For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಪುರುಷರು ಕ್ಷಮೆಯ ರೂಪದಲ್ಲಿ ’ಅದನ್ನು’ ಸ್ವೀಕರಿಸಲು ಸಿದ್ಧ!

By Arshad
|

ಅಳುವ ಗಂಡಸನ್ನೂ, ನಗುವ ಹೆಂಗಸನ್ನೂ ನಂಬಬಾರದು ಎಂಬ ಗಾದೆ ಇದೆ. ಒಂದು ವೇಳೆ ತನ್ನ ಹಿಂದಿನ ಪ್ರಿಯಕರನನ್ನು ಒಲಿಸಿಕೊಳ್ಳಬೇಕಾದಾಗ ಎಲ್ಲಾ ಅಸ್ತ್ರಗಳು ವಿಫಲವಾದರೆ ಅಂತಿಮವಾಗಿ ಮಹಿಳೆ ಉಪಯೋಗಿಸುವ ಅಸ್ತ್ರವೆಂದರೆ ಅಳು. ಆದರೆ ಪ್ರತಿಬಾರಿಯೂ ಈ ಕಣ್ಣೀರು ಕೆಲಸಕ್ಕೆ ಬರುವುದಿಲ್ಲ. ಆದರೆ ಪುರುಷರು ಅಳುವಿಗೂ ಮಿಗಿಲಾಗಿ ಕಾಮವಾಂಛೆಯ ಪೂರೈಕೆಯನ್ನು ಕ್ಷಮಾಯಾಚನೆಯ ಅತ್ಯುತ್ತಮ ರೂಪದಲ್ಲಿ ಪರಿಗಣಿಸುತ್ತಾರೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ಒಂದು ವೇಳೆ ಪ್ರಿಯಕರ ತನ್ನ ಪ್ರಿಯತಮೆಯೊಂದಿಗೆ ಯಾವುದಾದರೊಂದು ಕಾರಣಕ್ಕೆ ಮುನಿಸಿಕೊಂಡರೆ ಇದನ್ನು ಸರಿಪಡಿಸಲು ಆತ ತನ್ನ ಅಮೂಲ್ಯ ಸಮಯ ಹಾಗೂ ತಪ್ಪೊಪ್ಪಿಗೆಗಾಗಿ ಮೂಗು ಸವೆಸಬೇಕಾಗುತ್ತದೆ ಎಂದು Evolutionary Psychological Science ಎಂಬ ನಿಯತಕಾಲಿಕೆ ವರದಿ ಮಾಡಿದೆ. ಇದಕ್ಕೂ ಹಿಂದೆ ಇದೇ ನಿಯತಕಾಲಿಕೆಯಲ್ಲಿ ಪ್ರಕಟವಾದ ಪ್ರಕಾರ ಪುರುಷರು ಕಾಮಕೂಟಕ್ಕೆ ಬರಲು ಸದಾ ಸಿದ್ಧರಿರುವ ಮಹಿಳೆಯರನ್ನೇ ಹೆಚ್ಚು ಬಯಸುತ್ತಾರೆ ಎಂದು ವರದಿ ಮಾಡಿದ್ದು ಈಗಿನ ವರದಿಯೂ ಇದಕ್ಕೆ ಪೂರಕವಾಗಿದೆ.

couples

"ತಮ್ಮ ಹಿಂದಿನ ಪ್ರಿಯಕರನೊಂದಿಗೆ ಮತ್ತೊಮ್ಮೆ ಗೆಳೆತನ ಬೆಳೆಸುವ ಮಾಧ್ಯಮವಾಗಿ ಮಹಿಳೆಯರು ಪ್ರೇಮಕ್ಕಿಂತಲೂ ಕಾಮವನ್ನೇ ಬಳಸುತ್ತಾರೆ, ಈ ಮೂಲಕ ತಾವು ಇಂದಿಗೂ ಕಾಮಕೂಟಕ್ಕೆ ಕರೆದಾಗಲೆಲ್ಲಾ ಬರಲು ಸಿದ್ಧರಿದ್ದೇವೆ ಎಂದು ಪುರುಷರಿಗೆ ತಿಳಿಸುತ್ತಾ ತಮ್ಮ ಸಂಬಂಧವನ್ನು ಕೊನೆಗೊಳಿಸದಿರಿ ಎಂದು ಸೂಚಿಸುವುದಾಗಿದೆ" ಎಂದು ಅಮೇರಿಕಾದ ಬಕ್ನೆಲ್ ವಿಶ್ವವಿದ್ಯಾಲಯದ ಸಂಶೋಧಕ ಟಿ. ಜೋಯೆಲ್ ರವರು ತಿಳಿಸುತ್ತಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಒಂದು ಸಂಬಂಧದಲ್ಲಿ ಬಂಧಿಯಾದ ಇಬ್ಬರು ವ್ಯಕ್ತಿಗಳ ನಡುವಣ ನಡುವೆ ಉಂಟಾದ ಯಾವುದೇ ಕಲಹವನ್ನು ಮತ್ತೊಮ್ಮೆ ಸರಿಪಡಿಸಲು ಮಾನಸಿಕ ಬದ್ದತೆ ಉತ್ತಮ ಮಾಧ್ಯಮವಾಗಿದೆ, ಆದರೆ ಈ ಬದ್ದತೆಯನ್ನು ಮಹಿಳೆಯರು ಹಾಗೂ ಪುರುಷರು ಅಪೇಕ್ಷಿಸುವ ರೀತಿ ಮಾತ್ರ ಬೇರೆ ಬೇರೆಯಾಗಿದೆ.

ಈ ಸಂಶೋಧನೆಯನ್ನು ಎರಡು ಭಾಗಗಳಲ್ಲಿ ನಡೆಸಲಾಗಿತ್ತು. ಮೊದಲ ಗುಂಪಿನಲ್ಲಿ ಈ ಸಂಶೋಧನೆಯಲ್ಲಿ ಭಾಗವಹಿಸಿದವರಿಗೆ ಆನ್ಲೈನ್ ಮೂಲಕ ಕೆಲವಾರು ಪ್ರಶ್ನೆಗಳನ್ನು ಕೇಳಲಾಗಿದ್ದು ಒಂದು ವೇಳೆ ನಿಮ್ಮ ಪ್ರಿಯತಮೆಯ ನಡುವೆ ಯಾವುದಾದರೊಂದು ಕಾರಣಕ್ಕೆ ಕಲಹವುಂಟಾದರೆ ಹೇಗೆ ಮತ್ತೊಮ್ಮೆ ಒಂದಾಗುತ್ತೀರಿ ಎಂಬ ವಿಷಯವನ್ನು ಕೆದಕಲಾಗಿದ್ದು ನಾಲ್ಕಾರು ಉತ್ತರಗಳನ್ನು ನೀಡಿ ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು.

ಇದರಲ್ಲಿ ಬಂದ ಉತ್ತರಗಳನ್ನು ವಿಂಗಡಿಸಿ ಸರಿಸುಮಾರು ಒಂದೇ ರೀತಿಯ ಉತ್ತರಗಳನ್ನು ನೀಡಿದವರನ್ನು ಒಂದೊಂದು ಗುಂಪಾಗಿ ವಿಂಗಡಿಸಲಾಗಿತ್ತು. ಹೀಗೆ ಒಟ್ಟು ಇಪ್ಪತ್ತೊಂದು ಗುಂಪುಗಳಾದವು. ಈ ಗುಂಪುಗಳು ಅತಿ ಹೆಚ್ಚು ನೀಡಿದ ಉತ್ತರಗಳನ್ನು ಆಯ್ದುಕೊಂಡು ಈ ಉತ್ತರಗಳನ್ನೇ ಮತ್ತೊಮ್ಮೆ ಆಯ್ಕೆಯನ್ನಾಗಿಸಿ ಎರಡನೆಯ ಗುಂಪಿನ ವ್ಯಕ್ತಿಗಳಿಗೆ ನೀಡಲಾಗಿತ್ತು. ಈಗ ಕಂಡುಬಂದ ಉತ್ತರಗಳು ಅತಿ ಹೆಚ್ಚು ಸಾಮಾನ್ಯವಾಗಿದ್ದು ಇದರಲ್ಲಿ ಪುರುಷರು ತಮ್ಮ ಪ್ರಿಯತಮೆ ತಮ್ಮ ಕಾಮದಾಸೆಯನ್ನು ತೀರಿಸಲು ಉತ್ಸುಕರಾದರೆ ಮತ್ತೊಮ್ಮೆ ಸಂಬಂಧ ಸುಧಾರಿಸಲು ಸಾಧ್ಯ ಎಂಬ ಉತ್ತರಕ್ಕೆ ಅತಿ ಹೆಚ್ಚಿನ ಆಯ್ಕೆ ದೊರಕಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರು ಕಲಹದ ಬಳಿಕ ತಮ್ಮ ಪ್ರಿಯತಮ್ಮ ತಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತಾ ಹಾಗೂ ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತಾ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದರೆ ಮತ್ತೊಮ್ಮೆ ಸಂಬಂಧ ಬಲಪಡಿಸಲು ಸಾಧ್ಯ ಎಂಬ ಅನಿಸಿಕೆಯನ್ನು ಹೆಚ್ಚಾಗಿ ವ್ಯಕ್ತಪಡಿಸಿದ್ದರು.

ಈ ನಡವಳಿಕೆಯಿಂದ ಹಿಂದಿನ ಪ್ರೇಮವನ್ನು ಮತ್ತೊಮ್ಮೆ ಪಡೆದು ಹಿಂದಿನಂತೆಯೇ ಸಂತೋಷವಾಗಿರಲು ಸಾಧ್ಯ ಎಂದು ಮಹಿಳೆಯರು ಅಭಿಪ್ರಾಯ ಪಡುತ್ತಾರೆ. ಅಂತೆಯೇ ಒಂದು ವೇಳೆ ಪುರುಷನೂ ಮಹಿಳೆ ಬಯಸಿದಂತೆ ತನ್ನ ಅಹಮ್ಮಿಕೆಯನ್ನು ಕೊಂಚ ಕಡಿಮೆ ಮಾಡಿ ಪ್ರಿಯತಮೆಯತ್ತ ಸಮಯ ಕಳೆಯಲು ಉತ್ಸುಕತೆ ತೋರಿದರೆ ಸಂಬಂಧ ಖಂಡಿತಾ ದೀರ್ಘಕಾಲದವರೆಗೆ ಸುಖಕರವಾಗಿರುತ್ತದೆ ಎಂದು ವೇಡ್ ರವರು ತಿಳಿಸುತ್ತಾರೆ.

English summary

Men Consider 'That' As The Best Form Of Apology

If a man wants to make amends with his girlfriend after an argument, he should dedicate quality time and also cry while asking for forgiveness, according to the findings published in the journal Evolutionary Psychological Science. These findings are consistent with previous studies that showed that men prefer a partner who is sexually accessible.
X
Desktop Bottom Promotion