For Quick Alerts
ALLOW NOTIFICATIONS  
For Daily Alerts

ಘಂ ಎನ್ನುವ ಮಸಾಲಾ ಕಾರ್ನ್ ಮನೇಲೆ ಮಾಡಿ

|
Crispy Corn Recipe
ಬೇರೆ ತಿಂಡಿ ತಿನಿಸುಗಳಿಗೆ ಹೋಲಿಸಿದರೆ ಜೋಳ ತುಂಬಾ ಆರೋಗ್ಯಕಾರಿ ತಿನಿಸು. ಜೋಳವನ್ನು ಹಾಗೇ ತಿನ್ನುವುದಕ್ಕಿಂದ ಸ್ವಲ್ಪ ಖಾರ ಮತ್ತು ಇನ್ನಿತರ ಸಾಮಾಗ್ರಿ ಬೆರೆಸಿ ತಿಂದರೆ ರುಚಿ ಹೆಚ್ಚಿರುತ್ತೆ. ಜೋಳವನ್ನು ಇನ್ನಷ್ಟು ರುಚಿಕಟ್ಟಾಗಿ ಮಾಡುವುದು ಹೇಗೆ ಎಂದು ತಿಳಿಯಬೇಕೆಂದರೆ ಈ ಜೋಳದ ತಿನಿಸಿನ ರೆಸಿಪಿಯನ್ನು ನೀವೂ ಮಾಡಿ.

ಬೇಕಾಗುವ ಪದಾರ್ಥಗಳು:
* ಬಿಡಿಸಿರುವ ಜೋಳದ ಕಾಳು 1 ಪ್ಯಾಕ್
* 1 ಕಪ್ ಜೋಳದ ಹಿಟ್ಟು
* 2 ಕಪ್ ಬ್ರೆಡ್ ಚೂರು
* 1 ಕಪ್ ಕತ್ತರಿಸಿದ ಈರುಳ್ಳಿ
* 1 ಕಪ್ ಕತ್ತರಿಸಿದ ಕೊತ್ತಂಬರಿ
* ಉಪ್ಪು, ಮೆಣಸಿನ ಪುಡಿ
* ಎಣ್ಣೆ

ಮಸಾಲಾ ಕಾರ್ನ್ ತಯಾರಿಸುವುದು ಹೀಗೆ:
ಜೋಳವನ್ನು ಮೆತ್ತಗಾಗುವ ತನಕ ಬೇಯಿಸಿ, ನೀರು ಸಂಪೂರ್ಣವಾಗಿ ಹೋಗುವವರೆಗೂ ಸೋಸಿಕೊಳ್ಳಬೇಕು. ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು, ಉಪ್ಪು ಮತ್ತು 1/2 ಚಮಚ ಮೆಣಸಿನ ಪುಡಿ ಬೆರೆಸಿ ನೀರು ಹಾಕಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು.

ಈ ಪೇಸ್ಟಿಗೆ ಬೇಯಿಸಿದ ಜೋಳ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ತಟ್ಟೆಯಲ್ಲಿ ಬ್ರೆಡ್ ಚೂರು ಹಾಕಿ ಅದರ ಮೇಲೆ ಜೋಳವನ್ನು ರೋಲ್ ಮಾಡಿ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿಯಬೇಕು.

ಅದು ಕೆಂಪಗಾಗುವ ತನಕ ಹುರಿದು, ಇನ್ನೊಂದು ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಹುರಿದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಮೆಣಸು ಬೆರೆಸಿ, ಹುರಿದ ಜೋಳವನ್ನೂ ಇದಕ್ಕೆ ಬೆರೆಸಬೇಕು. ಚೆನ್ನಾಗಿ ಕದಡಿ, ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹರಡಬೇಕು.ಈಗ ಬಿಸಿಬಿಸಿಯಾದ ಮಸಾಲಾ ಕಾರ್ನ್ ರೆಡಿಯಾಗಿದೆ.

English summary

Crispy Corn Recipe | Easy Snack Corn Recipe | ಜೋಳದ ತಿನಿಸು | ಸುಲಭವಾಗಿ ತಯಾರಿಸಬಹುದಾದ ಮಸಾಲಾ ಕಾರ್ನ್

Sweet corn is a healthy ingredient and is better than other junk food. The recipe that we are listing today is served in many multi cuisine restaurants at a high price. Try the crispy corn recipe at home for free today!
Story first published: Monday, September 12, 2011, 17:49 [IST]
X
Desktop Bottom Promotion