For Quick Alerts
ALLOW NOTIFICATIONS  
For Daily Alerts

ಸಖತ್ ಸ್ಪೈಸಿ ಈ ಪಕೋಡಾ ಕರಿ, ಮಾಡಿ ನೋಡ್ರಿ

|
ಬೋಂಡಾ ಬಜ್ಜಿ ಪಕೋಡಾ ಬಿಡಿ ಯಾವಾಗ್ಲೂ ಮಾಡ್ತೀರ, ಆದ್ರೆ ಪಕೋಡಾದಿಂದ ಕರಿ ಮಾಡೋದು ಹೇಗೆ ಅಂತ ಗೊತ್ತಾ? ಖಾರವಾದ ಮಸಾಲಾ ಪಕೋಡ ಕರಿ ಅಂದ್ರೆ ಅದರ ರುಚಿನೇ ಬೇರೆ. ಸಂಜೆ ಆಗ್ತಾ ಇದ್ದ ಹಾಗೆ ಈ ಟೇಸ್ಟಿ ಪಕೋಡಾ ಕರಿಯನ್ನ ಮಾಡಿನೋಡಿ. ಅದನ್ನ ತಿಂದು ಇನ್ನೊಂದು ಬಾರಿ ಮಾಡೋಣ ಅಂತ ನಿಮಗೆ ಅನ್ನಿಸೋದು ಗ್ಯಾರಂಟಿ.

ಬೇಕಾಗುವ ಸಾಮಾನುಗಳು:
* ಕಡಲೆಹಿಟ್ಟು-250 ಗ್ರಾಂ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್
* ಸಣ್ಣಗೆ ಹೆಚ್ಚಿದ ಟೊಮೊಟೊ-1
* ಅಚ್ಚ ಖಾರದ ಪುಡಿ ಮತ್ತು ಜೀರಿಗೆ ಪುಡಿ
* ಧನಿಯಾ ಪುಡಿ, ಅರಿಶಿನದ ಪುಡಿ
* ಕತ್ತರಿಸಿದ ಈರುಳ್ಳಿ-1
* ಕರಿಬೇವು, ಕೊತ್ತಂಬರಿ
* 2 ಚಮಚ ಹಸಿಕೊಬ್ಬರಿ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ನಂತರ ಹೆಚ್ಚಿಟ್ಟ ಈರುಳ್ಳಿ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಸ್ವಲ್ಪ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಕತ್ತರಿಸಿದ ಟೊಮೊಟೊ ಜೊತೆಗೆ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪಿನ ಚೂರನ್ನು ಬೆರೆಸಬೇಕು. ಈ ಮಿಶ್ರಣಕ್ಕೆ ಅಳತೆಗೆ ತಕ್ಕಂತೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಚಿಟಿಕೆ ಅರಿಶಿನ, ಜೀರಿಗೆ ಪುಡಿ, ಸಲ್ಪ ಉಪ್ಪು ಹಾಕಿ ನೀರು ಸೇರಿಸಿ ಕುದಿಸಬೇಕು. ಬೆಂದ ನಂತರ ಕೆಳಗಿಳಿಸಬೇಕು.

ಇನ್ನೊಂದು ಅಗಲವಾದ ಪಾತ್ರೆ ತೆಗೆದುಕೊಂಡು ಕಡಲೆಹಿಟ್ಟನ್ನು ಹಾಕಿ ಅದಕ್ಕೆ ಒಂದು ಚಮಚ ಅಜಿನೊಮೊಟೊ, ಉಪ್ಪು, ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಬೆರೆಸಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಪಕೋಡ ಹಿಟ್ಟಿನಂತೆ ಕಲೆಸಬೇಕು. ಮುಂಚೆ ಕರಿಗೆ ಉಪ್ಪು ಹಾಕಿದುದ್ದರಿಂದ ಸ್ವಲ್ಪ ಉಪ್ಪು ಬೆರೆಸಿದರೆ ಸಾಕು. ಇನ್ನೊಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಂಡು ಬೆರೆಸಿದ ಮಿಶ್ರಣವನ್ನು ಪಕೋಡದಂತೆ ಎಣ್ಣೆಗೆ ಹಾಕಿ ಕೆಂಪಗೆ ಕರಿಯಬೇಕು.

ಪಕೋಡವನ್ನು ತಯಾರಿಸಿಕೊಂಡ ಗ್ರೇವಿಗೆ ಹಾಕಿ ಒಂದೆರಡು ನಿಮಿಷ ಒಲೆಯ ಮೇಲಿಟ್ಟು ಚೆನ್ನಾಗಿ ಗೊಟಾಯಿಸಬೇಕು. ಕೊನೆಗೆ ಎರಡು ಚಮಚ ಹಸಿ ಕೊಬ್ಬರಿ ತುರಿ ಹಾಕಿಕೊಂಡು ಕಲೆಸಿ ಕೆಳಗಿಳಿಸಬೇಕು. ಈಗ ಸ್ಪೈಸಿ ಪಕೋಡಾ ಕರಿ ತಿನ್ನಲು ರೆಡಿಯಾಗಿದೆ. ಇದನ್ನು ಹಾಗೇ ಬೇಕಾದರೂ ತಿನ್ನಬಹುದು, ಇಲ್ಲವೇ ಅನ್ನದೊಂದಿಗೆ, ಅಥವಾ ಚಪಾತಿಯೊಂದಿಗೂ ತಿನ್ನಬಹುದು.

English summary

Vegetarian recipe | Pakoda curry | Masala recipies | ಸಸ್ಯಾಹಾರಿ ಖಾದ್ಯಗಳು | ಪಕೋಡಾ ಕರ್ರಿ | ಮಸಾಲೆ ಅಡುಗೆಗಳು

If you are bored having gobi/cauliflower manchurian then you should try a different variety. Today, we will present a different pakoda curry variety which is prepared the desi way. Take a look at how to go about with the “pakoda curry Recipe”. Take a look.
Story first published: Friday, July 29, 2011, 18:44 [IST]
X
Desktop Bottom Promotion