For Quick Alerts
ALLOW NOTIFICATIONS  
For Daily Alerts

ದಸರಾ ಸಿಹಿ ಸ್ಪೆಷಲ್ : ಗಸಗಸೆ ಪಾಯಸ

By Super
|
Gasagase payasa
ದಸರಾ ಬಂತೆಂದರೆ ನಮ್ಮ ಕಡೆ ಒಂದು ರೀತಿ ಸಂಭ್ರಮ, ಮೈಸೂರಿಗೆ ಸಾಂಸ್ಕೃತಿಕ ಉತ್ಸವದ ಸಂಭ್ರಮವಾದರೆ, ಶೃಂಗೇರಿಯಲ್ಲಿ ಧಾರ್ಮಿಕ ದಸರೆಯ ಮೆರುಗಾದರೆ ಕನ್ನಡ ಜಿಲ್ಲೆಯಲ್ಲಿ ದಸರೆಯ ದಿನಗಳಲ್ಲಿ ದಿನನಿತ್ಯ ಬಗೆಬಗೆ ಪಾಯಸ ಮಾಡುವ ಪ್ರತೀತಿ. ಹೌದಾ, ನಾವು ಕೇಳೆ ಇಲ್ಲವಲ್ಲಾ ಎನ್ನಬೇಡಿ. ಹಬ್ಬದ ಆಚರಣೆ ಅವರವರ ಭಾವನೆಗೆ ಭಕುತಿಗೆ . ಹೊಟ್ಟೆ ಪೂಜೆಗೆ ಯಾವ ದೇವರ ಅಡ್ಡಿಯಿಲ್ಲ ಎಂಬುದು ನನ್ನ ಅನಿಸಿಕೆ. ದಟ್ಸ್ ಕನ್ನಡದಲ್ಲಿ ಕುಂಬಳಕಾಯಿ ಪಾಯಸ ಬಂದದ್ದು ನೋಡಿ.. ತಯಾರಿಸಿ ಕುಡಿದು ಖುಷಿಪಟ್ಟ ಮೇಲೆ ಮೈಸೂರು ಪ್ರಾಂತ್ಯದಲ್ಲಿ ಬಹು ಜನಪ್ರಿಯ ಪಾಯಸವಾದ ಗಸಗಸೆ ಪಾಯಸ ಮಾಡುವ ಸುಲಭ ವಿಧಾನವನ್ನು ತಿಳಿಸೋಣ ಅನ್ನಿಸಿತು.

*ಮನಸ್ವಿನಿ, ನಾರಾವಿ

ಕೇವಲ 20-30 ನಿಮಿಷದಲ್ಲಿ ತಯಾರಿಸಬಹುದಾದ ಈ ಪಾಯಸ, ಆರೋಗ್ಯದಾಯಕ, ಚೈತನ್ಯದಾಯಕ.ನಿದ್ರೆ ಸೊಂಪಾಗಿ ಬರಲು, ಹೊಟ್ಟೆ ತಂಪು ಮಾಡಿಕೊಳ್ಳಲು ಗಸಗಸೆ ಪಾಯಸ ಕುಡಿಯುವುದನ್ನು ಮರೆಯಬೇಡಿ.

ಬೇಕಾದ ಸಾಮಾಗ್ರಿಗಳು:

ಗಸಗಸೆ - 1 ಕಪ್
ಅಕ್ಕಿ - 1 ಟೀ ಚಮಚ
ದೊಡ್ಡ ತೆಂಗಿನಕಾಯಿ - 1
ಏಲಕ್ಕಿ -5
ಸಕ್ಕರೆ ಅಥವಾ ಬೆಲ್ಲ - ಎರಡೂವರೆ ಕಪ್ (ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು)

ತಯಾರಿಸುವ ವಿಧಾನ:

*ಬಾಣಲೆಯಲ್ಲಿ 1 ಕಪ್ ಗಸಗಸೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
*ಅಕ್ಕಿಯನ್ನು (ಕನಿಷ್ಠ 2 ಗಂಟೆಗಳ ಕಾಲ)ನೀರಿನಲ್ಲಿ ನೆನಸಿರಿ.
*ತೆಂಗಿನಕಾಯಿಯನ್ನು ಪೂರ್ತಿ ತುರಿದು ಮಿಕ್ಸಿಗೆ ಹಾಕಿ ತೆಂಗಿನ ಹಾಲನ್ನು ಶೇಖರಿಸಿಟ್ಟುಕೊಳ್ಳಿ.
*ಹುರಿದ ಗಸಗಸೆ, ಪುಡಿಮಾಡಿದ ಏಲಕ್ಕಿ, ತೆಂಗಿನ ಹಾಲು, ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದಷ್ಟು ನೀರನ್ನು ಹಾಕಿಕೊಳ್ಳಿ
*ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ. ಬೆಲ್ಲದ ನೀರನ್ನು ಮಿಶ್ರಣಕ್ಕೆ ಬೆರೆಸಿರಿ. ಆಗಾಗ ಕೆದುಕುತ್ತಿರಿ. (ಏಲಕ್ಕಿಪುಡಿಯನ್ನು ಬಳಸದಿದ್ದರೆ ಎಸಳುಗಳನ್ನು ಹಾಗೆ ಬೇಕಾದರೂ ಹಾಕಬಹುದು)
*ಪಾಯಸಕ್ಕೆ ಪರಿಮಳ ಬರಲು 2 ಲವಂಗವನ್ನು ಹಾಕಬಹುದು. ಗೋಡಂಬಿ, ದ್ರಾಕ್ಷಿ ಸೇರಿಸಿ ಇನ್ನಷ್ಟು ಸಿಹಿ ಹೆಚ್ಚಿಸಬಹುದು. ಗಟ್ಟಿಯಾದ ಪಾಯಸಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ಕುಡಿಯಬಹುದು. ಈ ವಿಧಾನದಿಂದ ಸುಮಾರು 10-12 ಕಪ್ ಪಾಯಸ ತಯಾರಿಸಬಹುದು.

X
Desktop Bottom Promotion