Just In
Don't Miss
- News
ಸಿಂಧಗಿ; ಉಪ ಚನಾವಣೆಗೆ ಮುನ್ನ ಆಪರೇಷನ್ ಜೆಡಿಎಸ್!
- Sports
ತೆಂಡೂಲ್ಕರ್, ಯುವರಾಜ್ಗೆ ತರಲೆ ಮಾಡಿದ ವೀರೇಂದ್ರ ಸೆಹ್ವಾಗ್: ವಿಡಿಯೋ
- Education
Bangalore University Recruitment 2021: ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2021ರ ಎಫ್ಜೆಡ್ಎಸ್-ಎಫ್ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ
- Movies
ವಿಡಿಯೋ: ರಸ್ತೆ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ
- Finance
ಎಲ್ಪಿಜಿ ಸಿಲಿಂಡರ್ ಬೆಲೆ 7 ವರ್ಷದಲ್ಲಿ ದುಪ್ಪಟ್ಟು ಏರಿಕೆ: ತೈಲದ ಮೇಲಿನ ತೆರಿಗೆ ಸಂಗ್ರಹ 459% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕೆಯ ಪ್ರೀತಿ, ಸ್ಲೋ ಪಾಯಿಸನ್ ರೀತಿ! ನಂಬಬೇಡಿ
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎನ್ನುತ್ತದೆ ಪ್ರಸಿದ್ಧ ಗೀತೆ, ಆದರೆ ಪ್ರೀತಿಯಲ್ಲಿ ನಾವು ಹೇಗೆಲ್ಲಾ ಪಾಡು ಬೀಳಬೇಕಾಗುತ್ತದೆ ಎನ್ನುತ್ತಾರೆ ಹುಡುಗರು. ಪ್ರೀತಿ ಪ್ರೀತಿಯೇ ಸಾಟಿ, ಅದಕ್ಕಿಂತ ಮೀರಿದ ಇನ್ನೊಂದು ಮಧುರ ಭಾವ ಬೇರೊಂದಿಲ್ಲ ಈ ಜಗತ್ತಿನಲ್ಲಿ. ಆದರೆ ಎಲ್ಲರೂ ಈ ಮಧುರ ಭಾವದ ಅನುಭವವನ್ನು ಪಡೆದಿರುತ್ತಾರೆ ಎಂದು ಹೇಳಲು ಆಗುವುದಿಲ್ಲ. ಪ್ರೀತಿಯ ಮರೆಯಲ್ಲಿ ನಾವು ಹಲವಾರು ಬಾರಿ ದುರ್ಬಳಕೆ ಆಗಿದ್ದೇವೆ ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಮದುವೆಯಾದ ಹೆಂಗಸರೇಕೆ ಆಕರ್ಷಕವಾಗಿ ಕಾಣುತ್ತಾರೆ?
ಹೌದು, ಪ್ರೀತಿಯನ್ನು ಮೋಸ ಮಾಡುವ ಒಂದು ಅವಕಾಶವನ್ನಾಗಿ ಮಾಡಿಕೊಂಡಿರುವವರು ಹಲವರು ಇದ್ದಾರೆ. ಅದು ಹಣವಾಗಿರಬಹುದು ಅಥವಾ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವುದಾಗಿರಬಹುದು. ಬನ್ನಿ ಈ ಲೇಖನದಲ್ಲಿ ನಾವು ಹೆಂಗಸರು ಗಂಡಸರನ್ನು ಪ್ರೀತಿಯ ನೆಪದಲ್ಲಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಚರ್ಚಿಸಿದ್ದೇವೆ. ಬನ್ನಿ ನೋಡೋಣ. ಪ್ರೀತಿಯಲ್ಲಿ ಬಿದ್ದವರಿಗೆ ಪ್ರಪಂಚದ ಅರಿವು ಇರುವುದಿಲ್ಲ. ಆಕೆಯ ಜೊತೆಗೆ ಅನುಕ್ಷಣ ಇರಬೇಕು ಎಂದು ಹಾತೊರೆಯುವ ಮನಸ್ಸನ್ನು ಪುರುಷನು ವ್ಯಕ್ತಪಡಿಸುತ್ತಾನೆ. ಇದು ಅವರ ದೌರ್ಬಲ್ಯ. ಇದನ್ನು ಮಹಿಳೆಯರು ಚೆನ್ನಾಗಿ ಅರಿತುಕೊಂಡು ಆತನನ್ನು ಬಳಸಿಕೊಳ್ಳುತ್ತಾರೆ. ಬನ್ನಿ ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂದು ನೋಡೋಣ. ಆ ಸೂಚನೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ಮುಂದೆ ಓದಿ....

ವಾಸ್ತವಾಂಶ #1
ನಿಮ್ಮಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಆಕೆಗೆ ಅನಿಸಿದಾಗ ಆಕೆ ಮಧುರ ಮಾತುಗಳಿಂದ ನಿಮ್ಮನ್ನು ಮೆಚ್ಚಿಸುತ್ತಾಳೆ. ಜೊತೆಗೆ ನಿಮಗೆ ಹೆಚ್ಚಿನ ಗಮನವನ್ನು ನೀಡುತ್ತಾಳೆ. ಇದು ಆಕೆಯ ಮಧುರವಾದ ಆಯುಧ.

ವಾಸ್ತವಾಂಶ #2
ಸುಖಾ ಸುಮ್ಮನೆ ನಿಮ್ಮ ಆಸ್ತಿ ಪಾಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲದರ ಕುರಿತಾಗಿ ಆಕೆ ವಿಚಾರಿಸಿಕೊಳ್ಳುತ್ತಲೆ ಇರುತ್ತಾಳೆ. ನಿಮ್ಮ ಬಗ್ಗೆ ಸಂಪೂರ್ಣ ಅಂದಾಜು ಮಾಡಿ ಆಮೇಲೆ, ಅದಕ್ಕೆ ಬಜೆಟ್ ನಿಗದಿ ಮಾಡುವ ಹುನ್ನಾರ ಇದು.

ವಾಸ್ತವಾಂಶ #3
ಆಕೆ ತನಗೆ ಕಾರು ಮತ್ತು ಒಡವೆ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಪಡೆಯುವ ಇಚ್ಛೆಯನ್ನು ಆಕೆ ವ್ಯಕ್ತಪಡಿಸುತ್ತಾಳೆ

ವಾಸ್ತವಾಂಶ #4
ಆಕೆ ನಿಮಗೆ ಹಾಸಿಗೆಯಲ್ಲಿ ಸುಖವನ್ನು ನೀಡುತ್ತಾ, ನಿಮ್ಮ ಆರ್ಥಿಕ ಪರಿಸ್ಥಿತಿಯ ಕುರಿತಾಗಿ ಪ್ರಶ್ನಿಸಲು ಆರಂಭಿಸುತ್ತಾಳೆ. ಇದು ಆಕೆ ನಿಮ್ಮ ಮೇಲೆ ಪ್ರಯೋಗಿಸುವ ಅತ್ಯಂತ ದೊಡ್ಡ ಆಯುಧ. ಇಂತಹ ಪರಿಸ್ಥಿತಿ ನಿಮಗೆ ಎದುರಾದರೆ ಆಕೆಯೊಂದಿಗೆ ನಿಮ್ಮ ಸಂಬಂಧವನ್ನು ಮುಂದುವರಿಸುವ ಕುರಿತಾಗಿ ಆಲೋಚಿಸಿ.

ವಾಸ್ತವಾಂಶ #5
ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮಿಂದ ಒಂದು ಸಹಾಯವನ್ನು ಕೇಳಿರುತ್ತಾಳೆ. ಆದರೆ ಅದಕ್ಕೆ ನೀವು ನೋ ಎಂದಿರುತ್ತೀರಿ. ಆದರೆ ಅದನ್ನೆ ನೆಪ ಮಾಡಿಕೊಂಡು, ಮುನಿಸಿಕೊಂಡು ಆಕೆ ತನ್ನನ್ನು ಮುಟ್ಟಲು ಸಹ ಬಿಡಲಿಲ್ಲವೆಂದಲ್ಲಿ, ಆಕೆಯ ಕುರಿತಾಗಿ ಆಲೋಚಿಸಬೇಡಿ. ಆಕೆ ಪ್ರೀತಿಯನ್ನು ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಿದ್ದಾಳೆ ಎಂದೇ ಅರ್ಥ.

ವಾಸ್ತವಾಂಶ #6
ಆಕೆ ರಹಸ್ಯವಾಗಿ ಒಬ್ಬರನ್ನು ಇಷ್ಟಪಟ್ಟಿರುತ್ತಾಳೆ. ಆದರೆ ತನ್ನ ಕೆಲವೊಂದು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಜೊತೆ ಸಂಬಂಧವನ್ನು ಮುಂದುವರಿಸಿರುತ್ತಾಳೆ. ಏಕೆಂದರೆ ನೀವು ಶ್ರೀಮಂತರು, ಆದರೆ ಬುದ್ಧಿವಂತ ಮತ್ತು ಚೆನ್ನಾಗಿ ಕಾಣುವ ಹುಡುಗನಲ್ಲ. ಜನ ನಿಮ್ಮನ್ನು ಮ್ಯಾಗ್ನೆಟ್ ರೀತಿ ಬಳಸಿಕೊಳ್ಳುತ್ತಾರೆ. ಜನ ನಿಮ್ಮತ್ತ ಆಕರ್ಷಿತರಾಗುವುದು ನಿಮ್ಮ ಬಳಿ ಇರುವ ಹಣವನ್ನು ನೋಡಿ, ಆದರೆ ನಿಮ್ಮನ್ನು ನೋಡಿ ಅಲ್ಲ ಎಂದಾಗ ಹುಷಾರಾಗಿರಿ.

ವಾಸ್ತವಾಂಶ #7
ಯಾವಾಗ ನೀವು ಆಕೆಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡಲು ನಿಲ್ಲಿಸುತ್ತೀರೋ, ಆಗ ಆಕೆ ನಿಮ್ಮಿಂದ ದೂರ ಸರಿಯಲು ಆರಂಭಿಸಿರುತ್ತಾಳೆ. ಇದು ಎಂತಹ ಪ್ರೀತಿ ಎಂದು ನಿಮಗೆ ವಿವರಿಸಿ ಹೇಳಬೇಕೆ? ಪ್ರೀತಿ ಪ್ರೀತಿಯನ್ನು ಮತ್ತು ಭದ್ರತೆಯನ್ನು ಮಾತ್ರ ಬಯಸಬೇಕು. ಅಲ್ಲವೇ?