ದೂರ ದೂರವಿದ್ದಾಗ ಮಾತ್ರ, ಆ ಪ್ರೀತಿಯ ಬೆಲೆ ಗೊತ್ತಾಗುವುದು...!

Posted By: Akshatha K B
Subscribe to Boldsky

ಪ್ರೀತಿಗೆ ಯಾವುದೇ ಎಲ್ಲೆಯಿಲ್ಲ. ಪ್ರೀತಿಯಲ್ಲಿ ಬಿದ್ದಾಗ ದೂರದ ಅಂತರ ಒಂದು ದೊಡ್ಡ ವಿಚಾರ ಎಂದು ಅನಿಸುವುದಿಲ್ಲ. ವಾಸ್ತವದಲ್ಲಿ ಅದು ಸಂಬಂಧವನ್ನು ಇನ್ನಷ್ಟು ಪ್ರಬಲವಾಗಿಸುತ್ತದೆ. ಇದೇ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಅಂದರೆ ಪ್ರೇಮಿಗಳಿಬ್ಬರೂ ದೂರವಿದ್ದರೂ ಅವರಿಬ್ಬರ ನಡುವಿರುವ ಒಂದು ಸುಂದರ ಬಂಧನ.

ಹಲವು ಬಾರಿ ಏನಾಗಬಹುದೆಂದರೆ, ನಾವು ಪ್ರೀತಿಸುವ ವ್ಯಕ್ತಿಯು ಅನೇಕ ಕಾರಣಗಳಿಗಾಗಿ ಬೇರೆ ಪಟ್ಟಣ ಅಥವಾ ದೇಶಕ್ಕೆ ತೆರಳಬೇಕಾಗಬಹುದು.  ಯಾವಾಗ ನೀವು ಪ್ರೀತಿಯ ಬಗ್ಗೆ ಗಂಭೀರವಾಗಿ, ಒಬ್ಬರನೊಬ್ಬರಿಗೆ ಬಿಟ್ಟು ಜೀವನದಲ್ಲಿ ಬದುಕಲು ಸಾಧ್ಯವಿಲ್ಲವೆಂದೆನಿಸುತ್ತದೋ ಆಗ ಈ ದೂರದೂರಿನ ಅಂತರದ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ಕಷ್ಟವಾದರೂ ಲೆಕ್ಕಿಸದೆ ಪ್ರೀತಿಯೆಂಬ ಸುಂದರ ಲೋಕಕ್ಕೆ ಎಲ್ಲಾ ರೀತಿಯಿಂದಲೂ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಒಂಟಿಯಾಗಿರುವುದು ಪ್ರೇಮಿಗಳಿಬ್ಬರಿಗೂ ಕಷ್ಟ.

Long Distance Relationship

ಈ ಸಂಬಂಧವನ್ನು ಕಾಪಾಡಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡಬೇಕು. ಪ್ರೇಮಿಗಳಿಬ್ಬರೂ ಸಂಬಂಧವನ್ನು ಮತ್ತು ಅದರಲ್ಲಿನ ಮಿಂಚನ್ನು ಜೀವಂತವಾಗಿಡಲು ಪ್ರಯಾಸಪಡಬೇಕು. ಜೊತೆಯಲ್ಲಿ ಕಾಲಕಳೆಯುವುದು, ಸಿನಿಮಾ ನೋಡುವುದು, ಶಾಪಿಂಗ್ ಮಾಡುವುದು ಅಥವಾ ಎಲ್ಲಾ ಕಾಲದಲ್ಲೂ ಏನೇ ಕಷ್ಟ ಬಂದರೂ ಒಬ್ಬರಿಗೊಬ್ಬರೋ ಊರುಗೋಲಾಗಿರುವುದರಿಂದ ಸಂಬಂಧವನ್ನು ಬಿಗಿಪಡಿಸಬಹುದು.

ಹೀಗಿರುವಾಗ ಕಾಡುವ ಒಂದು ಪ್ರಶ್ನೆಯೆಂದರೆ ನಿಮ್ಮ ನಡುವೆ ಸಾವಿರಾರು ಮೈಲಿಗಳ ದೂರದ ಅಂತರವಿರುವಾಗ ಈ ಪ್ರೀತಿಯ ಸಂಬಂಧವನ್ನು ಕಾಪಾಡಿಕೊಳ್ಳಲು ಹೇಗೆ ಸಾಧ್ಯ? ಈಗಿನ ವಾಸ್ತವಿಕ ಲೋಕದಲ್ಲಿ ದೂರದೂರಿನ ಅಂತರವಿರುವ ಪ್ರೀತಿಯಲ್ಲಿ ಬಿದ್ದಿರುವ ಪ್ರೇಮಿಗಳು ಕಾಲಕಳೆಯಲು ಒಟ್ಟಿಗೆ ಇರಬೇಕೆಂದೇನಿಲ್ಲ. ನಿಮ್ಮ ಜೀವನದ ಆಗು-ಹೋಗುಗಳನ್ನು ಸಂಗಾತಿಗೆ ತಿಳಿಸಲು ವಾಸ್ತವಿಕವಾಗಿ ಪ್ರೀತಿಯ ಬಂಧನವನ್ನು ಬಲಿಷ್ಠಗೊಳಿಸಲು ಒಂದು ಉತ್ತಮವಾದ ವೈಫೈ ಪ್ಲಾನ್‌ನಿಂದ ಸಾಧ್ಯ. 

Long Distance Relationship

ಹಲವಾರು ಸಾಮಾಜಿಕ ಮಾಧ್ಯಮಗಳಿಂದ ಒಬ್ಬರನ್ನೊಬ್ಬರು ಸಂಪರ್ಕಿಸುವುದು ಈಗಿನ ತಾಂತ್ರಿಕ ಯುಗಗಲ್ಲಿ ಕಷ್ಟವೇನಲ್ಲ. ಕೆಲವೊಮ್ಮೆ ಇಬ್ಬರು ಅವರವರ ಜೀವನದಲ್ಲಿ ಕೆಲಸದಲ್ಲಿ ಎಷ್ಟು ಮಗ್ನರಾಗಿರುತ್ತಾರೆಂದರೆ, ಒಬ್ಬರನೊಬ್ಬರು ಭೇಟಿಯಾಗಲು ಸಮಯವಿರುವುದಿಲ್ಲ. ಸಂಪರ್ಕ ಮತ್ತು ಜೊತೆಯಲ್ಲಿ ಕಾಲಕಳೆಯುವುದರ ಮಹತ್ವದ ಅರಿವಾಗದೇ ಹಗುರವಾಗಿ ತೆಗೆದುಕೊಳ್ಳುತ್ತಾರೆ. ಅದರಲ್ಲೂ ದೂರದೂರಿನಲ್ಲಿರುವ ತನ್ನ ಸಂಗಾತಿಯ ಜೊತೆ ಕಾಲ ಕಳೆಯಲು ಹಂಬಲಿಸುವ ಪ್ರೇಮಿಗೆ ಸಮಯದ ಮತ್ತು ಸಂಪರ್ಕದ ಮಹತ್ವ ತಿಳಿದಿರುತ್ತದೆ. ದೊರಕುವ ಪ್ರತಿಯೊಂದು ಕ್ಷಣವನ್ನು ವ್ಯರ್ಥಮಾಡದೆ ಜೊತೆಯಾಗಿ ಕಾಲಕಳೆಯಲು ಪ್ರಯತ್ನಿಸುತ್ತಾರೆ. ಸಂಬಂಧವನ್ನು ಬಲಿಷ್ಠಗೊಳಿಸುವ ಈ ರೀತಿಯ ಪ್ರೀತಿಯಲ್ಲಿರುವ ಇವರಿಂದ ಕಲಿಯಬೇಕಾದುದು ಬಹಳಷ್ಟಿದೆ. ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಕಲಿಸುವ ಕೆಲವು ಮುಖ್ಯ ವಿಷಯಗಳು ಇಲ್ಲಿವೆ. ಓದಿ ತಿಳಿದುಕೊಳ್ಳಿ...

ಕಣ್ಣಲ್ಲಿ ಕಣ್ಣೀರು ತರಿಸುವ ಪ್ರೇಮಿಗಳ 'ಪ್ರೇಮ ಕಥೆ' ಇದು.....

ಈ ಪ್ರೀತಿ ಒಂಟಿಯಾಗಿರುವುದನ್ನು ಕಲಿಸುತ್ತದೆ

ದೂರದಲ್ಲಿರುವ ಸಂಗಾತಿಯಿಂದ ಯಾವಾಗಲೂ ಸನಿಹದ ರಕ್ಷಣೆ ಒದಗುವುದಿಲ್ಲ. ಪ್ರೀತಿಯಲ್ಲಿ ನಾವು ಸಣ್ಣ ಸಣ್ಣ ವಿಷಯಗಳಿಗೂ ಸಂಗಾತಿಯನ್ನು ಅವಲಂಬಿಸುವುದು ಕೆಲವೊಮ್ಮೆ ಪರಸ್ಪರ ಉಸಿರುಗಟ್ಟಿದಂತಾಗುತ್ತದೆ. ಆದರೆ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್, ಮುಂದಾಗುವ ಹಲವು ಕಷ್ಟದ ಕ್ಷಣಗಳನ್ನು ಎದುರಿಸುವಷ್ಟು ಧೈರ್ಯಶಾಲಿಯಾಗಿರಬೇಕು. ಈ ರೀತಿಯ ಸಂಬಂಧದಲ್ಲಿ ತೊಡಗುವ ಮುನ್ನ ನಿಮ್ಮದೇ ಆದ ಲೋಕವಿತ್ತಲ್ಲವೇ? ಹಾಗಿರುವಾಗ, ನಿಮಗಿಷ್ಟವಾದ ಹಾಗೂ ಆಸಕ್ತಿಯಿರುವ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುತ್ತದೆ.

Long Distance Relationship

ತಾಳ್ಮೆ ಮತ್ತು ಪರಿಶ್ರಮ

ಸಾಧಾರಣವಾಗಿ ಪ್ರೀತಿಯಲ್ಲಿ ಕೆಲವೊಮ್ಮೆ ಸಂಗಾತಿಯು ಫೋನಿಗೆ ಉತ್ತರಿಸದಿದ್ದಾಗ ಅಥವಾ ಮುಖ್ಯವಾದ ತಾರೀಖನ್ನು ಮರೆತಾಗ ಕಿತ್ತಾಟವಾಗಿ ಅನಗತ್ಯವಾದ ಅಸಮಾಧಾನ ಉಂಟಾಗಬಹುದು. ಆದರೆ ಲಾಂಗ್ ಡಿಸ್ಟಸ್ ರಿಲೇಶನ್ಶಿಪ್ನಲ್ಲಿ ನಿಮ್ಮ ಸಂಗಾತಿಗೆ ಉಸಿರುಗಟ್ಟುವಂತೆ ಮಾಡದೆ ವೈಯಕ್ತಿಕ ಸ್ವಾತಂತ್ರ ನೀಡಬೇಕು. ಸಂಪರ್ಕಕ್ಕೆ ದೊರೆಯದಿದ್ದಾಗ ಏನೋ ಮುಖ್ಯವಾದ ಕೆಲಸದಲ್ಲಿ ತೊಡಗಿರಬಹುದೆಂದು ಮನದಟ್ಟು ಮಾಡಿಕೊಳ್ಳಬೇಕು. ಪ್ರೀತಿಯ ಸಂಗಾತಿಯನ್ನು ಭೇಟಿಯಾಗಲು ವಾರಗಳು, ತಿಂಗಳುಗಳು ಅಥವಾ ದೂರ ಪ್ರಯಾಣಿಸಬೇಕಾದರೂ ತಾಳ್ಮೆಯಿಂದಿರಬೇಕು.

ಸಂಪರ್ಕದ ಮಹತ್ವ

ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಜೀವಂತವಾಗಿರುವಂತೆ ಮಾಡುವುದು ಕೇವಲ ಸಂಪರ್ಕದಿಂದ ಮಾತ್ರ ಸಾಧ್ಯ. ಒಟ್ಟಿಗೆ ಇರುವ ಜೋಡಿಗಳಿಗೆ ಸಂಪರ್ಕದ ಮಹತ್ವ ಅರಿವಾಗುವುದಿಲ್ಲ. ವೈಫೈ ಸಂಪರ್ಕದ ಸಮಸ್ಯೆಯಾದಾಗ ಯಾರಾದರೂ ದೂರ ದೇಶದಲ್ಲಿರುವ ತನ್ನ ಸಂಗಾತಿಯ ಸನಿಹಕ್ಕಾಗಿ ಹಂಬಲಿಸುವ ಪ್ರೇಮಿಯ ಕಷ್ಟವನ್ನು ಒಮ್ಮೆ ಕೇಳಿ ನೋಡಿ!! ಒಬ್ಬರನ್ನೊಬ್ಬರು ನೋಡಲು ಮಾತಾಡಿಸಲು ಒಂದೊಂದು ನಿಮಿಷವೂ ಹಾತೊರೆಯುತ್ತಿರುತ್ತಾರೆ.

Long Distance Relationship

ಜೀವನದಲ್ಲಿನ ಸಣ್ಣ ಸಣ್ಣ ಕ್ಷಣ ಮತ್ತು ಸನ್ನೆಗಳ ಮಹತ್ವ ಕಲಿಸುತ್ತದೆ

ಸಂಗಾತಿಗಳು ಒಬ್ಬರಿಗೊಬ್ಬರು ಉಡುಗೊರೆ ಕೊಡುವುದನ್ನು ಎಷ್ಟು ಬಾರಿ ನೋಡಿದ್ದೀರಿ? ಈ ಸಣ್ಣ ವಿಷಯಗಳಿಂದಲೂ ಸಂತೋಷ ಸಿಗುವುದೆಂದು ಇತ್ತೀಚಿನ ದಿನಗಳಲ್ಲಿ ಮರೆತೇ ಬಿಟ್ಟಿದ್ದೇವೆ. ಆದರೆ ಇದರಿಂದ ಸಂಬಂಧಗಳನ್ನು ಜೀವಂತವಾಗಿಡಬಹುದೆಂದು ಹಲವರಿಗೆ ತಿಳಿದಿಲ್ಲ. ನಿಮ್ಮ ಸಂಗಾತಿಯ ನೆಚ್ಚಿನ ವಸ್ತು, ಹಳೆ ನೆನೆಪುಗಳನ್ನು ಮರುಕಳಿಸುವಂತೆ ಮಾಡುವ ಭಾವಚಿತ್ರಗಳು ಅಥವಾ ಮುದ್ದಾದ ಪ್ರೀತಿಯ ಸಂದೇಶಗಳನ್ನು ಕಳುಹಿಸುವುದು, ಸಂಬಂಧವನ್ನು ಬಲಿಷ್ಠಗೊಳಿಸಿ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುವಂತೆ ಮಾಡಲು ಒಂದು ಉಪಾಯ. ಈ ಸಣ್ಣ ವಿಷಯಗಳೇ ಮನಸ್ಸನ್ನು ಸಂತಸದಿಂದ ತೇಲಾಡುವಂತೆ ಮಾಡುವುದು.

Long Distance Relationship

ಯಾವ ಸಂಬಂಧವು ಪರಿಪೂರ್ಣವಲ್ಲ ಎಂದು ಒಪ್ಪಿಕೊಳ್ಳಲು ಕಲಿಸುತ್ತದೆ

ಸಂಬಂಧವು ಯಾವತ್ತಿಗೂ ಪರಿಪೂರ್ಣವಾಗಿರುವುದಿಲ್ಲ. ಹಾಗೇನಾದರೂ ಇದ್ದಲ್ಲಿ ಈ ಪ್ರಪಂಚವು ಉತ್ತಮ ಜಾಗವಾಗಿರುತ್ತಿತು. ಸಂಬಂಧ ಹೇಗಿದ್ದರೂ ಜೊತೆಯಾಗಿರಲು ಸಾವಿರಾರು ಮೈಲಿಗಳ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಕಲಿಸುತ್ತದೆ. ಈ ಸಂಬಂಧ ಕಾಲ ಮತ್ತು ದೂರದ ಪರೀಕ್ಷೆಯನ್ನು ಎದುರಿಸಿ ಗೆಲ್ಲಬೇಕಾಗುತ್ತದೆ. ಇದು ಕಾಲದ ಜೊತೆ ಬಂಧವನ್ನು ಬಲಿಷ್ಠಗೊಳಿಸುತ್ತದೆ. ಇದರಿಂದ ನಮ್ಮ ಸಂಗಾತಿ ಹೇಗಿದ್ದರೂ ಎಷ್ಟು ಕಷ್ಟದಲ್ಲಿದ್ದರೂ ಕರಗುವುದೆಂದು ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ. ಇಬ್ಬರು ವ್ಯಕ್ತಿಗಳನ್ನು ಬಂಧಿಸಿಡುವುದು ಪ್ರೀತಿ ಒಂದರಿಂದ ಮಾತ್ರ ಸಾಧ್ಯ.

English summary

5 Things That Long Distance Relationship Teaches you

In today's age of technology, we can constantly be in touch with our partners through various social media platforms. Sometimes, partners are so busy with their lives that they hardly have time to meet each other. Thus, they take each other for granted and do not realise the importance of communicating in person and spending time with each other. On the other hand, partners in long distance relationships know the value of time and long to meet each other. They grab each opportunity they get in order to meet their partner in person.