶೀಲತೆ

ಪ್ರತಿಯೊಂದು ವಿಷಯದಲ್ಲೂ ತನ್ನ ದೈಹಿಕ ಬಲವನ್ನು ತೋರಿಸುವ ವ್ಯಕ್ತಿಯು ನಾಗರಿಕತೆಯನ್ನು ಹೊಂದಿಲ್ಲವೆಂದರ್ಥ. ಹುಡುಗನು ತನ್ನ ದೈಹಿಕ ಬಲದಿಂದ ಎದುರಿನವರ ಮೇಲೆ ಪ್ರಾಬಲ್ಯ ತೋರಿಸಿದರೆ ನೀವು ತಕ್ಷಣ ಇಲ್ಲವೆಂದು ಹೇಳಿಬಿಡಿ. ಈಗ ಆತ ನಿಮಗೆ ಹೀರೋನಂತೆ ಕಾಣಬಹುದು. ಆದರೆ ಮುಂದೆ ನಿಮ್ಮ ಜೀವನ ನರಕವಾಗಬಹುದು.

ಅಹಂಕಾರ

ಅಹಂಕಾರ

ತುಂಬಾ ಸೊಕ್ಕು ಹಾಗೂ ಅಹಂಕಾರವನ್ನು ಹೊಂದಿರುವ ಹುಡುಗ ನಿಮ್ಮ ಮಾತನ್ನು ತಾಳ್ಮೆಯಿಂದ ಕೇಳಲು ತಯಾರಿಲ್ಲ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸದವನನ್ನು ದೂರವಿಡಿ. ಯಾಕೆಂದರೆ ಇಂತಹ ವ್ಯಕ್ತಿಗಳು ಯಾವತ್ತೂ ತಮ್ಮದೇ ಸರಿ ಎಂದು ಅಂದುಕೊಳ್ಳುತ್ತಾರೆ.

ಕೆಟ್ಟ ಚಟ

ಕೆಟ್ಟ ಚಟ

ದಿನದ ಆರಂಭ ಮತ್ತು ಅಂತ್ಯದಲ್ಲಿ ಚಟದೊಂದಿಗೆ ಇರುವ ವ್ಯಕ್ತಿಯನ್ನು ನೀವು ದೂರವಿಡಿ. ಯಾಕೆಂದರೆ ಇಂತಹ ಹುಡುಗನಿಗೆ ನಿಮ್ಮ ಬಗ್ಗೆ ಕಾಳಜಿ ಇರಲ್ಲ. ಆತನ ಚಟ ಆತನ ಹಣವನ್ನು ಮಾತ್ರವಲ್ಲದೆ ನಿಮ್ಮ ಹಣವನ್ನು ಸುಡುವುದು.

ನಿಂದನೀಯ ಪ್ರವೃತ್ತಿ

ನಿಂದನೀಯ ಪ್ರವೃತ್ತಿ

ಇತರರನ್ನು ನಿಂದಿಸಿ ತಾನು ಖುಷಿ ಪಡುವಂತಹ ವ್ಯಕ್ತಿಯಿಂದ ದೂರವಿರುವುದು ತುಂಬಾ ಒಳ್ಳೆಯದು. ಕೆಲವೊಂದು ಸಲ ನಿಂದನೆಯು ತುಂಬಾ ಕೆಟ್ಟದಾಗಿರುತ್ತದೆ. ಕೆಲವು ಪುರುಷರು ಭಾವನಾತ್ಮಕವಾಗಿ ನಿಂದಿಸುತ್ತಾರೆ. ನಿಮ್ಮ ಜೀವನವನ್ನು ಆತ ನಿಯಂತ್ರಿಸಲು ಪ್ರಯತ್ನಿಸಿದರೆ ಆಗ ತಕ್ಷಣ ಬೇಡವೆನ್ನಿ.

ಅಡಿಯಾಳಾಗಿ ಭಾವಿಸುವುದು

ಅಡಿಯಾಳಾಗಿ ಭಾವಿಸುವುದು

ಹೆಚ್ಚಿನ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿ ಯಾವಾಗಲೂ ನಿಮ್ಮನ್ನು ಅಡಿಯಾಳಾಗಿ ನೋಡಿಕೊಂಡರೆ ಮತ್ತು ನಿಮಗೆ ಜೀವನದಲ್ಲಿ ಸಮಾನ ಸ್ಥಾನಮಾನ ನೀಡದಿದ್ದರೆ ಅಂತಹ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ದೂರವಿಡಿ.

 
English summary

Reject A Man If He Has These Qualities

A man who is short tempered may make your life hell. If you find any such clues on the first date, keep moving. A guy who shouts at everyone to feel superior may also shout at you to feel powerful. Such a man is a coward inside.
Story first published: Monday, January 16, 2017, 23:36 [IST]
Please Wait while comments are loading...
Subscribe Newsletter