For Quick Alerts
ALLOW NOTIFICATIONS  
For Daily Alerts

ಅತಿಥಿ ಸತ್ಕಾರಕ್ಕೆ ದಿಢೀರ್ ಕೇಸರಿ ಬಾತ್

By * ಮಾಲಿನಿ ಎನ್, ಮೈಸೂರು
|
Kesari bhat sweet recipe
ಸಾಮಾನ್ಯವಾಗಿ ಗೃಹಿಣಿಗೆ ಮನೆಗೆ ಅತಿಥಿಗಳು ಬಂದಾಗ ತಕ್ಷಣಕ್ಕೆ ಏನು ಸಿಹಿತಿಂಡಿ ಮಾಡಬೇಕು ಅಂತ ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ ನಾನು ಸುಲಭವಾಗಿ ಮಾಡಬಹುದಾದ ಒಂದು ಸಿಹಿತಿಂಡಿಯನ್ನು ಇಲ್ಲಿ ತಿಳಿಸಿದ್ದೀನಿ. ಅದೂ ಎಲ್ಲರಿಗೂ ತಿಳಿದ ಸಾಮಾನ್ಯ ಸಿಹಿತಿಂಡಿ. ಇದಕ್ಕೆ ಅಷ್ಟೇನು ಸಾಮಗ್ರಿಗಳು ಬೇಕಿಲ್ಲ. ಮತ್ತೆ ಬಹಳ ಬೇಗನೇ ಆಗಬಹುದಾದ ತಿಂಡಿ ಅದೇ ಕೇಸರಿಬಾತು. ಆದರೆ ಮಾಡುವ ವಿಧಾನ ಮಾತ್ರ ಬೇರೆ ಎನಿಸಬಹುದು ನಿಮಗೆ. ಏನಾದರೂ ಆಗಲಿ ನೀವು ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಸಾಮಗ್ರಿಗಳು :

ಸಣ್ಣರವೆ 2 ಕಪ್
ನಂದಿನಿ ತುಪ್ಪ 3 ಸ್ಪೂನ್
ಡಾಲ್ಡ ತುಪ್ಪ 1/2 ಕಪ್
ಸನ್‌ಫ್ಲವರ್ ಆಯಿಲ್
ಸಕ್ಕರೆ 2 ಕಪ್
ಗೋಡಂಬಿ ಸ್ವಲ್ಪ
ಒಣದ್ರಾಕ್ಷಿ ಸ್ವಲ್ಪ
ಕೇಸರಿ ಬಣ್ಣ

ಕೇಸರಿ ಬಾತ್ ತಯಾರಿಸುವ ವಿಧಾನ :

ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಮೇಲೆ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಕೈಯಾಡಿಸಿ (ಜಾಸ್ತಿಹೊತ್ತು ಬಿಟ್ಟರೆ ದ್ರಾಕ್ಷಿ ಕಪ್ಪಾಗಾಗುತ್ತದೆ). ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ ಬಿಸಿಯಾದ ಮೇಲೆ ರವೆಯನ್ನು ಹಾಕಿ, ನಂತರ ಡಾಲ್ಢ ತುಪ್ಪ ಮತ್ತು ಸನ್‌ಫ್ಲವರ್ ಆಯಿಲ್‌ನ್ನು (ಸ್ವಲ್ಪ) ಹಾಕಿ ಎಲ್ಲೂ ಗಂಟಾಗದಂತೆ ಕೈಯಾಡಿಸಿ. ನೀವು ಹಾಕಿದ ಪ್ರಮಾಣವು, ಬಾಣಲಿಯಲ್ಲಿ ರವೆ ಪಾಯಸದ ತರ ಇರಬೇಕು.

ರವೆಯನ್ನು ಕಡಿಮೆ ಉರಿಯಲ್ಲಿ ತಿರುವುತ್ತಾ ಇರಬೇಕು. ಇನ್ನೊಂದು ಕಡೆ ಎರಡು ಕಪ್‌ನಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ರವೆ ಇರುವ ಬಾಣಲಿಗೆ ಕಾದ ಬಿಸಿನೀರನ್ನು ಹಾಕಿ. ರವೆ ಪ್ರಮಾಣ ಮತ್ತು ನೀರಿನ ಪ್ರಮಾಣ ಸಮ ಇರಬೇಕು. ನಂತರ ಸ್ವಲ್ಪ ಕೇಸರಿಯನ್ನು ಹಾಕಿ. ನಂತರ 2 ಲೋಟ ಸಕ್ಕರೆಯನ್ನು ಹಾಕಿ ಮತ್ತೆ ಕೈಯಾಡಿಸಿ. ದಟ್ಸಾಲ್, ದಿಢೀರ್ ಕೇಸರಿ ಬಾತ್ ತಯಾರ್.

English summary

Kesari bhat recipe | Cuisine of Karnataka | Delicious sweet recipe | ಕೇಸರಿ ಬಾತ್ | ಕರ್ನಾಟಕದ ಸಿಹಿ ತಿನಿಸುಗಳು

Kesari bhat sweet recipe by Malini N. Mallikarjunaswamy from Mysore. This favorite cuisine of Karnataka is easy to prepare in a short span of time.
Story first published: Saturday, December 4, 2010, 11:45 [IST]
X
Desktop Bottom Promotion