For Quick Alerts
ALLOW NOTIFICATIONS  
For Daily Alerts

ಅಪ್ಪಟ ದಕ್ಷಿಣ ಭಾರತದ ಶೈಲಿಯ-ವೆಜ್ ಫ್ರೈಡ್ ರೈಸ್!

|

ಅಡುಗೆಯ ಹೆಸರು ವಿಚಿತ್ರವಾಗಿದ್ದರೆ ಅದನ್ನು ಸವಿಯುವ ಬಯಕೆ ಎಲ್ಲರಲ್ಲಿಯೂ ಮೂಡುತ್ತದೆ. ಚೈನೀಸ್ ಫ್ರೈಡ್ ರೈಸ್ ಎಂದಾಕ್ಷಣ ನಾಲಿಗೆ ಹುಳಿ-ಒಗರು ಇರುವ ರುಚಿಯನ್ನು ಕಲ್ಪಿಸಿ ಇದರ ರುಚಿ ನೋಡಲೇಬೇಕೆಂದು ಬಯಸುತ್ತದೆ. ಆದರೆ ಇದಕ್ಕೂ ರುಚಿಯಾದ ಫ್ರೈಡ್ ರೈಸ್ ಅಥವಾ ಪಲಾವ್ ಅನ್ನು ರುಚಿಯಾಗಿಯೂ, ಸುಲಭವಾಗಿಯೂ, ಕಡಿಮೆ ಸಮಯದಲ್ಲಿಯೂ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ಮಧ್ಯಾಹ್ನದ ಊಟವಾಗಲೀ, ರಾತ್ರಿಯ ಊಟಾಕ್ಕಾಗಲೀ ಸೇವಿಸಬಹುದಾದ ಈ ಖಾದ್ಯ ಹಲವು ತರಕಾರಿಗಳನ್ನು ಹೊಂದಿದ್ದು ಆರೋಗ್ಯಕರವಾಗಿದೆ. ಇದರಲ್ಲಿ ಅನ್ನವೇ ಪ್ರಧಾನವಾದ ಆಹಾರವಾದುದರಿಂದ ತೂಕ ಇಳಿಸುವವರಿಗೂ ಉತ್ತಮವಾಗಿದೆ. ಇದರೊಂದಿಗೆ ಕೊಂಚ ಟೊಮೇಟೊ ಸಾಸ್ ನಂಜಿಕೊಳ್ಳಲು ಉಪಯೋಗಿಸಿದರಂತೂ ಇದರ ರುಚಿ ಅತ್ಯಧಿಕವಾಗಿ ಹೆಚ್ಚುತ್ತದೆ. ಪಾಕಶಾಲೆ : ರುಚಿಕರ ಚೈನೀಸ್ ಫ್ರೈಡ್ ರೈಸ್

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಹದಿನೈದು ನಿಮಿಷಗಳು

ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು:

*ಬಾಸ್ಮತಿ ಅಕ್ಕಿ - ಅರ್ಧ ಕೇಜಿ

*ದೊಣ್ಣೆಮೆಣಸು- ಒಂದು ಕಪ್, ಚಿಕ್ಕ ಚೌಕಾಕಾರದಲ್ಲಿ ಕತ್ತರಿಸಿದ್ದು

*ಈರುಳ್ಳಿ: ಒಂದು ಕಪ್ ಚಿಕ್ಕದಾಗಿ ಹೆಚ್ಚಿದ್ದು

*ಕ್ಯಾರೆಟ್ - ಒಂದು, ಚಿಕ್ಕದಾಗಿ ತುಂಡುಮಾಡಿದ್ದು.

*ಬೀನ್ಸ್ (ಡಬ್ಬಲ್ ಬೀನ್ಸ್)- ಒಂದು ಕಪ್, ಚಿಕ್ಕದಾಗಿ ತುಂಡುಮಾಡಿದ್ದು

*ಟೊಮೇಟೊ-ಒಂದು ಕಪ್, ಚಿಕ್ಕದಾಗಿ ಹೆಚ್ಚಿದ್ದು

*ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ದೊಡ್ಡ ಚಮಚ

*ಹಸಿಮೆಣಸು - ಐದರಿಂದ ಆರು

*ಗೋಡಂಬಿ - ಹತ್ತು

*ಏಲಕ್ಕಿ - ನಾಲ್ಕು

*ಜೀರಿಗೆ - ಒಂದು ದೊಡ್ಡ ಚಮಚ

*ಟೊಮೇಟೊ ಸಾಸ್- ಮೂರು ದೊಡ್ಡ ಚಮಚ

*ಚಿಲ್ಲಿ ಸಾಸ್ - ಎರಡು ದೊಡ್ಡ ಚಮಚ

*ಅರಿಶಿನ - ಅರ್ಧ ಚಿಕ್ಕ ಚಮಚ

*ಕೊತ್ತಂಬರಿ ಸೊಪ್ಪು-ಸುಮಾರು ಅರ್ಧ ಕಟ್ಟು

*ಎಣ್ಣೆ - ಸುಮಾರು ಎರಡು ಚಮಚ

*ಉಪ್ಪು-ರುಚಿಗನುಸಾರ

ವಿಧಾನ:

1) ಪ್ರೆಷರ್ ಕುಕ್ಕರ್‌ನಲ್ಲಿ ಕೊಂಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಬಳಿಕ ಈರುಳ್ಳಿ ಹಾಕಿ ಎರಡು ನಿಮಿಷಗಳವರೆಗೆ ತಿರುವಿ.

2) ಇದಕ್ಕೆ ಜೀರಿಗೆ, ಅರಿಶಿನ, ಏಲಕ್ಕಿ, ಗೋಡಂಬಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ ಕೊಂಚ ಕಾಲ ತಿರುವಿ

3) ಈಗ ಕ್ಯಾರೆಟ್, ದೊಣ್ಣೆಮೆಣಸು, ಟೊಮೇಟೊ, ಬೀನ್ಸ್ ಹಾಕಿ ಒಂದೆರಡು ನಿಮಿಷ ತಿರುವಿ.

4) ಕೊಂಚ ಎಣ್ಣೆ ಬಿಡುವಂತೆ ಕಂಡುಬರುತ್ತಿರುವಂತೆಯೇ ಟೊಮೇಟೊ ಸಾಸ್ ಮತ್ತು ಚಿಲ್ಲಿ ಸಾಸ್ ಹಾಕಿ.

5) ಇದು ಕೊಂಚ ಕುದಿಯಲು ಬರುತ್ತಿದ್ದಂತೆಯೇ ನೀರು ಹಾಕಿ. (ಅಕ್ಕಿಯ ಪ್ರಮಾಣದ ಎರಡರಷ್ಟು).

6) ನೀರು ಕುದಿಯಲು ಬರುತ್ತಿದ್ದಂತೆಯೇ ಬಾಸ್ಮತಿ ಅಕ್ಕಿ ಹಾಕಿ, ಉಪ್ಪು ಸೇರಿಸಿ ನಿಧಾನವಾಗಿ ತಿರುವಿ.

7) ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಅಕ್ಕಿ ಬೇಯಲು ಬಿಡಿ.

8) ಸುಮಾರು ಮೂರು ಸೀಟಿ ಬಂದ ಬಳಿಕ ಒಲೆ ಆರಿಸಿ ಕುಕ್ಕರ್‌ನ ಮುಚ್ಚಳ ತಣಿಸಿ ತೆರೆಯಿರಿ ಬಳಿಕ ಕೊಂಚ ತಿರುವಿ.

9) ಅಕ್ಕಿ ಪೂರ್ಣವಾಗಿ ಬೆಂದಿದೆಯೇ ಪರಿಶೀಲಿಸಿ. ಇಲ್ಲದಿದ್ದರೆ ಮುಚ್ಚಳ ಮುಚ್ಚದೇ ಕೊಂಚಕಾಲ ಬೇಯಲು ಬಿಡಿ. ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ತಿರುವಿ

10) ಬಿಸಿಬಿಸಿಯಿದ್ದಂತೆಯೇ ಅತಿಥಿಗಳಿಗೆ ಬಡಿಸಿ, ಮೆಚ್ಚುಗೆ ಪಡೆಯಿರಿ.

English summary

Special South Indian Fried Rice Recipe

Most of us have tried the chinese fried rice. But have you ever tried south indian fried rice? Well, today we will teach you how to make south india fried rice. South Indian Fried Rice Recipe can be eaten either for luch or for breakfast. So, here is a different rice recipe that you ought to try today. Tomato sauce tastes awesome with this recipe.
Story first published: Wednesday, August 12, 2015, 13:30 [IST]
X