For Quick Alerts
ALLOW NOTIFICATIONS  
For Daily Alerts

ಈರುಳ್ಳಿ ಹಾಕದ ವೆಜಿಟೆಬಲ್ ಕರಿ

|

ಈರುಳ್ಳಿ ಬೆಲೆ ಹೆಚ್ಚಾದರೆ ಬಾಯಿ ರುಚಿ ಕಡಿಮೆಯಾಗುವುದು ಎಂದು ಚಿಂತೆ ಮಾಡಬೇಕಾಗಿಲ್ಲ, ಈರುಳ್ಳಿ ಹಾಕದೆ ಅನೇಕ ರುಚಿಕರವಾದ ಅಡುಗೆಗಳನ್ನು ಮಾಡಬಹುದು. ಇಲ್ಲಿ ನಾವು ಈರುಳ್ಳಿ, ಬೆಳ್ಳುಳ್ಳಿ ಹಾಕದೆ ರುಚಿಕರವಾಗಿ ಸಾರು ಮಾಡುವ ವಿಧಾನ ಹೇಳಿದ್ದೇವೆ.

ಬನ್ನಿ, ಇದನ್ನು ಮಾಡುವ ವಿಧಾನ ಹೇಗೆ ಎಂದು ತಿಳಿಯೋಣ:

Mixed Vegetable Curry

ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 2( ಚಿಕ್ಕದಾಗಿ ಕತ್ತರಿಸಿ ನೀರಿನಲ್ಲಿ ಹಾಕಿಡಿ)
* ಕ್ಯಾರೆಟ್(ಕತ್ತರಿಸಿದ್ದು)
* ಸಿಪ್ಪೆ ಸುಲಿದ ಬಟಾಣಿ 1/4 ಕಪ್
* ಎಣ್ಣೆ
* ಜೀರಿಗೆ 1/2 ಚಮಚ
* ರುಚಿಗೆ ತಕ್ಕ ಉಪ್ಪು
* ಅರಿಶಿಣ ಪುಡಿ 1/4 ಚಮಚ
* ಪನ್ನೀರ್ 50 ಗ್ರಾಂ
* ಬ್ರೆಡ್ 3
* ಕೊತ್ತಂಬರಿ ಪುಡಿ 1 ಚಮಚ
* ಖಾರದ ಪುಡಿ (ರುಚಿಗೆ ತಕ್ಕಷ್ಟು)
* ಟೊಮೆಟೊ ಪೇಸ್ಟ್ 1/4 ಕಪ್
* ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಪ್ಯಾನ್ ನಲ್ಲಿ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಪನ್ನೀರ್ ಹಾಕಿ ಫ್ರೈ ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ. ನಂತರ ಅದೇ ಎಣ್ಣೆಯಲ್ಲಿ ಬ್ರೆಡ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರಗೆ ಫ್ರೈ ಮಾಡಿ ಇಡಿ.

* ಈಗ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ, ಜೀರಿಗೆ ಚಟಾಪಟಾ ಶಬ್ದ ಮಾಡುವಾಗ ಆಲೂಗಡ್ಡೆ ಹಾಕಿ 5 ನಿಮಿಷ ಫ್ರೈ ಮಾಡಿ, ನಂತರ ಕ್ಯಾರೆಟ್ ಹಾಕಿ, ಬಟಾಣಿ, ಅರಿಶಿಣ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಲು ತಕ್ಕ ನೀರು ಸೇರಿಸಿ ಬೇಯಿಸಿ.

* ನಂತರ ಖಾರದ ಪುಡಿ, ಕೊತಂಬರಿ ಪುಡಿ ಹಾಕಿ, ಟೊಮೆಟೊ ಪೇಸ್ಟ್ ಹಾಕಿ, ಕುದಿಸಿ, ಮಿಶ್ರಣ ಸ್ವಲ್ಪ ಗಟ್ಟಿಯಾದಾಗ ಫ್ರೈ ಮಾಡಿಟ್ಟ ಪನ್ನೀರ್ ಮತ್ತು ಬ್ರೆಡ್ ಚೂರು ಹಾಕಿ ಮತ್ತೆ 5 ನಿಮಿಷ ಬೇಯಿಸಿದರೆ ಸಾರು ರೆಡಿ.

English summary

Mixed Vegetable Curry

Onion rate raised. But don't worry without putting onion also you can try variety of delicious recipes. One such recipe are here, take a look.
X
Desktop Bottom Promotion