For Quick Alerts
ALLOW NOTIFICATIONS  
For Daily Alerts

ಗುಲಾಬಿ ಪಕಳೆಗಾಗಿ ಕಾದು ಕುಳಿತಿರುವ ಜೀವದ ಗೆಳತಿ

By * ಅರ್ಪಿತಾ ಹರ್ಷ, ಲಂಡನ್
|
Arpitha with her husband Harsha
ಜೀವದ ಒಡೆಯ,

ಕಳೆದ ದಿನಗಳ ಮೆಲುಕು ಎಂದೆಂದು ಅದ್ಬುತ. ಸ್ನೇಹ ಪ್ರೀತಿಯಾಗಿ ಹೊರಹೊಮ್ಮುವಾಗ ಆಗುವ ಆನಂದ ಬಣ್ಣಿಸಲು ಅಸಾದ್ಯ. ನಿನ್ನೊಡನೆ ಕಳೆದ ನೆನಪುಗಳು ಸುಂದರ ಅತಿಸುಂದರ. ಮೊದಲ ಭೇಟಿಯಲ್ಲೇ ಕಣ್ಣ ಸೆಳೆದ ನೀನು ಕಣ್ಣಲ್ಲೇ ಒಪ್ಪಿಗೆ ಸೂಸಿದಾಗ ಮನ ಸಂತೋಷದಿಂದ ಕುಣಿದಿತ್ತು. ನೀ ಕೈಗಿತ್ತ ಆ ಗುಲಾಬಿ ಇಂದು ನನ್ನ ಮುಡಿ ಸೇರಿ ನಗುತ್ತಿದೆ. ಮೊದಲ ಪ್ರೇಮಿಗಳ ದಿನದಂದು ಕಳುಹಿಸಿದ ಆ ಹದಿನೆಂಟು ಕೆಂಪು ಗುಲಾಬಿ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ತರಿಸಿತ್ತು.

ನೆನಪಿದೆಯ ಗೆಳೆಯ ಅದೇ ಮೊದಲ ಬಾರಿ ನಾನು ನಿಮ್ಮನ್ನು ಭೇಟಿ ಮಾಡಿದಾಗ ಸಮಯ ಕಳೆದುದೇ ತಿಳಿಯದಂತೆ ಹರಟಿದ್ದೆವು. ಆ ದಿನ ನಿಮ್ಮ ಪ್ರತಿ ಮಾತು ಅರ್ಥಪೂರ್ಣವಾಗಿದ್ದವು. ನನ್ನ ಮನ ತಟ್ಟುವಂತೆ ನಿಮ್ಮ ಮಾತಿನಿಂದಲೇ ನನ್ನ ಮೋಡಿ ಮಾಡಿದ್ದಿರಿ. ಮೊದಲ ಭಾರಿಯ ಪ್ರೇಮಿಗಳ ದಿನದಂದು ಬೆಳಗಿನ ಮುಂಜಾವಿನಲಿ ಎದುರು ಬಂದು ನಿಂತು ಕೆಂಪು ಗುಲಾಬಿಯನ್ನು ಕೈಗಿತ್ತಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬ ನುಡಿ ಮನದಲ್ಲೊಮ್ಮೆ ಮಿಂಚಿತ್ತು.

ಆ ದಿನ ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಅಂದಿನಿಂದ ನನ್ನ ಎಲ್ಲ ಕ್ಷಣಗಳು ಸಂತೋಷವಾಗಿರುವಂತೆ ನೋಡಿಕೊಂಡ ನಿನಗೆ ನನ್ನ ಒಲವೆ ಕಾಣಿಕೆ. ಆ ಪ್ರೇಮಿಗಳ ದಿನದಂದು ಪ್ರಾರಂಭವಾದ ನಮ್ಮ ಜೀವನ ಪ್ರತಿದಿನವೂ ಪ್ರೆಮಿಗಳ ದಿನದಂತೆಯೇ ಸಾಗುತ್ತಿದೆ. ಆದರೂ ನಮ್ಮಿಬ್ಬರ ಆ ಮೊದಲ ಬಾರಿಯ ಪ್ರೇಮಿಗಳ ದಿನ ಎಂದೆಂದಿಗೂ ಹಚ್ಚ ಹಸಿರು. ನೀ ಕೊಟ್ಟ ಆ ಗುಲಾಬಿ ಹೂಗಳ ಎಸಳುಗಳು ನನ್ನ ಡೈರಿಯ ಒಂದೊಂದು ಪುಟದಲ್ಲೂ ನೆನಪುಗಳ ಸರಮಾಲೆಯಾಗಿ ಬೆಚ್ಚಗೆ ಕುಳಿತಿವೆ.

ಮತ್ತೆ ಈ ವರುಷದ ಪ್ರೇಮಿಗಳ ದಿನ ಸನಿಹ ಬಂದಿದೆ. ನಿನ್ನ ಆ ಕೆಂಪು ಗುಲಾಬಿಗಾಗಿ ಕಾಯುತ್ತಾ ಕುಳಿತಿರುವೆ.

ಇಂತಿ ನಿನ್ನ ಜೀವದ ಗೆಳತಿ,

ಅರ್ಪಿತಾ

English summary

Will you again present me rose on Valentine's day? | ಗುಲಾಬಿಗಳ ಪಕಳೆಗಾಗಿ ಕಾದು ಕುಳಿತಿರುವ ಜೀವದ ಗೆಳತಿ

First sight, first touch, first rose, first kiss, first hug always endearing. Love always beckons. A love letter by Arpitha Harsha from London waiting for a beautiful red rose on Valentine's day.
Story first published: Monday, February 6, 2012, 18:58 [IST]
X
Desktop Bottom Promotion