For Quick Alerts
ALLOW NOTIFICATIONS  
For Daily Alerts

ಅತ್ತೆ-ಸೊಸೆ ಜಗಳ ನಿಮ್ಮಿಂದಲೇ ಕೊನೆಯಾಗಲಿ!

By Poornima Hegde
|

ಮದುವೆ ಎನ್ನುವುದು ಜೀವನದ ಒಂದು ಭಾಗ. ಅದರಲ್ಲೂ ಹೆಣ್ಣಿಗೆ ಜೀವನ ಹೊಸ ತಿರುವನ್ನು ಪಡೆದುಕೊಳ್ಳುವುದು ಇಲ್ಲೇ. ಇದು ಸಾರ್ವತ್ರಿಕ. ತಾನು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು, ಹೊಸ ಜನರೊದಿಗೆ, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಸಂದರ್ಭ ಇದು. ಮನೆಯಲ್ಲಿ ತಾಯಿಯಂತೆ ಗಂಡನ ಮನೆಯಲ್ಲು ಅತ್ತೆಯೊಂದಿಗೆ ಹೊಸ ಸಂಬಂಧವನ್ನು, ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅತ್ತೆ ಸೊಸೆಯ ನಡುವೆ ಯಾವುದೇ ರಹಸ್ಯವೂ ಇಲ್ಲದೇ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಆದರೆ ಸಾಮಾನ್ಯವಾಗಿ 'ಅತ್ತೆ ಸೊಸೆ ಜಗಳ' ಎನ್ನುವುದು 'ಎಲ್ಲರ ಮನೆಯ ದೋಸೆಯೂ ತೂತೆ' ಎನ್ನುವಷ್ಟು ಕಟು ಸತ್ಯ. ಆದರೆ ಈ ಮಧ್ಯೆ ಒಬ್ಬ ಒಳ್ಳೆಯ ಸೊಸೆ ಈ ಜಗಳಗಳನ್ನೂ ಮೀರಿ ಅತ್ಯಂತ ಸುಂದರವಾದ ಸಂಸಾರವನ್ನು ನಡೆಸಬಲ್ಲಳು.

ಬೇರೆ ಪರಿಸರದಿಂದ ಒಂದು ಹೊಸ ಜನರೊಂದಿಗೆ ಹೊಂದಿಕೊಳ್ಳಲು ಎಲ್ಲಾ ಹೆಣ್ಣಿಗೂ ಸ್ವಲ್ಪ ಸಮಯಬೇಕಾಗುತ್ತದೆ. ಆದರೆ ನೀವು ಅವರೊಂದಿಗೆ ಕಳೆಯುವ ಸಮಯ ಉತ್ತಮವಾಗಿರಬೇಕಾದರೆ ಅದಕ್ಕಿರುವ ಉತ್ತಮ ಮಾರ್ಗವೆಂದರೆ ಅವರೊಂದಿಗಿನ ಜಗಳವನ್ನು ತಪ್ಪಿಸಿ. ಅದದಲ್ಲೂ ಅತ್ತೆಯ ವಿಷಯ ಬಂದಾಗ ನೀವು ಹೆಚ್ಚು ಗವನವಹಿಸಬೇಕು. ಆದ್ದರಿಂದ ನಿಮ್ಮ ಉತ್ತಮ ಜೀವನಕ್ಕೆ ಸಂದರ್ಭಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಸರಿಯಾಗಿ ವರ್ತಿಸಲು ಕಲಿಯಬೇಕು. ಅವರನ್ನು ತಪ್ಪಾಗಿ ಭಾವಿಸದೇ ಅವರೊಂದಿಗೆ ನಿಮ್ಮ ಬಾಂಧವ್ಯವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳಿ. ಅವರೊಂದಿಗೆ ಜಗಳವಾಗದಂತೆ ನೋಡಿಕೊಳ್ಳಿ. ಹಾಗಾದರೆ ಅಂತಹ ಉತ್ತಮ ಸೊಸೆಎನಿಸಿಕೊಳ್ಳುವುದು ಹೇಗೆ?

Ways Daughter-in-law can avoid tiffs

1. ಪ್ರಶಂಸನೀಯ ಕೆಲಸ!
ಪ್ರಸಂಸನೀಯ ಮಾತು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಆದ್ದರಿಂದ ನಿಮ್ಮ ಅತ್ತೆ ಅವರ ಮಗನನ್ನು ಈ ಮಟ್ಟಕ್ಕೆ ಬೆಳೆಸಲು ಎಷ್ಟು ಪರಿಶ್ರಮಪಟ್ಟಿದ್ದಾರೆ ಎಂಬುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಈ ಬಗ್ಗೆ ನೀವು ಒಳ್ಳೆಯ ಮಾತುಗಳನ್ನಾಡಿದಾಗ ಅವರ ಮನಸ್ಸು ತುಂಬಿಬರುವುದನ್ನು ನೀವೇ ನೋಡುವಿರಿ !

2. ನಿರ್ಲಕ್ಷ ಮಾಡದಿರಿ:
ಸಾಮಾನ್ಯವಾಗಿ ದೊಡ್ಡವರು ಎಲ್ಲಾ ಕೆಲಸಗಳಲ್ಲಿಯೂ ತಮ್ಮ ಹಾಜರಾತಿಯನ್ನು ತೋರಿಸಲು ಇಷ್ಟಪಡುತ್ತಾರೆ. ಹಾಗೆಂದ ಮಾತ್ರಕ್ಕೆ ನಿಮ್ಮ ಕೆಲಸಗಳಲ್ಲಿಯೂ ಭಾಗಿಯಾದರೆ ಅವರನ್ನು ನಿರ್ಲಕ್ಷ ಮಾಡಬೇಡಿ. ನಿಮಗೆ ಅವರ ಸಹಾಯದ ಅಗತ್ಯವಿದೆ ಎಂಬುದನ್ನು ಹೇಳಿ. ಈ ಪ್ರವೃತ್ತಿ ನಿಮ್ಮ ಮನೆಯಲ್ಲಿ ನಡೆಯುವ ಅರ್ದದಷ್ಟು ಜಗಳವನ್ನು ತಡೆಯುತ್ತದೆ!

3. ಸ್ನೇಹ ಪ್ರವೃತ್ತಿ ಬೆಳೆಸಿಕೊಳ್ಳಿ
ನಿಮ್ಮ ಅತ್ತೆ ನಿಮ್ಮ ಗಂಡನನ್ನು / ಅವರ ಮಗನನ್ನು ತುಸು ಹೆಚ್ಚಾಗಿಯೇ ಇಷ್ಟಪಡಬಹುದು. ಸದಾ ಅವರ ಜೊತೆಯಲ್ಲಿರಲು ಬಯಸಬಹುದು. ಇದರಿಂದ ನಿಮಗೆ ಕೊಂಚ ತೊಂದರೆಯೂ ಆಗಬಹುದು. ಆದರೆ ನೀವು ಉತ್ತಮ ಸೊಸೆಯಾಗಿದ್ದರೆ ಅವರ ನಡುವಿನ ಬಾಂದವ್ಯವನ್ನು ಅರ್ಥಮಾಡಿಕೊಳ್ಳಬಲ್ಲಿರಿ! ಆದ್ದರಿಂದ ಈ ವಿಷ್ಯಕ್ಕೆ ಸಿಟ್ಟಾಗದೆ ಅವರಲ್ಲಿ ಸ್ನೇಹ ಭಾವವನ್ನು ಬೆಳೆಸಿಕೊಳ್ಳಿ.

4. ಬದಲಾವಣೆಗೆ ಸಮಯ ಕೊಡಿ
ಹೊಸ ಬದಲಾವಣೆಗೆ ಹೆಚ್ಚು ಸಮಯಬೇಕಾಗುತ್ತದೆ. ಅದರಲ್ಲೂ ಗಂಡನ ಮನೆಯಲ್ಲಿ ಅತ್ತೆ ನಿಮ್ಮೊಂದಿಗೆ ಹೊಂದಿಕೊಳ್ಳಬೇಕಾದರೂ ಸಹಜವಾಗಿಯೇ ಸ್ವಲ್ಪ ಸಮಯ ಹಿಡಿಯುತ್ತದೆ. ಆದ್ದರಿಂದ ನೀವೇ ನಿಮ್ಮ ಅತ್ತೆಯೊಂದಿಗೆ ಸ್ನೇಹವನ್ನು ಬೆಳೆಸಿ. ಅವರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿ, ಜಗಳಕ್ಕೆ ಎಡೆಮಾಡಿಕೊಡಬೇಡಿ!

5. ಜಗಳದ ಮಧ್ಯೆ ಅತ್ತೆಯನ್ನು ದೂರದಿರಿ
ಗಂಡ ಹೆಂಡತಿ ಎಂದಮೇಲೆ ಸಣ್ಣ ಪುಟ್ಟ ಕಲಹಗಳು ಸಹಜ. ಆದರೆ ನೀವು ಹೀಗೆ ತರ್ಕ ಮಾಡುವಾಗ ನಡುವಲ್ಲಿ ನಿಮ್ಮ ಅತ್ತೆಯ ಬಗ್ಗೆ ದೂರುವುದನ್ನು ಮಾಡಬೇಡಿ. ಹೀಗೆ ಮಾಡಿದರೆ ಅತ್ತೆಯೊಂದಿಗೆ ಮಾತ್ರವಲ್ಲದೇ ಗಂಡನೊಂದಿಗೆ ಸಹ ಸ್ನೇಹಭಾವ ದೂರಾಗಬಹುದು!

6. ಸ್ವ ಅಭಿಮಾನವಿರಲಿ
ನಿಮ್ಮ ಹಾಗೂ ನಿಮ್ಮ ಗಂಡನ ಜಗಳದ ನಡುವೆ ಅತ್ತೆ ಭಾಗಿಯಾದರೆ ಅವರು. ಅವರ ಮಗನ ಪರವಾಗಿಯೇ ಮಾತನಾಡಬಹುದು. ಹಾಗೆಂದ ಮಾತ್ರಕ್ಕೆ ಅವರಿಗೆ ನಿಮ್ಮ ಬಗ್ಗೆ ಒಲವಿಲ್ಲವೆಂದು ಅರ್ಥವಲ್ಲ. ಸುಮ್ಮನೆ ನಿಮ್ಮ ಜಗಳ ಮುಂದುವರಿಯದಿರಲಿ ಎಂಬ ಅಭಿಲಾಷೆ ಅವರದ್ದಾಗಿರಬಹುದು. ಆದ್ದರಿಂದ ಅವರ ಈ ಪ್ರವೃತ್ತಿಯ ಬಗ್ಗೆ ಬೇಸರಪಡದೇ ಅವರನ್ನು ಅರ್ಥಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ತೋರಿಸಿ.

7. ಅತ್ತೆಯೊಂದಿಗೆ ಸ್ನೇಹವಿರಲಿ
ಒಳ್ಳೆಯ ಸೊಸೆ ನೀವಾಗಬೇಕಿದ್ದರೆ ಮೊದಲು ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಸೋದರ ಭಾವ, ಸ್ನೇಹದ ನಡತೆಯನ್ನು ರೂಢಿಸಿಕೊಳ್ಳಿ. ಅವರೊಂದಿಗೆ ಸದಾ ಸ್ನೇಹದಿಂದಿರುತ್ತ ಅವರನ್ನು ಗೌರವಿಸಿವುದರ ಮೂಲಕ ನಿಮಗೆ ಅವರು ಗೌರವ ನೀಡುವುದನ್ನು ನೀವೇ ಗಮನಿಸಿ.

ಉತ್ತಮ ಹಾಗೂ ಹೆಮ್ಮೆಯ ಸೊಸೆ ಎನಿಸಿಕೊಳ್ಳಬೇಕಾದರೆ ನಿಮ್ಮಲ್ಲಿರುವ ಸ್ನೇಹದ ಸ್ವಭಾವವನ್ನು ಹೊರಗೆಡವಿ. ನಿಮ್ಮ ಉತ್ತಮ ನಡವಳಿಕೆ ಸದಾ ಅವರನ್ನು ಸಂತೋಷದಿಂದಿಡುವಂತಾಗಲಿ. ಇಂಥ ಗುಣಗಳು ನಿಮ್ಮಲ್ಲಿವೆಯಾದರೆ 'ಅತ್ತೆ ಸೊಸೆ' ನಡುವೆ ಇನ್ನೆಲ್ಲಿ ಜಗಳ?

English summary

Ways Daughter-in-law can avoid tiffs

Marriage is a part of life and a phase of life that may bring in drastic changes at all levels. It is a time when you get acquainted with new people, new customs and a rather new way of living. When you leave your house, you leave your mother but there is your husband's mother whom you acquaint with.
Story first published: Saturday, November 30, 2013, 11:33 [IST]
X
Desktop Bottom Promotion