For Quick Alerts
ALLOW NOTIFICATIONS  
For Daily Alerts

ಅಡುಗೆ ಹದಗೆಡದಿರಲು ಉಪಯುಕ್ತ ಸಲಹೆಗಳು

By Staff
|
Bharathi HS, Bengaluru
ಅಡುಗೆ ಮನೆಯೆಂಬ ಪ್ರಯೋಗಶಾಲೆಯಲ್ಲಿ ಮೊದಲಬಾರಿ ಅಡಿಯಿಟ್ಟ ಮುದ್ದಿನಿಂದ ಬೆಳೆಸಲ್ಪಟ್ಟ ಹೊಸಮದುಮಗಳು ಅಥವಾ ಅಮ್ಮನ ಸೆರಗಿನಿಂದ ಮೊದಲಬಾರಿ ಹೊರಬಂದು ಬೇರೆ ಊರಿನಲ್ಲಿ ಕೋಣೆ ಮಾಡಿಕೊಂಡ ಬ್ರಹ್ಮಚಾರಿ ಮೊದಲಬಾರಿಗೆ ಸೌಟು ಹಿಡಿದಾಗ ಕಕ್ಕಾಬಿಕ್ಕಿಯಾಗುವುದು ಸಹಜ. ಇಂಥ ನಿಪುಣರಲ್ಲದ ಅಡುಗೆ ಭಟ್ಟರಿಗೆ ಬೆಂಗಳೂರಿನ ಭಾರತಿ ಎಚ್ಎಸ್ ಅವರು ವೈವಿಧ್ಯಮಯ ವಿಷಯಕ್ಕೆ ಸಂಬಂಧಿಸಿದಂತೆ ಟಿಪ್ಸ್ ನೀಡಿದ್ದಾರೆ. ನಿಮಗೂ ಮತ್ತೇನಾದರೂ ಸಲಹೆಗಳು ಗೊತ್ತಿದ್ದರೆ ನಮಗೂ ತಿಳಿಸಿ.

* ಭಾರತಿ ಎಚ್.ಎಸ್., ಬೆಂಗಳೂರು

1. ಇಡ್ಲಿ ಮೆತ್ತಗೆ ಹೂವಿನ ಹಾಗೆ ಆಗಲು;

* ಅಕ್ಕಿ ನೆನೆ ಹಾಕುವಾಗ ತಣ್ಣೀರಿನ ಬದಲಿಗೆ ಬಿಸಿನೀರನ್ನು ಹಾಕಿ.
* ಅಕ್ಕಿ ನೆನೆ ಹಾಕುವಾಗ ಎರಡು ಹಿಡಿ ಅವಲ್ಲಕ್ಕಿಯನ್ನು ಹಾಕಿ.
* ಇಡ್ಲಿ ಅಕ್ಕಿಯನ್ನೇ ಉಪಯೋಗಿಸಿದರೆ ಮೃದುವಾಗಿ ಬರುವುದು.

2. ದೋಸೆ ಗರಿ ಗರಿಯಾಗಿ ಬರಲು;

* ದೋಸೆ ಅಕ್ಕಿಯನ್ನೇ ತಂದು ನೆನೆಹಾಕಿ ಮಾಡಿದರೆ ದೋಸೆ ಚೆನ್ನಾಗಿ ಬರುವುದು.
* ಅಕ್ಕಿ, ಉದ್ದಿನ ಬೇಳೆ ನಾನೆ ಹಾಕುವಾಗ ಅದರ ಜೊತೆ 1 ಹಿಡಿ ಅವಲಕ್ಕಿ ಹಾಕಿದರೆ ಕಾವಲಿಯಿಂದ ಸುಲಭವಾಗಿ ಮೇಲೆ ಏಳುತ್ತದೆ.
* ಅಕ್ಕಿಯ ಜೊತೆ 2 ಚಮಚ ಮೆಂತ್ಯೆ ನೆನೆ ಹಾಕಿದರೆ ಚೆನ್ನಾಗಿ ಉದುಗು ಬರುವುದಲ್ಲದೆ ಒಳ್ಳೆಯ ವಾಸನೆ ಇರುತ್ತದೆ.
* ಅಕ್ಕಿಯ ಜೊತೆ 2 ಚಮಚ ಕಡಲೆ ಬೇಳೆ ಹಾಕ್ಕಿದಲ್ಲಿ ದೋಸೆಗೆ ಒಳ್ಳೆಯ ಹೊಂಬಣ್ಣ ಬರುವುದು.
* ರುಬ್ಬಿದ ಹಿಟ್ಟಿಗೆ 1 ಚಮಚ ಸಕ್ಕರೆ ಹಾಕಿದರೆ ಒಳ್ಳೆಯ ಬಣ್ಣ ಬರುತ್ತದೆ.
* ಕಾವಲಿಗೆ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಉಪ್ಪು, ಸಾಸಿವೆ ಹಾಕಿ ಸಿಡಿಸಿ ಚೆನ್ನಾಗಿ ಒರೆಸಿ ದೋಸೆ ಹಾಕಿದಾಗ, ಕಚ್ಚದೆ ದೋಸೆ ಚೆನ್ನಾಗಿ ಬರುವುದು.
* ಮಿಕ್ಕಿದ ದೋಸೆ ಹಿಟ್ಟಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಕಾಯಿತುರಿ ಎಲ್ಲ ಹಾಕಿ ಪಡ್ಡು ಕಾವಲಿಗೆ ಹಾಕಿದರೆ ಪಡ್ಡು ಅಥವಾ ಗುಂಡುಪಂಗಳ ರೆಡಿ.

3 ಚಪಾತಿ ಮೃದುವಾಗಿ ಬರಲು;

* ಚಪಾತಿ ಕಲೆಸುವಾಗ 3 ಬಟ್ಟಲು ಅಳತೆಗೆ ಸರಿಯಾಗಿ 1 ಬಟ್ಟಲು ನೀರನ್ನು ಹಾಕಿ ಕಲೆಸಬೇಕು.
* 2 ಚಮಚ ಎಣ್ಣೆ ಹಾಕಿ ಕಲೆಸಿ ಚೆನ್ನಾಗಿ ನಾದಿದಲ್ಲಿ ಮೃದುವಾಗುವುದು.

4. ಪಲಾವ್ ಅಥವಾ ಬಾತ್ ಗಳನ್ನು ಮಾಡುವಾಗ ನಿಂಬೆ ರಸ ಹಿಂಡಿದರೆ ಉದುರಾಗುತ್ತದೆ.
5. ಕರಿಬೇವು ಸೊಪ್ಪನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಂಡ್ಡಿದ್ದರೆ ಅಡುಗೆಗಳಿಗೆ ಬೇಕಾದಾಗ ಉಪಯೋಗಿಸಬಹುದು.
6. ಮೊಟ್ಟೆಯನ್ನು ಬೇಯಿಸುವಾಗ ಉಪ್ಪನ್ನು ಹಾಕಿದಲ್ಲಿ ಹೊರಬಾಗ ಒಡೆಯದೆ ಸಿಪ್ಪೆ ಸಲಿಸಾಗಿ ಬರುವುದು.
7. ಹುರುಳಿಕಾಯಿ, ಗೋರಿಕಾಯಿ ಪಲ್ಯಗಳನ್ನು ಬೇಯಿಸುವಾಗ 1/2 ಚಮಚ ಸಕ್ಕರೆ ಹಾಕಿದರೆ ರುಚಿ ಬರುವುದಲ್ಲದೆ, ಬೆಂದ ಮೇಲೆ ತರಕಾರಿಯ ಹಸಿರು ಬಣ್ಣ ಹಾಗೆ ಇರುವುದು.
8. ಏಲ್ಲಕ್ಕಿ ಡಬ್ಬಿಯಲ್ಲಿ ಮೆಣಸು ಕಾಳು ಹಾಕಿಟ್ಟರೆ ವಾಸನೆ ಹಾಗೆ ಇದ್ದು ಬೇಗ ಕೆಡುವುದಿಲ್ಲ.
9. ಸಾರಿಗೆ ಬೇಳೆ ಬೇಯಲು ಇಡುವಾಗ ಅರಿಸಿನ, 1/2 ಚಮಚ ಎಣ್ಣೆ ಹಾಕಿದರೆ ಬೇಗ ಬೆಂದು ಕಟ್ಟು ಚೆನ್ನಾಗಿ ಬಿಡುವುದು.
10. ಬಜ್ಜಿ, ಬೋಂಡ, ವಡೆಗಳನ್ನು ಮಾಡುವಾಗ 4 ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿಕೊಂಡರೆ ಗರಿ ಗರಿಯಾಗಿ ಚೆನ್ನಾಗಿ ಬರುವುದು.

Story first published: Wednesday, December 23, 2009, 13:41 [IST]
X
Desktop Bottom Promotion