For Quick Alerts
ALLOW NOTIFICATIONS  
For Daily Alerts

ಮಕ್ಕಳ ದಿನಾಚರಣೆ ವಿಶೇಷ: ಸಿಹಿ ಸಿಹಿಯಾದ ಕಾಫಿ ಕುಕ್ಕೀಸ್

By Super
|

ನವೆಂಬರ್ 14 ಭಾರತದ ಪ್ರಥಮ ಪ್ರಧಾನಿ ನೆಹರುರವರ ಜನ್ಮದಿನ. ತಮ್ಮ ಜನ್ಮದಿನವನ್ನು ಮಕ್ಕಳ ಹೆಸರಿನಲ್ಲಿ ಆಚರಿಸಬೇಕೆಂಬ ಅವರ ಬಯಕೆಯಂತೆಯೇ ಮಕ್ಕಳ ನೆಚ್ಚಿನ ಚಾಚಾ ನೆಹರುರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಭಾರತದ ಭವ್ಯ ಮತ್ತು ಉಜ್ವಲ ಭವಿಷ್ಯ ಮಕ್ಕಳ ಕೈಯಲ್ಲಿದೆ, ಇದಕ್ಕಾಗಿ ಅವರಿಗೆ ಸೂಕ್ತ ವಿದ್ಯಾಭ್ಯಾಸ ಮತ್ತು ಸೌಲಭ್ಯವನ್ನು ಒದಗಿಸಲು ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದರು.

ಇದರಲ್ಲಿ ದೆಹಲಿಯ ಖ್ಯಾತ ವೈದ್ಯಕೀಯ ಸಂಸ್ಥೆ ಏಮ್ಸ್ (AIIMS), ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರಮುಖವಾಗಿವೆ. ಮಕ್ಕಳ ದಿನಾಚರಣೆಯನ್ನು ಸುಮ್ಮನೆ ಪುಗ್ಗ ಒಡೆದು ಆಚರಿಸಿದರೆ ಸಾಕೇ? ಮಕ್ಕಳಿಗೆ ಇಷ್ಟವಾಗುವ ಸಿಹಿ ಬೇಡವೇ? ಸಿಹಿ ಎಂದರೆ ಮಾರುಕಟ್ಟೆಯಿಂದ ತಂದ ಅದೇ ಲಾಡು, ಚಾಕಲೇಟು ನೋಡಿ ಬೇಜಾರಾಗುತ್ತಿದೆಯೇ?

ಬನ್ನಿ ಇಂದು ಮಕ್ಕಳು ಅತೀವವಾಗಿ ಇಷ್ಟಪಡುವ ಕಾಫಿ ಕುಕ್ಕೀಸ್ ಮಾಡಿ ಅವರಿಗೆ ತಿನ್ನಿಸೋಣ. ಕಾಫಿ ಎಂದರೆ ನಮಗೆಲ್ಲಾ ಚಿಕ್ಕಂದಿನಿಂದಲೂ ದಿನದ ಪ್ರಾರಂಭಿಸುವ ಪೇಯವಾಗಿದ್ದು ನಾವೆಲ್ಲಾ ಕಾಫಿ ಕುಡಿಯುತ್ತಲೇ ದೊಡ್ಡವರೂ ಆಗಿದ್ದೇವೆ. ಆದರೆ ಮಕ್ಕಳಿಗೆ ಹೆಚ್ಚು ಕಾಫಿ ಕುಡಿಸದೇ ಇತರ ಅನಾರೋಗ್ಯಕರ ಸಿದ್ಧ ಆಹಾರಗಳಿಗೆ ಒಡ್ಡುತ್ತಿದ್ದೇವೆ. ಬೇಡ, ಮಕ್ಕಳ ದಿನಾಚರಣೆಯಲ್ಲಾದರೂ ಅವರು ಆರೋಗ್ಯಕರವಾದ ಕಾಫಿಯ ಸಿಹಿಯನ್ನು ಆಸ್ವಾದಿಸಲಿ. ಅವರ ಮೊಗದಲ್ಲಿ ನಗು ಮೂಡಲು ನಿಮ್ಮ ಸಮಯದ ಸುಮಾರು ಮೂವತ್ತೈದು ನಿಮಿಷ ಮಾತ್ರ ಸಾಕು. ಇದಕ್ಕೆ ಅಗತ್ಯವಿರುವ ಸಾಮಾಗ್ರಿಗಳು ನಿಮ್ಮ ಅಡುಗೆಮನೆಯಲ್ಲಿಯೇ ಲಭ್ಯವಿದ್ದು ವಿವಿಧ ಅಂಗಡಿಗಳಿಗೆ ಎಡತಾಕುವ ಅಗತ್ಯವೂ ಇಲ್ಲ.

Children's Day special-Mouthwatering Coffee Cookies

ಪ್ರಮಾಣ: ಸುಮಾರು ಇಪ್ಪತ್ತು ಕುಕ್ಕಿಗಳು

ಸಿದ್ಧತಾ ಸಮಯ: ಇಪ್ಪತ್ತೈದು ನಿಮಿಷಗಳು

ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಮೈದಾ ಹಿಟ್ಟು - ಒಂದೂವರೆ ಕಪ್

*ಬೆಣ್ಣೆ: ಐವತ್ತು ಗ್ರಾಂ

*ಪುಡಿ ಮಾಡಿದ ಕಂದು ಸಕ್ಕರೆ: ನಾಲ್ಕು ದೊಡ್ಡ ಚಮಚ

*ಕಾಫಿ ಪುಡಿ (ಇನ್ಸ್ ಟಂಟ್)-ಎರಡು ದೊಡ್ಡ ಚಮಚ

*ವೆನಿಲ್ಲಾ ಎಸೆನ್ಸ್ - ನಾಲ್ಕು ಹನಿಗಳು

*ಮೊಟ್ಟೆಯ ಬಿಳಿಭಾಗ: ಎರಡು ಮೊಟ್ಟೆಗಳಿಂದ ಬೇರ್ಪಡಿಸಿದ್ದು.

*ಕಾಯಿ ತುರಿ: ಅರ್ಧ ಕಪ್

*ಉಪ್ಪು: ಒಂದು ಚಿಟಿಕೆ

*ಅಡುಗೆ ಸೋಡಾ: ಒಂದು ಚಿಕ್ಕ ಚಮಚ

*ಕುಕ್ಕಿ ಅಚ್ಚುಗಳು : ಇಪ್ಪತ್ತು

*ಬಟರ್ ಪೇಪರ್ - ಒಂದು ಥಾನು

*ಬಿಳಿಯ ಕ್ರೀಂ- ಒಂದು ಕಪ್

*ಮೊದಲೇ ಬಿಸಿ ಮಾಡಿಟ್ಟಿರುವ ಉಗುರುಬೆಚ್ಚನೆಯ ನೀರು: ಸುಮಾರು ಎರಡು ಕಪ್

ವಿಧಾನ:

1) ಒಂದು ಅಗಲವಾದ ಮತ್ತು ದಪ್ಪತಳದ ಪಾತ್ರೆಯಲ್ಲಿ ಬೆಣ್ಣೆ ಬಿಸಿಮಾಡಿ ಕರಗಿಸಿ ಅದರಲ್ಲಿ ಸಕ್ಕರೆ ಹಾಕಿ ಮಿಶ್ರಣ ಮಾಡಿ.

2) ಇದಕ್ಕೆ ಮೊಟ್ಟೆಯ ಬಿಳಿಭಾಗ, ವೆನಿಲ್ಲಾ ಎಸೆನ್ಸ್ ಹಾಕಿ ಸುಮಾರು ಸುಮಾರು ಮೂರರಿಂದ ನಾಲ್ಕು ನಿಮಿಷ ಚಿಕ್ಕ ಉರಿಯಲ್ಲಿ ಇದು ನೊರೆನೊರೆಯಾಗುವವರೆಗೆ ತಿರುವುತ್ತಾ ಇರಿ.

3) ಇನ್ನೊಂದು ಪಾತ್ರೆಯಲ್ಲಿ ಮೈದಾ, ಅಡುಗೆ ಸೋಡಾ, ಕಾಫಿ ಪುಡಿ, ಉಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿ.

4) ಈ ಪಾತ್ರೆಗೆ ಬಿಸಿಯಾಗಿರುವ ದ್ರವವನ್ನು ಸೇರಿಸಿ. ಜೊತೆಗೇ ಕೊಂಚ ಉಗುರುಬೆಚ್ಚನೆಯ ನೀರನ್ನು ಸೇರಿಸಿ ಮರದ ಚಮಚದಿಂದ ಮಿಶ್ರಣ ಮಾಡಿ. ಕೊಂಚ ತಣ್ಣಗಾದ ಬಳಿಕ ಚಪಾತಿ ಹಿಟ್ಟಿನ ಹದ ಬರುವವರೆಗೆ ಕೈಗಳಿಂದ ಕಲೆಸಿಕೊಳ್ಳಿ, ಬಳಿಕ ಕಾಯಿತುರಿ ಹಾಕಿ ಕಲೆಸಿ.

5) ಇದೇ ಹೊತ್ತಿನಲ್ಲಿ ಮೈಕ್ರೋವೇವ್ ಓವೆನ್ ಅನ್ನು 350 ಡಿಗ್ರಿ F ತಾಪಮಾನದಲ್ಲಿ ಬಿಸಿಮಾಡಿ. (Pre-heat)

6) ನಿಮ್ಮ ಇಷ್ಟದ ಆಕಾರದ ಅಚ್ಚುಗಳ ಒಳಗೆ ಕೊಂಚ ಬೆಣ್ಣೆ ಸವರಿ ಹಿಟ್ಟನ್ನು ತುಂಬಿಸಿ.

7) ಬಳಿಕ ಬಟರ್ ಪೇಪರ್ ಅಚ್ಚುಗಳ ಗಾತ್ರಕ್ಕೆ ಅನುಗುಣವಾಗಿ ಕತ್ತರಿಸಿ ಪ್ರತಿ ಅಚ್ಚನ್ನೂ ಮುಚ್ಚಿ.

8) ಬಳಿಕ ಮೈಕ್ರೋವೇವ್‌ ನಲ್ಲಿ ಸುಮಾರು ಏಳರಿಂದ ಹತ್ತು ನಿಮಿಷಗಳವರೆಗೆ 60% ಪ್ರಖರತೆಯಲ್ಲಿ ಕುಕ್ಕೀಸ್‌ಗಳನ್ನು ಬಿಸಿ ಮಾಡಿ.

9) ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿರುವ ಮಕ್ಕಳಿಗೆ ತಿನ್ನಲು ನೀಡಿ ಅವರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿ.

English summary

Children's Day special-Mouthwatering Coffee Cookies

In India, Children's Day is celebrated on 14 November. It is the birthday of the first Prime Minister of independent India, our beloved Jawharlal Nehru. Children called him Chacha Nehru (Uncle Nehru). He understood the importance of giving love and affection to children, whom he saw as the bright future of a greater India.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more