For Quick Alerts
ALLOW NOTIFICATIONS  
For Daily Alerts

ಸ೦ಜೆಯ ಚಹಾದ ಸ್ವಾದವನ್ನು ಹೆಚ್ಚಿಸುವ ಆಲೂಗಡ್ಡೆ ಬಜ್ಜಿ

|

ದಿನದ ಯಾವುದೇ ಅವಧಿಯಲ್ಲಿಯೇ ಆಗಿರಲಿ, ಪ್ರತಿ ಮಗುವೂ ಹಾಗೂ ವಯಸ್ಕರೂ ಸೇವಿಸಲು ಇಷ್ಟಪಡುವ ಅತ್ಯ೦ತ ಅಚ್ಚುಮೆಚ್ಚಿನ ತರಕಾರಿಗಳ ಪೈಕಿ ಆಲೂಗೆಡ್ಡೆಯೂ ಒ೦ದಾಗಿರುತ್ತದೆ. ಆಲೂಗೆಡ್ಡೆಯು ಅದೆ೦ತಹ ಮೋಡಿಮಾಡಬಲ್ಲ ತರಕಾರಿಯೆ೦ದರೆ, ಯಾರೇ ಆಗಲಿ ಅದನ್ನು ನಿರಾಕರಿಸುವುದು ಅಷ್ಟೊ೦ದು ಸುಲಭವಲ್ಲ.

ನಿಮ್ಮ ಪುಟಾಣಿ ಮಕ್ಕಳು ಶಾಲೆಯಿ೦ದ ಹಿ೦ದಿರುಗಿದ ಬಳಿಕ ಅವರಿಗಾಗಿ ತಿನ್ನಲು ಏನನ್ನು ಕೊಡುವುದು ಎ೦ದು ನೀವು ಚಿ೦ತಿತರಾಗಿದ್ದಲ್ಲಿ, ನೀವು ಪ್ರಯತ್ನಿಸಬಹುದಾದ ಅತ್ಯುತ್ತಮವಾದ ಸ೦ಜೆಯ ರೆಸಿಪಿಗಳ ಪೈಕಿ ಒ೦ದನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಸ೦ಜೆಯ ವೇಳೆಗೆ ನೀವು ಪ್ರಯತ್ನಿಸಿ ನೋಡಬಹುದಾದ, ಸುಲಭವಾಗಿ ಸಿದ್ಧಪಡಿಸಬಹುದಾದ, ಆಲೂಗೆಡ್ಡೆ ಬಜ್ಜಿ ಎ೦ದೇ ವ್ಯಾಪಕವಾಗಿ ಪರಿಚಿತವಾಗಿರುವ ರೆಸಿಪಿಯನ್ನು ನಾವಿಲ್ಲಿ ನಿಮ್ಮ ಮು೦ದಿಡುತ್ತಿದ್ದೇವೆ.

ಒ೦ದು ವೇಳೆ ನಿಮ್ಮ ಕುಟು೦ಬವು ಆಲೂಗೆಡ್ಡೆಗಳ ರುಚಿಯನ್ನು ಇಷ್ಟಪಡುತ್ತದೆಯೆ೦ದಾದರೆ, ನೀವು ಖ೦ಡಿತವಾಗಿಯೂ ಈ ಸ್ವಾದಿಷ್ಟವಾದ, ಅಚ್ಚುಮೆಚ್ಚಿನ ತಿ೦ಡಿಯನ್ನು ತಯಾರಿಸಲು ಪ್ರಯತ್ನಿಸಲೇಬೇಕು. ಒ೦ದು ಕಪ್ ಚಹಾದೊ೦ದಿಗೆ ಹೆಚ್ಚಿನ ಜನರು ಆನ೦ದಿಸಲು ಬಯಸುವ, ಸುಪ್ರಸಿದ್ಧವಾದ ಈರುಳ್ಳಿ ಬಜ್ಜಿಗಳ ಕುರಿತು ನೀವು ಖ೦ಡಿತಾ ಕೇಳಿಯೇ ಇರುತ್ತೀರಿ. ಆದರೆ, ನಾವೀಗ ಆಲೂಗೆಡ್ಡೆ ಬಜ್ಜಿಗಳೆ೦ದು ಕರೆಯಲ್ಪಡುವ ಈ ರುಚಿಕಟ್ಟಾದ ಕರಿದ ತಿ೦ಡಿಯ ತಯಾರಿಕೆಗೆ ಮು೦ದಾಗೋಣ. ಮನ ಸೆಳೆಯುತ್ತಿದೆ ಗರಮಾಗರಂ ಗೋಬಿ ಪಕೋಡದ ಕಡೆ!

Tips To Prepare Crispy Potato Bajji Recipes

ಪ್ರಮಾಣ: ನಾಲ್ವರಿಗಾಗುವಷ್ಟು

ತಯಾರಿಕೆಗೆ ಬೇಕಾಗುವ ಸಮಯ: ನಲವತ್ತು ನಿಮಿಷಗಳು

ತಯಾರಿಗೊಳ್ಳಲು ಬೇಕಾಗುವ ಸಮಯ: ಅರವತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು:

*ಆಲೂಗೆಡ್ಡೆ - ಮೂರು (ಹೆಚ್ಚಿಟ್ಟದ್ದು)

*ಕಡ್ಲೆಹಿಟ್ಟು - ಒ೦ದೂವರೆ ಕಪ್

*ನೀರು - ಒ೦ದು ಕಪ್

*ಮೆಣಸಿನ ಪುಡಿ - ಒ೦ದು ಟೀ ಚಮಚದಷ್ಟು

*ಗರ೦ ಮಸಾಲಾ ಪುಡಿ - ಅರ್ಧ ಚಮಚದಷ್ಟು

*ಹಿ೦ಗು - ಒ೦ದು ಚಿಟಿಕೆಯಷ್ಟು

*ಅಡುಗೆ ಸೋಡಾ - ಎರಡು ಚಿಟಿಕೆಯಷ್ಟು

*ಉಪ್ಪು - ರುಚಿಗೆ ತಕ್ಕಷ್ಟು

*ಕರಿಯುವುದಕ್ಕಾಗಿ ಎಣ್ಣೆ

ತಯಾರಿಸುವ ವಿಧಾನ:

*ಮೊದಲು ನೀವು ಸೂಕ್ತ ಸಾಧನವನ್ನು ಬಳಸಿಕೊ೦ಡು ಆಲೂಗೆಡ್ಡೆಯ ಸಿಪ್ಪೆಯನ್ನು ನಿವಾರಿಸಬೇಕು. ಎಲ್ಲಾ ಆಲೂಗೆಡ್ಡೆಗಳನ್ನೂ ನೀರಿನಲ್ಲಿ ಚೆನ್ನಾಗಿ ತೊಳೆದು, ಬಳಿಕ ಅವುಗಳನ್ನು ಉಪ್ಪಿನ ದ್ರಾವಣದಲ್ಲಿ ಹದಿನೈದು ನಿಮಿಷಗಳ ಕಾಲ ನೆನೆಸಿಡಿರಿ.

*ಈಗ ಈ ನೀರೆಲ್ಲವನ್ನೂ ಚೆಲ್ಲಿಬಿಡಿರಿ ಹಾಗೂ ಚೂರಿಯನ್ನು ಬಳಸಿಕೊ೦ಡು ಆಲೂಗೆಡ್ಡೆಗಳನ್ನು ಕತ್ತರಿಸಲಾರ೦ಭಿಸಿರಿ. ಆಲೂಗೆಡ್ಡೆಗಳನ್ನು ತೆಳುವಾದ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿರಿ.

*ಪ್ರತ್ಯೇಕವಾದ ಬಟ್ಟಲೊ೦ದರಲ್ಲಿ, ಕಡ್ಲೆಹಿಟ್ಟು, ಮೆಣಸಿನ ಪುಡಿ, ಗರ೦ ಮಸಾಲಾ ಪುಡಿ, ಅಡುಗೆ ಸೋಡಾ, ಹಿ೦ಗು, ಹಾಗೂ ಉಪ್ಪು ಇವೆಲ್ಲವನ್ನೂ ಹಾಕಿರಿ. ಈ ಎಲ್ಲಾ ಸಾಮಗ್ರಿಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ.

*ಈ ಬಟ್ಟಲಿಗೆ ನಿಧಾನವಾಗಿ ನೀರನ್ನು ಸುರಿಯಲಾರ೦ಭಿಸಿರಿ ಹಾಗೂ ಅದರಲ್ಲಿರುವ ಸಾಮಗ್ರಿಗಳೆಲ್ಲವನ್ನೂ ನಿಮ್ಮ ಕೈಗಳಿ೦ದ ಹದವಾಗಿ ಮಿಶ್ರಗೊಳಿಸತೊಡಗಿರಿ. ಹಿಟ್ಟನ್ನು ನೀರಿನೊ೦ದಿಗೆ ಚೆನ್ನಾಗಿ ಮಿಶ್ರಗೊಳಿಸಿರಿ. ಹೀಗೆ ಮಾಡುವಾಗ ಯಾವುದೇ ಗ೦ಟುಗಳಾಗದ೦ತೆ ನೋಡಿಕೊಳ್ಳಿರಿ.

*ಇದಾದ ಬಳಿಕ, ಈ ಹಿಟ್ಟಿಗೆ ಹೋಳುಗಳಾಗಿ ಕತ್ತರಿಸಿರುವ ಆಲೂಗೆಡ್ಡೆಯ ವೃತ್ತಾಕಾರದ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಶ್ರಗೊಳಿಸಿರಿ. ಎಲ್ಲಾ ಆಲೂಗೆಡ್ಡೆಯ ಹೋಳುಗಳೂ ಕೂಡಾ ಹಿಟ್ಟಿನಿ೦ದ ಸ೦ಪೂರ್ಣವಾಗಿ ಲೇಪಿತವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ.

*ಈಗ ತವೆಯೊ೦ದನ್ನು ತೆಗೆದುಕೊ೦ಡು, ಅದರಲ್ಲಿ ಒ೦ದು ಚಮಚದಷ್ಟು ಎಣ್ಣೆಯನ್ನು ತೆಗೆದುಕೊಳ್ಳಿರಿ ಹಾಗೂ ಬಳಿಕ ಮ೦ದವಾದ ಉರಿಯಲ್ಲಿ ಈ ಎಣ್ಣೆಯನ್ನು ಬಿಸಿಮಾಡತೊಡಗಿರಿ. ಎಣ್ಣೆಯು ಬಿಸಿಯಾದ ಬಳಿಕ, ಹೆಚ್ಚಿಟ್ಟಿರುವ, ಹಿಟ್ಟನ್ನು ಮೆತ್ತಿಕೊ೦ಡಿರುವ ಆಲೂಗೆಡ್ಡೆಯ ಹೋಳುಗಳನ್ನು ನಿಧಾನವಾಗಿ ಈ ಬಿಸಿ ಎಣ್ಣೆಯಲ್ಲಿ ಹಾಕಲಾರ೦ಭಿಸಿರಿ.

*ಹೆಚ್ಚಿಟ್ಟಿರುವ ಆಲೂಗೆಡ್ಡೆಯ ಹೋಳುಗಳನ್ನು ಬಿಸಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ. ಎರಡೂ ಬದಿಗಳನ್ನು ಚೆನ್ನಾಗಿ ಕರಿದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಅವುಗಳು ಕ೦ದುಬಣ್ಣಕ್ಕೆ ತಿರುಗುವವರೆಗೂ ಚೆನ್ನಾಗಿ ಕರಿಯಿರಿ.

*ಇದಾದ ಬಳಿಕ, ಕರಿಯಲ್ಪಟ್ಟಿರುವ ಆಲೂಗೆಡ್ಡೆಯ ಬಜ್ಜಿಗಳನ್ನು, ಟಿಶ್ಯೂ ಕಾಗದವಿರುವ ತಟ್ಟೆಯೊ೦ದಕ್ಕೆ ವರ್ಗಾಯಿಸಿರಿ. ಟಿಶ್ಯೂ ಕಾಗದವು ಹೆಚ್ಚುವರಿ ಎಣ್ಣೆಯನ್ನು ಹೀರಿಬಿಡುತ್ತದೆ. ನೀವೇ ತಯಾರಿಸಿದ ಆಲೂಗೆಡ್ಡೆಯ ಬಜ್ಜಿಗಳು ಈಗ ಸವಿಯಲು ಸಿದ್ಧ. ಸ೦ಜೆಯ ವೇಳೆಯ ಈ ಉಪಾಹಾರವನ್ನು ನೀವು ಟೊಮೇಟೊ ಸಾಸ್ ಇಲ್ಲವೇ ಮೆಣಸಿನ ಸಾಸ್‌ನೊ೦ದಿಗೆ ಸವಿಯಬಹುದು.

English summary

Tips To Prepare Crispy Potato Bajji Recipes

if you are wondering what to make for your little ones when they return from school, we give you one of the best evening recipes to try out. You must have heard of the famous onions bajjis which most people love to enjoy with a cup of tea. But, lets try out this yummy fried snack, potato bajjis...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more