Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಮಾಜಿ ಪ್ರೇಮಿಗೆ ಅಸೂಯೆ ಆಗಲಿಯೆಂದು, ನಿಮ್ಮೊಂದಿಗೆ ಪ್ರೀತಿಯ ನಾಟಕ!
ಒಂದು ವೇಳೆ ನಿಮ್ಮ ಪ್ರೇಮಿ ನಿಮ್ಮನ್ನು ಅಪಾರವಾಗಿ ಪ್ರೀತಿಸಲು ಕಾರಣ ಆತ ತನ್ನ ಹಿಂದಿನ ಪ್ರೇಮಿಗೆ ಅಸೂಯೆಯುಂಟುಮಾಡುವುದು ಎಂದು ತಿಳಿದುಬಂದರೆ ನಿಮ್ಮ ಭಾವನೆ ಹೇಗಾಬಹುದು? ಮೋಸ ಹೋದೆ ಎಂದೇ ಅಲ್ಲವೇ? ಹೌದು, ಒಂದು ಪ್ರೇಮದಲ್ಲಿ ವಿಫಲರಾದ ಕೆಲವು ಯುವಕರು ಈ ವಿಧಾನವನ್ನು ಒಂದು ರೀತಿಯ ಸೇಡು ತೀರಿಸಿಕೊಳ್ಳುವ ಭಾವನೆಯಿಂದ ಅನುಸರಿಸುತ್ತಾರೆ. ಕೆಲವು ಮಹಿಳೆಯರೂ ಅನುಸರಿಸುತ್ತಾರೆ.
ಈ ಪರಿಗೆ ಕಾರಣ ಹಿಂದಿನ ಪ್ರೇಮಿಗೆ ಅಸೂಯೆಯುಂಟಾಗುವಂತೆ ಮಾಡುವುದು ಅಥವಾ ಹಿಂದಿನ ಪ್ರೇಮಿಯಿಂದ ಬಿಡುಗಡೆ ಪಡೆಯುವುದೂ ಇರಬಹುದು. ಕಾರಣವೇನೇ ಇದ್ದರೂ ಯಾವಾಗ ಈ ವಿಷಯ ತಿಳಿದುಬಂತೋ, ಆಗ ಈ ಪ್ರೇಮದ ಕುತ್ತಿಗೆ ಹಿಸುಕಿದಂತಾಗುತ್ತದೆ. ಒಂದು ವೇಳೆ ನಿಮ್ಮ ಪ್ರೇಮಿಯೂ ಗುಟ್ಟಾಗಿ ನಿಮ್ಮ ಕುತ್ತಿಗೆ ಹಿಸುಕುತ್ತಿಲ್ಲವಷ್ಟೇ? ಇದನ್ನು ಕಂಡುಕೊಳ್ಳಲು ಕೆಲವು ಸೂಚನೆಗಳಿವೆ. ಬನ್ನಿ ಈ ಸೂಚನೆಗಳನ್ನು ಅನುಸರಿಸಿ ನಿಮ್ಮ ಪ್ರೇಮಿ ನಿಜವಾಗಿಯೂ ಪ್ರೇಮಿಯೇ ಅಥವಾ ದುರಳನೇ/ಳೇ ಎಂದು ಕಂಡುಕೊಳ್ಳಿ....

ಸೂಚನೆ #1
ಆತ ಅಥವಾ ಆಕೆ ನಿಮ್ಮ ಬಗೆ ತೋರುವ ಪ್ರೀತಿಯನ್ನು ಕೆಲವು ಸಂದರ್ಭಗಳಲ್ಲಿ ಅಗತ್ಯಕ್ಕೂ ಹೆಚ್ಚೇ ಎಂಬಷ್ಟು ಪ್ರಕಟಿಸಲು ತೊಡಗುತ್ತಾರೆ. ಆಗ ಭಾವೋದ್ವೇಗಕ್ಕೆ ಒಳಗಾಗದೇ ಸುತ್ತಲಿರುವ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇವರಲ್ಲೊಬ್ಬರು ಕಳ್ಳನೋಟದಿಂದ ನಿಮ್ಮೆಡೆಗೇ ಹೊರಳುತ್ತಿರುವುದು ಹಾಗೂ ನಿಮ್ಮ ಪ್ರೇಮಿಯ ನೋಟವೂ ಆಗಾಗ ಅತ್ತ ಕ್ವಚಿತ್ತಾಗಿ ಹೊರಳುತ್ತಿದ್ದರೆ ಈ ವ್ಯಕ್ತಿಗೆ ಹೊಟ್ಟೆಕಿಚ್ಚು ಬರಿಸಲೆಂದೇ ಈ ನಾಟಕ ಎಂದು ನೀವು ಅರಿಯಬೇಕು.

ಸೂಚನೆ #2
ನೀವಿಬ್ಬರೇ ಇದ್ದಾಗ ಆತ/ಆಕೆ ಹೆಚ್ಚು ಮಾತನಾಡುವುದಿಲ್ಲ. ಹೆಚ್ಚೂ ಕಡಿಮೆ ಇವರು ಮೌನ ಧರಿಸುತ್ತಾರೆ. ಏಕೆಂದರೆ ಈ ಸಮಯದಲ್ಲಿ ನಿಮ್ಮನ್ನು ಬಳಸಿಕೊಂಡು ಆತ/ಆಕೆ ತನ್ನ ಹಿಂದಿನ ಪ್ರೇಮಿಗೆ ಯಾವ ರೀತಿಯಲ್ಲಿ ಹೊಟ್ಟೆಕಿಚ್ಚು ಬರಿಸಬಹುದು ಎಂಬ ಬಗ್ಗೆ ಯೋಚಿಸುತ್ತಿರುತ್ತಾನೆ/ಳೆ. ಆದರೆ ನಾಲ್ಕು ಜನರಿದ್ದಾಗ ಈತನ/ಈಕೆಯ ವರ್ತನೆ ಗೋಸುಂಬೆಯಂತೆ ಬದಲಾಗುತ್ತದೆ. ನೀನೇ ನನ್ನ ಜೀವ, ನೀನಿಲ್ಲದ ಭೂಮಿ ನರಕ ಎಂಬೆಲ್ಲಾ ಪದಗಳ ಮೂಲಕ ನಿಮಗಿಂತಲೂ ಸುತ್ತಮುತ್ತಲ ಜನರ ಗಮನವನ್ನು ಸೆಳೆಯಲು ಯತ್ನಿಸುತ್ತಾರೆ.

ಸೂಚನೆ #3
ಆತ/ಆಕೆ ನಿಮ್ಮ ಬಗ್ಗೆ ಯಾವುದೇ ಕುತೂಹಲ ವ್ಯಕ್ತಪಡಿಸುವುದಿಲ್ಲ. ಆತ ಪ್ರೀತಿಯ ಹೊಳೆಯನ್ನೇ ಹರಿಸತೊಡಗಿದರೂ ಆತ ನಿಮ್ಮನ್ನು ಅರಿಯಲು ಯತ್ನಿಸುವುದಿಲ್ಲ.

ಸೂಚನೆ #4
ಈತನ/ಈಕೆಯ ಮಾತುಗಳಲ್ಲಿ ಪ್ರಮುಖವಾಗಿ ಹಿಂದಿನ ಪ್ರೇಮದ ವೈಫಲ್ಯಗಳೇ ತುಂಬಿರುತ್ತವೆ. ಈತನಲ್ಲಿ ಈ ವಿಷಯದ ಹೊರತಾಗಿ ಬೇರೆ ವಿಷಯವೇ ಇಲ್ಲವೇ ಎಂಬ ಭಾವನೆ ಮೂಡುತ್ತದೆ. ಸದಾ ತನ್ನನ್ನು ಹಿಂದಿನ ಸಂಗಾತಿ ಹೀಗೆ ಮೋಸಗೊಳಿಸಿದ/ಳು ಎಂದೇ ಈತನ/ಈಕೆಯ ಚರ್ಚೆಯ ವಿಷಯವಾಗಿರುತ್ತದೆ.

ಸೂಚನೆ #5
ಈತ/ಈಕೆ ಸತತವಾಗಿ ಇಬ್ಬರೂ ಜೊತೆಗಿರುವ ಸೆಲ್ಫೀಗಳನ್ನು ಅನಗತ್ಯವಾಗಿ ತೆಗೆದು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುತ್ತಾ ಇರುತ್ತಾನೆ. ಈ ಚಿತ್ರಗಳನ್ನು ನೋಡಿ ಹಿಂದಿನ ಪ್ರೇಮಿ ಅಸೂಯೆಗೊಳ್ಳಲಿ ಎಂಬುದೇ ಇದರ ಮೂಲ ಉದ್ದೇಶವಾಗಿರುತ್ತದೆ.

ಸೂಚನೆ #6
ನಿಧಾನವಾಗಿ ನಿಮಗೆ ತಾನು ಆತನ ಪ್ರತೀಕಾರಕ್ಕಾಗಿ ಬಳಸಲ್ಪಡುತ್ತಿದ್ದೇನೆ ಎಂಬ ಅರಿವು ಮೂಡುತ್ತದೆ. ಯಾವಾಗ ನೀವು ಈತನ ಪ್ರೀತಿಯ ಮಾತುಗಳಿಗೆ ಕಡಿಮೆ ಮಹತ್ವ ನೀಡಿ ಈತನ/ಈಕೆಯ ಚರ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೀರೋ ಆಗ ಈ ಸ್ವಾರ್ಥದ ನಡವಳಿಕೆಯನ್ನು ಸ್ಪಷ್ಟವಾಗತೊಡಗುತ್ತದೆ.

ಸೂಚನೆ #7
ಒಮ್ಮೆ ನೀವು ಆತನನ್ನು/ಆಕೆಯನ್ನು ನೇರವಾಗಿ ಕೇಳಿದಾಗ ಮೊದಲು ಇಲ್ಲವೆಂದು ನಿರಾಕರಿಸಿದರೂ ಕೆಲವು ಪುರಾವೆ ಒದಗಿಸಿದರೆ ಇವರು ಒಪ್ಪಿಕೊಳ್ಳುತ್ತಾರೆ. ಯಾವಾಗ ಈ ವಿಷಯ ಮನದಟ್ಟಾಯಿತೋ, ತಕ್ಷಣವೇ ಈ ವ್ಯಕ್ತಿಯ ಮೋಹದಿಂದ ಹೊರಬಂದು ಆತನ ಬಗ್ಗೆ ಇರುವ ಎಲ್ಲಾ ಭಾವನೆಗಳನ್ನು ಮನಸ್ಸಿನಿಂದ ಅಳಸಿಬಿಡುವುದೇ ನಿಮಗೆ ಕ್ಷೇಮ. ಏಕೆಂದರೆ ಈ ವ್ಯಕ್ತಿಗಳು ಪ್ರೀತಿಗೆ ಅರ್ಹರಲ್ಲ, ಇದೇ ಕಾರಣಕ್ಕೆ ಈತನ/ಈಕೆಯ ಹಿಂದಿನ ಪ್ರೇಮಿ ಇವರನ್ನು ತ್ಯಜಿಸಿದ್ದು ಇವರಿಗೆ ಇದನ್ನು ಸಹಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸ್ಪಷ್ಟ ಮಾತುಗಳಲ್ಲಿ ಇವರ ಸ್ನೇಹವನ್ನು ಕಡಿದುಕೊಂಡು ಇವರನ್ನು ಅಲಕ್ಷಿಸುವುದೇ ಉತ್ತಮ.



Click it and Unblock the Notifications