For Quick Alerts
ALLOW NOTIFICATIONS  
For Daily Alerts

ಬಕ್ರೀದ್ ಗೆ ಸೋಹನ್ ಹಲ್ವಾ ಸ್ಪೆಷಲ್ ಉಡುಗೊರೆ

|
Sohan Halwa Recipe for Bakrid
ಬಕ್ರಿದ್ ಹಬ್ಬಕ್ಕೆ ಸೋಹನ್ ಹಲ್ವಾ ಸಾಂಪ್ರದಾಯಿಕ ಸಿಹಿತಿಂಡಿ. ತುಪ್ಪ ಮತ್ತು ಇನ್ನಿತರ ಡ್ರೈಫ್ರೂಟ್ ಬಳಸಿ ತಯಾರಿಸುವ ಸಿಹಿ ತಿಂಡಿ ರುಚಿಯಲ್ಲಿ ಮೊದಲು. ಈ ಸ್ವಾದಭರಿತ ಸೋಹನ್ ಹಲ್ವಾ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ.

ಸೋಹನ್ ಹಲ್ವಾಗೆ ಏನೇನು ಬೇಕು?: 1 ಕಪ್ ಜೋಳದ ಹಿಟ್ಟು, 1/2 ಕಪ್ ಹಾಲು, 1/2 ಕಪ್ ಬಾದಾಮಿ ಮತ್ತು ಪಿಸ್ತಾ, 3 1/2 ಕಪ್ ಸಕ್ಕರೆ, ಕೇಸರಿ ಅಥವಾ ಹಳದಿ ಬಣ್ಣ, 2 ಚಮಚ ಏಲಕ್ಕಿ ಪುಡಿ, 1 ಕಪ್ ತುಪ್ಪ, ನೀರು

ಸೋಹನ್ ಹಲ್ವಾ ತಯಾರಿಸುವ ವಿಧಾನ:
* ಒಂದು ಕಪ್ ಬಿಸಿ ನೀರಿನಲ್ಲಿ ಬಾದಾಮಿ ಮತ್ತು ಪಿಸ್ತಾವನ್ನು 5-10 ನಿಮಿಷ ನೆನೆಹಾಕಿ ಅದರ ಸಿಪ್ಪೆ ತೆಗೆದು ಸಣ್ಣಗೆ ಎಚ್ಚಿಟ್ಟುಕೊಳ್ಳಬೇಕು.

* ಒಂದು ಕಪ್ ನಲ್ಲಿ 3 ಚಮಚ ಹಾಲಿಗೆ ಕೇಸರಿ ಅಥವಾ ಹಳದಿಬಣ್ಣ ಹಾಕಿ ಒಂದೆಡೆ ಇಟ್ಟುಕೊಳ್ಳಬೇಕು.

* ಬಾಣಲೆಯಲ್ಲಿ ನೀರು ಕಾಯಿಸಿ ಅದಕ್ಕೆ ಸಕ್ಕರೆ ಹಾಕಿ 5-7 ನಿಮಿಷದ ನಂತರ ಅದಕ್ಕೆ ಹಾಲು ಬೆರೆಸಿ 8-10 ನಿಮಿಷ ಕಾಯಿಸಬೇಕು. ತೆಳ್ಳಗಿನ ಬಟ್ಟೆಯಲ್ಲಿ ಈ ಮಿಶ್ರಣವನ್ನು ಸೋಸಿಕೊಳ್ಳಬೇಕು.

* ನೀರಿನಲ್ಲಿ ಜೋಳದ ಹಿಟ್ಟನ್ನು ಹಾಕಿ ಅದು ಕರಗಲು ಬಿಡಬೇಕು. ಇದನ್ನು ತಯಾರಿಸಿಟ್ಟುಕೊಂಡಿದ್ದ ಪಾಕಕ್ಕೆ ಬೆರೆಸಿ ಸಣ್ಣ ಉರಿಯಲ್ಲಿ ಬೇಯಲು ಬಿಡಬೇಕು. ಅದರ ಮೇಲೆ ಗುಳ್ಳೆ ಏಳಲು ಪ್ರಾರಂಭವಾಗುತ್ತಿದ್ದಂತೆ ಕೇಸರಿ ಮಿಶ್ರಣವನ್ನು ಹಾಕಬೇಕು.

* ಇವೆಲ್ಲವನ್ನೂ ಬೆರೆಸಿ ತಿರುಗಿಸುವಾಗ ಅದಕ್ಕೆ ತುಪ್ಪ ಬೆರೆಸಬೇಕು. ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ತುಪ್ಪ ಸವರಿದ ತಟ್ಟೆಯ ಮೇಲೆ ಸಮತಟ್ಟಾಗಿ ಹಾಕಿ ಅದರ ಮೇಲೆ ಏಲಕ್ಕಿ ಪುಡಿ ಮತ್ತು ಕತ್ತರಿಸಿಟ್ಟುಕೊಂಡಿದ್ದ ಬಾದಾಮಿ ಮತ್ತು ಪಿಸ್ತಾ ಹಾಕಿ ಅಲಂಕರಿಸಿದರೆ ಸೋಹನ್ ಹಲ್ವಾ ತಿನ್ನಲು ರೆಡಿಯಾಗಿರುತ್ತೆ.

English summary

Sohan Halwa Recipe for Bakrid | Sweet Halwa Recipe | ಬಕ್ರೀದ್ ಗೆ ಸೋಹನ್ ಹಲ್ವಾ ರೆಸಿಪಿ | ಸಿಹಿ ಹಲ್ವಾ ಮಾಡುವ ವಿಧಾನ

Sohan Halwa is a traditional sweet dish of Bakrid. This Bakrid, prepare the easy to make sweet dish recipe. Sohan Halwa is rich with ghee and dry fruits. Take a look at the Sohan Halwa recipe for Bakrid.
Story first published: Monday, November 7, 2011, 15:00 [IST]
X
Desktop Bottom Promotion