For Quick Alerts
ALLOW NOTIFICATIONS  
For Daily Alerts

ಮಾತೃ ಸ್ವರೂಪಿ ಹಿರಿಯ ಅಕ್ಕನ ಜವಾಬ್ದಾರಿಗಳೇನು ಗೊತ್ತೇ? ಹೀಗಿದ್ದರೆ ಚೆಂದ ನನ್ನ ಹಿರಿಯಕ್ಕ!

|

ತಾಯಿಯ ಪರ್ಯಾಯ ಅಕ್ಕ ಎಂದು ಕರೆಯದರೆ ಉಕ್ಕಿ ಬರುವಂಥ ಮಮತೆಯನ್ನು ಯಾರಿಂದಲೂ ಪದಗಳಲ್ಲಿ ವರ್ಣಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಅಕ್ಕನ ಸ್ಥಾನದಲ್ಲಿರುವಾಕೆ ತಾಯಿ, ತಂದೆ, ಅಣ್ಣನ ರೂಪದಲ್ಲಿ ಕಷ್ಟಕಾಲ ಬಂದಾಗ ಯಾವುದೇ ಜವಾಬ್ದಾರಿ ನಿರ್ವಹಿಸಿ ತನ್ನ ಸೋದರರಿಗೆ ಕಷ್ಟವಾಗದಂತೆ ನೋಡಿಕೊಳ್ಳುವಳು.

ಅದರಲ್ಲೂ ಅಕ್ಕನೊಂದಿಗೆ ಹೆಚ್ಚಾಗಿ ಬೆರೆಯುವುದು ಆಕೆಯ ತಂಗಿ ಎಂದರೆ ತಪ್ಪಾಗದು. ಕೆಲವೊಂದು ಅಕ್ಕತಂಗಿ ಜಗಳವಾಡಿದರೂ ಅವರು ಯಾವಾಗಲೂ ಒಂದೇ ಎನ್ನುವುದನ್ನು ಮರೆಯಬಾರದು. ಸಹೋದರ ಸಹ ಬಹಿರಂಗವಾಗಿ ಅಕ್ಕನ ಬಗ್ಗೆ ನಿರ್ಲಕ್ಷ್ಯ ತೋರಿದರು, ಅಂತರ್ಮುಖಿಯಾಗಿ ಬಹಳ ಗೌರವಿಸುತ್ತಾರೆ. ಸಾಮಾಜಿಕವಾಗಿ ಅವರ ರಕ್ಷಣೆಗೆ ನಿಲ್ಲುತ್ತಾನೆ.

ಅಕ್ಕ ಎನ್ನುವ ಉಡುಗೊರೆಯನ್ನು ದೇವರು ಕೆಲವರಿಗೆ ಮಾತ್ರ ನೀಡಿರುವ. ಅಕ್ಕನಾಗಿರುವುದು ದೊಡ್ಡ ಜವಾಬ್ದಾರಿ ತಂಗಿಯ ಕಿರಿಕಿರಿ ಸಹಿಸಿಕೊಂಡು ಆಕೆಯನ್ನು ಪ್ರೀತಿಸುತ್ತಾ ಇರಬೇಕು. ಹಿರಿಯ ಅಕ್ಕಳಾಗಿ ನೀವು ಯಾವೆಲ್ಲಾ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ.

1. ನೀವು ಆತ್ಮವಿಶ್ವಾಸದಿಂದ ಇರಿ

1. ನೀವು ಆತ್ಮವಿಶ್ವಾಸದಿಂದ ಇರಿ

ದುಃಖ ಬಂದಾಗ ತಲೆಯಿಟ್ಟು ಅಳಲು ಒಂದು ಭುಜವಿದೆ ಎಂದು ನಿಮ್ಮ ಕಿರಿಯ ಸಹೋದರ/ರಿಗೆ ಮನವರಿಕೆ ಮಾಡಿ. ನೀವು ರಹಸ್ಯವಾಗಿ ಕಾಪಾಡುವಿರೆಂದು ನಂಬಿ ನಿಮ್ಮ ಬಳಿ ಮಾತ್ರ ಅವರು ಹೇಳಿಕೊಳ್ಳಲು ಬಯಸಬಹುದು. ಆದರೆ ನೀವು ಪೋಷಕರಿಗೆ ಗುಪ್ತಚರರಾಗಿ ಕೆಲಸ ಮಾಡಬೇಡಿ. ಅವರ ಸ್ನೇಹಿತೆಯಾಗಿ ಎಲ್ಲಾ ಕೀಟಲೆ, ಸಂತೋಷ, ಪ್ರಯಾಣ ಎಲ್ಲದರಲ್ಲೂ ಜೊತೆಗಾರರಾಗಿ, ಅವರ ಎಲ್ಲಾ ವಿಷಯವನ್ನು ಅರಿಯಲು ಪ್ರಯತ್ನಿಸಿ.

2. ಯಾವುದೇ ವಿಷಯವಾದರೂ ಅವರೊಂದಿಗೆ ಚರ್ಚಿಸಿ

2. ಯಾವುದೇ ವಿಷಯವಾದರೂ ಅವರೊಂದಿಗೆ ಚರ್ಚಿಸಿ

ಸಮಸ್ಯೆಗಳು ಹೇಗಾದರೂ ಬಂದೇ ಬರುತ್ತದೆ. ತಂಗಿಗೆ ಆಕೆಯ ಚಿಂತೆಯ ಬಗ್ಗೆ ಹೇಳಿಕೊಳ್ಳಲು ಬಿಡಿ. ಅವರನ್ನು ಮಾತನ್ನು ಆಲಿಸಿ, ಶಾಂತವಾಗಿರಿ ಮತ್ತು ಅವರ ನಿರ್ಧಾರವನ್ನು ಗೌರವಿಸಿ. ಅವರು ಮಾತನಾಡುವಂಥ ಸಂದರ್ಭಗಳನ್ನು ಸೃಷ್ಟಿಸಿ. ನೀವು ಅವರಿಗೆ ಸಲಹೆ ನೀಡಿ, ಅಪ್ಪಣೆ ಮಾಡುಲು ಯತ್ನಿಸಬೇಡಿ.

3. ನೀವು ಒಳ್ಳೆಯ ಉದಾಹರಣೆಯಾಗಿ

3. ನೀವು ಒಳ್ಳೆಯ ಉದಾಹರಣೆಯಾಗಿ

ನೀವು ಮೊದಲು ನಿಮ್ಮ ಪೋಷಕರನ್ನು ಗೌರವಿಸಿ ಮತ್ತು ಅವರ ಮಾತುಗಳನ್ನು ಆಲಿಸಿ, ಪಾಲಿಸಿ. ನೀವೇನಾದರು ತಪ್ಪು ಮಾಡಿದರೆ ಕ್ಷಮೆ ಕೇಳಿ. ಶಾಲೆ ಅಥವಾ ಕಚೇರಿಯ ಕೆಲಸಗಳ ಬಗ್ಗೆ ಪ್ರಮಾಣಿಕವಾಗಿ, ಕಠಿಣ ಪರಿಶ್ರಮ ವಹಿಸಿ ಕಾರ್ಯನಿರ್ವಹಿಸಿ. ಇದರಿಂದ ನಿಮ್ಮ ಕಿರಿಯ ಸಹೋದರ/ರಿಗೆ ನೀವು ಮಾದರಿ ವ್ಯಕ್ತಿಯಾಗಬಹುದು.

4. ಹೊಂದಾಣಿಕೆ

4. ಹೊಂದಾಣಿಕೆ

ತಂಗಿ ಜತೆಗೆ ಹೊಂದಾಣಿಕೆ ಮಾಡುವುದನ್ನು ಬಹಳ ಮುಖ್ಯ. ನಿಮಗಿಬ್ಬರಿಗೂ ಒಂದೇ ಡ್ರೆಸ್ ಇಷ್ಟವಾಗಿದ್ದರೆ ಆಗ ಆಕೆಗೆ ಅದನ್ನು ನೀಡಿ. ಈ ಮೂಲಕ ನಿಮ್ಮ ಹಿರಿತನವನ್ನು ಪ್ರದರ್ಶಿಸಿ. (ಹೇಗಿದ್ದರೂ ನೀವು ಸಹ ಅದನ್ನು ಮತ್ತೆ ಕೂಡ ಧರಿಸಬಹುದು ಅಲ್ಲವೇ?)

5. ದೂರದಲ್ಲಿದ್ದರೂ ಸಂಪರ್ಕದಲ್ಲಿರಿ

5. ದೂರದಲ್ಲಿದ್ದರೂ ಸಂಪರ್ಕದಲ್ಲಿರಿ

ದೂರದ ಊರಿನಲ್ಲಿದ್ದರೆ ತಂಗಿ ಜತೆಗೆ ಯಾವಾಗಲೂ ಸಂಪರ್ಕದಲ್ಲಿ ಇರಲು ಪ್ರಯತ್ನಿಸಿ. ಅವರೊಂದಿಗೆ ಮಾತನಾಡಲು ಆದ್ಯತೆಯ ಸಮಯ ನೀಡಿ. ಒಂದು ಕರೆ ಅಥವಾ ಮೆಸೇಜ್ ಮಾಡಿ ಅವರ ಯೋಗಕ್ಷೇಮವನ್ನು ಆಗಾಗ ವಿಚಾರಿಸುತ್ತಿರಿ. ಇಂತಹ ಸಣ್ಣಪುಟ್ಟ ಕಾಳಜಿ ಕಿರಿಯರಲ್ಲಿ ಆನೆಬಲ ತುಂಬುತ್ತದೆ.

6. ಪ್ರೋತ್ಸಾಹಿಸಿ

6. ಪ್ರೋತ್ಸಾಹಿಸಿ

ನಿಮ್ಮ ಕಿರಿಯ ಸಹೋದರ/ರಿಗೆ ಆತ್ಮವಿಶ್ವಾಸದ ಕೊರತೆಯಿದ್ದರೆ ಅಥವಾ ಯಾವುದೇ ಸಂಶಯವಿದ್ದರೆ ಅವರನ್ನು ಪ್ರೋತ್ಸಾಹಿಸಿ. ಅವರ ಭೀತಿ ದೂರ ಮಾಡಲು ಪ್ರಯತ್ನಿಸಿ ಮತ್ತು ಮನಸ್ಸು ಮಾಡಿದರೆ ಏನು ಕೂಡ ಸಾಧಿಸಬಹುದು ಎಂಬ ಮಾತುಗಳ ಮೂಲಕ ಪ್ರೋತ್ಸಾಹಿಸಿ. ಎಲ್ಲಾ ಸೋಲು, ಗೆಲುವಿಗೆ ನಿನ್ನ ನಾನಿರುತ್ತೇನೆ ಎಂಬ ಮಾತುಗಳು ಅರಿಗೆ ಅಗತ್ಯವಿರುತ್ತದೆ.

7. ಬೆಂಬಲ ನೀಡಿ

7. ಬೆಂಬಲ ನೀಡಿ

ಕಿರಿಯ ಸಹೋದರ/ರಿ ಯಾವುದೇ ಪರೀಕ್ಷೆ ಅಥವಾ ಉದ್ಯೋಗದ ಸಂದರ್ಶನಕ್ಕೆ ಹೋಗುತ್ತಿದ್ದರೆ ಅವರಿಗೆ ಶುಭ ಹಾರೈಸಿ. ಅವರ ಸಾಧನೆಗಾಗಿ ಯಾವುದೇ ಪ್ರಶಸ್ತಿ ಬಂದಿದ್ದರೆ ಅಂಥಾ ಸಮಾರಂಭಗಳಿಗೆ ನೀವು ಭಾಗಿಯಾಗುವುದನ್ನು ಮರೆಯಲೇಬೇಡಿ. ಪ್ರಮುಖ ಸಂದರ್ಭ, ವಿಶೇಷ ಕಾರ್ಯಕ್ರಮದಂಥ ಸಂದರ್ಭಗಳಲ್ಲಿ ಅವರಿಗೆರ ಸಂಪೂರ್ಣವಾಗಿ ಬೆಂಬಲಿಸಿ. ನಿಮ್ಮ ಬೆಂಬಲವನ್ನು ಅವರು ಬಯಸಿರುತ್ತಾರೆ.

8. ಉಡುಗೊರೆ ನೀಡಿ

8. ಉಡುಗೊರೆ ನೀಡಿ

ನಿಮ್ಮ ಕಿರಿಯ ಸಹೋದರ/ರಿಗೆ ಹುಟ್ಟುಹಬ್ಬ ಅಥವಾ ರಜಾ ಪ್ರವಾಸಗಳಲ್ಲಿ ಒಳ್ಳೆಯ ಉಡುಗೊರೆ ನೀಡುವುದನ್ನುನ ತಪ್ಪಿಸಬೇಡಿ. ಇಂತಹ ಘಟನೆಗಳು ನೀವು ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸುತ್ತದೆ.

9. ಸಮಯ ಮೀಸಲಿಡಿ

9. ಸಮಯ ಮೀಸಲಿಡಿ

ನಿಮ್ಮ ಕಿರಿಯರ ಜತೆಯಾಗಿ ಕಾಲ ಕಳೆಯಲು, ವಿಶ್ರಾಂತಿ ಪಡೆಯಲು ಮತ್ತು ಪರಸ್ಪರ ಅರಿತುಕೊಳ್ಳಲು ಸಮಯವನ್ನು ನೀಡಬೇಕು. ಆಕೆಯನ್ನು ಜತೆಯಾಗಿ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಊಟ ಮಾಡಿ ಮತ್ತು ಮನರಂಜನೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಅವರ ಮನಸ್ಥಿತಿ ಬಯಸುವಂತೆ ನೀವು ಇರಬೇಕು, ಪೋಷಕರಂತೆ ಅವರನ್ನು ಹೆಚ್ಚಾಗಿ ನಿಯಂತ್ರಿಸಬೇಡಿ.

10. ನಾನು ನಿನ್ನ ಪ್ರೀತಿಸುತ್ತೇನೆಂದು ಹೇಳಿ

10. ನಾನು ನಿನ್ನ ಪ್ರೀತಿಸುತ್ತೇನೆಂದು ಹೇಳಿ

ನಿಮ್ಮ ಕಿರಿಯರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನೀವು ಪ್ರತಿನಿತ್ಯವು ಅವರಿಗೆ ತಿಳಿಯಪಡಿಸಬೇಕು. ಅವರನ್ನು ನೀವು ಪ್ರೀತಿಸುತ್ತಿದ್ದೀರಿ ಎಂದು ಹೇಳಿ. ನೀವು ಹೆಚ್ಚು ಮಾತನಾಡುವವರು ಅಲ್ಲದೆ ಇದ್ದರೆ ಆಗ ನಿಮ್ಮ ಭಾವನೆಗಳಿಂದಲೇ ಇದನ್ನು ತೋರ್ಪಡಿಸಿ. ಮಾತಿಗಿಂತಲೂ ಕ್ರಮವು ಹೆಚ್ಚು ಪ್ರಭಾವಿಯಾಗಿರುವುದು.

ನಿಮ್ಮ ಸಹೋದರ/ರಿ ಕೆಲವೊಂದು ಸಲ ಕಿರಿಕಿರಿ ಉಂಟು ಮಾಡಬಹುದು. ಆದರೆ ಅವರು ನಿಮ್ಮ ಕುಟುಂಬ ಎಂದೇ ಭಾವಿಸಬೇಕು ಅವರು ಸಹ ನಿಮಗಾಗಿ ಇದ್ದಾರೆ. ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಅವರನ್ನು ಪ್ರೀತಿಸಿ. ಅವರು ನಿಮ್ಮ ಶ್ರೇಷ್ಠ ಸೋದರ/ರಿ ಎಂದು ಹೇಳಿ ಮತ್ತು ಅವರನ್ನು ಯಾವಾಗಲೂ ಸ್ನೇಹಿತರಂತೆ ನೋಡಿಕೊಳ್ಳಿ. ನಿಮಗಿಂತ ಒಳ್ಳೆಯ ಅಕ್ಕ ಆಕೆಗೆ ಬೇರೆ ಯಾರು ಸಿಗುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಿ.

English summary

Inspiring Ways To Be a Better Big Sister

When mom and dad don’t understand, a sister always will. Sisters are good, harsh, complicated, and everything in between. Having a sister is both a punishment and a gift anyway you see it. You both share memories nobody else can ever connect with in a special way.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more