For Quick Alerts
ALLOW NOTIFICATIONS  
For Daily Alerts

ಲಾಲೂ ಸ್ಪೆಷಲ್ ಆಲೂ ಹಲ್ವಾ

By Super
|
Laloos delight Aloo halwa!
ತುಪ್ಪದಿಂದ ಮಾಡಿದ ಆಲೂಗೆಡ್ಡೆ ಹಲ್ವಾವನ್ನು ತಿಂದೂ ತಿಂದೂ ಉಳಿದರೆ ಗೇಜು ಪರಿವರ್ತನೆ, ಹೊಸ ಮಾರ್ಗಗಳ ಸೃಷ್ಟಿ, ಮಾರ್ಗ ವಿಸ್ತರಣೆ ವಿಚಾರಗಳಲ್ಲಿ ಕರ್ನಾಟಕಕ್ಕೆ ಯಥಾಪ್ರಕಾರ ಮೋಸ ಮಾಡಿದ ಲಾಲೂ ಬಾಯಿಗೆ ಆಲೂ ಹಲ್ವ ಎಸೆಯಿರಿ!

* ಮಂದಾಕಿನಿ ಮುರುಗೇಶ್, ದಾವಣಗೆರೆ

ಬೇಕಾಗುವ ಪದಾರ್ಥಗಳು

ಸಿಪ್ಪೆ ಸುಲಿದು ಸಣ್ಣಗೆ ತುರಿದ ಆಲೂಗೆಡ್ಡೆ - 2 ಕಪ್
ಸಕ್ಕರೆ - 1 ಕಪ್
ಹಾಲು - 1 ಕಪ್
ತುಪ್ಪ - 2 1/2 ಟೇಬಲ್ ಸ್ಪೂನ್
ಗೋಡಂಬಿ, ಒಣದ್ರಾಕ್ಷಿ - ಬೇಕಾದಷ್ಟು
ಕೇಸರಿ ಬಣ್ಣ (ಹಳದಿ) - ಟಿಚಿಕೆ

ಮಾಡುವ ವಿಧಾನ

ತುರಿದ ಆಲೂಗೆಡ್ಡೆಯನ್ನು ಮೂರು ಅಥವಾ ನಾಲಕ್ಕು ಸಲ (ನೀರು ತಿಳಿಯಾಗುವವರೆಗೆ) ತೊಳೆಯಿರಿ. ತೊಳೆದು ಬಸಿಹಾಕಿ. ನೀರನ್ನು ಸಂಪೂರ್ಣವಾಗಿ ಬಸಿದು, ಹಾಲು ಸೇರಿಸಿ ಒಂದು ವಿಷಲ್ ಬರುವವರೆಗೆ ಕುಕ್ಕರ್ ನಲ್ಲಿ ಬೇಯಿಸಿ. ದಪ್ಪತಳದ ಬಾಣಲೆಯಲ್ಲಿ 1/2 ಕಪ್ ನೀರು ಹಾಗು ಸಕ್ಕರೆ ಹಾಕಿ ಸ್ವಲ್ಪ ಪಾಕ ಬರುವಂತೆ ಬಿಸಿಮಾಡಿ. ಇದಕ್ಕೆ ಹಳದಿ ಕೇಸರಿಬಣ್ಣ ಹಾಗು ಬೆಂದ ಆಲೂಗೆಡ್ಡೆಗಳನ್ನು ಸೇರಿಸಿ. ಸರಿಯಾದ ಹದಕ್ಕೆ ಬರುವವರೆಗೆ ಹಲ್ವಾವನ್ನು ಕಲಕುತ್ತಾ ಬೇಯಿಸಿ. ಗೋಡಂಬಿ, ಒಣದ್ರಾಕ್ಷಿಗಳನ್ನೂ ತುಪ್ಪದಲ್ಲಿ ಹುರಿದು, ಉಳಿದ ತುಪ್ಪದ ಜೊತೆ ಒಲೆಯ ಮೇಲಿಂದ ಇಳಿಸುವುದಕ್ಕೆ ಮುನ್ನ ಹಲ್ವಾದೊಡನೆ ಸೇರಿಸಿ. ಪ್ರೇಮಿಗಳ ದಿನಾಚರಣೆ ಆಚರಿಸುವುದೇ ಆದರೆ, ಮನೆಯಲ್ಲಿ ಆಲೂ ಹಲ್ವ ಮಾಡಿ ಮೆಲ್ಲಿರಿ.

ತಿಂದೂ ತಿಂದೂ ಉಳಿದರೆ ಗೇಜು ಪರಿವರ್ತನೆ, ಹೊಸ ಮಾರ್ಗಗಳ ಸೃಷ್ಟಿ, ಮಾರ್ಗ ವಿಸ್ತರಣೆ ವಿಚಾರಗಳಲ್ಲಿ ಕರ್ನಾಟಕಕ್ಕೆ ಯಥಾಪ್ರಕಾರ ಮೋಸ ಮಾಡಿದ ಲಾಲೂ ಬಾಯಿಗೆ ಆಲೂ ಹಲ್ವ ಎಸೆಯಿರಿ!

X
Desktop Bottom Promotion