For Quick Alerts
ALLOW NOTIFICATIONS  
For Daily Alerts

ಬಾಯಿ ರಂಗೇರಿಸುತ್ತೆ ಈರುಳ್ಳಿ ರಿಂಗ್ಸ್

By Staff
|

ಇದು ಬಿರುಸಾದ ಮಳೆ ಬೀಳುವ ಕಾಲ. ಈ ಕಾಲದಲ್ಲಿ ಮೈ ಬೆಚ್ಚಗಿದ್ದಷ್ಟು ಹೆಚ್ಚು ಒಳ್ಳೆಯದು. ಮೈ ಬೆಚ್ಚಗಿರುವುದಕ್ಕೆ ಈರುಳ್ಳಿ ತುಂಬಾ ಸಹಾಯ ಮಾಡುತ್ತೆ. ಆದರೆ ಈರುಳ್ಳಿಯನ್ನು ಹಾಗೇ ತಿನ್ನೋದಕ್ಕೆ ಆಗೋದಿಲ್ಲ. ಆದ್ದರಿಂದ ಗರಿಗರಿಯಾದ ಈರುಳ್ಳಿ ರಿಂಗ್ಸ್ ಮಾಡಿ ಸೇವಿಸಿದರೆ ರುಚಿಯೂ ಇರುತ್ತೆ, ಆರೋಗ್ಯಕ್ಕೂ ಒಳ್ಳೆಯದು. ಈರುಳ್ಳಿ ರಿಂಗ್ಸ್ ಕಾಫಿ, ಟೀ ಜೊತೆಗೂ ಸೈ ಪುದೀನಾ ಚಟ್ನಿಯೊಂದಿಗೆ ಸೈ.

ಈರುಳ್ಳಿ ರಿಂಗ್ಸ್ ಗೆ ಬೇಕಾಗುವ ಸಾಮಾಗ್ರಿಗಳು:

* ಒಂದು ದೊಡ್ಡ ಈರುಳ್ಳಿ (ದುಂಡಗಿನ ಆಕಾರದಲ್ಲಿ ತೆಳುವಾಗಿ ಕತ್ತರಿಸಿದ್ದು)
* 3/4 ಕಪ್ ಒಣಗಿದ ಬ್ರೆಡ್ ಚೂರು
* 1/2 ಚಮಚ ಅಡುಗೆ ಸೋಡಾ
* 1 ಚಮಚ ಅಕ್ಕಿ ಹಿಟ್ಟು
* 1 ಚಮಚ ಮೆಣಸಿನಕಾಯಿ ಪುಡಿ
* ಉಪ್ಪು, ಎಣ್ಣೆ

ಈರುಳ್ಳಿ ರಿಂಗ್ಸ್ ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಉಪ್ಪು, ಅಡುಗೆ ಸೋಡಾ ಬೆರೆಸಿ ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ಬ್ರೆಡ್ ಚೂರುಗಳನ್ನೂ ಬೆರೆಸಿಕೊಳ್ಳಬೇಕು. ಈಗ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಕಲಸಿದ ಹಿಟ್ಟಿಗೆ ತೆಳುವಾಗಿ ದುಂಡಗೆ ಕತ್ತರಿಸಿಟ್ಟುಕೊಂಡ ಈರುಳ್ಳಿಯನ್ನು ಅದ್ದಿ ಹಾಕಬೇಕು. ಈರುಳ್ಳಿ ಕೆಂಪಗೆ ಆಗುವ ತನಕ ಹುರಿದುಕೊಂಡು ಎಣ್ಣೆಯಿಂದ ತೆಗೆಯಬೇಕು.

ಸೋಡಾ ಹೆಚ್ಚು ಎಣ್ಣೆಯನ್ನು ಎಳೆದುಕೊಳ್ಳುವ ಕಾರಣ ಪೇಪರ್ ಮೇಲೆ ಕರಿದ ಈರುಳ್ಳಿ ರಿಂಗ್ಸ್ ಹಾಕಬೇಕು. ಹೀಗೆ ಮಾಡಿದರೆ ತಿನ್ನುವಾಗ ಅತಿ ಎಣ್ಣೆ ಅನ್ನಿಸುವುದಿಲ್ಲ. ಈಗ ಈರುಳ್ಳಿ ರಿಂಗ್ಸ್ ತಿನ್ನೋದಕ್ಕೆ ರೆಡಿಯಾಗಿದೆ. ಈ ಸಂಜೆಯೇ ಈರುಳ್ಳಿ ರಿಂಗ್ಸ್ ತಯಾರಿಸಿ ರುಚಿ ನೋಡಿ.

English summary

Onion rings | Fried onion rings recipe | ಈರುಳ್ಳಿ ರಿಂಗ್ಸ್ | ಈರುಳ್ಳಿ ರಿಂಗ್ಸ್ ರೆಸಿಪಿ

Onion rings can make your day as the taste is unmathcable and can be easily prepared. Try making these crispy snacks at home. Take a look how to prepare this onion crispy rings.
X
Desktop Bottom Promotion