For Quick Alerts
ALLOW NOTIFICATIONS  
For Daily Alerts

ಪತ್ನಿಗೆ ಪ್ರೀತಿ ತೋರಲು ಬಜೆಟ್ ನೋಡಬೇಡಿ!

By Hemanth Amin
|

ಕೆಲವೊಂದು ಸಲ ಸಾಮಾನ್ಯ ಪ್ರೀತಿಯಿಂದ ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಬ್ಯಾಂಕ್ ನಲ್ಲಿ ಕೂಡಿಟ್ಟ ಹಣವನ್ನು ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ. ಮನೆಯ ಯಜಮಾನಿಯನ್ನು ಸಂತೋಷವಾಗಿರಿಸಲು ನೀವು ಅತಿಯಾದ ಪ್ರೀತಿ ತೋರಿಸುವುದು ತುಂಬಾ ಮುಖ್ಯ. ನಿಮ್ಮ ಅನುಪಸ್ಥಿತಿಯಲ್ಲಿ ಆಕೆ ಪ್ರತಿಯೊಂದರ ಜವಾಬ್ದಾರಿ ತೆಗೆದುಕೊಂಡು ಕೆಲಸದಿಂದ ಹಿಂತಿರುಗಿ ಬಂದಾಗ ಮನೆಯ ಬಗ್ಗೆ ಆಪ್ತಭಾವನೆ ಮೂಡುವಂತೆ ಮಾಡುತ್ತಾಳೆ. ಮುದ್ದಿಸುವ ವಿಷಯ ತುಂಬಾ ಸಣ್ಣದೇ ಆಗಿರಬಹದುದು, ಪ್ರೀತಿ ಮತ್ತು ಪ್ಯಾಶನ್ ನಿಂದ ಇದನ್ನು ದ್ವಿಗುಣಗೊಳಿಸಬಹುದು.

ವಜ್ರದ ನೆಕ್ಲೇಸ್ ಖರೀದಿಸಿ ನೀಡುವುದು ಒಂದು ಒಳ್ಳೆಯ ಯೋಜನೆ. ಆದರೆ ಇದಕ್ಕೆ ನಿಮ್ಮ ಕಿಸೆ ಕೂಡ ದಪ್ಪವಾಗಿರಬೇಕು. ನಿಮ್ಮ ಕಿಸೆ ಎಷ್ಟು ದಪ್ಪವಾಗಿದೆ ಎನ್ನುವುದರ ಮೇಲೆ ಪ್ರೀತಿ ಅವಲಂಬಿಸಿರುವುದಿಲ್ಲ. ಆಕೆ ತುಂಬಾ ಇಷ್ಟಪಡುವ ಸಿಹಿತಿಂಡಿ, ಚಾಕಲೇಟ್ ಅಥವಾ ಸಿನೆಮಾಗೆ ಕರೆದುಕೊಂಡು ಹೋದರೂ ಅಷ್ಟೇ ಪ್ರೀತಿ ತೋರಿಸಬಹುದು. ನಿಮ್ಮ ಯೋಚನೆಗಳಲ್ಲಿ ಆಕೆ ಭಾಗವಾಗಿದ್ದಾಳೆಂದು ತಿಳಿಯಲು ಆಕೆಗೆ ಸಂತೋಷವಾಗುತ್ತದೆ. ಇದು ನೀವು ಯೋಚಿಸಿದಕ್ಕಿಂತ ಹೆಚ್ಚು ನಿಮ್ಮಿಬ್ಬರ ಸಂಬಂಧ ಬಲಪಡಿಸುತ್ತದೆ. ಹೀಗೆ ಮುದ್ದಾಡುವುದರಿಂದ ಜಗಳ ಮತ್ತು ಭಿನ್ನಾಭಿಪ್ರಾಯ ಪರಿಹರಿಸಬಹುದು.

ಆಕೆಯ ಹುಟ್ಟುಹಬ್ಬದ ದಿನ ಅಥವಾ ಮಹಿಳಾ ದಿನದಂದು ಉಡುಗೊರೆಗಳನ್ನು ನೀಡಬಹುದು. ಪ್ರತೀ ತಿಂಗಳು ನಿಮ್ಮ ಸಂಬಳದ ಒಂದು ಭಾಗವನ್ನು ತೆಗೆದಿಡಿ ಮತ್ತು ಯಾವಾಗಲೂ ಉಡುಗೊರೆ ನೀಡಬೇಕೆಂದು ನಿಮಗನಿಸಿದರೆ ಆಗ ಅದೇ ಬಜೆಟ್ ನಲ್ಲಿ ಉಡುಗೊರೆ ಖರೀದಿಸಿ. ಒಳಉಡುಪು ಖರೀದಿಸುವುದು ಈಗ ಗೌಪ್ಯವಾಗಿ ಉಳಿದಿಲ್ಲ. ಇಂದು ಹೆಚ್ಚಿನ ಮಳಿಗೆಗಳಲ್ಲಿ ಪುರುಷರ ಖರೀದಿಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಮುಂದಿನ ಸಲಕ್ಕೆ ಈ ರೀತಿ ಯೋಚಿಸುತ್ತಿದ್ದರೆ ಖರೀದಿಗೆ ಹಿಂಜರಿಯಬೇಕೆಂದಿಲ್ಲ.

1. ಹೂ

1. ಹೂ

ಗುಲಾಬಿಯ ಬುಕ್ಕೆ ಅಥವಾ ಆಕೆಯ ಫೇವರಿಟ್ ಬಣ್ಣ, ಇಷ್ಟದ ಹೂವನ್ನು ನೀಡಿದರೆ ಆಗ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ಗುಲಾಬಿ ಮೂಲಕ ಪ್ರೀತಿ ವ್ಯಕ್ತಪಡಿಸಲು ನಿಮಗೆ 50 ರೂ.ಗಿಂತ ಕಡಿಮೆ ಖರ್ಚಾಗಬಹುದು.

2. ಕಾರ್ಡ್

2. ಕಾರ್ಡ್

ನಿಮ್ಮ ತಲೆಗೆ ಯಾವುದೇ ಯೋಚನೆ ಬರದಿದ್ದರೆ ಆಗ ಕೈಬರಹದಲ್ಲಿ ಕೆಲವೊಂದು ರೋಮ್ಯಾಂಟಿಕ್ ಶಬ್ದಗಳನ್ನು ಬರೆದ ಗ್ರೀಟಿಂಗ್ ಕಾರ್ಡ್ ಪ್ರಶಂಸೆಯ ಉಡುಗೊರೆಯಾಗಲಿದೆ.

3. ಚಾಕಲೇಟ್ಸ್

3. ಚಾಕಲೇಟ್ಸ್

ಚಾಕಲೇಟ್ಸ್ ನ ಒಂದು ಬಾಕ್ಸ್ ಯಾವತ್ತೂ ಒಳ್ಳೆಯದು. ಆಕೆಯ ಮುಖದಲ್ಲಿ ನೀವು ನೋಡಬಯಸುವ ನಗುವನ್ನು ಈ ಚಾಕಲೇಟ್ ಬಾಕ್ಸ್ ಮೂಡಿಸುತ್ತದೆ. 200 ರೂಪಾಯಿಗೆ ಹೃದಯದ ಆಕಾರದ ಚಾಕಲೇಟ್ ಬಾಕ್ಸ್ ಖರೀದಿಸಬಹುದು.

4. ಸಿನೆಮಾ

4. ಸಿನೆಮಾ

ಆಕೆಗೆ ತುಂಬಾ ಇಷ್ಟದ ಪಾತ್ರ ಅಥವಾ ನಟಿ-ನಟಿಯಿರುವ ಚಿತ್ರ ಬಿಡುಗಡೆಯಾಗಿದ್ದರೆ ಆಗ ಮರುಚಿಂತಿಸದೆ ಟಿಕೆಟ್ ಖರೀದಿಸಿ ಸಿನೆಮಾಗೆ ಕರೆದುಕೊಂಡು ಹೋಗಿ ಆಕೆಗೆ ಸರ್ಪ್ರೈಸ್ ನೀಡಿ. ಸಿನೆಮಾ ಕೆಟ್ಟದಾಗಿದ್ದರೂ ನೀವು ಅದನ್ನು ಕಡೆಗಣಿಸಬೇಕಾಗುತ್ತದೆ.

5. ಒಳಉಡುಪು

5. ಒಳಉಡುಪು

ಹೌದು! ಮಹಿಳೆಯರ ಒಳಉಡುಪನ್ನು ಖರೀದಿಸುವುದು ಆರಂಭದಲ್ಲಿ ತುಂಬಾ ಕಠಿಣ ಮತ್ತು ಶಾಪಿಂಗ್ ಮಾಡುವುದು ಮುಜುಗರ ಉಂಟು ಮಾಡಬಹುದು. ಮೊದಲ ಸಲ ನೀವು ಖರೀದಿ ಮಾಡಿದರೆ ಮತ್ತೆ ಹಿಂಜರಿಕೆ ಬರದು. ಇದು ಆಕೆಯನ್ನು ಮುದ್ದಿಸಲು ಒಳ್ಳೆಯ ವಿಧಾನ.

6. ಮೆಸೇಜ್

6. ಮೆಸೇಜ್

ಹೆಚ್ಚಿನ ಖರ್ಚು ಇಲ್ಲದೆ ಪತ್ನಿಯ ಮೇಲೆ ಪ್ರೀತಿ ತೋರಿಸುವ ಒಳ್ಳೆಯ ವಿಧಾನವೆಂದರೆ ಆಕೆಗೆ ಮೆಸೇಜ್ ಮಾಡುತ್ತಿರುವುದು. ಇದು ನಿಮಗೆ ಸಾಧ್ಯವಿಲ್ಲವೆಂದಾದರೆ ಆಕೆಯ ಮೆಸೇಜ್ ಗೆ ಸರಿಯಾದ ಉತ್ತರ ನೀಡಿ.

7. ಆಕೆಯ ಹೆತ್ತವರನ್ನು ಭೇಟಿಯಾಗುವುದು

7. ಆಕೆಯ ಹೆತ್ತವರನ್ನು ಭೇಟಿಯಾಗುವುದು

ಪತ್ನಿಯ ಹೆತ್ತವರನ್ನು ಭೇಟಿಯಾಗಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆಕೆಗೆ ಪ್ರೀತಿ ತೋರಿಸಲು ಸ್ವಲ್ಪ ಪೆಟ್ರೋಲ್ ಗೆ ಖರ್ಚು ಮಾಡಿ ಸಮಯ ನೀಡಿ ಪತ್ನಿಯ ಹೆತ್ತವರನ್ನು ಭೇಟಿಯಾಗಿ. ಆಕೆಯ ಬಗ್ಗೆ ಕಾಳಜಿ ವಹಿಸುತ್ತೀದ್ದೀರಿ ಮತ್ತು ಆಕೆಯನ್ನು ಆಕರ್ಷಿಸಲು ಇದು ತುಂಬಾ ನೆರವಾಗುತ್ತದೆ.

8. ಅಡುಗೆ

8. ಅಡುಗೆ

ನೀವು ಒಳ್ಳೆಯ ಅಡುಗೆ ಮಾಡುವವರು ಅಲ್ಲದಿರಬಹುದು. ಆದರೆ ಪತ್ನಿಗಾಗಿ ಅಡುಗೆ ಮಾಡುವುದರಿಂದ ಪತ್ನಿಯ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ಸಂಪಾದಿಸಿ. ಇದು ಹೆಚ್ಚಿನ ಹಣ ಖರ್ಚು ಮಾಡದೆ ಆಕೆಯ ಬಗ್ಗೆ ನಿಮಗಿರುವ ಕಾಳಜಿ ಮತ್ತು ಪ್ರೀತಿ ತೋರಿಸುತ್ತದೆ.

9. ಸರ್ಪ್ರೈಸ್

9. ಸರ್ಪ್ರೈಸ್

ಮಹಿಳೆಯರು ಸರ್ಪ್ರೈಸ್ ನ್ನು ಇಷ್ಟಪಡುತ್ತಾರೆ. ನಿಮ್ಮ ಬಜೆಟ್ ನೊಳಗೆ ಆಕೆಗೆ ಸರ್ಪ್ರೈಸ್ ನೀಡಬಹುದು. ಚೆನ್ನಾಗಿ ಸಿಂಗರಿಸಿರುವ ಬೆಡ್ ಮತ್ತು ಕ್ಯಾಂಡಲ್ ಗಳನ್ನು ಹಚ್ಚಿ ಆಕೆಯನ್ನು ರೂಮ್ ಗೆ ಸ್ವಾಗತಿಸುವುದು ಆಕೆ ಮತ್ತೊಮ್ಮೆ ನಿಮ್ಮನ್ನು ಅತಿಯಾಗಿ ಪ್ರೀತಿಸುವಂತೆ ಮಾಡಬಹುದು.

English summary

Ways To Pamper Your Wife In Budget

Sometimes plain love won't help you pamper your love, and you don't have to break your bank for it either. Your wife needs to be pampered regularly to keep ‘the boss of the house' happy. After all she takes care of everything else in your absence and make you feel ‘home' when you get back from work.
Story first published: Friday, November 29, 2013, 20:04 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X