For Quick Alerts
ALLOW NOTIFICATIONS  
For Daily Alerts

ಕೊಬ್ಬರಿ ಲಾಡು, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By manu
|

ಯಾವುದೇ ಭಾರತೀಯ ಹಬ್ಬ ಬಂತೆಂದರೆ ವಿವಿಧ ಭಕ್ಷ್ಯಗಳ ಮಹಾಪೂರವೇ ಹರಿಯುತ್ತದೆ. ಪ್ರತಿ ಮನೆಯಲ್ಲಿಯೂ ವಿವಿಧ ಬಗೆಯ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ವಸಂತ ಮಾಸದ ನವರಾತ್ರಿ ಈಗಾಗಲೇ ಪ್ರಾರಂಭವಾಗಿದ್ದು ಹಬ್ಬದ ಸಂಭ್ರಮ ಕೊನೆಗೊಳ್ಳುವ ಮುನ್ನವೇ ನಿಮ್ಮ ಪಾಕ ವಿಧಾನದ ವೈವಿಧ್ಯತೆಯನ್ನು ಒರೆಹಚ್ಚುವುದು ಒಂದು ಸವಾಲಾಗಿದೆ. ಎಲ್ಲರೂ ಈಗ ಹೊಸ ಹೊಸ ರುಚಿಗಳನ್ನು ಮಾಡುತ್ತಾ ಅತಿಥಿಗಳ ಪ್ರಶಂಸೆ ಪಡೆಯುತ್ತಿದ್ದಂತೆ ನೀವೂ ಇನ್ನಷ್ಟು ರುಚಿಯಾದ ಸಿಹಿತಿಂಡಿಯನ್ನು ಮಾಡುವ ಮೂಲಕ ನಿಮ್ಮ ಅತಿಥಿಗಳ ಮನವನ್ನು ಗೆಲ್ಲಬಹುದು.

ನವರಾತ್ರಿಯ ಉಪವಾಸ ಕೊನೆಗೊಳಿಸಲು ಮತ್ತು ಹಬ್ಬದ ಸಂಭ್ರಮ ಹೆಚ್ಚಿಸಲು ಒಂದು ಉತ್ತಮ ಆಯ್ಕೆಯೆಂದರೆ ಕೊಬ್ಬರಿ ಲಾಡು. ಏಕೆಂದರೆ ಲಾಡು ಹೆಚ್ಚಿನವರ ನೆಚ್ಚಿನ ಸಿಹಿಯಾಗಿದ್ದು ಈ ಬಾರಿ ಘನೀಕರಿಸಿದ ಹಾಲನ್ನು ಬಳಸಿರುವ ಕಾರಣ ವಿಭಿನ್ನ ರುಚಿ ಮತ್ತು ಹೊಸತನವನ್ನು ನೀಡುತ್ತದೆ. ನವರಾತ್ರಿ ಸ್ಪೆಷಲ್: ಘಮ್ಮೆನ್ನುವ ಪಾಲಕ್ ಪಲಾವ್

Coconut Ladoo With Condensed Milk Recipe

ಲಾಡುವನ್ನು ಈ ಬಾರಿ ಆಯ್ಕೆ ಮಾಡಿಕೊಂಡಿರುವುದೇಕೆಂದರೆ ಲಾಡು ತಯಾರಿಸಲು ಸುಲಭವಾಗಿದ್ದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದು ಉಪವಾಸದಿಂದ ಬಳಲಿರುವವರಿಂದ ಹೆಚ್ಚು ಶ್ರಮವನ್ನು ತೆಗೆದುಕೊಳ್ಳದಿರುವುದರಿಂದ ಉತ್ತಮ ಆಯ್ಕೆಯಾಗಿದೆ. ವರ್ಷವಿಡೀ ವಿವಿಧ ರೀತಿಯ ಲಾಡುಗಳನ್ನು ತಯಾರಿಸಲಾಗುತ್ತದೆಯಾದರೂ ನವರಾತ್ರಿಯ ಸಮಯದಲ್ಲಿ ತಯಾರಿಸುವ ಲಾಡುವಿಗೆ ವಿಶೇಷ ಆದ್ಯತೆಯಿದೆ.

ಅದರಲ್ಲೂ ಉಪವಾಸವಿದ್ದವರಿಗೆ ಪೌಷ್ಠಿಕಾಂಶ ಮತ್ತು ಶಕ್ತಿಯಿಂದ ಕೂಡಿದ ಕೊಬ್ಬರಿ ಲಾಡು ಅತ್ಯಂತ ಸೂಕ್ತವಾಗಿದೆ. ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸಿದ ಲಾಡುವಿನಲ್ಲಿ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿರಲಾಗುತ್ತದೆ. ಆದರೆ ಇಂದಿನ ವಿಧಾನದಲ್ಲಿ ಘನೀಕರಿಸಿದ ಹಾಲನ್ನು ಬಳಸಿರುವ ಕಾರಣ ಇದು ಕೆನೆಭರಿತವಾಗಿದ್ದು ಕೊಂಚವೇ ಸಕ್ಕರೆ ಸೇರಿಸಿರುವುದರಿಂದ ಎಲ್ಲರ ಮನ ಗೆಲ್ಲುವುದು ಖಂಡಿತ. ಬನ್ನಿ ಇದನ್ನು ತಯಾರಿಸುವ ವಿಧಾನವನ್ನು ಈಗ ನೋಡೋಣ: ನವರಾತ್ರಿ ಸ್ಪೆಷಲ್-ಹೆಸರುಬೇಳೆ ಪಾಯಸ

ಪ್ರಮಾಣ: ಸುಮಾರು ಹತ್ತರಿಂದ ಹದಿನೈದು ಲಾಡುಗಳು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಮೂವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
1. ಕಾಯಿತುರಿ- 2 ಕಪ್
2. ಘನೀಕರಿಸಿದ ಹಾಲು (Condensed milk)- 2 ಕಪ್
3. ಸಕ್ಕರೆ- 1 ಕಪ್
4. ಏಲಕ್ಕಿ ಪುಡಿ- 1 ಚಿಕ್ಕಚಮಚ
5. ಬಾದಾಮಿ- 4-5 (ಅರ್ಧವಾಗಿಸಿದ್ದು)
6. ಬೆಣ್ಣೆ - 1 ಚಿಕ್ಕ ಚಮಚ (ಲಾಡು ಉಂಡೆ ಮಾಡಲು ಕೈಗಳಿಗೆ ಹಚ್ಚಿಕೊಳ್ಳಲು) ನೆಲಗಡಲೆಯ ಹಲ್ವಾ-ನವರಾತ್ರಿ ರೆಸಿಪಿ

ವಿಧಾನ:
1) ಘನೀಕರಿಸಿದ ಹಾಲನ್ನು ದಪ್ಪತಳದ ಪಾತ್ರೆಯಲ್ಲಿ ಹಾಕಿ ಚಿಕ್ಕ ಉರಿಯಲ್ಲಿ ಸುಮಾರು ಹತ್ತು ನಿಮಿಷ ಕುದಿಸಿ.
2) ನಡುನಡುವೆ ತಳಹತ್ತದಂತೆ ಮರದ ಚಮಚದಿಂದ ತಿರುವುತ್ತಾ ಇರಿ.
3) ಇದಕ್ಕೆ ಕಾಯಿತುರಿ ಹಾಕಿ ಚೆನ್ನಾಗಿ ಕಲಕಿ. ಬಿಸಿಯಾದ ಘನ ಹಾಲನ್ನು ಕಾಯಿತುರಿ ಪೂರ್ಣವಾಗಿ ಹೀರಿಕೊಳ್ಳುವಂತೆ ಮಾಡಿ.
4) ಚಿಕ್ಕ ಉರಿಯಲ್ಲಿ ಇನ್ನೂ ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಸಿಮಾಡಿ.
5) ಬಳಿಕ ಸಕ್ಕರೆ ಹಾಕಿ ಕಲಕಿ. ಎಲ್ಲಾ ಸಕ್ಕರೆ ಕರಗಿದ ಬಳಿಕ ಉರಿ ನಂದಿಸಿ
6) ಈಗ ಏಲಕ್ಕಿ ಪುಡಿ ಬೆರೆಸಿ ಮಿಶ್ರಣ ಮಾಡಿ.
7) ಇನ್ನು ನಿಮ್ಮ ಎರಡೂ ಹಸ್ತಗಳಿಗೆ ಕೊಂಚ ಬೆಣ್ಣೆಯನ್ನು ಸವರಿ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ. ಚಿಕ್ಕ ಉಂಡೆಯಾದರೆ ಹದಿನೈದಾಗುತ್ತದೆ, ದೊಡ್ಡದಾದರೆ ಹತ್ತು ಉಂಡೆಗಳಾಗುತ್ತವೆ. ನಿಮ್ಮ ಮನೆಯ ಸದಸ್ಯರ ಮತ್ತು ಅತಿಥಿಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಉಂಡೆಕಟ್ಟಿ ತಟ್ಟೆಯಲ್ಲಿ ಒಂದರ ಪಕ್ಕ ಒಂದಿಡಿ.
8) ಬಳಿಕ ಅರ್ಧ ಬಾದಾಮಿಯ ತುಂಡನ್ನು ಹುದುಗಿಸಿ ನೋಡಲು ಚೆನ್ನಾಗಿ ಕಾಣುವಂತೆ ಅಲಂಕರಿಸಿ ಅತಿಥಿಗಳಿಗೆ ಬಡಿಸಿ.

ಕಿವಿಮಾತು:
1) ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಇರುವುದರಿಂದ ತೂಕ ಇಳಿಸುವವರು ತಮ್ಮ ಜಿಹ್ವಾಚಾಪಲ್ಯವನ್ನು ಒಂದು ಲಾಡುವಿಗೆ ಮೀಸಲಿಡುವುದು ಉತ್ತಮ
2) ಈ ಲಾಡುಗಳನ್ನು ಗಾಳಿಯಾಡದ ಜಾಡಿಯಲ್ಲಿ ಭದ್ರವಾಗಿ ಮುಚ್ಚಿಡುವ ಮೂಲಕ ಬಹುಕಾಲ ಕೆಡದಂತೆ ಇಡಬಹುದು.
3) ಪ್ರಯಾಣದ ಅವಧಿಯಲ್ಲಿ ದಾರಿಮಧ್ಯೆ ನಿಲ್ಲಿಸಿ ಊಟಕ್ಕೆ ಬಿಟ್ಟ ಹೋಟೆಲಿನಲ್ಲಿ ಊಟ ಮಾಡಲು ಇಷ್ಟವಿಲ್ಲದಿದ್ದರೆ ಈ ಲಾಡುಗಳು ಊಟದ ಬದಲಿಗೆ ಅತ್ಯುತ್ತಮವಾಗಿವೆ. ಕೆಲವು ಲಾಡುಗಳನ್ನು ಬುತ್ತಿ ಕಟ್ಟಿಕೊಂಡು ಹೋಗಿ ಊಟದ ಬದಲಿಗೆ ಸೇವಿಸಿ.
4) ಘನೀಕರಿಸಿದ ಹಾಲು ಮತ್ತು ಸಕ್ಕರೆಯನ್ನು ಬಳಸಿರುವ ಕಾರಣ ಇದು ಮಧುಮೇಹಿಗಳಿಗೆ ಸೂಕ್ತವಲ್ಲ.
5) ಒಂದು ವೇಳೆ ಮಧುಮೇಹಿಗಳಿಗೆ ಲಾಡು ತಯಾರಿಸಬೇಕಾದ ಅಗತ್ಯ ಬಿದ್ದರೆ ಕೆನೆರಹಿತ ಹಾಲನ್ನು ಚಿಕ್ಕ ಉರಿಯಲ್ಲಿ ಕುದಿಸಿ ಅರ್ಧದಷ್ಟಾದ ಬಳಿಕ ಅಷ್ಟೇ ಪ್ರಮಾಣದ ಕಾಯಿತುರಿಯನ್ನು ಬಳಸಿ ಲಾಡು ತಯಾರಿಸಬಹುದು.
6) ಕಾಯಿತುರಿ ಲಭ್ಯವಿಲ್ಲದಿದ್ದರೆ ಕೊಬ್ಬರಿಪುಡಿ ಸಹಾ ಬಳಸಬಹುದು, ಆದರೆ ಲಾಡು ಕೊಂಚ ಗಟ್ಟಿಯಾಗುತ್ತದೆ.

English summary

Coconut Ladoo With Condensed Milk Recipe

Any Indian festival is incomplete without sweets. As the Vasant Navratri has started, there are many ways in which you can enjoy every day of the fasting by indulging in some tasty vrat recipes. You can opt to buy sweets from the market. But preparing the sweets at home has its own charm and a personal touch attached to it. So, why not prepare sweets at home while fasting? Ladoos are a hot favourite of most of the people when it comes to sweets.
X
Desktop Bottom Promotion