For Quick Alerts
ALLOW NOTIFICATIONS  
For Daily Alerts

ಭಿಡೆ ಇಲ್ಲದೆ ತಿನ್ನಿ ಎಲೆಕೋಸಿನ ಪತ್ರೊಡೆ

By Prasad
|
Cabbage
ಹೊರಗಡೆ ಮಳೆಯಾಗುತ್ತಿರುವಾಗ ಚುರುಗುಟ್ಟುವ ಹೊಟ್ಟೆ ಹೊಸತೇನನ್ನೋ ಬೇಡುತ್ತಿರುತ್ತದೆ. ಇದಕ್ಕೆ ಉಪಾಯ, ಬಿಸಿಬಿಸಿ ಎಲೆಕೋಸಿನ ಪತ್ರೊಡೆ. ಭಿಡೆ ಇಲ್ಲದೆ ಹೆಂಡತಿಗೆ ಕೇಳಿ ಮಾಡಿಕೊಡೆ ಎಲೆಕೋಸಿನ ಪತ್ರೊಡೆ.

ಬೇಕಾಗುವ ಪದಾರ್ಥಗಳು

ಎಲೆಕೋಸು ಕಾಲು ಕೆಜಿ
ಒಂದು ಸ್ಪೂನ್‌ ಕೊತ್ತಂಬರಿ ಬೀಜ
ಒಂದು ಸ್ಪೂನ್‌ ಮೆಂತ್ಯ
ಉದ್ದಿನ ಬೇಳೆ ಒಂದು ಸ್ಪೂನ್‌
ಐದು ಕೆಂಪು ಮೆಣಸು
ಹುಣಸೆ ಹಣ್ಣು ಒಂದು ನಿಂಬೆಯಷ್ಟು
ನಾಲ್ಕು ಬೆರಳಿನಷ್ಟಗಲದ ಬೆಲ್ಲದ ತುಂಡು
ಒಂದು ಚಿಟಿಕೆ ಅರಿಶಿಣ
ಒಂದು ಕಪ್‌ ಕಾಯಿ ತುರಿ
ಅರ್ಧ ಕಪ್‌ ಅಕ್ಕಿಯ ಸೋಜಿ
ಉಪ್ಪು : ನಿಮ್ಮ ಜಾಣ್ಮೆಗೆ ತಕ್ಕಷ್ಟು

ಮಾಡುವ ವಿಧಾನ

ಮೆಣಸು, ಮೆಂತ್ಯ ಮತ್ತು ಉದ್ದಿನ ಬೇಳೆಗಳನ್ನು ಹುರಿಯಬೇಕು. ತೆಂಗಿನಕಾಯಿ, ಕೊತ್ತಂಬರಿ ಬೀಜ, ಹುಣಸೇಹಣ್ಣು, ಬೆಲ್ಲ, ಅರಿಶಿಣ ಮತ್ತು ಹುರಿದ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಅರೆಯಿರಿ. ಉಪ್ಪು ಸೇರಿಸಿ ಇನ್ನೊಂದು ಸುತ್ತು ಮಿಕ್ಸಿ ತಿರುಗಿಸಿ. ಈ ಮಿಶ್ರಣ, ಅಕ್ಕಿ ಸೋಜಿ ಮತ್ತು ಕತ್ತರಿಸಿಟ್ಟಿರುವ ಕ್ಯಾಬೇಜ್‌ ಜೊತೆ ಚೆನ್ನಾಗಿ ಕಲೆಸಿ. ಕಡಿಮೆ ನೀರು ಸೇರಿಸಬೇಕು. ನಂತರ ಮಿಶ್ರಣವನ್ನು ಲಡ್ಡುವಿಗಿಂತ ಸ್ವಲ್ಪ ದೊಡ್ಡ ಸೈಜಿನಲ್ಲಿ ಉಂಡೆ ಮಾಡಿ ಅರ್ಧ ಗಂಟೆ ಕಾಲ ಹಬೆಯಲ್ಲಿ ಬೇಯಿಸಿ.

ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ತುಸು ಬಿಸಿಯಾಗುತ್ತಿದ್ದಂತೆ ಎರಡು ಚಿಟಿಕೆ ಉದ್ದಿನ ಬೇಳೆ, ಸಾಸಿವೆ, ಕರಿಬೇವಿನಸೊಪ್ಪು ಮತ್ತು ಕೆಂಪು ಮೆಣಸನ್ನು ಹುರಿಯಿರಿ. ಬೆಂದ ಪತ್ರೊಡೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಗ್ಗರಣೆ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಸಿಹಿಯಾಗಿರಬೇಕಿದ್ದರೆ ಬೆಲ್ಲ ಒಂದಿಷ್ಟು ಹೆಚ್ಚು, ಖಾರ ಬೇಕಿದ್ರೆ ಎರಡು ಮೆಣಸು ಜಾಸ್ತಿ.

ಎಲೆಕೋಸಿನ ಬದಲಿಗೆ ಕೆಸುವಿನೆಲೆ ಅಥವಾ ತಗತ್ತೆ ಸೊಪ್ಪನ್ನೂ ಹೆಚ್ಚಿ ಪತ್ರೊಡೆ ಮಾಡಬಹುದು.

X
Desktop Bottom Promotion