For Quick Alerts
ALLOW NOTIFICATIONS  
For Daily Alerts

ಹುಡುಗಿಗಾಗಿ ರೋಮ್ಯಾಂಟಿಕ್ ಕರೀಯರ್ ಹಾಳು ಮಾಡಿಕೊಳ್ಳಬೇಡಿ!

|

ಸಂಬಂಧವೇ ಹಾಗೇ. ನಿನ್ನೆಯವರೆಗೆ ನಮ್ಮದೆಂದುಕೊಂಡಿದ್ದ ಪ್ರೀತಿ ಇಂದು ಕಳೆದುಹೋಗಿರುತ್ತದೆ. ಜೀವದ ಸ್ನೇಹಿತ ಕೈಕೊಟ್ಟು ಹೋಗಿರುತ್ತಾನೆ. ಆತ್ಮೀಯರಿಂದ ಮೋಸ ಹೋಗಿರುತ್ತೇವೆ. ಹೃದಯಕ್ಕೆ ಆದ ಗಾಯ ಮಚ್ಚೆಯ ಗುರುತಿನಂತೆ ಶಾಶ್ವತವಾಗಿ ಕಾಡುತ್ತದೆ. ಹೃದಯ ಭಗ್ನಗೊಂಡಾಗ ಬದುಕೇ ಬೇಡವೆಂದೆನಿಸುತ್ತದೆ. ಇಂತಹ ಕ್ಷಣದಲ್ಲಿ ಮರೆಯದೇ ಈ ಸಲಹೆ ಪಾಲಿಸಿ.

ದೂರವಾಗುವಾಗ ಈ ಸಂಬಂಧ ಬೇಡ ಎಂಬ ಮನಸ್ಥಿತಿ ಇರುತ್ತದೆ, ನಂತರ ಅದರ ಬಗ್ಗೆ ಯೋಚಿಸಿ ತುಂಬಾ ವೇದನೆ ಪಡುತ್ತಾರೆ. ಆ ಸಂದರ್ಭದಲ್ಲಿ ಜೀವನ ನರಕ ಅನಿಸಿಬಿಡುತ್ತದೆ. ಜನರನ್ನು ಫೇಸ್ ಮಾಡುವುದು ಕಷ್ಟವಾಗುತ್ತದೆ.

ಯಾರಾದರೂ ಹಳೆಯ ಸಂಬಂಧದ ಬಗ್ಗೆ ಮಾತೆತ್ತಿದರೆ ತುಂಬಾ ನೋವಾಗುತ್ತದೆ. ಆ ಸಂದರ್ಭದಲ್ಲಿ ಮಾನಸಿಕ ಸಾಂತ್ವನ ಹೇಳಲು ಜನ ಬೇಕಾಗಿರುತ್ತದೆ. ಪ್ರೀತಿಯಲ್ಲಿ ಸೋತು ಹೋದಾಗ ರೂಂನಲ್ಲಿ ಕುಳಿತು ಕೊರಗುವ ಬದಲು ಜನರ ಜೊತೆ ಬೆರೆಯಬೇಕು. ಅದರಲ್ಲೂ ಈ ಕೆಳಗಿನ ವ್ಯಕ್ತಿಗಳ ಜೊತೆ ಬೆರೆಯಿರಿ, ಮನಸ್ಸಿನ ನೋವು ಮರೆಯಾಗುವುದು ಹಾಗೂ, ನೆಮ್ಮದಿ ದೊರೆಯುವುದು.

ಹಾಗಾಗಿ ಹಳೆಯದನ್ನು ಮರೆತುಬಿಡಿ. ಮುರಿದು ಹೋದ ಸಂಬಂಧದ ಬಗ್ಗೆ ಯೋಚಿಸದೆ, ಜೊತೆಗಿರುವವರ ಜತೆ ಹೊಂದಿಕೊಂಡು, ಸುಂದರ ಬದುಕು ಕಟ್ಟಿಕೊಟ್ಟಲು ಪ್ರಯತ್ನಿಸಿ. ಪ್ರತಿಕ್ಷಣವೂ ಹೊಸದೆಂಬಂತೆ ಬದುಕಲು ಕಲಿಯಿರಿ. ಆಗ ಬದುಕು ಹಸನಾಗುತ್ತದೆ. ಇಲ್ಲಿ ನೀಡಿರುವ ಕೆಲವೊಂದು ಅಂಶಗಳು ನಿಮ್ಮ ಜೀವನಲ್ಲಿ ಹೊಸತನವನ್ನು ಕಂಡುಕೊಳ್ಳಲು ಖಂಡಿತವಾಗಿಯೂ ಸಹಯವಾಗಬಹುದು.

ಹುಡುಗರೇ ಮಹಿಳೆಯರಿಗಿಂತ ಬೀರ್ ಬೊಂಬಾಟ್ ಗೊತ್ತೇನ್ರಿ?

ಹೊರಗಡೆ ಪಾರ್ಟಿಗೆ ಹೋಗಿ.

ಹೊರಗಡೆ ಪಾರ್ಟಿಗೆ ಹೋಗಿ.

ಜೀವನವೇ ಮುಗಿದು ಹೋದಂತೆ ಕೊರಗದಿರಿ. ಸಂಬಂಧ ಮುರಿದಾಕ್ಷಣ ನಿಮ್ಮ ಬದುಕಿನ ಬೆಳಕೆಲ್ಲವೂ ಅಂತ್ಯವಾದಂತೆ ಭಾವಿಸದಿರಿ. ಇಂತಹ ಕ್ಷಣದಲ್ಲಿ ಧೂಮಪಾನ ಮತ್ತು ಕುಡಿತಗಳಿಗೆ ಬಲಿಯಾಗಬೇಡಿ. ಕಾಲಕ್ಕೆ ಎಲ್ಲವನ್ನು ಮರೆಸುವ ಶಕ್ತಿಯಿದೆ. ಅಲ್ಲಿವರೆಗೆ ಕಾಯಿರಿ.

ಶಾಪಿಂಗ್ ಗೆ ಹೋಗಿ.

ಶಾಪಿಂಗ್ ಗೆ ಹೋಗಿ.

ಇದು ಮಹಿಳೆಯರಿಗೆ ಹೆಚ್ಚು ಸೂಕ್ತ. ಗೆಳೆಯರೊಂದಿಗೆ ಶಾಪಿಂಗ್ ಮಾಡಿ, ಹೊಸ ಬಟ್ಟೆಗಳನ್ನು ಖರೀದಿಸಿರಿ. ಆದಷ್ಟು ಲೈಫ್ ಎಂಜಾಯ್ ಮಾಡಲು ಪ್ರಯತ್ನಿಸಿ.

ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ:

ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ:

ಸುಮ್ಮನೆ ಬಟ್ಟೆ ಬದಲಾಯಿಸಿ. ಹೇರ್ ಸ್ಟೈಲ್ ಬದಲಾಯಿಸಿ ನೋಡಿ. ನಿಮ್ಮನ್ನು ನೀವು ವಿಭಿನ್ನ ರೂಪದಲ್ಲಿ ನೋಡಿಕೊಳ್ಳಿ. ಮನಸ್ಸಿನಲ್ಲಿಯೇ ಬಿಟ್ಟುಹೋದವರಿಗೆ ದಿಕ್ಕಾರ ಹೇಳಿ.

ನೋವಿನ ಹಾಡುಗಳು ಬೇಡ:

ನೋವಿನ ಹಾಡುಗಳು ಬೇಡ:

ನೋವಿನ, ರೋಮಾಂಟಿಕ್ ಹಾಡುಗಳನ್ನು ಕೇಳದಿರಿ. ಇಂತಹ ಹಾಡುಗಳು ಭಾವನಾತ್ಮಕವಾಗಿ ನಿಮ್ಮನ್ನು ಹೆಚ್ಚು ಘಾಸಿಗೊಳಿಸುತ್ತವೆ.

 ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:

ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:

ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಂದರೆ ಈಜುವುದು, ಆಟವಾಡುವುದು ಇತ್ಯಾದಿ. ಸುಮ್ಮನೆ ಕುಳಿತು ಧೇನಿಸಲು ಸಮಯವಿಲ್ಲದಂತೆ ನೋಡಿಕೊಳ್ಳಿ. ಕೆಲಸವಿಲ್ಲದ ತಲೆ ಪಿಶಾಚಿಗಳ ಗೂಡಾಗುತ್ತದೆ. ಕಳೆದು ಹೋದ ಪ್ರೀತಿಯನ್ನು ಇತರ ಚಟುವಟಿಕೆಗಳಲ್ಲಿ ಮರೆಯಿರಿ.

ಆರೋಗ್ಯಕರ ಫ್ಲರ್ಟ್ ಮಾಡಿ.

ಆರೋಗ್ಯಕರ ಫ್ಲರ್ಟ್ ಮಾಡಿ.

ಇದು ಪುರುಷರಿಗೆ ಹೆಚ್ಚು ಉಪಯುಕ್ತ. ಪ್ರಿಯತಮೆ ಕೈಬಿಟ್ಟು ಹೋದ ಸಂದರ್ಭದಲ್ಲಿ ಆತ್ಮೀಯ ಗೆಳತಿಯರೊಂದಿಗೆ ಕಳೆಯಬಹುದು.

ಅವಳು ಬಿಟ್ಟು ಹೋದರೇನಂತೆ? ಬದುಕು ಇನ್ನೂ ಇದೆ:

ಅವಳು ಬಿಟ್ಟು ಹೋದರೇನಂತೆ? ಬದುಕು ಇನ್ನೂ ಇದೆ:

ಅವನು/ಅವಳು ಬಿಟ್ಟು ಹೋದರೇನಂತೆ. ಬದುಕು ಇನ್ನೂ ಇದೆ. ಪ್ರೀತಿಸೋ ಅಪ್ಪ ಅಮ್ಮ, ಆತ್ಮೀಯರನ್ನು ನೆನಪಿಸಿಕೊಳ್ಳಿ.

ನಿಮ್ಮನ್ನು ನೀವು ಪ್ರೀತಿಸಿ.

ನಿಮ್ಮನ್ನು ನೀವು ಪ್ರೀತಿಸಿ.

ಪ್ರೀತಿ ಹಾಳಾಗಲು ನೀವೇ ಕಾರಣವೆಂದು ಕೊರಗಬೇಡಿ. ಕಳೆದುಹೋದ ಕ್ಷಣಕ್ಕೆ ಚಿಂತಿಸಿ ಏನೂ ಪ್ರಯೋಜನ.

ಮನಸ್ಸು ಹಗುರವಾಗಿಸಲು ಪ್ರಯತ್ನಿಸಿ:

ಮನಸ್ಸು ಹಗುರವಾಗಿಸಲು ಪ್ರಯತ್ನಿಸಿ:

ಹೆತ್ತವರೊಂದಿಗೆ ಹೃದಯಬಿಚ್ಚಿ ಮಾತನಾಡಬಹುದು. ಅಳುವುದನ್ನು, ಕೊರಗುವುದನ್ನು ನಿಲ್ಲಿಸಿ. ಭಗ್ನ ಹೃದಯದಲ್ಲಿ ನೋವು ಮರೆಯಾಗಲಿ. ಹೊಸ ಹಕ್ಕಿ ಕೂಗಲಿ. ಮನಸ್ಸು ಹಗುರವಾಗಿಸಲು ಪ್ರಯತ್ನಿಸಿ. ಸಂಬಂಧ ಮುರಿದು ಹೋದವರಿಗೆ ದಿಕ್ಕಾರ ಹಾಕಿ ಬದುಕಿ ತೋರಿಸಿ.

ಕಹಿ ಘಟನೆಯನ್ನು ಮರೆಯಿರಿ:

ಕಹಿ ಘಟನೆಯನ್ನು ಮರೆಯಿರಿ:

ಒಮ್ಮೆ ಮುರಿದು ಬಿದ್ದ ಸಂಬಂಧದ ಬಗ್ಗೆ ಯೋಚಿಸದೆ ಮುಂದುವರಿಯಿರಿ. ನಿಮಗಿಷ್ಟವಾದ ವಿಶೇಷ ಸ್ವಭಾವದವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಇಲ್ಲಿಗೆ ಜೀವನವೇ ಮುಗಿಯಿತು ಎನ್ನುವವರಂತೆ ತಲೆ ಮೇಲೆ ಕೈ ಹೊತ್ತು ಕುಳಿತರೆ ಯಾವ ಕಾರ್ಯವೂ ಸಾಧಿಸಲಾಗದು. ಆದ್ದರಿಂದ ನಿಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಕಳೆಯಲು ಬೇರೆಯವರೊಂದಿಗೆ ಹೆಚ್ಚೆಚ್ಚು ಬೆರೆತು ಹಳೆಯದೆಲ್ಲವನ್ನು ಮರೆತುಬಿಡಿ.

ನೆನಪುಗಳು ಭೂತಕಾಲವಾಗಲಿ:

ನೆನಪುಗಳು ಭೂತಕಾಲವಾಗಲಿ:

ಅವಳ ಬಗ್ಗೆ ಯೋಚಿಸುತ್ತ, ಇಬ್ಬರೂ ಒಟ್ಟಿಗೆ ಕಳೆದ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದರೆ ನಿಮಗೆ ಇನ್ನಷ್ಟು ನೋವುಂಟಾಗುವುದು ಸಹಜ. ಆದ್ದರಿಂದ ಇಂತಹ ನೆನಪುಗಳನ್ನು ನಿಮ್ಮ ಮನಸ್ಸಿನಿಂದ ದೂರ ಮಾಡಿ ನಿಮ್ಮ ಭವಿಷ್ಯದ ಬಗ್ಗೆ ಆಲೋಚಿಸಿ. ನಿಮ್ಮ ಮುಂದಿನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದರ ಬಗ್ಗೆ ಗಮನವಹಿಸಿ.

ಗೆಳತಿಯ ನಂಬರ್ ಡಿಲಿಟ್ ಮಾಡಿ?:

ಗೆಳತಿಯ ನಂಬರ್ ಡಿಲಿಟ್ ಮಾಡಿ?:

ನಿಮ್ಮ ಬಳಿ ಅವಳ ಫೋನ್ ನಂಬರ್ ಇರಬಹುದು ಮೊದಲು ಅದನ್ನು ನಿಮ್ಮ ಮೊಬೈಲ್ ನಿಂದ ತೆಗೆದು ಹಾಕಿ. ಆಗ ನಿಮ್ಮ ಗೆಳತಿಯ ನೆನಪು ಹೆಚ್ಚು ನಿಮ್ಮನ್ನು ಕಾಡಿಸುವುದಿಲ್ಲ. ನೀವು ಮತ್ತೆ ಮತ್ತೆ ಅವಳಿಗೆ ಕರೆಮಾಡುವುದನ್ನು ತಪ್ಪಿಸಲು ಆಕೆಯ ನಂಬರ್ ಅನ್ನು ಡಿಲಿಟ್ ಮಾಡುವುದು ಅತ್ಯಂತ ಸೂಕ್ತ.

ಏಕಾಂತ:

ಏಕಾಂತ:

ಸ್ವಲ್ಪ ಸಮಯವನ್ನು ಒಬ್ಬಂಟಿಯಾಗಿಯೇ ಕಳೆಯುವುದು ಉತ್ತಮ. ಸರಿ ತಪ್ಪುಗಳ ಲೆಕ್ಕಾಚಾರ ಹಾಕಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲು ಏಕಾಂತ ಒಳ್ಳೆಯದು. ಆದಾಗ್ಯೂ ಅತೀಯಾದ ಏಕಾಂತ ಒಳ್ಳೆಯದಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಗೆಳೆಯ ಅಥವಾ ಕುಟುಂಬದವರೊಂದಿಗೆ ಸುತ್ತಾಡುವುದು ಒಳಿತು.

ಹೆಚ್ಚುವರಿ ತಿನ್ನುವಿಕೆ:

ಹೆಚ್ಚುವರಿ ತಿನ್ನುವಿಕೆ:

ಅತಿಯಾಗಿ ಚಾಕಲೇಟ್ ತಿನ್ನುವುದು, ಮಧ್ಯಪಾನ ಇವು ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನೆಪಿಸುತ್ತವೆ. ಆದ್ದರಿಂದ ಇಂತಹ ಚಟದ ದಾಸರಾಗಬೇಡಿ.ಇವುಗಳನ್ನು ಆದಷ್ಟು ದೂರಮಾಡಿ. ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಿ

ಇನ್ನೊಬ್ಬಳೊಂದಿಗೆ ಸ್ನೇಹ:

ಇನ್ನೊಬ್ಬಳೊಂದಿಗೆ ಸ್ನೇಹ:

ಒಮ್ಮೆ ನಿಮ್ಮ ಮನಸ್ಸಿನಿಂದ ದೂರವಾದ ಹುಡುಗಿಯ ಜಾಗದಲ್ಲಿ ಬೇರೊಬ್ಬಳಿಗೆ ಜಾಗವನ್ನು ನೀಡುವುದು ಸುಲಭ. ಆದರೆ ಆಕೆ ನಿಮ್ಮ ಹಿಂದಿನ ಪ್ರೇಮಿಯ ಜಾಗವನ್ನು ನಿಮ್ಮ ಮನಸ್ಸಿನಲ್ಲಿ ತುಂಬಬೇಕು. ಇದಕ್ಕೆ ಯಾವುದೇ ಕಾರಣಕ್ಕೂ ದುಡುಕದೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಸೆಕ್ಸ್ / ಲೈಂಗಿಕತೆ:

ಸೆಕ್ಸ್ / ಲೈಂಗಿಕತೆ:

ನಿಮ್ಮ ಮುರಿದು ಹೋದ ಸಂಬಂಧದ ನೆನಪಿನಿಂದ ಹೊರಬರಲು ತಕ್ಷಣ ಬೇರೆ ಹೆಣ್ಣಿನ ಸಹವಾಸ ಮಾಡಿ ಲೈಂಗಿಕ ಕ್ರಿಯೆ ನಡೆಸಬೇಡಿ. ಬದುಕಿನ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ.

ಒಬ್ಬಂಟಿಯಾಗಿ ಸಮಯ ಕಳೆಯುವುದು:

ಒಬ್ಬಂಟಿಯಾಗಿ ಸಮಯ ಕಳೆಯುವುದು:

ಒಬ್ಬಂಟಿಯಾಗಿ ಹೆಚ್ಚು ಸಮಯವನ್ನು ಕಳೆದರೆ ನಿಮ್ಮಲ್ಲಿ ಆಕೆಯ ನೆನಪು ಮತ್ತೆ ಮತ್ತೆ ಮರುಕಳಿಸಬಹುದು. ಅವಳ ಫೋಟೋ ಅಥವಾ ಅವಳ ನೆನಪುಗಳು ನಿಮ್ಮ ನ್ನು ಅವಳಿಗೆ ಪುನಃ ಕರೆಮಾಡುವಂತೆ ಪ್ರೇರೇಪಿಸಬಹುದು. ಆದ್ದರಿಂದ ಹೆಚ್ಚಿನ ಸಮಯವನ್ನು ಇತರರೊಂದಿಗೆ ಕಳೆಯಿರಿ.

ಫೇಸ್ ಬುಕ್ ಪ್ರೋಫೈಲ್:

ಫೇಸ್ ಬುಕ್ ಪ್ರೋಫೈಲ್:

ಅವಳು ನಿಮ್ಮಿಂದ ದೂರವಾದ ಮೇಲೆ ಫೇಸ್ ಬುಕ್ ನಲ್ಲಿ ಆಕೆಯ ನಡವಳಿಕೆಯನ್ನು ಗಮನಿಸಿ. ಆಕೆ ನಿಮ್ಮೊಂದಿಗೆ ಮಾತನಾಡದೇ ಬೇರೆಯವರೊಂದಿಗೆ ಸಹಜವಾಗಿದ್ದರೆ ಇದು ನಿಮಗೆ ನೋವನ್ನುಂಟುಮಾಡಬಹುದು.

 ಅವಳಿಂದ ಇನ್ನಷ್ಟು ದೂರ:

ಅವಳಿಂದ ಇನ್ನಷ್ಟು ದೂರ:

ಅವಳ ಸ್ನೇಹಿತರು ನಿಮಗೂ ಪರಿಚಯವಾಗಿರಬಹುದು. ಆದರೆ ಬ್ರೇಕ್ ಅಪ್ ಆದ ಮೇಲೆ ಅವಳ ಸ್ನೇಹಿತರಿಂದಲೂ ನೀವು ದೂರ ಉಳಿಯುವುದು ಉತ್ತಮ! ಒಮ್ಮೆ ಸಂಬಂಧ ಮುರಿದರೆ ಅದನ್ನು ಜೋಡಿಸುವುದು ಕಷ್ಟಸಾಧ್ಯವಾದರೂ ಈ ಬಿಡುಗಡೆ ನಿಮ್ಮ ಜೀವನದ ಕೊನೆಯಲ್ಲ ಎಂಬುದು ನಿಮಗೆ ನನಪಿರಲಿ. ಆದ್ದರಿಂದ ಹಿಂದಿನದನ್ನು ಮರೆತು ಮುಂದಿನ ಜೀವನದ ಬಗ್ಗೆ ನಿಮ್ಮದೆ ಆದ ಕನಸನ್ನು ಕಾಣುತ್ತ ಅದನ್ನು ನನಸಾಗುವತ್ತ ದಿಟ್ಟ ಹೆಜ್ಜೆಯನ್ನಿಡಿ. "ನಿನ್ನೆಯದು ನಿನ್ನೆಗೆ ಇಂದಿನದು ಇಂದಿಗೆ" ಎಂಬ ಮಾತು ನಿಮ್ಮಲ್ಲಿ ಸದಾ ಗುನುಗುತ್ತಿರಲಿ!

ಸ್ನೇಹಿತರು:

ಸ್ನೇಹಿತರು:

ಈ ಸಂದರ್ಭದಲ್ಲಿ ಸ್ನೇಹಿತರ ಮಾರ್ಗದರ್ಶನ ಹಾಗೂ ಹಿತನುಡಿ ತುಂಬಾ ಬೇಕಾಗುತ್ತದೆ. ಸ್ನೇಹಿತರ ಜೊತೆ ಸಮಯ ಕಳೆದರೆ ಹಳೆಯ ಕಹಿ ನೆನಪುಗಳನ್ನು ಮರೆಯಲು ಸಾಧ್ಯವಾಗಿ, ಹೊಸ ಬದುಕಿನತ್ತು ಉತ್ಸಾಹದಿಂದ ಹೆಜ್ಜೆ ಹಾಕಬಹುದು.

 ಅಪರಿಚಿತರು:

ಅಪರಿಚಿತರು:

ಪ್ರೀತಿಸಿದ ವ್ಯಕ್ತಿಯಿಂದ ತುಂಬಾ ಬೇಜಾರಾದಾಗ ಅಪರಿಚಿತರ ಸ್ನೇಹ ತುಂಬಾ ಹಿತ ಅನಿಸುತ್ತದೆ. ಆದ್ದರಿಂದಲೇ ಕೆಲವರು ತಮ್ಮ ಬ್ರೇಕ್ ಅಪ್ ಸ್ಟೋರಿಗಳನ್ನು ರೇಡಿಯೋ ಜಾಕಿಗಳ ಜೊತೆ ಹೇಳಿಕೊಂಡು ಸಮಧಾನ ಪಟ್ಟುಕೊಳ್ಳುತ್ತಾರೆ.

ನಿಮ್ಮ ಮಾಜಿಯ ಶತ್ರು:

ನಿಮ್ಮ ಮಾಜಿಯ ಶತ್ರು:

ಮಾಜಿ ಪ್ರೇಮಿಯನ್ನು ದ್ವೇಷಿಸುತ್ತಿರುವವರು ತುಂಬಾ ಆಪ್ತರಾಗಿ ಬಿಡುತ್ತಾರೆ. ಅವರು ನಿಮ್ಮ ಮಾಜಿಯನ್ನು ಬೈಯ್ಯುವಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತೆ ಭಾಸವಾಗುವುದು.

ಕುಟುಂಬ:

ಕುಟುಂಬ:

ತನ್ನ ಬಾಳಸಂಗಾತಿಯಿಂದ ಅಥವಾ ಪ್ರೇಮಿಯಿಂದ ದೂರವಾಗಿ ಮಾನಸಿಕ ನೋವು ಅನುಭವಿಸುತ್ತಿರುವಾಗ ಕುಟುಂಬದವರು ಅವರಿಗೆ ಸಾಂತ್ವನ ಹೇಳಿದರೆ ಮನಸ್ಸಿಗೆ ಸ್ವಲ್ಪ ಧೈರ್ಯ ಬರುತ್ತದೆ.

ಹೊಸ ಬದುಕು:

ಹೊಸ ಬದುಕು:

ನಂಬಿದ ವ್ಯಕ್ತಿಯಿಂದ ನೋವಾಗಿ ದೂರವಾದರೆ ಮನಸ್ಸು ಹೊಸ ಸಂಗಾತಿಯನ್ನು ಬಯಸುತ್ತದೆ, ಹಾಗೂ ಅದು ನಿಮ್ಮ ಮನಸ್ಸಿಗ್ಎ ನೆಮ್ಮದಿ ಸಿಗುವ ವ್ಯಕ್ತಿಯ ಹುಡುಕಾಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ಯಾರಾದರೂ ನಮ್ಮ ಬಗ್ಗೆ ಅಕ್ಕರೆ ತೋರಿಸಿದರೆ ನಮಗೆ ಅರಿವಿಲ್ಲದಂತೆಯೆ ಮನಸ್ಸು ಅವನನ್ನು/ ಅವಳನ್ನು ಪ್ರೀತಿಸಲಾರಂಭಿಸುತ್ತದೆ.

English summary

Tips to get recover from love break up

When it comes to handling break-ups, men suck. Even though you've already had many and are definitely going to have a lot more, dealing with break-ups feels like death every single time.
X
Desktop Bottom Promotion