For Quick Alerts
ALLOW NOTIFICATIONS  
For Daily Alerts

ವಿಚ್ಛೇದನ ಸುಲಭ, ನಂತರದ ಜೀವನ?

|

ಸಂಸಾರದಲ್ಲಿ ಇರಬೇಕಾದ ಹೊಂದಾಣಿಕೆ, ತೃಪ್ತಿ ದೊರೆಯದಿದ್ದಾಗ ವಿಚ್ಛೇದನ ತೆಗೆದುಕೊಳ್ಳುವುದೇ ಸೂಕ್ತ ಎಂದು ನಮ್ಮ ಆಪ್ತರು ಸಲಹೆ ನೀಡುತ್ತಾರೆ. ನಮಗೂ ಅದೇ ಸರಿ ಅನಿಸಿ ಬಿಡುತ್ತದೆ. ಆದರೆ ವಿಚ್ಛೇದನದ ನಂತರ ನಮ್ಮ ಜೀವನ ಹೇಗಿರುತ್ತದೆ ಎಂದು ಒಂದು ಕ್ಷಣ ಯೋಚಿಸುವುದಿಲ್ಲ.

ಕೆಲ ಸಂಬಂಧಗಳಲ್ಲಿ ವಿಚ್ಛೇದನ ತೆಗೆದುಕೊಂಡರೆ ಮಾತ್ರ ನೆಮ್ಮದಿಯ ಬದುಕು ಕಾಣಲು ಸಾಧ್ಯವೆಂದಿರುತ್ತದೆ. ಉದಾಹರಣೆಗೆ ಬಾಳ ಸಂಗಾತಿಗೆ ಅನೈತಿಕ ಸಂಬಂಧವಿರುವುದು ಅಥವಾ ದೈಹಿಕ ಹಿಂಸೆ ನೀಡುವುದು, ಸೈಕೋ, ಮಿತಿ ಮೀರಿದ ಕುಡತದ ಚಟ ಈ ರೀತಿಯವರ ಜೊತೆ ಸಂಬಂಧ ಮುಂದುವರೆಸುವುದರಿಂದ ನಮ್ಮ ಮನಸ್ಸಿನ ನೆಮ್ಮದಿ ಹಾಳಾಗುವುದಲ್ಲದೆ ಮತ್ಯಾವುದೇ ಪ್ರಯೋಜನವಿಲ್ಲ. ಆಶ್ಚರ್ಯಕರವೆಂದರೆ ಈ ರೀತಿಯ ಸಮಸ್ಯೆಯಿಂದ ವಿಚ್ಛೇದನೆ ತೆಗೆದುಕೊಳ್ಳುತ್ತಿರುವವರು ಕೇವಲ10%.

Marital Separation Can Save Marriages

ಉಳಿದ ಶೆ. 90ರಷ್ಟು ಜನರು ತಮ್ಮ ಒಣ ಪ್ರತಿಷ್ಠೆ, ಸಂಶಯ, ಹೊಂದಾಣಿಕೆ ಮಾಡಿಕೊಳ್ಳಲಾರದ ಗುಣದಿಂದ ವಿಚ್ಛೇದನೆ ತೆಗೆದುಕೊಂಡು ನಂತರ ಪಶ್ಚಾತಾಪ ಪಡುತ್ತಾರೆ. ವಿಚ್ಛೇದನದ ನಂತರ ಜೀವನ ಸುಲಭವಲ್ಲ. ಈ ಸಮಾಜದ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಮೊದಲನೇಯ ಸಂಬಂಧದಲ್ಲಿ ಮಕ್ಕಳಿದ್ದರೆ, ವಿಚ್ಛೇದನದ ನಂತರ ಮತ್ತೊಂದು ಮದುವೆಯಾದರೆ ನಿಮ್ಮ ಎರಡನೇಯ ಸಂಗಾತಿ ಮಕ್ಕಳನ್ನು ನೋಡಿಕೊಳ್ಳದಿದ್ದರೆ ಸಮಸ್ಯೆ ಉಂಟಾಗಬಹುದು. ಆಗ ಪಶ್ಚಾತಾಪ ಪಟ್ಟು ಪ್ರಯೋಜನವಿಲ್ಲ.

ಇದನ್ನು ಅರೆತ ಕೋರ್ಟ್ ವಿಚ್ಛೇದನಕ್ಕೆ ಅರ್ಜಿ ಹಾಕುವವರಿಗೆ ಸ್ವಲ್ಪ ದಿನಗಳ ಕಾಲಾವಕಾಶ ಕೊಡುತ್ತದೆ. ಏಕೆಂದರೆ ವಿಚ್ಛೇದನಕ್ಕೆ ಅರ್ಜಿ ಹಾಕುವ ದಂಪತಿಗಳ ಮನಸ್ಸು ತುಂಬಾ ಗೊಂದಲದಲ್ಲಿರುತ್ತದೆ. ನಿರ್ಧಾರ ಸರಿಯಾಗಿ ಇರಲಿಲ್ಲ ಎಂದು ಮುಂದೆ ಪಶ್ಚಾತಾಪ ಪಡಬಾರದೆಂದು ಈ ಕಾಲಾವಕಾಶ ನೀಡಲಾಗಿರುತ್ತದೆ. ಅದರಲ್ಲೂ ಈ ಕೆಳಗಿನಂತೆ ಮಾಡಿದರೆ ಸಂಗಾತಿಯಿಂದ ವಿಚ್ಛೇದನ ಪಡೆಯಬೇಕೆ? ಬೇಡ್ವೆ ಎನ್ನುವುದು ನಿಮ್ಮ ಮನಸ್ಸಿಗೆ ಸ್ಪಷ್ಟವಾಗುವುದು.

30 ದಿನಗಳವರೆಗೆ ಅವರ ಭೇಟಿ ಮಾಡಬೇಡಿ, ಚರ್ಚಿಸಬೇಡಿ
ವಿಚ್ಛೇದನಕ್ಕೆ ಅರ್ಜಿ ಹಾಕಿದ ಮೇಲೆ ಯಾರೂ ಒಂದು ಸೂರಿನಡಿಯಲ್ಲಿ ಬಾಳುವುದಿಲ್ಲ. ಒಂದು ವೇಳೆ ಅವರನ್ನು ಕಂಡಾಗ ಕೋಪಗೊಳ್ಳುವುದು, ಕೊಂಕು ನುಡಿಯುವುದು ಮಾಡಬಾರದು. ನಿಮ್ಮ ವಿಷಯದಲ್ಲಿ ಇನ್ನೊಬ್ಬರ ಸಲಹೆ ಪಡೆಯಬೇಡಿ. ನೀವೇ ಚಿಂತಿಸಿ, ಆಗ ನಿಮಗೆ ಅವರ ಜೊತೆ ಬಾಳಬಹುದೇ? ಇಲ್ಲವೇ? ಅನ್ನುವುದು ತಿಳಿಯುತ್ತದೆ.

ಮಾನಸಿಕ ಸ್ಥಿತಿ
ಈ ಸಮಯದಲ್ಲಿ ಮಾನಸಿಕ ಸ್ಥಿತಿ ಸಂಪೂರ್ಣ ಹಾಳಾಗಿರುತ್ತದೆ. ಆದರೂ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿ. ನಿಮ್ಮ ಮನಸ್ಸು ಅವರನ್ನು ಬೇಡ ಅನ್ನುವುದಾದರೆ ಅವರಿಲ್ಲದೆ ಬದುಕಲು ಮೊದಲು ಮಾನಸಿಕವಾಗಿ ಸಿದ್ಧರಾಗಿ. ಇಲ್ಲ ಅವರ ಜೊತೆ ಬಾಳಬೇಕು ಅನಿಸಿದರೆ ಹೊಂದಾಣಿಕೆಗೆ ಸಿದ್ಧರಾಗಿ.

ಜೊತೆಯಲ್ಲಿ ಬಾಳಬೇಕೆಂದು ಅನಿಸಿದರೆ ನಿಮ್ಮ ಸಂಗಾತಿಯ ಜೊತೆ ಮಾತನಾಡಿ. ಸೀದಾ ಹೋಗಿ ಮಾತನಾಡಬೇಡಿ. ಮೊದಲು ಅವರಿಗೆ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸುವುದು ಅಥವಾ ಮೆಸೇಜ್ ಮುಖಾಂತರ ಕೇಳುವುದು ಮಾಡಬೇಕು. ಹಾಗೇ ಅವರ ಜೊತೆ ಹಳೆಯ ಸ್ನೇಹ ಗಳಿಸಿದ ಬಳಿಕ ನಿಮ್ಮ ನಡುವೆ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಆಗಲೂ ಇಬ್ಬರಿಗೆ ಹೊಂದಿಕೊಂಡು ಹೋಗಲು ಸಾಧ್ಯ ಅನಿಸಿದರೆ ಮುಂದಿನ ಜೀವನ ಸುಂರವಾಗಿರುವುದು.

English summary

Marital Separation Can Save Marriages | ವಿಚ್ಛೇದನ ಸುಲಭ, ನಂತರದ ಜೀವನ?

There are many couples who have been through marital separation and come back strongly to save their marriage. Divorce is a lengthy procedure with many steps. So just because you are staying separately for a while, it doesn't mean that your marriage is over.
X
Desktop Bottom Promotion