For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿ ಕಜ್ಜಾಯ ಮಾಡಿ ಕೊಡಲೆ ನಾನು

By Super
|
Kajjaya Fried Snack Recipe
ಕಜ್ಜಾಯ ಕರ್ನಾಟಕದ ಅತಿ ಪ್ರಸಿದ್ಧ ಸಿಹಿ ತಿನಿಸು. ಎಣ್ಣೆಯಲ್ಲಿ ಕರಿದು ಮಾಡುವ ಈ ಕಜ್ಜಾಯ ಎಂದರೆ ಎಲ್ಲರಿಗೂ ಇಷ್ಟ.

ಹಬ್ಬ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ತಯಾರಿಸುವ ಈ ಕಜ್ಜಾಯದ ಪ್ರಸ್ತಾಪವನ್ನು ಹಾಡು, ಗಾದೆಯಲ್ಲೂ ಕಾಣಬಹುದು. ಕಜ್ಜಾಯ ಮಾಡಿ ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಟ್ಟರೆ ವಾರವಿಡೀ ಇದರ ರುಚಿಯನ್ನು ಸವಿಯಬಹುದು.

ಕಜ್ಜಾಯ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಕಜ್ಜಾಯ ಮಾಡಲು ಏನೇನು ಬೇಕು?
* 1 ಕಪ್ ಬೆಲ್ಲ
* 2 ಕಪ್ಪ ಅಕ್ಕಿ
* 1 ಚಮಚ ಏಲಕ್ಕಿ ಪುಡಿ
* 1 ಕಳಿತ ಬಾಳೆಹಣ್ಣು
* ಎಣ್ಣೆ

ಕಜ್ಜಾಯ ಮಾಡುವ ವಿಧಾನ:
* ಬೆಲ್ಲವನ್ನು ಚೆನ್ನಾಗಿ ಪುಡಿ ಮಾಡಿ 1/4 ಕಪ್ ನೀರಿನೊಂದಿಗೆ ಪಾಕ ಮಾಡಿಕೊಳ್ಳಬೇಕು. ತಣ್ಣಗಾದ ನಂತರ ಅದರಲ್ಲಿದ್ದ ಕಲ್ಮಶ ತೊಲಗಿಸಲು ಸೋಸಬೇಕು.

* ಈ ಪಾಕವನ್ನು ಬಿಸಿಗೆ ಇಟ್ಟು ಅದು ಅಂಟಿಗೆ ಬರುವ ತನಕ ಚೆನ್ನಾಗಿ ತಿರುಗಿಸುತ್ತಿರಬೇಕು.

* ತೊಳೆದು ಪುಡಿ ಮಾಡಿದ ಅಕ್ಕಿ ಹಿಟ್ಟನ್ನು ಈ ಬೆಲ್ಲದ ಪಾಕಕ್ಕೆ ಬೆರೆಸಿ ಸ್ವಲ್ಪ ಗಟ್ಟಿ ಹಿಟ್ಟಿನಂತಾಗುವ ತನಕ ಚೆನ್ನಾಗಿ ಕದಡಬೇಕು. ನಂತರ ಅದನ್ನು ತಣ್ಣಗಾಗಲು ಬಿಡಬೇಕು.

* ಇದಕ್ಕೆ ಕಿವುಚಿದ ಬಾಳೆ ಹಣ್ಣು, ಏಲಕ್ಕಿ ಪುಡಿ ಬೆರೆಸಿ ಒಂದು ರಾತ್ರಿಯಿಡೀ ಅಥವಾ 8 ಗಂಟೆಗಳ ಕಾಲ ಹಾಗೆ ಇಡಬೇಕು.

* ಅಗಲವಾದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ತಯಾರಾಗಿಟ್ಟಿದ್ದ ಹಿಟ್ಟನ್ನು ವೃತ್ತಾಕಾರವಾಗಿ ಅಗಲವಾಗಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕಡುಕೆಂಪು ಬಣ್ಣಕ್ಕೆ ತಿರುಗುವವರೆಗೂ ಕರೆಯಬೇಕು.

* ಪೇಪರ್ ಮೇಲೆ ಕರಿದ ಕಜ್ಜಾಯ ಹಾಕಿ ಎಣ್ಣೆ ಹೀರಿಕೊಂಡ ನಂತರ ಡಬ್ಬಕ್ಕೆ ಹಾಕಬೇಕು ಅಥವಾ ಮಾಡಿದ ಕೂಡಲೆ ಬಿಸಿ ಬಿಸಿ ಕಜ್ಜಾಯವನ್ನು ಮನೆಮಂದಿಗೆಲ್ಲಾ ಹಂಚಿದರೂ ಸರಿ.

English summary

Kajjaya Fried Snack Recipe | Karnataka Special Sweet | ಕಜ್ಜಾಯ ಮಾಡುವ ಸುಲಭ ವಿಧಾನ | ಕರ್ನಾಟಕದ ವಿಶೇಷ ಸಿಹಿ ತಿಂಡಿ ಕಜ್ಜಾಯ

Kajjaya is one of the most famous sweet of Karnataka (South India). This deep fried snack is prepared with Rice and Jaggery during special occasions. The traditional recipe is a hot favorite recipe of every household in South India. To know on how to prepare the tasty Kajjaya recipe take a look.
X
Desktop Bottom Promotion