For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್‍‌ಗೆ ಮರುಳಾಗಿ ಮೋಸ ಹೋಗಬೇಡಿ!

By Arpitha Rao
|

ಫೇಸ್‌ಬುಕ್ , ಟ್ವಿಟ್ಟರ್‌ಗಳಂತಹ ಸಾಮಾಜಿಕ ತಾಣಗಳು ಜನರ ಮೆಚ್ಚಿನ ಭಾಗವಾಗಿ ಬಿಟ್ಟಿದೆ.ಇದು ಕೂಡ ಇಂದು ನೀರು,ಬೆಳಕು,ಗಾಳಿ,ಆಹಾರದ ಜೊತೆಗೆ ಮೂಲಭೂತ ಅಂಶಗಳಾಗಿ ಸೇರುವಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

ಇದರಲ್ಲಿ ನಿಮಗೆ ಇಷ್ಟ ಬಂದ ವಿಷಯಗಳನ್ನು ಹಂಚಿಕೊಳ್ಳಬಹುದು,ಟ್ಯಾಗ್ ಮಾಡಿಕೊಳ್ಳಬಹುದು.ಆದರೆ ಇದು ನೀವು ಒಂಟಿ(ಸಿಂಗಲ್)ಆಗಿದ್ದಾಗ.ಒಮ್ಮೆ ನೀವು ಸಂಬಂಧದಲ್ಲಿ ಬಂದಿಯಾಗುತ್ತಿದ್ದೀರಿ ಎಂದರೆ ಇವುಗಳೆಲ್ಲವೂ ಬದಲಾಗುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬ್ರೇಕ್ ಅಪ್‌ನ ಎಂಟು ಘಟ್ಟಗಳು

8 Important Tips for Couples on Facebook

ನಿಮ್ಮ ನಿಶ್ಚಿತಾರ್ಥವಾಗಿದೆಯೆ? ಅಥವಾ ಮದುವೆ ಆಗಿದೆಯೇ? ಯಾವುದಾದರೂ ಸಂಬಂಧ ಒಪ್ಪಿಕೊಂಡಿದ್ದೀರಿ ಎಂದಾದರೆ ನೀವು ಆನ್‌ಲೈನ್ ಚಟುವಟಿಕೆ ನಡೆಸುವಾಗ ಎಚ್ಚರದಿಂದಿರಬೇಕು. ಫೇಸ್‌ಬುಕ್‌ನಿಂದ ಪ್ರಾರಂಭವಾಗುವ ಕೆಲವು ಸಂಬಂಧಗಳಿಂದ ಅಥವಾ ಕೆಲವು ಚಟುವಟಿಕೆಗಳು ವಿಚ್ಛೇದನ ತೆಗೆದುಕೊಳ್ಳುವಷ್ಟು ಅಥವಾ ಗಂಡ ಹೆಂಡತಿ ಬೇರೆ ಆಗುವಂತಹ ಸ್ಥಿತಿಯನ್ನು ತಲುಪುತ್ತಿರುವ ಉದಾಹರಣೆಗಳಿವೆ.

ನೀವು ಹ್ಯಾಪಿ ಕಪಲ್ ಆಗಿದ್ದಲ್ಲಿ ಮತ್ತು ಹಾಗೆಯೇ ಸಂತೋಷಯುತ ಜೀವನ ನಡೆಸಬೇಕು ಎಂದು ಬಯಸಿದ್ದಲ್ಲಿ ಫೇಸ್ಬುಕ್ ನಲ್ಲಿ ನಾವು ಈ ಕೆಳಗೆ ಕೊಡುತ್ತಿರುವ ಟಿಪ್ಸ್ ಅನ್ನು ಪಾಲಿಸಬೇಕು.

ಫೇಕ್ ಐ ಡಿ ಬಳಸಬೇಡಿ:

ನೀವು ನಿಮ್ಮ ಜೊತೆಗಾರ್ತಿ/ಜೊತೆಗಾರರಿಗೆ ತಿಳಿಯಬಾರದು ಎಂದು ಎರಡು ಅಕೌಂಟ್ ತಯಾರಿಸಿ ಒಂದನ್ನು ಚೆನ್ನಾಗಿ ಇಟ್ಟುಕೊಂಡು ಇನ್ನೊಂದರಲ್ಲಿ ನಿಮ್ಮ ಎಲ್ಲ ಚಟುವಟಿಕೆ ಮೂಲಕ ಅವರಿಗೆ ಮೋಸ ಮಾಡುತ್ತಿದ್ದರೆ ಅದನ್ನು ಇಂದೇ ನಿಲ್ಲಿಸಿಬಿಡಿ.ಈ ರೀತಿ ಫೇಕ್ ಅಕೌಂಟ್ ಬಗ್ಗೆ ಬೇಗ ನಿಮ್ಮ ಸಂಗಾತಿಗೆ ತಿಳಿದುಬಿಡುತ್ತದೆ, ಹೆಚ್ಚು ಸಮಯ ರಹಸ್ಯವಾಗಿ ಇಡುವುದು ಅಸಾಧ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಸಂಗಾತಿಯನ್ನು ಆನ್‌ಲೈನ್‌ನಲ್ಲಿಯೇ ಹುಡುಕಿ!

ಕೆಲವು ಸ್ನೇಹಿತರನ್ನು ಬಿಟ್ಟುಬಿಡಿ:

ನಿಮ್ಮ ಪ್ರೀತಿಯುತ ಸಂಬಂಧ ಅಥವಾ ಮದುವೆಯನ್ನು ಹಾಳು ಮಾಡಬಹುದಾದ ರೀತಿಯ ಸ್ನೇಹಿತರ ಸಂಬಂಧವನ್ನು ಕೂಡಲೇ ಕಡಿದುಹಾಕಿ.ನಿಮ್ಮ ಹಳೆಯ ಪ್ರಿಯಕರ/ಪ್ರೇಯಸಿ, ಕ್ರಷ್ ನಿಮಗೆ ತೊಂದರೆ ತರಬಹುದು ಎಂದು ತಿಳಿದಿದ್ದರೂ ಅಂತಹವರನ್ನು ಫೇಸ್‌ಬುಕ್ ಅಥವಾ ಟ್ವಿಟ್ಟರ್‌ನಲ್ಲಿ ಸ್ನೇಹ ಮುಂದುವರೆಸುವ ಬದಲು ಅವರನ್ನು ಸಂಪೂರ್ಣವಾಗಿ ನಿಮ್ಮ ಕೊಂಡಿಯಿಂದ ತಪ್ಪಿಸಿಬಿಡಿ. ಇದು ನಾವು ನೀಡುತ್ತಿರುವ ನಿಜವಾದ ಸಲಹೆ ಏಕೆಂದರೆ ಇಂತಹ ಸಣ್ಣ ತಪ್ಪಿನಿಂದಾಗಿ ತೊಂದರೆ ಒಳಪಟ್ಟಿರುವುದನ್ನು ನಾವು ಸಾಕಷ್ಟು ಕಂಡಿದ್ದೇವೆ. ಮೊದಮೊದಲು ನಿಮಗೆ ನಿಮ್ಮ ಸ್ನೇಹಿತರಿಂದ ದೂರವಾದುದ್ದರ ಬಗ್ಗೆ ಬೇಸರ ಎನಿಸಬಹುದು ಆದರೆ ದಿನಕಳೆದಂತೆ ಅದು ನಿಮಗೆ ಅಭ್ಯಾಸವಾಗುತ್ತದೆ ಮತ್ತು ನಿಮ್ಮ ಸಂಬಂಧವನ್ನು ಉಳಿಸಲು ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಿ ಎಂಬುದು ತಿಳಿಯುತ್ತದೆ.

3.ತುಂಬಾ ಗೌಪ್ಯವಾಗಿಡುವ ಪ್ರಯತ್ನ ಬೇಡ:

ಒಂದು ಆರೋಗ್ಯಕರವಾದ ಸಂಬಂಧ ಎಂದರೆ ನೀವು ಮತ್ತು ನಿಮ್ಮ ಜೊತೆಗಾರ ಸರಿಯಾಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳುವುದು.ನೀವು ಸಧ್ಯದಲ್ಲೇ ಮದುವೆ ಆಗುವವರಿದ್ದೀರಿ ಅಥವಾ ಈಗಷ್ಟೇ ಮದುವೆ ಆಗಿದ್ದೀರಿ ಎಂದರೆ ಅವರೊಂದಿಗೆ ತುಂಬಾ ಗೌಪ್ಯವಾಗಿರಬೇಡಿ.ನೀವು ತುಂಬಾ ಗೌಪ್ಯವಾಗಿ ವರ್ತಿಸಿದರೆ ಅದರರ್ಥ ನೀವು ನಿಮ್ಮ ಸಂಗಾತಿಯೊಂದಿಗೆ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದೀರಿ ಎಂದು.ಆದ್ದರಿಂದ ನಿಮಗೆ ಓಕೆ ಅನಿಸಿದಲ್ಲಿ ಪಾಸ್ ವರ್ಡ್ ಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ.ನಿಮ್ಮ ಸಂಗಾತಿಗೆ ಅನುಮಾನ ಬರುವ ಫೋಟೋಗಳನ್ನು ಮುಚ್ಚಿಡುವ ಪ್ರಯತ್ನ ಮಾಡಬೇಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಭಾವಿ ಪತಿಯಲ್ಲಿರಬೇಕಾದ ಗುಣಗಳು!

4.ರಿಲೇಶನ್‌ಶಿಪ್ ಸ್ಟೇಟಸ್ ಅನ್ನು ಮುಚ್ಚಿಡಬೇಡಿ:

ನಿಮಗೆ ಒಬ್ಬ ಹುಡುಗನೊಂದಿಗೆ ನಿಶ್ಚಯವಾದಾಗ ಅಥವಾ ನೀವು ತುಂಬಾ ವರ್ಷಗಳಿಂದ ಪ್ರೀತಿಸುದ್ದಿದ್ದು ಮದುವೆ ಆಗುವ ಹಂತದಲ್ಲಿದ್ದರೆ ಅದನ್ನು ಬೇರೆಯವರಿಗೆ ಕಾಣಿಸುವಂತೆ ಹಂಚಿಕೊಳ್ಳಿ.ನಿಮ್ಮೊಬ್ಬರಿಗೆ ಕಾಣಿಸುವಂತೆ ಮುಚ್ಚಿಟ್ಟುಕೊಳ್ಳಬೇಡಿ.

5.ನಿಮ್ಮಿಬ್ಬರ ಫೋಟೋ ಅಪ್ಲೋಡ್ ಮಾಡಿ :

ಇಡೀ ಅಕೌಂಟ್ ತುಂಬಾ ನಿಮ್ಮದೇ ಫೋಟೋ ಇರಬೇಕು ಎಂದಿಲ್ಲ.ಆದರೆ ನೀವು ನಿಮ್ಮ ಪತಿಯೊಡನೆ ಫೋಟೋವನ್ನು ಅಪ್ಲೋಡ್ ಮಾಡಿ.ಇದರಿಂದ ನಿಮ್ಮ ಸಂಗಾತಿಗೆ ನೀವು ಅವರೊಂದಿಗೆ ಫೋಟೋ ಹಂಚಿಕೊಳ್ಳುವುದು ಅವಮಾನಕರವಲ್ಲ ಎಂಬುದು ತಿಳಿಯುತ್ತದೆ ಅದರ ಬಗ್ಗೆ ಹೆಮ್ಮೆ ಇರಲಿ.ಆದರೆ ತುಂಬಾ ಪೆರ್ಸನಲ್ ಆಗಿರುವ ಫೋಟೋವನ್ನು ಹಂಚಿಕೊಳ್ಳುವಾಗ ಎಚ್ಚರದಿಂದಿರಿ ಏಕೆಂದರೆ ನಂತರದಲ್ಲಿ ಅದು ನಿಮಗೆ ಮುಜುಗರ ತರಬಹುದು.ನೀವು ಮುಜುಗರ ತರುವಂತಹ ತುಂಬಾ ಪರ್ಸನಲ್ ಎನಿಸುವ ಫೋಟೋ ಹಂಚಿಕೊಳ್ಳಬೇಕು ಎನಿಸಿದಲ್ಲಿ ನಿಮ್ಮ ಸಂಗಾತಿಯೊಡನೆ ಕೇಳಿ ಒಪ್ಪಿಗೆ ಪಡೆದು ನಂತರ ಹಂಚಿಕೊಳ್ಳಿ.

6.ನಿಮ್ಮ ಅಕೌಂಟ್ ಅನ್ನು ಒಮ್ಮೆ ಕ್ಲೀನ್ ಮಾಡಿಬಿಡಿ:

ಮಾರ್ಕ್ ಜೆಕ್ಬರ್ಗ್ ಗೆ ಟೈಮ್ ಲೈನ್ ಅನ್ನು ಹುಟ್ಟುಹಾಕಿದುದಕ್ಕೆ ಒಂದು ಧನ್ಯವಾದ ಹೇಳಬಹುದು ಆದರೆ ನಿಮ್ಮ ಹಿಂದಿನ ದಿನಗಳು ನಿಮ್ಮ ಸಂಗಾತಿಗೆ ಓಪನ್ ಬುಕ್ ತರಹ.ಅದರಲ್ಲಿ ನೀವು ಯಾರೊಂದಿಗೆ ಫೋಟೋ ತೆಗೆಸಿಕೊಂಡಿದ್ದೀರಿ, ಯಾರಿಗೆ ಯಾವ ರೀತಿಯ ಕಾಮೆಂಟ್ ಮಾಡಿದ್ದೀರಿ ಎಲ್ಲವನ್ನು ಅವರು ನೋಡಬಹುದು ಆದ್ದರಿಂದ ಹಳೇ ಗೆಳೆತನವೇನಾದರೂ ಇದ್ದಲ್ಲಿ ಸಂಪೂರ್ಣವಾಗಿ ಅದು ತಿಳಿದುಬಿಡಬಹುದು ಅದ್ದರಿಂದ ಒಮ್ಮೆ ಎಲ್ಲವನ್ನು ಅಳಿಸಿಬಿಡಿ.ಡಿಲಿಟ್ ಮಾಡಿಬಿಡಿ.

English summary

8 Important Tips for Couples on Facebook

Social networking sites like Facebook and Twitter has swapped the importance of air, water and food, and changed the definition of the fundamental elements to stay alive.
Story first published: Wednesday, March 12, 2014, 17:20 [IST]
X
Desktop Bottom Promotion