For Quick Alerts
ALLOW NOTIFICATIONS  
For Daily Alerts

ಮಕ್ಕಳ ಫೇವರೆಟ್ ವೆಜಿಟೆಬಲ್ ಪಫ್ಸ್ ನೀವೇ ಮಾಡಿ

By Staff
|

ಮಕ್ಕಳಿಗೆ ತಿಂಡಿಯೆಂದರೆ ತುಂಬಾ ಇಷ್ಟ. ಹಾಗೆಂದು ಹೊರಗಿನ ತಿಂಡಿಯನ್ನೇ ತಿನ್ನಿಸಿದರೆ ಆರೋಗ್ಯವೂ ಕೆಡುತ್ತೆ. ಆದ್ದರಿಂದ ಮಕ್ಕಳ ಅಚ್ಚುಮೆಚ್ಚಿನ ತರಕಾರಿ ಪಫ್ಸ್ ಮನೆಯಲ್ಲೇ ಮಾಡಿ ಕೊಟ್ಟರೆ ಖುಷಿ ಹೆಚ್ಚು. ಚಳಿಗಾಲದಲ್ಲಿ ಬಿಸಿ ಬಿಸಿ ತರಕಾರಿ ಪಫ್ಸ್ ತಿಂದರೆ ಮನಸ್ಸೂ ಉಲ್ಲಸಿತಗೊಳ್ಳುತ್ತೆ.

ವೆಜಿಟೆಬಲ್ ಪಫ್ಸ್ ಗೆ ಬೇಕಾಗುವ ಸಾಮಾನು:
* ಪಫ್ ಶೀಟ್ (ರೆಡಿ ಸಿಗುತ್ತೆ)
* 1-2 ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದು ಕಲೆಸಿರಬೇಕು)
* 1/2 ಕತ್ತರಿಸಿದ ಈರುಳ್ಳಿ
* 1/2 ಕಪ್ ಬೇಯಿಸಿದ ಬಟಾಣಿ
* 1/2 ಕಪ್ ತುರಿದ ಕ್ಯಾರೆಟ್
* 1/2 ಕಪ್ ಕ್ಯಾಪ್ಸಿಕಂ
* 1 ಚಮಚ ಗರಂ ಮಸಾಲ
* 1 ಚಮಚ ಸಾಸಿವೆ
* 1 ಚಮಚ ಕೆಂಪು ಮೆಣಸಿನ ಪುಡಿ
* ಎಣ್ಣೆ, ಉಪ್ಪು

ವೆಜಿಟೆಬಲ್ ಪಫ್ಸ್ ಮಾಡುವ ವಿಧಾನ:
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ ಹಾಕಿ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ಹುರಿದುಕೊಳ್ಳಬೇಕು. ನಂತರ ಬಟಾಣಿ, ಆಲೂಗಡ್ಡೆಯನ್ನು ಬೆರೆಸಿ ಗರಂ ಮಸಾಲ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ 10 ನಿಮಿಷ ಚೆನ್ನಾಗಿ ತಿರುಗಿಸಬೇಕು. ನಂತರ ಅದನ್ನು ತಣ್ಣಗಾಗಲು ಬಿಡಬೇಕು.

* ಪಫ್ ಶೀಟ್ ನಲ್ಲಿ ಈ ಪಲ್ಯದ ಮಿಶ್ರಣವನ್ನು ಸೇರಿಸಿ ಮುಚ್ಚಬೇಕು.

* ಓವೆನ್ ನಲ್ಲಿ 40 ನಿಮಿಷ ಈ ಪಫ್ಸ್ ಗಳನ್ನು ಬೇಯಿಸಿದರೆ ನಿಮ್ಮ ಮಕ್ಕಳ ಮೆಚ್ಚಿನ ತಿಂಡಿ ವೆಜಿಟೆಬಲ್ ಪಫ್ಸ್ ರೆಡಿಯಾಗಿರುತ್ತೆ. ಇದನ್ನು ಚಟ್ನಿ ತಯಾರಿಸಿ ಅದರೊಂದಿಗೆ ತಿಂದರೆ ಇನ್ನು ಚೆಂದ.

English summary

Vegetable Puff Recipe | Kids Recipe | ತರಕಾರಿ ಪಫ್ಸ್ ಮಾಡುವ ಸುಲಭ ವಿಧಾನ | ಮಕ್ಕಳಿಗೆ ಇಷ್ಟವಾದ ತಿನಿಸು

Why cultivate the habit in kids to buy bakery foods? Try preparing vegetable puff at home and help them eat healthy. Today, we shall tell you how to prepare this tasty kids snack that is vegetarian, nutritious and attractive. Take a look.
X
Desktop Bottom Promotion